ಪ್ರಚಲಿತ

ಪ್ರಧಾನಿ ಮೋದಿ ಹಾದಿಯಲ್ಲೇ ಮೊದಲ ಹೆಜ್ಜೆ ಇಟ್ಟ ಬಿಎಸ್‌ವೈ..! ಮರುಕಳಿಸುತ್ತಿದೆ ಹಿಂದೂ ರಾಷ್ಟ್ರದ ವೈಭವ..!

ಎಲ್ಲಾ ಅಡೆತಡೆಗಳನ್ನು ಛಿದ್ರಗೊಳಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೋಟೆ ಭೇದಿಸಿದ ಬಿಜೆಪಿ ಈಗಾಗಲೇ ಯಡಿಯೂರಪ್ಪನವರನ್ನು ಮುಂದಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವಂತೆ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಇಡೀ ರಾಜ್ಯದ ಗಮನ ಮುಖ್ಯಮಂತ್ರಿ ಕುರ್ಚಿಯ ಮೇಲಿತ್ತು ಎಂದರೆ ತಪ್ಪಾಗದು. ಯಾಕೆಂದರೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗದೇ ಇದ್ದಿದ್ದರಿಂದ ಸರಕಾರ ರಚನೆ ಮಾಡಲು ಭಾರೀ ತಡೆ ಉಂಟಾಗಿತ್ತು. ಆದರೂ ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮತ್ತು ರಾಜ್ಯ ಬಿಜೆಪಿ ನಾಯಕರ ಒಗ್ಗಟ್ಟಿನಿಂದಾಗಿ ಇದೀಗ ಬಿ.ಎಸ್‌.ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ..!

ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿದ ಬಿಎಸ್‌ವೈ..!

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ , ಪ್ರಚಂಡ ಬಹುಮತದಿಂದ ಗೆದ್ದು ಪ್ರಧಾನಿ ಪಟ್ಟ ಅಲಂಕರಿಸಿದ ನರೇಂದ್ರ ಮೋದಿ, ಸಂಸತ್ ಭವನಕ್ಕೆ ಪ್ರವೇಶಿಸುವುದಕ್ಕೂ ಮೊದಲು ಸಂಸತ್ ಭವನದ ಮೆಟ್ಟಿಲುಗಳಿಗೆ ಅಡ್ಡಬಿದ್ದು ನಮಸ್ಕರಿಸಿ ಒಳ ಪ್ರವೇಶಿಸಿದ್ದರು. ಮೋದಿಯವರ ಈ ಒಂದು ನಡೆ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿತ್ತು. ಸ್ವತಃ ಕಾಂಗ್ರೆಸಿಗರೇ ಮೋದಿಯವರನ್ನು ಕಂಡು ನಿಬ್ಬೆರಗಾಗಿದ್ದರು.
ಇಂದು ಯಡಿಯೂರಪ್ಪನವರು ಕೂಡಾ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧ ಪ್ರವೇಶಿಸುವುದಕ್ಕೂ ಮೊದಲು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ್ದಾರೆ..!

ಸರಕಾರಿ ಅಧಿಕಾರಿಗಳಿಂದ ಸ್ವಾಗತ..!

ಮುಖ್ಯಮಂತ್ರಿ ಯಡಿಯೂರಪ್ಪ ನವರು ಇಂದು ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧಕ್ಕೆ ತೆರಳುತ್ತಿದ್ದಂತೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಈಗಾಗಲೇ ವಿಧಾನಸೌಧ ಪ್ರವೇಶಿಸಿದ ಯಡಿಯೂರಪ್ಪನವರು, ಮುಖ್ಯಮಂತ್ರಿ ಕಚೇರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಸಿಎಂ ಕುರ್ಚಿ ಅಲಂಕರಿಸಿದ್ದಾರೆ. ಬಿಜೆಪಿ ಶಾಸಕರು ಮತ್ತು ಸಂಸದರೂ ಕೂಡ ಈ ವೇಳೆ ಹಾಜರಿದ್ದು, ಯಡಿಯೂರಪ್ಪ ನವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಬಿಜೆಪಿ ಈ ಬಾರಿ ಹಿಂದುತ್ವವನ್ನೇ ಎತ್ತಿ ಹಿಡಿದು ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಕೇವಲ ಚುನಾವಣೆಗಾಗಿ ಮಾತ್ರ ಹಿಂದುತ್ವವನ್ನು ಪ್ರತಿನಿಧಿಸದೇ ಇದೀಗ ಗೆದ್ದ ನಂತರವೂ ಬಿಜೆಪಿ ಹಿಂದುತ್ವವಾದವನ್ನೇ ಪ್ರತಿಪಾದಿಸುತ್ತಿದೆ.


ಯಡಿಯೂರಪ್ಪ ನವರು ಮೂರನೇ ಬಾರಿಗೆ ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಆಗಿ ಇಂದು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ವಿರೋಧಿಸಿದರೂ ರಾಜ್ಯದ ಜನರ ಆಯ್ಕೆ ಬಿಜೆಪಿಯೇ ಆಗಿರುವುದರಿಂದ ಸದ್ಯ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾರೆ..!

–ಅರ್ಜುನ್

Tags

Related Articles

Close