ಪ್ರಚಲಿತ

ಬಡ ಹಿಂದೂ ಅರ್ಚಕರ ಮೇಲೆ ‘ಖಾನ್‌ಗ್ರೇಸ್’ ಸರ್ಕಾರದ ದರ್ಪ

ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ವಿರೋಧಿ ಪಕ್ಷ ಎಂಬ ಬಿರುದೇ ಇದೆ. ಸದಾ ಕಾಲ ಅಲ್ಪಸಂಖ್ಯಾತಕನ್ನು ಓಲೈಸಲು ಅವರಿಗೆ ಬೇಕಾದ/ ಅಗತ್ಯ ಇಲ್ಲದ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೋಟ್ಯಾಂತರ ರೂಪಾಯಿ ಗಳನ್ನು ಬಳಸಿ ಜಾರಿಗೆ ತರುತ್ತದೆ.‌ ಆದರೆ ಹಿಂದೂ ಧರ್ಮದ ವಿರುದ್ಧ ಮಾತ್ರ ಕಿಂಚಿತ್ತೂ ಕರುಣೆ ಇಲ್ಲದೆ ತುಳಿಯುವ ಕೆಲಸವನ್ನು ಮಾಡುತ್ತಲೇ ಬಂದಿದೆ.

ಹಿಂದೂ ದೇವಾಲಯಗಳ ಕಾಣಿಕೆ ಹಣವನ್ನು ಬಾಚುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಅಲ್ಲಿ ಪೂಜೆ, ಪುನಸ್ಕಾರಗಳನ್ನು ‌ನೆರವೇರಿಸುವ ಅರ್ಚಕರ ಮೇಲೆ ಮಾತ್ರ ಯಾವುದೇ ಉತ್ತಮ ಉದ್ದೇಶ ಇಟ್ಟುಕೊಳ್ಳದೆ, ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತ. ಅನ್ಯ ಧರ್ಮದ ಹಣ ಸರ್ಕಾರಕ್ಕೆ ಬಿಡಿಗಾಸು ಸಿಗದೇ ಹೋದರೂ ಅವರ ಧರ್ಮ, ಧಾರ್ಮಿಕ ಕಟ್ಟಡಗಳ ಉದ್ದಾರಕ್ಕೆ ರಾಜ್ಯದ ‘ಖಾನ್ ಗ್ರೇಸ್’ ಸರ್ಕಾರ ಕೋಟಿ ಕೋಟಿ ಹಣವನ್ನು, ಅದೂ ಜನರ ತೆರಿಗೆ ಹಣವನ್ನು ನೀಡಿ ಅಧಿಕಾರ ದುರ್ಬಳಕೆ ಮಾಡುವ ಕಾರ್ಯ ಮಾಡುತ್ತಿದೆ. ರಾಜ್ಯದ ಬಹುಸಂಖ್ಯಾತ ಜನರ ಭಾವನೆಗಳಿಗೆ ನೋವು ಮಾಡುವ ಕೈ ಸರ್ಕಾರ, ಹಿಂದೂಗಳನ್ನು ಅವಗಣನೆ ಮಾಡುತ್ತಿದೆ ಎನ್ನುವುದು ಸತ್ಯ ಮತ್ತು ಸ್ಪಷ್ಟ.

ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇಗುಲಗಳ ಅರ್ಚಕರಿಗೆ ನೀಡಲಾಗುತ್ತಿದ್ದ ಸಂಬಳದಲ್ಲಿ ಕಳೆದ ಹತ್ತು ವರ್ಷಗಳ ಸಂಬಳವನ್ನು ಸರ್ಕಾರಕ್ಕೆ ಹಿಂದಿರುಗಿಸುವ ಹಾಗೆ ಕಾಂಗ್ರೆಸ್ ಸರ್ಕಾರ ವಾಪಸ್ಸು ಮಾಡುವಂತೆ ನೋಟೀಸು ನೀಡಿದೆ. ಆದಾಯ ಕಡಿಮೆಯಾದ ದೇವಾಲಯಗಳ ಅರ್ಚಕರನ್ನು ಗುರಿಯಾಗಿಸಿ ಸರ್ಕಾರ ಈ ನೊಟೀಸ್ ಹೊರಡಿಸಿರುವುದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ದೇವಾಲಯಗಳ ಅರ್ಚಕರಿಗೆ ಈ ರೀತಿಯ ನೊಟೀಸುಗಳು ಬಂದಿವೆ.

ಹಿರೆಮಗಳೂರು ಕಣ್ಣನ್ ಹಲವು ವರ್ಷಗಳಿಂದ ಹಿರೇಮಗಳೂರಿ‌ನ ಕೋದಂಡರಾಮ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುತ್ತದೆ. ಈ ದೇವಾಲಯದಲ್ಲಿ ಸರ್ಕಾರಕ್ಕೆ ಸೇರುವ ಆದಾಯ ಕಡಿಮೆಯಾದ ಹಿನ್ನೆಲೆಯಲ್ಲಿ ಕಣ್ಣನ್ ಅವರಿಗೂ ನೊಟೀಸು ಬಂದಿದ್ದು, ಕಳೆದ ಹತ್ತು ವರ್ಷಗಳಿಗೆ ಸಂಬಂಧಿಸಿದ ಹಾಗೆ ನಾಲ್ಕು ಸಾವಿರದ ಐನೂರು ರೂಪಾಯಿಗಳ ಹಾಗೆ ಸರ್ಕಾರಕ್ಕೆ ವಾಪಸ್ ನೀಡುವಂತೆ ಸೂಚಿಸಿದೆ.

ಹಿಂದೂ ದೇಗುಲಗಳಿಗೆ ಜನರು ಹಾಕುವ ಕಾಣಿಕೆ ಹಣವನ್ನು ತಿಂದು ತೇಗುವ, ಆ ಹಣವನ್ನು ಇತರ ಧರ್ಮದ ಅಭಿವೃದ್ಧಿಗೆ ಬಳಸುವ ಕಾಂಗ್ರೆಸ್, ಹಿಂದೂ ಬಡ ಅರ್ಚಕರ ಮೇಲೆ ಇಂತಹ ಕ್ರೌರ್ಯಕ್ಕೆ ಮುಂದಾಗಿರುವುದು ನಾಚಿಗೇಡಿನ ವಿಷಯ. ಕಾಂಗ್ರೆಸ್ ಸರ್ಕಾರದ ಈ ಕೆಟ್ಟ ಹಿಂದೂ ವಿರೋಧಿ ನಿಲುವು ಅವರ ರಾಜಕೀಯ ಭವಿಷ್ಯವನ್ನೇ ಬುಡಮೇಲು ಮಾಡಿದರೂ ಆಶ್ಚರ್ಯ ಇಲ್ಲ

Tags

Related Articles

Close