ಪ್ರಚಲಿತ

ಕೇರಳದಲ್ಲಿ ಕಮಲ ಅರಳುವ ಭರವಸೆ ವ್ಯಕ್ತಪಡಿಸಿದ ಪಿಎಂ ಮೋದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕೇರಳದಲ್ಲಿ ಎರಡಂಕಿ ಸೀಟು ಪಡೆಯಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದಾರೆ.

ಅವರು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಮಲ ಅರಳಲಿದೆ ಎಂದು ಅವರು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಲಯಾಳಂ‌ನಲ್ಲಿಯೇ ಮಾತು 

ಆರಂಭಿಸಿದ ಅವರು, ಕೇರಳದಲ್ಲಿನ ಸರ್ಕಾರದ ಭ್ರಷ್ಟಾಚಾರ ಮತ್ತು ಅಸಮರ್ಥ ಆಡಳಿತದಿಂದ ಜನತೆ ಸಂಕಟ ಪಡುತ್ತಿದ್ದಾರೆ. ಅದಕ್ಷ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಜನರಿಗೆ ಉತ್ತಮ ಬದುಕು ಸಾಗಿಸುವುದು ಅಸಾಧ್ಯವಾಗುತ್ತಿದೆ ಎಂದು ಪಿ ಎಂ ಮೋದಿ ಪಿಣರಾಯಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೇರಳದಲ್ಲಿ ಎಲ್‌ ಡಿ ಎಫ್ ಮತ್ತು ಯು ಡಿ ಎಫ್‌ಗಳು ಜನರ ರಕ್ತ ಹೀರುವ ಕೆಲಸ ನಡೆಸುತ್ತಿದ್ದಾರೆ. ತ್ರಿಪುರ ಮತ್ತು ತಮಿಳುನಾಡಿನಲ್ಲಿ ಈ ಪಕ್ಷಗಳು ಹೇಳ ಹೆಸರಿಲ್ಲದ ಹಾಗೆ ಮಾಯವಾಗಿವೆ. ಕಾಂಗ್ರೆಸ್ ಪಕ್ಷ ಮಾಡಿದ್ದು ಸೋಲಾರ್ ಹಗರಣವಾದರೆ, ಎಲ್‌ಡಿಎಫ್‌ನದ್ದು ಚಿನ್ನದ ಹಗರಣ‌. ಈ ಎರಡೂ ಪಕ್ಷಗಳ ಉದ್ದೇಶ ಅಕ್ರಮ ಮತ್ತು ತಾರತಮ್ಯ ನೀತಿಯ ರಾಜಕಾರಣವೇ ಆಗಿದೆ‌ ಎಂದು ವ್ಯಂಗ್ಯವಾಡಿದ್ದಾರೆ.

ಹಾಗೆಯೇ, ಮಲಯಾಳಿಗರು ಪ್ರಗತಿಪರ ಚಿಂತನೆಯನ್ನು ಹೊಂದಿದವರು. ಆದರೆ ಕಾಂಗ್ರೆಸ್ ಮತ್ತು ಎಲ್‌ಡಿ‌ಎಫ್ ಪುರಾತನ ಕಾಲದ ಚಿಂತನೆಗಳಿಗೆ ಕಟ್ಟುಬಿದ್ದವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ ಹತ್ತಿ ವರ್ಷಗಳ ನಮ್ಮ ಆಡಳಿತದಲ್ಲಿ ದೇಶದ ಎಲ್ಲಾ ವರ್ಗಗಳ ಜನರಿಗೆ ಎಲ್ಲಾ ರೀತಿಯ ಅನುಕೂಲ ಒದಗಿಸಿ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಯುದ್ಧದ ಸಮಯದಲ್ಲಿ ಸಿಕ್ಕಿ ಬಿದ್ದ ನರ್ಸ್ ಅನ್ನು ಮರಳಿ ಭಾರತಕ್ಕೆ ಕರೆದು ತಂದಿದ್ದೇವೆ. ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಪಾದ್ರಿಗಳನ್ನು ರಕ್ಷಣೆ ಮಾಡಿದ್ದೇವೆ. ಕೊರೋನ ಸಮಯದಲ್ಲಿ ಭಾರತೀಯರನ್ನು ವಿಶ್ವದ ಎಲ್ಲಾ ಭಾಗಗಳಿಂದ ಅಗತ್ಯವಾಗಿ ರಕ್ಷಣೆ ಮಾಡಿದ್ದೇವೆ. ಭಾರತದ ಯಾರೇ ಸಂಕಷ್ಟದಲ್ಲಿದ್ದರೂ ಅವರ ಜೊತೆಗೆ ನಿಲ್ಲುವ ಸರ್ಕಾರ ನಮ್ಮದು. ಇದು ಮೋದೀಜಿ ಗ್ಯಾರಂಟಿ ಎಂದು ಹೇಳಿದ್ದಾರೆ.

Tags

Related Articles

Close