ಪ್ರಚಲಿತ

ಲಡಾಕ್‌ನಿಂದ ಭಾರತೀಯ ಸೈನ್ಯವನ್ನು ಡೈವರ್ಟ್ ಮಾಡಲು ಚೀನಾ ಕಂಡುಕೊಂಡ ದಾರಿ ಏನು ಗೊತ್ತಾ?

ಬಹಳ ಹಿಂದಿನಿಂದಲೂ ನಮ್ಮ ನೆರೆಯ ರಾಷ್ಟ್ರ ಚೀನಾ ಭಾರತ ವಿರೋಧಿ ಕೃತ್ಯಗಳು ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನುವುದು ಸತ್ಯ. ಚೀನಾದ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹ ಕಠಿಣ ಕ್ರಮಗಳನ್ನು ಅಳವಡಿಸಿಕೊಂಡಿರುವ ವಿಷಯ ಸಂಗತ.

ಭಾರತಕ್ಕೆ ಪಾಕಿಸ್ತಾನದ ಉಗ್ರರು ಎಷ್ಟು ಅಪಾಯಕಾರಿಗಳೋ, ಚೀನಾ ಸಹ ಅಷ್ಟೇ ಅಪಾಯಕಾರಿ ಎನ್ನುವುದು ಸತ್ಯ. ಭಾರತ ವಿಶ್ವದಲ್ಲೇ ಚೀನಾವನ್ನು ಹಿಂದಿಕ್ಕಿ ಮುಂದುವರಿಯುತ್ತಿದ್ದು, ಈ ನಂಜು ಚೀನಾದ ತಲೆಯಲ್ಲಿ ತುಂಬಿ, ಭಾರತ ವಿರೋಧಿ ಕೃತ್ಯಗಳನ್ನು ನಡೆಸುವುದರ ಜೊತೆಗೆ, ಭಾರತದ ವಿರೋಧಿಗಳಿಗೆ ಉಗ್ರವಾದಕ್ಕೆ ಬೆಂಬಲ ನೀಡುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ. ಈಗ ಇಂತದ್ದೇ ಒಂದು ರಹಸ್ಯ ಭಾರತೀಯ ಗುಪ್ತಚರ ಇಲಾಖೆಗೆ ತಿಳಿದು ಬಂದಿದೆ.

ಪಾಕಿಸ್ತಾನದ ಸೇನೆ, ಭಯೋತ್ಪಾದಕರಿಗೆ ಭಾರತದ ಮತ್ತೊಂದು ವೈರಿ ರಾಷ್ಟ್ರ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಡ್ರೋನ್‌ಗಳು, ಹ್ಯಾಂಡ್ ಗ್ರೆನೇಡ್‌ಗಳ ಜೊತೆಗೆ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದ ಉಗ್ರರಿಗೆ ಭಾರತ ವಿರೋಧಿ ಕೃತ್ಯಗಳನ್ನು ‌ನಡೆಸುವುದಕ್ಕಾಗಿ ಒದಗಿಸುವ ಕೆಲಸವನ್ನು ಕುತಂತ್ರಿ ಚೀನಾ ಮಾಡುತ್ತಿದೆ. ಈ ಬಗ್ಗೆ ಭಾರತೀಯ ಭದ್ರತಾ ಪಡೆಗಳಿಗೆ ಬಲವಾದ ಸಾಕ್ಷ್ಯ ದೊಕೆತಿರುವುದಾಗಿಯೂ ಮೂಲಗಳು ಮಾಹಿತಿ ನೀಡಿವೆ.

ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಉಗ್ರರು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗೆಯೇ ಉಗ್ರರು ಬಳಕೆ ಮಾಡುತ್ತಿರುವ ಸಂವಹನ ಸಾಧನಗಳು ಸಹ ಚೀನಾದಿಂದ ತಯಾರಿಸಲ್ಪಟ್ಟಿರುವುದಾಗಿ ತಿಳಿದು ಬಂದಿದೆ. ಗುಪ್ತಚರ ಸಂಸ್ಥೆಗಳು ಹೇಳುವಂತೆ ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಇ ತೈಬಾ ಮೊದಲಾದ ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸಲು ಚೀನಾ ನಿರ್ಮಿತ ಶಸ್ತ್ರಾಸ್ತ್ರ, ಬಾಡಿ ಸ್ಯೂಟ್ ಕೆನರಾ, ಸಂವಹನ ಸಾಧನಗಳನ್ನು ಬಳಕೆ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಪಾಕ್ ಉಗ್ರರು ಭಾರತದ ಮೇಲೆ ನಡೆಸುತ್ತಿರುವ ದಾಳಿಗಳಲ್ಲೆಲ್ಲಾ ಅವರು ಚೀನಾ ನಿರ್ಮಿತ ಉಪಕರಣಗಳನ್ನೇ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಭಾರತೀಯ ಭದ್ರತಾ ಪಡೆಗಳು ಪುರಾವೆ ಸಹ ಸಂಗ್ರಹ ಮಾಡಿವೆ.ಈ ವರ್ಷ ನಡೆದ ಮೂರು ಭಯೋತ್ಪಾದಕ ದಾಳಿಗಳು ಇದಕ್ಕೆ ಪುರಾವೆಗಳನ್ನು ಒದಗಿಸಿವೆ ಎಂದು ಗುಪ್ತಚರ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಗೆಯೇ ಪಾಕ್‌ನಿಂದ ಭಾರತಕ್ಕೆ ಒಳ ನುಸುಳುವ ನುಸುಳುಕೋರರಿಗೂ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವುದಾಗಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ಭದ್ರತಾ ಪಡೆಗಳನ್ನು ಲಡಾಕ್ ಗಡಿಯಿಂದ ಡೈವರ್ಟ್ ಮಾಡಲು ಇಂತಹ ಕುತಂತ್ರವನ್ನು ಚೀನಾ ನಡೆಸುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags

Related Articles

Close