ಪ್ರಚಲಿತ

ಸೌದಿಯಿಂದ ಕಚ್ಚಾ ತೈಲ ತರುತ್ತಿದ್ದ ವಾಣಿಜ್ಯ ನೌಕೆ ಮೇಲೆ ದಾಳಿ ಮಾಡಿದವರು ಸಮುದ್ರದಾಳದಲ್ಲಿದ್ದರೂ ಪತ್ತೆ ಮಾಡುತ್ತೇವೆ: ರಾಜನಾಥ್ ಸಿಂಗ್

ಕಳೆದ ಕೇವಲ ಒಂಬತ್ತೇ ‌ವರ್ಷದಲ್ಲಿ ಭಾರತದ ಬೆಳವಣಿಗೆ ಇಡೀ ವಿಶ್ವವನ್ನು ಕಣ್ಣು ಕುಕ್ಕುವ ಹಾಗೆ ಮಾಡಿದೆ. ಭಾರತದ ವಿರೋಧಿಗಳಿಗಂತೂ ನಮ್ಮ ದೇಶದ ಅಭಿವೃದ್ಧಿಯ ವೇಗ ಕಂಡು ಕೈ ಕೈ ಹಿಸುಕುವಂತಾಗಿದೆ. ಹೇಗಾದರೂ ಇದಕ್ಕೆ ಕಡಿವಾಣ ಹಾಕುವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವಿರೋಧಿಗಳು ಮಸಲತ್ತು ಮಾಡುತ್ತಿದ್ದಾರೆ ಎನ್ನುವುದನ್ನು ಸಹ ನಾವು ಅಲ್ಲಗಳೆಯುವ ಹಾಗಿಲ್ಲ.

ಕಳೆದ ಕೆಲ ದಿನಗಳ ಹಿಂದೆ ಅರಬ್ಬೀ ಸಮುದ್ರದ ಮೂಲಕ ನವ ಮಂಗಳೂರು ಬಂದರಿನತ್ತ ಬರುತ್ತಿದ್ದ ವಾಣಿಜ್ಯ ನೌಕೆಯ ಮೇಲೆ ದುಷ್ಟರು ದಾಳಿ ನಡೆಸಿದ ಘಟನೆ ನಡೆದಿತ್ತು. ಈ ದಾಳಿಗೆ ಸಂಬಂಧಿಸಿದ ಹಾಗೆ ರಕ್ಷಣಾ ಸಚಿವ ರಾಜನಾಥ್ ‌ಸಿಂಗ್ ಅವರು ಮಾತನಾಡಿದ್ದು, ಈ ದಾಳಿಯನ್ನು ನಡೆಸಿದ ದುಷ್ಕರ್ಮಿಗಳು ಸಮುದ್ರದ ಆಳದಲ್ಲಿದ್ದರೂ ಪತ್ತೆ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

ಭಾರತದ ನವ ಮಂಗಳೂರು ಬಂದರಿನತ್ತ ಬರುತ್ತಿದ್ದ ವಾಣಿಜ್ಯ ನೌಕೆ ಎಂವಿ ಕೆಮ್ ಪ್ಲೂಟೋ ಮೇಲೆ ದುಷ್ಕರ್ಮಿಗಳು ಅರಬ್ಬೀ ಸಮುದ್ರದಲ್ಲಿ ದಾಳಿ ನಡೆಸಿದ್ದರು. ಇದೀಗ ಈ ದುರುಳರನ್ನು ಪತ್ತೆ ಹಚ್ಚುವ ಭರವಸೆಯನ್ನು ಕೇಂದ್ರ ರಕ್ಷಣಾ ಸಚಿವರು ನೀಡಿರುವುದಾಗಿದೆ.

ಈ ಘಟನೆಯ ಬಳಿಕ ಭಾರತೀಯ ನೌಕಾಪಡೆ ಸಮುದ್ರದಲ್ಲಿ ತನ್ನ ಭದ್ರತೆ, ಕಣ್ಗಾವಲು ಹೆಚ್ಚಿಸಿದೆ. ಸಮುದ್ರ ಮಧ್ಯದ ಈ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದಾಗಿಯೂ ಸಚಿವರು ತಿಳಿಸಿದ್ದಾರೆ. ಈ ಕಾರಣದಿಂದಲೇ ಕಣ್ಗಾವಲು, ಭದ್ರತೆ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಸಮುದ್ರದ ಆಳದಿಂದಲೂ ಈ ದಾಳಿಯನ್ನು ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೆೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳು ಇಂದು ಭಾರತದ ಏಳಿಗೆ ನೋಡಿ ಮತ್ಸರ ಪಡುತ್ತಿವೆ. ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಕಂಗೆಟ್ಟಿವೆ ಎಂದು ಸಿಂಗ್ ಹೇಳಿದ್ದಾರೆ. ಈ ಕಾರಣದಿಂದ ಇಂತಹ ದಾಳಿ ನಡೆದಿರುವ ಸಾಧ್ಯತೆ ಇದೆ ಎಂಬ ಸಂದೇಹವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

ದಾಳಿಗೆ ತುತ್ತಾದ ನೌಕೆ ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ನವ ಮಂಗಳೂರು ಬಂದರಿಗೆ ಹೊತ್ತು ಬರುತ್ತಿತ್ತು. ಈ ನೌಕೆಗೆ ಅರಬ್ಬೀ ಸಮುದ್ರದ ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ಟ್ರೇನ್ ಮೂಲಕ ಉಗ್ರಗಾಮಿಗಳು ಡ್ರೋನ್ ದಾಳಿ ನಡೆಸಿದ್ದರ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ಭಾರತೀಯ ನೌಕಾಪಡೆ ಮಾಹಿತಿ ನೀಡಿದ್ದು, ಇಪ್ಪತ್ತು ಮಂದಿ ಭಾರತೀಯರು ಮತ್ತು ವಿಯೆಟ್ನಾಂ ಸಿಬ್ಬಂದಿ ಈ ವ್ಯಾಪಾರಿ ಹಡದಿನಲ್ಲಿದ್ದರು. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ ‌ನ ರಕ್ಷಣೆಯಲ್ಲಿ ಸರಕು ಹಡಗು ಮುಂಬೈ ಬಂದರನ್ನು ತಲುಪಿದೆ ಎಂದು ಹೇಳಿದೆ.

ಆ ನೌಕೆಯು ಜಪಾನ್ ಒಡೆತನದ, ನೆದರ್‌ಲ್ಯಾಂಡ್ಸ್ ನಿರ್ವಹಣೆ ಮಾಡುತ್ತಿರುವ ಸೈಬೀರಿಯನ್ ಧ್ವಜದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಡಿಸೆಂಬರ್ 23 ರಂದು ಭಾರತೀಯ ಕರಾವಳಿಯಲ್ಲಿ ಡ್ರೋಣ್ ದಾಳಿಗೆ ತುತ್ತಾಗಿತ್ತು.

Tags

Related Articles

Close