ಅಂಕಣದೇಶಪ್ರಚಲಿತ

ವಿಶ್ವದ 5 ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಟ್ರಂಪ್, ಒಬಾಮರನ್ನು ಹಿಂದಿಕ್ಕಿದ ನರೇಂದ್ರ ಮೋದಿ!! ಅಷ್ಟಕ್ಕೂ ಮೋದಿ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತೇ?

ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು “ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕ” ರಾಗಿ ಹೊರಹೊಮ್ಮಿದ್ದಲ್ಲದೇ, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಕೂಡ ಹೌದು…!! ಈಗಾಗಲೇ ವಿಶ್ವದ ಗಮನ ಸೆಳೆಯುತ್ತಿರುವ ನರೇಂದ್ರ ಮೋದಿಯವರು “ಸಾಮಾಜಿಕ ವಿಜ್ಞಾನಿ” ಎನ್ನುವ ಹೆಸರನ್ನು ಪಡೆದುಕೊಂಡಿದ್ದಲ್ಲದೇ “ಭಾರತದ ಅತ್ಯುತ್ತಮ ಡಾಕ್ಟರ್” ಎಂದೂ ಕರೆಸಿಕೊಂಡಿದ್ದಾರೆ!!

ಈಗಾಗಲೇ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಸಮೀಕ್ಷೆಯೊಂದು ಮೋದಿಯವರನ್ನು ಹಾಡಿ ಹೊಗಳಿತ್ತು. ಅಷ್ಟೇ ಅಲ್ಲದೇ, ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನೋಟ್ ಬ್ಯಾನ್, ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಇದು ನರೇಂದ್ರ ಮೋದಿಯವರ “ಎದೆಗಾರಿಕೆಯ ನಿರ್ಧಾರ” ಎಂದು ಬಣ್ಣಿಸಿದ್ದರು!!

ಆದರೆ ಭಾರತದಲ್ಲಿ ಮೋದಿಯ ನೋಟ್ ಬ್ಯಾನ್, ಜಿಎಸ್ ಟಿಯ ನಿರ್ಧಾರದಿಂದಾಗಿ ಕೊಂಚ ಸಫಲತೆಯನ್ನೂ ಕಂಡರೂ ಕೂಡ ನರೇಂದ್ರ ಮೋದಿಯವರು “ಭಾರತ ಕಂಡ ಅತ್ಯುತ್ತಮ ಪ್ರಧಾನಿ” ಯಾಗಿ ಸಮೀಕ್ಷೆಗಳ ಮೂಲಕ ಹೊರಹೊಮ್ಮಿದ್ದರು. ಆದರೆ ಹಲವು ವಾದ ವಿರೋಧದ ನಡುವೆಯೂ ಪ್ರಧಾನಿ ಮೋದಿಯ ಪ್ರಭಾವ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರ ಪರಿಣಾಮ ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಿಸ್ಸಂದೇಹವಾಗಿ ಅಗ್ರಸ್ಥಾನವನ್ನೇ ಪಡೆದಿದ್ದಾರೆ.

ಹೌದು… ವಿಶ್ವದ ಅತಿರಥರನ್ನೆಲ್ಲಾ ಹಿಂದಿಕ್ಕಿರುವ ನರೇಂದ್ರ ದಾಮೋದರ ದಾಸ್ ಮೋದಿಯವರ ಜನಪ್ರಿಯತೆ ನಾಗಾಲೋಟದಂತೆ ಹೆಚ್ಚಾಗುತ್ತಿದ್ದು, ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಹಿರಿಮೆ ಇವರದ್ದಾಗಿದೆ. ಈಗಾಗಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು “ಭಾರತದ ಭವಿಷ್ಯವನ್ನು ಬದಲಿಸುವ ಕ್ರಾಂತಿಕಾರಿ ನಾಯಕ” ಎಂದು ಮೋದಿಯನ್ನು ಬಣ್ಣಿಸಿದ್ದರೆ, ಭಾರತ 14ನೇ ರಾಷ್ಟ್ರಪತಿ ರಾಮನಾಥ್ ಕೋವೀಂದ್ ನರೇಂದ್ರ ಮೋದಿಯವರನ್ನು “ಸಾಮಾಜಿಕ ವಿಜ್ಞಾನಿ” ಎಂದು ಕೊಂಡಾಡಿದ್ದರು. ಆದರೆ ಇದೀಗ ವಿಶ್ವ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರು ವಿಶ್ವದ ದೊಡ್ಡನಾದ ಅಮೇರಿಕಾದ ಡೊನಾಲ್ಡ್ ಟ್ರಂಪ್, ಒಬಾಮ ರನ್ನೇ ಹಿಂದಿಕ್ಕಿ ಮೋದಿ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಗೊತ್ತೇ??

ವಿಶ್ವದ 5 ಪ್ರಭಾವಿ ನಾಯಕರ ಪಟ್ಟಿ……………..!!

1) ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್

ಯೆಲ್ಟ್ಸಿನ್ ಅಧ್ಯಕ್ಷರಾಗಿ ರಾಜೀನಾಮೆ ನೀಡಿದ ನಂತರ ಅಧಿಕೃತ ಚುನಾವಣೆಯವರೆಗೆ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, 2004 ರಲ್ಲಿ ಅವರು ಮತ್ತೆ ಚುನಾಯಿತರಾದರು!!! ಏಪ್ರಿಲ್ 2005 ರಲ್ಲಿ ಇಸ್ರೇಲ್ ಗೆ ಐತಿಹಾಸಿಕ ಭೇಟಿ ನೀಡಿ ವಿಶ್ವದಲ್ಲೇ ಭಾರಿ ಸುದ್ದಿಯಾಗಿದ್ದರು..

ಅಷ್ಟೇ ಅಲ್ಲದೇ, 2017 ರ ಅಕ್ಟೋಬರ್ ನಲ್ಲಿ ಪುಟಿನ್ ಗೆ ಜನರಿಂದ ಅನುಮೋದನೆ ರೇಟಿಂಗ್ 89.9% ರಷ್ಟು ತಲುಪಿತ್ತು!! ಉಕ್ರೇನಿಯನ್ ಕ್ರಾಂತಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಕ್ರೈಮಿಯಾವನ್ನು ರಷ್ಯಾ ವಶಪಡಿಸಿಕೊಂಡ ನಂತರ ತನ್ನ ದೇಶವನ್ನು ವಿಶ್ವದಲ್ಲೇ ಮಹಾಶಕ್ತಿಯಾಗಿ ಪುನರುತ್ಥಾನಗೊಳಿಸಲು ಪುಟಿನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಷ್ಯಾ ದ ಮೇಲೆ ಪುಟಿನ್ ನಿಯಂತ್ರಣ ಅಗಾಧವಾಗಿರುವ ಹಿನ್ನಲೆಯಲ್ಲಿ ಪುಟಿನ್ ಖಂಡಿತವಾಗಿಯೂ ಅತ್ಯಂತ ಪ್ರಭಾವಶಾಲಿ ವಿಶ್ವ ನಾಯಕರಲ್ಲಿ ಒಬ್ಬರಾಗಿದ್ದಾರೆ.

2) ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್

ನಿಗೂಢ ರಾಜಕೀಯ ಚಾಣಕ್ಯ ಎಂದು ಪ್ರಖ್ಯಾತಿಯನ್ನು ಹೊಂದಿರುವ ಇವರು ಚೀನೀ ಕಮ್ಯುನಿಸ್ಟ್ ಪಾರ್ಟಿಯ ಮುಖಂಡ!! ಅತಿದೊಡ್ಡ ದೇಶವಾದ ಚೀನಾದ ಸಂಪೂರ್ಣ ನಿಯಂತ್ರಣ ಇವರ ಕೈಯಲ್ಲಿದೆ!! ಹೀಗಾಗಿ ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಕ್ಸಿ ಜಿಂಪಿಂಗ್ ಮಾವೋ ಝೆಡಾಂಗ್ ನಂತರ ಅತ್ಯಂತ ಪ್ರಭಾವಶಾಲಿ ಚೀನೀ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ. ಹಾಗಾಗಿ ವಿಶ್ವದ 5 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನೇರಿದ್ದಾರೆ.

3) ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್

 

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಯುರೋಪ್ ನ ಪ್ರಪ್ರಥಮ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಅಷ್ಟೇ ಅಲ್ಲದೇ, ತನ್ನ ಅಧಿಕಾರಾವಧಿಯಲ್ಲಿ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರೂ ಕೂಡ ಪ್ರತಿ ಬಾರಿಯೂ ಇದನ್ನು ಸಮರ್ಥವಾಗಿ ಎದುರಿಸಿ ಅತ್ಯುನ್ನತ ಚಾನ್ಸೆಲರ್ ಆಗಿ ಹೊರಬಂದಿದ್ದಾರೆ. ಇವರ ಅಧಿಕಾರವಧಿಯ ಸಂದರ್ಭದಲ್ಲಿ ಜರ್ಮನಿ ಬಲವಾದ ಆರ್ಥಿಕತೆ ಮತ್ತು ಕಡಿಮೆ ನಿರುದ್ಯೋಗ ದರವನ್ನು ಸಾಧಿಸಿದ ಕಾರಣ ವಿಶ್ವದಲ್ಲಿ ಪ್ರಭಾವಶಾಲಿ ವ್ಯಕ್ತಿಯ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

4) ಭಾರತದ ಪ್ರಧಾನ ಮಂತ್ರಿ

ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ 1.2 ಶತಕೋಟಿ ಜನರ ಜೀವನವನ್ನು ಸುಧಾರಿಸಲು ವಿವಿಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ಮೇ 2017 ರಲ್ಲಿ ಏಕರೂಪದ ಮಾರಾಟ ತೆರಿಗೆಯನ್ನು (ಜಿ ಎಸ್ ಟಿ) ಅನುಷ್ಠಾನಗೊಳಿಸುವ ಮೂಲಕ ಮತ್ತು ಭಾರತಕ್ಕೆ ವಿದೇಶಿ ನೇರ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಸರ್ಕಾರ ಮತ್ತು ವ್ಯಾಪಾರ ವಲಯಗಳನ್ನು ಆಧುನೀಕರಿಸುವ ಯೋಜನೆಯನ್ನು ಅವರು ಘೋಷಿಸಿದರು. ಅವರ ಪ್ರಕಾರ, ಟೆಕ್ ನಾವೀನ್ಯತೆ ಭಾರತವನ್ನು ಬಡತನದಿಂದ ಮುಕ್ತವಾಗಿಸುವಲ್ಲಿ ಪ್ರಮುಖವಾದ ಕ್ರಮವಾಗಿದೆ.

ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ನಿಂದಾಗಿ ಮೋದಿಯವರ ಯಶಸ್ಸಿಗೆ ಪೆಟ್ಟು ಬಿದ್ದಿದೆ ಎಂದು ಹಲವಾರು ಮಂದಿ ಮಾತಾನಾಡಿಕೊಂಡರಲ್ಲದೇ, ಇದು ಚುನಾವಣೆ ವೇಳೆ ಒಂದು ದೊಡ್ಡ ಅಸ್ತ್ರವಾಗುತ್ತೆ ಅಂತಾ ಕೆಲವರು ತಮ್ಮೊಳಗೆ ಖುಷಿ ಪಟ್ಟುಕೊಂಡಿದ್ದರು.! ವಿಪರ್ಯಾಸ ಎಂದರೆ, ಈ ಎಲ್ಲಾ ಯೋಜನೆಗಳು ಬಂದ ನಂತರನೇ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೋದಿ ಹವ ಗುಗ್ಗಿಲ್ಲ ಅನ್ನೋದನ್ನು ಸಾಬೀತು ಪಡಿಸಿದ್ದರು.

5) ಪೆÇೀಪ್ ಫ್ರಾನ್ಸಿಸ್

ರೋಮನ್ ಕ್ಯಾಥೋಲಿಕ್ ಚರ್ಚ್ ನ 266 ನೇ ಪೆÇೀಪ್ ಆದ ಇವರು ವಿಶ್ವದಲ್ಲೇ 5 ನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಮಿಂಚಿದ್ದಾರೆ. ತಮ್ಮದೇ ಆದ ಕಾರ್ಯವೈಖರಿಯ ಮೂಲಕ ವಿಶ್ವದ ಗಮನ ಸೆಳೆದ ಇವರು ವಿಶ್ವದ ಪ್ರಭಾವಶಾಲಿ ವ್ಯಕ್ತಿಯಾಗಿರುವುದು ಹೆಮ್ಮೆಯ ವಿಚಾರ!!

ಒಟ್ಟಿನಲ್ಲಿ…. ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗಿರುವ ನರೇಂದ್ರ ಮೋದಿಯವರು ವಿಶ್ವದ 4ನೇ ಪ್ರಭಾವಶಾಲಿ ವ್ಯಕ್ತಿಯಾಗಿ ಮಿಂಚಿರೋದು ಹೆಮ್ಮೆಯ ವಿಚಾರ!! ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ಮೋದಿ ತೆಗೆದುಕೊಂಡ ನೋಟ್ ಬ್ಯಾನ್ ಹಾಗೂ ಪರಿಣಾಮಕಾರಿ ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ಮೋದಿಯ “ಎದೆಗಾರಿಕೆಯ ನಿರ್ಧಾರ” ಎಂದು ಬಣ್ಣಿಸಿದ್ದರು. ಒಟ್ಟಿನಲ್ಲಿ ದೇಶಕ್ಕೆ ಅಂಟಿದ ಒಂದೊಂದೇ ರೋಗಗಳನ್ನು ನಿರ್ಮೂಲನೆ ಮಾಡುತ್ತಲೇ ಬರುತ್ತಿರುವ ನರೇಂದ್ರ ಮೋದಿಯವರು ದೇಶಕಂಡಂತಹ ಅಪ್ರತಿಮ ಪ್ರಧಾನಿಯಾಗಿರುವುದಂತೂ ಅಕ್ಷರಶಃ ನಿಜ.

ಈ ಹಿಂದೆ ಭಾರತವನ್ನು ಹಿಂದುಳಿದ ರಾಷ್ಟ್ರ ಅಂತ ಕೈ ಜೋಡಿಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲ ಮೋದಿಯ ಪ್ರಭಾವದಿಂದಾಗಿ ನಾ ಮುಂದು ತಾ ಮುಂದು ಅಂತ ಭಾರತದ ಸ್ನೇಹಕ್ಕಾಗಿ ಸಾಲುಕಟ್ಟಿ ನಿಲ್ಲುತ್ತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಎನ್ನುವುದನ್ನು ನಾವು ಮರೆಯಬಾರದು. ಇಷ್ಟೇ ಅಲ್ಲದೇ, ಮೋದಿಯ ಹವಾ ಪ್ರಪಂಚದ ಮೂಲೆ ಮೂಲೆಗೆ ಹರಡಿದ್ದು, ಇದೀಗ ವಿಶ್ವದ ದೊಡ್ಡನಾದ ಅಮೇರಿಕ ಅಧ್ಯಕ್ಷರನ್ನೂ ಮೀರಿ ವಿಶ್ವದ ಪ್ರಭಾವಶಾಲಿ ನಾಯಕ ಪಟ್ಟಿಯಲ್ಲಿ ನರೇಂದ್ರ ಮೋದಿಯವರು 4ನೇ ಸ್ಥಾನವನ್ನು ಪಡೆದುಕೊಂಡು ವಿಶ್ವದಲ್ಲೇ ಪ್ರಭಾವಿ ವ್ಯಕ್ತಿಯಾಗಿ ಮಿಂಚಿರೋದೇ ಹೆಮ್ಮೆಯ ವಿಚಾರ!!

– ಅಲೋಖಾ

Tags

Related Articles

Close