ಪ್ರಚಲಿತ

ಕೊರೋನಾ ಆತಂಕ ಬೇಡ: ಜನರಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ ಸರ್ಕಾರ

ಕಳೆದ ಎರಡು ವರ್ಷಗಳ ಹಿಂದೆ ಸಾಮಾಜಿಕ ಬದುಕು, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿತ್ದ್ದ ಕೊರೋನಾ ದೇಶದಲ್ಲಿ ಮತ್ತೆ ಆತಂಕ ಹುಟ್ಟಿಸಿದೆ. ಇಡೀ ದೇಶವನ್ನು ಲಾಕ್ ಡೌನ್‌ ಸ್ಥಿತಿಗೆ ತಳ್ಳಿದ್ದ ಕೊರೋನಾ ಕರಿ ನೆರಳು ದೇಶದಲ್ಲಿ ಮತ್ತೆ ನಿಧಾನವಾಗಿ ಆವರಿಸಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸಭೆ ನಡೆಸಿ‌, ಕೆಲ ನಿರ್ಣಯಗಳನ್ನು ತೆಗೆದುಕೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಿವಿಧ ರಾಜ್ಯಗಳ ಆರೋಗ್ಯ ಮಂತ್ರಿಗಳ ಜೊತೆಗೆ ಪರಿಶೀಲನಾ ಸಲಹೆ ನಡೆಸಿದೆ. ಈ ಸಭೆಯಲ್ಲಿ ಸದ್ಯದ ಆತಂಕವಾಗಿರುವ ಜೆ ಎನ್ 1 ಕೊರೋನಾ ವೈರಸ್‌ನ ರೂಪಾಂತರ ಸಮಸ್ಯೆಯನ್ನು ಹೇಗೆ ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಎದುರಿಸಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO)ವು ಈ ಕೊರೋನಾ ರೂಪಾಂತರವನ್ನು ಆಸಕ್ತಿಯ ರೂಪಾಂತರ ಎಂದು ಗುರುತಿಸಿದೆ. ಹಾಗೆಯೇ ಪ್ರಸ್ತುತ‌ ಸಾಕ್ಷ್ಯಾಧಾರಗಳನ್ನು ಆಧರಿಸಿ ಹೇಳುವುದಾದರೆ, ಜೆಎನ್1 ಜಾಗತಿಕವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಕಡಿಮೆ ಎಂದು ಮೌಲ್ಯಮಾಪನ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಬಂದೆರಗಿರುವ ಕೊರೋನಾ ರೂಪಾಂತರದ ಭಯ ಬಿಟ್ಟು, ಸನ್ನದ್ಧತೆಗೆ ಒತ್ತು ನೀಡುವಂತೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತಿಳಿಸಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಯೋಗವನ್ನು ಕೇಂದ್ರ ಸರ್ಕಾರ ಬಯಸಿದೆ. ಕೊರೋನಾ‌ಗೆ ಯಾರೂ ಭಯ ಪಡುವ ಅಗತ್ಯ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್‌ಗಳನ್ನು ಮಾಡೋಣ. ನಮ್ಮ ಕೊರೋನಾ ವಿರುದ್ಧದ ತಯಾರಿಯಲ್ಲಿ ಯಾವುದೇ ಸಡಿಲಿಕೆ ಇರಬಾರದು. ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಕಾರ್ಯದಲ್ಲಿ ಬೆಂಬಲ ಸೂಚಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಈ ಹಿಂದೆ ಕೊರೋನಾ ಅಬ್ಬರ ಜೋರಾಗಿದ್ದ ಸಂದರ್ಭದಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳು ಪ್ರಪಂಚದಲ್ಲೇ ಭಾರತವನ್ನು ಮಾದರಿ ಎಂಬಂತೆ ಬಿಂಬಿಸಿತ್ತು. ಎಲ್ಲಾ ದೇಶಗಳು ಆರ್ಥಿಕ, ಆರೋಗ್ಯ ಸಮಸ್ಯೆಗೆ ತುತ್ತಾಗಿ ನರಳುವಾಗ ಭಾರತ ಇವೆರಡನ್ನೂ ಸಮರ್ಥವಾಗಿ ನಿಭಾಯಿಸಿ, ಎಲ್ಲಾ ಪರಿಸ್ಥಿತಿಗಳನ್ನು ಹತೋಟಿಗೆ ತಂದಿತ್ತು ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.

Tags

Related Articles

Close