ಪ್ರಚಲಿತ

ಬ್ರೇಕಿಂಗ್: ಕೊನೆಗೂ ಶಾ ಭಯವನ್ನು ಒಪ್ಪಿಕೊಂಡ ಸಿದ್ದರಾಮಯ್ಯರಿಂದ ಜಂಪಿಂಗ್ ಕಾರ್ಯ ಶುರು! ಸಿಎಂ ಮಗನ ಫೇಸ್‍ಬುಕ್ ಹೈಡ್ರಾಮ..!

ಕಳೆದ 5 ವರ್ಷಗಳಲ್ಲಿ ಉತ್ತಮ ಆಡಳಿತವನ್ನು ನೀಡಿ ಜನಮೆಚ್ಚುವಂತಹಾ ಕೆಲಸಗಳನ್ನು ಮಾಡಿರುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಈ ದುರ್ಗತಿ ಖಂಡಿತಾ ಬರುತ್ತಿರಲಿಲ್ಲ ಎಂದು ಅನ್ನಿಸುತ್ತಿದೆ. ಇಡಿಯ ಕರ್ನಾಟಕವೇ ಬಿಡಿ, ಸ್ವತಃ ತನ್ನ ಸ್ವಕ್ಷೇತ್ರದಲ್ಲೇ ನಂಬಿಕೆಯನ್ನು ಕಳೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಮತ್ತೊಂದು ಕ್ಷೇತ್ರದತ್ತ ಕಣ್ಣಾಯಿಸಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಚಾಮುಂಡೇಶ್ವರಿ ಜೊತೆಗೆ ಬಾದಾಮಿಗೆ ಸಿದ್ದ ಎಂದ ಸಿದ್ದು..!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಲ್ಲೇ ಈ ಬಾರಿ ಗೆಲ್ಲುವುದು ಕಷ್ಟ ಎಂಬ ಅಂಶವನ್ನು ಗಮನದಲ್ಲಿ ಇರಿಸಿಕೊಂಡಿದ್ದರು. ತನ್ನ ಪ್ರಾಬಲ್ಯವುಳ್ಳ ಕ್ಷೇತ್ರಗಳಾಗಿದ್ದ ಚಾಮುಂಡೇಶ್ವರಿ ಹಾಗೂ ವರುಣಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಮುಖ್ಯಮಂತ್ರಿಗಳ ಗುರಿಯಾಗಿತ್ತು. ಆದರೆ ಬದಲಾದ ಸಮಯದಲ್ಲಿ ವರುಣಾ ವಿಧಾನ ಸಭಾ ಕ್ಷೇತ್ರವನ್ನು ತನ್ನ ಮಗ ಡಾ.ಯತೀಂದ್ರನಿಗೆ ಬಿಟ್ಟುಕೊಟ್ಟಿದ್ದರು. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಧೃಷ್ಟಿ ಅದ್ಯಾವಾಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿತ್ತೋ ಅಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆದರಿ ಹೋಗಿದ್ದರು. ರಾಷ್ಟ್ರೀಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸಹಿತ ಅನೇಕರು ಮೈಸೂರಿಗೆ ಪದೇ ಪದೇ ಲಗ್ಗೆ ಇಡುತ್ತಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಹಿಸಲಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ಮತ್ತೊಂದು ಕ್ಷೇತ್ರವನ್ನು ಹುಡುಕಿಕೊಂಡು ಹೊರಟಿದ್ದರು.

ಈ ವೇಳೆ ಅವರಿಗೆ ಜಯ ತಂದುಕೊಡಬಲ್ಲುದು ಎಂಬ ಸಂದೇಶವನ್ನು ಕೊಟ್ಟ ಕ್ಷೇತ್ರವೇ ಬಾಗಲಕೋಟೆಯ ಬಾದಾಮಿ. ಸದ್ಯ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಬಿಬಿ ಚಿಮ್ಮನಕಟ್ಟಿಯವರು ಶಾಸಕರಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕ್ಷೇತ್ರದಲ್ಲಿ ನಿಲ್ಲೋದಾದರೆ ನಾನು ಬಿಟ್ಟುಕೊಡಲು ಸಿದ್ಧ ಎಂದು ಚಿಮ್ಮನಕಟ್ಟಿ ಹೇಳಿದ್ದರು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾರಿ ಮತ್ತಷ್ಟು ಸರಳವಾಯಿತು.

ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹಿತ ಅನೇಕ ಕಾಂಗ್ರೆಸ್‍ನ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಿರ್ಧಾರಕ್ಕೆ ಅಡ್ಡಗಾಲಿಟ್ಟಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಕ್ಯಾತೆ ತೆಗೆದಿದ್ದರು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ಜೈ ಎಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರವನ್ನು ಮಾತ್ರ ನೀಡಿ ಕೈತೊಳೆದುಕೊಂಡಿತ್ತು.

ಆದರೆ ಸಿದ್ದರಾಮಯ್ಯನವರ ಭಯ ಮಾತ್ರ ಕೊನೆಯಾಗಲೇ ಇಲ್ಲ. ಮತ್ತೆ ಮತ್ತೆ ಬಾದಾಮಿ ಬಾದಾಮಿ ಎಂದು ಕನವರಿಸುತ್ತಲೇ ಇದ್ದರು. ಈ ಮಧ್ಯೆ ಬಾದಾಮಿ ಕ್ಷೇತ್ರದ ಮಹಿಳೆಯರನ್ನು ಸೆಟ್ಟಿಂಗ್ ಮಾಡಿ ಸಿಎಂ ರನ್ನು ಒತ್ತಾಯ ಮಾಡುವಂತೆ ನಾಟಕವೂ ಮಾಡಲಾಯಿತು. ಹೀಗಾಗಿ ಕೊನೆಗೆ ತಾನು ಬಾದಾಮಿಯಲ್ಲಿ ಸ್ಪರ್ಧಿಸುತ್ತೇನೆಂದು ಸಿಎಂ ಸಾಹೇಬ್ರು ಹೇಳಿಯೇ ಬಿಟ್ಟರು. ಹೈಕಮಾಂಡ್ ಅನುಮತಿಯೂ ಇಲ್ಲ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಹಿತಿಯೂ ಇಲ್ಲ, ನಾನೇ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಸಿಎಂ ಮಗನ ಫೇಸ್‍ಬುಕ್ ಹೈಡ್ರಾಮ..!

ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರನ ಫೇಸ್ ಬುಕ್ ಹೈಡ್ರಾಮ ಒಂದು ನಡೆದಿತ್ತು. ಇಂದು ಬೆಳಗ್ಗೆ ತನ್ನ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಸ್ಫರ್ಧಿಸುತ್ತಾರೆಂದು ಪೋಸ್ಟ್ ಹಾಕಿದ್ದ ಯತೀಂದ್ರ ಕೆಲವೇ ಕ್ಷಣಗಳಲ್ಲಿ ಅದನ್ನು ಅಲಿಸಿ ಹಾಕಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರು 23ರಂದು ಬಾದಾಮಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ” ಎಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಹಾಕಿ ಕೆಲವೇ ಗಂಟೆಗಳಲ್ಲಿ ಅದನ್ನು ಅಲಿಸಿ ಹಾಕಿದ್ದಾರೆ. ಅಪ್ಪ ಮಗನ ಇಂತಹಾ ಜುಗಲ್ ಬಂದಿ ಆಟದ ಮರ್ಮವೇನು ಎಂಬುವುದು ಇನ್ನೂ ನಿಗೂಢವಾಗಿದೆ.

ಒಟ್ಟಾರೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಬಿಡದೆ ಕಾಡುತ್ತಿದ್ದುದು ಸಿದ್ದರಾಮಯ್ಯನವರಿಗೆ ಚುನಾವಣಾ ಭಯ ಕಾಡಲಾರಂಭಿಸಿದೆ. ಹೀಗಾಗಿಯೇ ತಮ್ಮ ಸ್ವಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಾ ತೆರಳಿದ್ದಾರೆ. ಇದೀಗ ಬಾದಾಮಿ ಕ್ಷೇತ್ರದತ್ತ ಮುಖ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

-ಏಕಲವ್ಯ

Tags

Related Articles

Close