ಪ್ರಚಲಿತ

ಐಟಿ ದಾಳಿಯಿಂದ ಕಂಗಾಲಾದ ಡಿಕೆಶಿ ಹೇಳಿದ್ದೇನು ಗೊತ್ತಾ.! ಬೆದರಿಸುವ ತಂತ್ರಕ್ಕೆ ಸಿಗಲಿಲ್ಲ ಫಲ..?!

ಅಕ್ರಮಗಳ ಮೇಲೆ ಅಕ್ರಮ ಮಾಡಿಕೊಂಡು ಸರಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್‌ನ ಪ್ರಭಾವಿ ಸಚಿವ ಡಿಕೆ ಶಿವಕುಮಾರ್‌ಗೆ ಐಟಿ ಇಲಾಖೆಯಿಂದ ಕಂಟಕ ಮಾತ್ರ ತಪ್ಪಿದ್ದಲ್ಲ‌ ಯಾಕೆಂದರೆ ಕೋಟಿ ಕೋಟಿ ಹಣವನ್ನು ಅಕ್ರಮವೆಸಗಿ ಕೂಡಿಟ್ಟ ಡಿಕೆಶಿಗೆ ಇದೀಗ ಬಂಧನದ ಭೀತಿ ಎದುರಾಗಿದೆ. ಯಾಕೆಂದರೆ ಬೆಂಬಿಡದೆ ಕಾಡುತ್ತಿರುವ ಐಟಿ ಅಧಿಕಾರಿಗಳಿಂದ ಈ ಬಾರಿ ಡಿಕೆಶಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಬಂಧನದ ಭೀತಿಯಿಂದ ಡಿಕೆಶಿ ತಾನು ಭಯ ಪಡುವುದು ಮಾತ್ರವಲ್ಲದೆ, ಭಯಭೀತಗೊಂಡು ಬಾಯಿಗೆ ಬಂದತೆ ಮಾತನಾಡುತ್ತಿದ್ದಾರೆ. ಡಿಕೆಶಿಯ ಆಪ್ತರ ಬಳಿ ಈಗಾಗಲೇ ಕೋಟಿ ಕೋಟಿ ಹಣ ವಶಪಡಿಸಿಕೊಂಡ ಐಟಿ ಇಲಾಖೆಗೆ ಡಿಕೆಶಿ ಕೂಡ ಸವಾಲೊಡ್ಡಿದ್ದರು. ತನ್ನ ಬಳಿ ಇರುವ ಡೈರಿಯ ರೀತಿ ಬಿಜೆಪಿಗರ ಅಕ್ರಮದ ಬಗ್ಗೆಯೂ ನನ್ನ ಬಳಿ ಡೈರಿ ಇದೆ ಅದನ್ನು ನಾನೂ ಕೂಡಾ ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಡಿಕೆಶಿ ಬಳಿ ಅಂತಹ ಯಾವುದೇ     ಡೈರಿಗಳಾಗಲಿ ಸಾಕ್ಷಿಯಾಗಲಿ ಇಲ್ಲ ಎಂಬುದು ಇದೀಗ ಗೊತ್ತಾಗಿದೆ. ಕೇವಲ ತನ್ನ ಆತ್ಮತೃಪ್ತಿಗಾಗಿ ಡಿಕೆ ಶಿವಕುಮಾರ್ ಈ ರೀತಿ ಹೇಳಿಕೊಂಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.!

ಬಿಜೆಪಿ ಮುಖಂಡರ ಅಕ್ರಮಗಳ ಬಗ್ಗೆ ಮಾಹಿತಿ ಇರುವ ಡೈರಿ ನನ್ನ ಬಳಿ ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿದ್ದರೆ ಸಾಕು, ಅದರ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ತಾನು ಈ ಹಿಂದೆ ಹೇಳಿಕೊಂಡ ಮಾತಿನಿಂದ ಜಾರಿಕೊಂಡಿದ್ದಾರೆ.!

ಮಾಧ್ಯಮಗಳ ಪ್ರಶ್ನೆಗೆ ತಬ್ಬಿಬ್ಬಾದ ಶಿವಕುಮಾರ್..!

ಐಟಿ ದಾಳಿಯ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕೇಂದ್ರ ಸರಕಾರ ನನ್ನನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ, ಆದರೆ ಇಂತಹ ಯಾವುದೇ ದಾಳಿಗೂ ನಾನು ಬೆದರುವುದಿಲ್ಲ. ಯಾಕೆಂದರೆ ಬಿಜೆಪಿ ಮುಖಂಡರ ಅಕ್ರಮಗಳ ಬಗ್ಗೆ ನನ್ನ ಬಳಿಯೂ ಸೂಕ್ತ ಮಾಹಿತಿ ಇರುವ ಡೈರಿ ಇದೆ ಎಂದು ಹೇಳಿಕೊಂಡಿದ್ದರು. ಈ ವೇಳೆ ಎಲ್ಲರ ಕಣ್ಣು ಡಿಕೆಶಿ ಮೇಲಿತ್ತು, ಆದರೆ ಇದೀಗ ಶಿವಕುಮಾರ್ ಕೇವಲ ಬೊಗಳೆಬಿಟ್ಟಿದ್ದಾರೆ ಎಂಬ ಸತ್ಯಾಂಶ ಹೊರಬಿದ್ದಿದೆ. ಯಾಕೆಂದರೆ ತನ್ನ ಮೇಲೆ ದಾಳಿ ನಡೆಸಿ ಇಷ್ಟು ದಿನವಾದರೂ ಡಿಕೆಶಿ ತನ್ನ ಬಳಿ ಇದೆ ಎಂದಿದ್ದ ಡೈರಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗಲೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದ್ದರಿಂದ ಡಿಕೆಶಿ ಕೇವಲ ಬಿಜೆಪಿಗರನ್ನು ಬೆದರಿಸುವುದಕ್ಕಾಗಿಯೇ ಡೈರಿಯ ವಿಚಾರ ಮಾತನಾಡಿದ್ದರು ಎಂಬ ಸತ್ಯಾಂಶ ಇದೀಗ ಬಯಲಾಗಿದೆ.!

ಐಟಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಸಾದ್ಯನಾ..?

ಡಿಕೆಶಿಯ ಮೇಲೆ ಐಟಿ ದಾಳಿ ಆಗುತ್ತಿರುವುದು ಇದೇ ಮೊದಲೇನಲ್ಲಾ, ಆದರೆ ಈ ಹಿಂದಿಗಿಂತಲೂ ಭಾರೀ ಅಕ್ರಮದ ದೂರು ದಾಖಲಿಸಿಕೊಂಡ ಐಟಿ ಇಲಾಖೆ ಈ ಬಾರಿ ಶಿವಕುಮಾರ್‌ರನ್ನು ಬಿಡುವ ಸಾಧ್ಯತೆ ಬಹಳ ಕಡಿಮೆ. ಯಾಕೆಂದರೆ ಹವಾಲ ದಂಧೆಯ ವಿಚಾರವಾಗಿ ಕೇಸ್ ದಾಖಲಿಸಿದ ಐಟಿ, ಡಿಕೆಶಿ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ದಿಗ್ಬಂಧನ ಹಾಕಿದೆ. ಆದ್ದರಿಂದ ಈ ಬಾರಿ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹವಾಲ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡ ಡಿಕೆಶಿ, ಆರೋಪ ಸಾಬೀತಾದರೆ ಜೈಲು ಪಾಲಾಗುವುದು ಖಚಿತ. ಮೈತ್ರಿ ಸರಕಾರ ರಚನೆಯಾಗಲು ಮುಖ್ಯ ಕಾರಣವಾಗಿದ್ದ ಡಿಕೆಶಿ ಬಂಧನವಾದರೆ ಮೈತ್ರಿ ಸರಕಾರದಲ್ಲಿ ಭಾರೀ ಕೋಲಾಹಲ ಉಂಟಾಗುವುದರಲ್ಲಿ ಸಂಶಯವಿಲ್ಲ.!

–ಅರ್ಜುನ್

Tags

Related Articles

Close