ಪ್ರಚಲಿತ

ಹೇ ಚಾರ್ಲಿ ಚಾಪ್ಲಿನ್!! ಭಾರತದ ಪ್ರಧಾನಿಯಾಗುವ ಕನಸು ಕಾಣುವುದು ಬೇಡ ಎಂದು ರಾಹುಲ್ ಗಾಂಧಿಗೆ ಗೇಲಿ ಮಾಡಿರುವವರು ಯಾರು ಗೊತ್ತಾ?!

ಈಗಾಗಲೇ ರಾಹುಲ್ ಗಾಂಧಿಯವರು ತಮ್ಮ ರಾಜಕೀಯ ರಂಗದಲ್ಲಿ ಮುಳುಗಿ ಹೋಗಿದ್ದು, ತಮ್ಮ ಬಳುವಳಿಯಾಗಿ ಬಂದಿರುವ ಕಾಂಗ್ರೆಸ್ ನಾಯಕನ ಪಟ್ಟವನ್ನು ಅಲಂಕರಿಸಿದ ಅಂದಿನಿಂದಲೂ ಕೂಡ ನಿರಂತರವಾಗಿ ಚರ್ಚೆಗೀಡಾಗುತ್ತಿರುವುದು ಮಾತ್ರ ತಪ್ಪಿಲ್ಲ!! ಅಷ್ಟೇ ಅಲ್ಲದೇ, ಅದೆಷ್ಟೋ ಬಾರಿ ಅಪಹಾಸ್ಯಕ್ಕೀಡಾದ ರಾಹುಲ್
ಗಾಂಧಿಯವರು ಇದೀಗ ನಿಜವಾದ ಗಾಂಧಿ ಅವರ ಮೊಮ್ಮಗನಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

ಹೌದು… ನಕಲಿ ಗಾಂಧಿ ಎನ್ನುವ ಉಪನಾಮವನ್ನು ಹೊತ್ತಿರುವ ರಾಹುಲ್ ಗಾಂಧಿಯವರಿಗೆ ನಿಜವಾದ ಗಾಂಧಿಯವರ ಮೊಮ್ಮಗ ಉತ್ತಮ ಸಂದೇಶವೊಂದನ್ನು ನೀಡಿದ್ದಾರೆ. ಅದೇನೆಂದರೆ, : “ಚಾರ್ಲಿ ಚಾಪ್ಲಿನ್ ನಂತೆ ಎದ್ದು ನಿಲ್ಲು, ಪ್ರಧಾನ ಮಂತ್ರಿಯಾಗುವ ಕನಸನ್ನು ಬಿಟ್ಟುಬಿಡು” – ಎಂದು!!

ಕಾಂಗ್ರೆಸ್ ಪಕ್ಷದ ಯಾವೊಬ್ಬ ಸದಸ್ಯನಿಗೂ ಕೂಡ ರಾಹುಲ್ ಗಾಂಧಿಯವರ ವಿರುದ್ಧ ಧ್ವನಿ ಎತ್ತಲು ಧೈರ್ಯವಿಲ್ಲ ಎಂದು ಹೇಳುವ ಪ್ರತಿಯೊಬ್ಬರೂ ಕೂಡ ಓದುವಂತಹ ವಿಚಾರ ಇಲ್ಲಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಿಜವಾದ ಗಾಂಧಿಯವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿಯವರು ರವಾನಿಸಿದ ಸಂದೇಶದಲ್ಲಿ “ಚಾರ್ಲಿ ಚಾಪ್ಲಿನ್ ನಂತೆ ಎದ್ದುನಿಲ್ಲು, ಪ್ರಧಾನಿ ಕನಸನ್ನು ಬಿಟ್ಟುಕೊಡು”! ಎಂದು ರಾಹುಲ್ ಗಾಂಧಿಯನ್ನು ಈ ರೀತಿ ಅಪಹಾಸ್ಯ ಮಾಡಿದ್ದಾರೆ.

ಅಷ್ಟೇ ಅಲ್ಲದೇ, ಕಾಂಗ್ರೆಸ್ ನಾಯಕರು ರಾಹುಲ್ ಅವರ ಅಧ್ಯಕ್ಷತೆಯನ್ನು ಪ್ರಶ್ನಿಸಲು ಯಾವುದೇ ಧೈರ್ಯವನ್ನು ಹೊಂದಿಲ್ಲ ಎಂದು ಮಹಾತ್ಮಾ ಗಾಂಧಿಯವರ ಮೊಮ್ಮಗನಾದ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಆಗಿದ್ದ ಗೋಪಾಲ್ ಕೃಷ್ಣ ಗಾಂಧಿ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರು ರಾಜಕೀಯದಲ್ಲಿ ತೊಡಗಿಕೊಂಡಿರುವುದರಿಂದ “ದೊಡ್ಡ” ಅಪಾಯವನ್ನು ತೆಗೆದುಕೊಂಡಿದ್ದಾರೆ ಎಂದು ರಾಜಕೀಯದಿಂದ ದೂರ ಉಳಿಯುತ್ತಿರುವ ಗೋಪಾಲ್ ಗಾಂಧಿಯವರು ಹೇಳಿದ್ದಾರೆ. ” ನಾನು ರಾಜಕಾರಣಕ್ಕೆ ಸೇರದೇ ಇರುವುದರಿಂದ ನಾನು ಸುರಕ್ಷಿತನಾಗಿದ್ದೇನೆ. ಆದರೆ ರಾಹುಲ್ ಗಾಂಧಿಯವರು ರಾಜಕೀಯದಲ್ಲಿಯೇ ಇದ್ದು ಭಾರೀ ಪ್ರಮಾಣದ ಅಪಾಯವನ್ನು ಎದುರಿಸುತ್ತಿದ್ದಾರೆ” ಎಂದು ಗೋಪಾಲ್ ಚೆನ್ನೈನಲ್ಲಿ ನಡೆದ ಇಂಡಿಯಾ ಟುಡೆಸ್ ಸೌತ್ ಕಾನ್ಕ್ಲೇವ್-2017 ನಲ್ಲಿ ಪಾಲ್ಗೊಂಡು ಈ ರೀತಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಹಿಂದೆ ಮಾಜಿ ಗವರ್ನರ್ ಗೋಪಾಲ್ ಕೃಷ್ಣ ಗಾಂಧಿಯವರನ್ನು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 2015ರ ವೇಳೆ ಆಮ್ ಆದ್ಮಿ ಪಕ್ಷವು(ಎಎಪಿ) ಅವರನ್ನು ಸಂಪರ್ಕಿಸಿದ್ದರು. ಅಷ್ಟೇ ಅಲ್ಲದೇ, “ವೈಯಕ್ತಿಕವಾಗಿ ರಾಹುಲ್ ಬಗ್ಗೆ ತಿಳಿದಿಲ್ಲವಾದರೂ ಕೂಡ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ನನಗಿಲ್ಲ. ಯಾಕೆಂದರೆ ರಾಹುಲ್ “ಬಿಡುವಿಲ್ಲದ” ವ್ಯಕ್ತಿಯಾಗಿದ್ದಾರೆ. ಹಾಗೆಯೇ ಯಾವೊಬ್ಬನೂ ಕೂಡ ಕಾಂಗ್ರೆಸ್ ನ ಅಧ್ಯಕ್ಷರ ಎದುರು ನಿಂತು, ಭಾರತದ ಪ್ರಧಾನಿಯಾಗುವ ಕನಸನ್ನು ಬಿಡಿ ಎಂದು ಹೇಳಬಯಸುದಿಲ್ಲ. ಅಷ್ಟೇ ಅಲ್ಲದೇ, ಬೇರಾವ ಪಕ್ಷದ ನಾಯಕನೂ ಕೂಡ ಈ ರೀತಿಯಾಗಿ ಸೂಚಿಸುವುದಿಲ್ಲ!! ಆದರೆ ನಾನು ಹೇಳುತ್ತೇನೆ, ಪ್ರಧಾನಿಯಾಗುವ
ಕನಸನ್ನು ಬಿಟ್ಟು ಬಿಡು” ಎಂದು ಹೇಳಿದ್ದಾರೆ.

ಕಳೆದ 15 ವರ್ಷಗಳಿಂದಲೂ ರಾಜಕೀಯದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿಯವರಿಗೆ ಈ ರೀತಿಯಾಗಿ ನಾನು ಹೇಳಿದರೆ ತಪ್ಪಾಗೋದಿಲ್ಲ. ಯಾಕೆಂದರೆ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸುಧಾರಣೆಯನ್ನೂ ತರುವಲ್ಲಿಯೂ ಅವರು ಯಶಸ್ವಿಯಾಗಿಲ್ಲ. ಅಷ್ಟೇ ಅಲ್ಲದೇ, ಯಾವುದೇ ವಿಚಾರವನ್ನೂ ಕೂಡ ತಿಳಿಯದೆ ತಮ್ಮ ಭಾಷಣದಲ್ಲಿ ತಮ್ಮ ಪಕ್ಷದ ವಿರುದ್ಧವಾಗಿಯೇ ಅವರು ಮಾತನಾಡುತ್ತಾರೆ. ಹಾಗಾಗಿ ಇದು ಬಿಜೆಪಿ ಪಕ್ಷಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತಿದೆ. ಇನ್ನು ರಾಹುಲ್ ಗಾಂಧಿಯವರ ಭಾಷಣಗಳನ್ನಾಗಲಿ ಅಥವ ಹೇಳಿಕೆಗಳನ್ನಾಗಲಿ ಯಾವತ್ತೂ ಕೂಡ ಜನರು ಗಂಭೀರವಾಗಿ ತೆಗೆದುಕೊಳ್ಳುವ ಬದಲು ತಮಾಷೆಯಾಗಿ ಕಾಣುತ್ತಿದ್ದಾರೆ. ಹಾಗಾಗಿ ಅವರ ಪ್ರಯತ್ನಗಳು ಜನರಿಗೆ ತಲುಪುತ್ತಿದೆಯಾದರೂ, ಇದು ಕಾಂಗ್ರೆಸ್ ಪಕ್ಷದ ನಿರ್ನಾಮಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

 

ಸಾಮಾನ್ಯವಾಗಿ ರಾಜಕೀಯ ಮುಖಂಡರ ಸುತ್ತಮುತ್ತ ಬುದ್ಧಿಜೀವಿಗಳು ಮತ್ತು ಉನ್ನತ ಮಟ್ಟದ ವಿಶ್ಲೇಷಕರು ಇರುತ್ತಾರೆ ಎಂಬುದು ತಿಳಿದಿದೆ. ಇದನ್ನೇ ಸಾಮಾನ್ಯ ಪರಿಭಾಷೆಯಲ್ಲಿ ಹೇಳಬೇಕೆಂದರೆ ಹೆಚ್ಚು ವಿದ್ಯಾವಂತರು, ಹೆಚ್ಚು ತಿಳಿದುಕೊಂಡವರು ಅಥವ ಉತ್ತಮ ರೀತಿಯಲ್ಲಿ ವರ್ತಿಸುವವರು ಎಂದು ಹೇಳಬಹುದು!! ಆದರೆ
ರಾಹುಲ್ ಗಾಂಧಿಯವರ ಸುತ್ತಮುತ್ತ ಅನಕ್ಷರಸ್ಥರು ಮತ್ತು ಪರಿಪಕ್ವತೆ ಇಲ್ಲದ ಸಲಹೆಗಾರರೇ ಸುತ್ತುಕೊಂಡಿರುವುದು ಮಾತ್ರ ವಿಪರ್ಯಾಸ.

ಯಾಕೆಂದರೆ ಈ ಹಿಂದೆ ಪ್ರಕಾಶ್ ರಾಜ್ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಹಿಂದೂಗಳಲ್ಲ ಎಂದು ಹೇಳಿಕೆಯೊಂದನ್ನು ನೀಡಿ ತೀವ್ರವಾಗಿ ನಿಂದನೆಗೊಳಗಾಗಿದ್ದರು. ಇನ್ನು ಸಿದ್ದರಾಮಯ್ಯನವರು ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಬಿಜೆಪಿಯ ಹಲವಾರು ನಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಆಗಿದೆ. ಇನ್ನು ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿರುವ ರಮ್ಯಾ, ಪ್ರಧಾನಿ ಮೋದಿಯವರ ವಿರುದ್ಧ ಇಲ್ಲಸಲ್ಲದ ಹೇಳಿಗಳನ್ನು ನೀಡುತ್ತಾ ಬರುತ್ತಿದ್ದು, ಇದೀಗ ನರೇಂದ್ರ ಮೋದಿಯವರು ಬೆಂಗಳೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಗಾಂಜಾ ಸೇವಿಸಿ ಮಾತಾನಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿ ವಿವಾದಕ್ಕೀಡಾಗಿದ್ದರು. ಹೀಗಾಗಿ ರಾಹುಲ್ ಗಾಂಧಿಯವರ ಸುತ್ತಮುತ್ತ ಇಂಥವರೇ ತುಂಬಿ ತುಳುಕಾಡುತ್ತಿದ್ದಾರೆ.

ಆದರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಗೋಪಾಲ್ ಕೃಷ್ಣ ಗಾಂಧಿಯವರು, “ನನಗೆ ಈ ಯುವಕನ ಬಗ್ಗೆ ಹೆಚ್ಚು ತಿಳಿದಿಲ್ಲ. ಅಷ್ಟೇ ಅಲ್ಲದೇ ಅವರ ಸಮಯವನ್ನು ನಾನು ತೆಗೆದುಕೊಳ್ಳುವ ಇಚ್ಛೆಯೂ ನನಗೆ ಇಲ್ಲ, ಏಕೆಂದರೆ ಅವರೊಬ್ಬರು ಬಿಡುವಿಲ್ಲ ವ್ಯಕ್ತಿಯಾಗಿದ್ದಾರೆ. ಆದರೆ ನಾನು ಯಾವತ್ತೂ ಕೂಡ ಹೇಳುವುದೇನೆಂದರೆ ಅವರೊಬ್ಬ ಒಂದು ನಿರ್ದಿಷ್ಟ ಸಮುದಾಯಕ್ಕಾಗಿ ಮಾತನಾಡಲು ಸಾಧ್ಯವಾಗದಂತಹ ವ್ಯಕ್ತಿಯಂತೆ ಕಾಣುತ್ತಾರೆ. ಹಾಗಾಗಿ ಅವರು ಯಾವುದೇ
ಒಂದು ನಿರ್ದಿಷ್ಟ ಬಹುಸಂಖ್ಯಾ ಸಮುದಾಯ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರದ ಕಾರಣ, ಅವರೊಬ್ಬರು ಭಾರತದಲ್ಲಿರುವ ಅದ್ಭುತವಾದ ‘ಖಿಚಡಿ’ಯಂತೆ!! ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾರೊಬ್ಬರು ಕೂಡ ಹೇಳದೇ ಇರುವುದನ್ನು ನಾನು ಹೇಳುತ್ತೇನೆ’ ಎಂದು ಹೇಳಿದ್ದಾರೆ.

ಹಾಗಾಗಿ, ಚಾರ್ಲಿ ಚಾಪ್ಲಿನ್ ನಂತೆ ಎದ್ದು ನಿಂತು, ಪ್ರಧಾನ ಮಂತ್ರಿಯಾಗುವ ಕನಸನ್ನು ಬಿಟ್ಟು ಬಿಡುತ್ತೇನೆಂದು ಎಲ್ಲರ ಸಮ್ಮುಖದಲ್ಲಿ ಹೇಳಿದರೆ ರಾಹುಲ್ ಗಾಂಧಿಯವರೊಬ್ಬರು ಉತ್ತಮ ವ್ಯಕ್ತಿಯಂತೆ ಕಂಡರೂ ಕಾಣಬಹುದು!!

– ಅಲೋಖಾ

 

Tags

Related Articles

Close