ಪ್ರಚಲಿತ

ಗಾಂಧೀಜಿಯವರ ಅಂತಿಮ ಇಛ್ಚೆ ಮತ್ತು ವೀಲುನಾಮೆ “ಕಾಂಗ್ರೆಸ್ ಮುಕ್ತ ಭಾರತ” ದ ಕನಸನ್ನು ಕಾಂಗ್ರೆಸಿಗರು ಇನ್ನೂ ನನಸಾಗಿಸಿಲ್ಲ ಏಕಾಗಿ?!

ನೆಹರೂರವರ ಪರಿವಾರಕ್ಕೂ ಮಹಾತ್ಮಾ ಗಾಂಧಿಗೂ ಯಾವುದೇ ತೆರನಾದ ಸಂಬಂಧವಿಲ್ಲವೆಂಬುದು ಇಡಿ ದೇಶಕ್ಕೇ ಗೊತ್ತು. ನೆಹರೂರವರ ಮಗಳು ಇಂದಿರಾ ಪ್ರಿಯದರ್ಶಿನಿ ಫಿರೋಜ್ ಖಾನ್ ಅನ್ನು ಮದುವೆಯಾಗಿ ಮೈಮುನಾ ಬೇಗಂ ಆದಾಗ ಹೌಹಾರಿದ ನೆಹರೂ ಅಫಿದವಿತ್ ಸಲ್ಲಿಸಿ ಫಿರೋಜ್ ಗಾಂಧಿ ಎಂದು ತಮ್ಮ ಅಳಿಯನ ಹೆಸರನ್ನು ಬದಲಾಯಿಸುತ್ತಾರೆ. ಗಾಂಧಿ ಎಂಬ ಉಪನಾಮವಿದ್ದರೆ ಭಾರತದ ಜನ ಮಹಾತ್ಮಾ ಗಾಂಧಿಯ ಸಂಬಂಧಿಕರೆಂದು ತಿಳಿದು ತಮಗೆ ವೋಟ್ ನೀಡುತ್ತಾರೆನ್ನೆವ ಕುತಂತ್ರಿ ಬುದ್ದಿಯಿಂದಾಗಿ ನೆಹರೂ ಈ ರೀತಿ ಮಾಡುತ್ತಾರೆ. ಆದರೆ ನೆಹರೂ ಸಮೇತರಾಗಿ ಇಡಿಯ ಕಾಂಗ್ರೆಸೇ ಗಾಂಧಿಜಿಗೆ ಸಂಬಂಧಪಟ್ಟ ವಿಚಾರವೊಂದನ್ನು ಜನತೆಯಿಂದ ಮುಚ್ಚಿಟ್ಟಿದೆ.

ಮಾತು ಮಾತಿಗೂ ಭಾರತಕ್ಕೆ ಸ್ವಾತಂತ್ರ್ಯ ಗಾಂಧೀಜಿ ದೊರಕಿಸಿಕೊಟ್ಟದ್ದು ಎಂದು ಊಳಿಡುವ ಕಾಂಗ್ರೆಸ್ ಅದೇ ಗಾಂಧೀಜಿಯವರ ಅಂತಿಮ ಇಛ್ಚೆ ಮತ್ತು ಉಯಿಲುನಾಮೆಯ ಬಗ್ಗೆ ಚಕಾರವೆತ್ತುವುದಿಲ್ಲ. ಸ್ವಾತಂತ್ರ್ಯಾ ನಂತರ ಕಾಂಗ್ರೆಸನ್ನು ಬರ್ಖಾಸ್ತುಗೊಳಿಸಬೇಕೆಂದು ಗಾಂಧೀಜಿಯವರು ಸಾಯುವ ಮುನ್ನ ತಿಳಿಸಿದ್ದರು ಮತ್ತು ಬದುಕಿದ್ದರೆ ಬಹುಶ ಅವರು ಕಾಂಗ್ರೆಸನ್ನು ಬರ್ಖಾಸ್ತು ಮಾಡಿಯೂ ಬಿಡುತ್ತಿದ್ದರು. ಆದರೆ ಕಾಂಗ್ರೆಸಿಗರ ಅದೃಷ್ಟ ಗಾಂಧೀಜಿ ಹತರಾದರು, ಕಾಂಗ್ರೆಸ್ ಬರ್ಖಾಸ್ತಾಗಲಿಲ್ಲ ಮಾತ್ರವಲ್ಲ ಗಾಂಧಿ ಉಪನಾಮವೂ ಉಚಿತವಾಗಿ ದೊರೆಯಿತು.

26 ಜನವರಿ 1948 ರಂದು ತಾವು ಸಾಯುವ ಮೂರೇ ದಿನ ಮೊದಲು ಗಾಂಧೀಜಿ ತಮ್ಮ ಪ್ರೀತಿಯ ಪತ್ರಿಕೆ “ಹರಿಜನ”ದಲ್ಲಿ ತಮ್ಮ ಅಂತಿಮ ಇಛ್ಚೆಯ ಬಗ್ಗೆ ಬರೆಯುತ್ತಾರೆ. ಅದರಲ್ಲಿ ಅವರು ಕಾಂಗ್ರೆಸ್ ಅನ್ನು ಬರ್ಖಾಸ್ತುಗೊಳಿಸಿ ಅದರ ಪುನರ್ ನಾಮಕರಣ ಮಾಡಿ “ಲೋಕ ಸೇವಕ ಸಂಘ” ಎಂದು ಹೆಸರಿಡಲು ಹೇಳುತ್ತಾರೆ. ಕಾಂಗ್ರೆಸಿನ ಎಲ್ಲಾ ಸದಸ್ಯರೂ ಲೋಕ ಸೇವಕ ಸಂಘವನ್ನು ಸೇರಿ ಸ್ವಯಂ ಸೇವಕರಾಗಿ ದೇಶ ಸೇವೆ ಮಾಡಬೇಕು ಎಂದು ತಮ್ಮ ಮನದಿಂಗಿತವನ್ನು ವ್ಯಕ್ತ ಪಡಿಸುತ್ತಾರೆ. ಮಾತು ಮಾತಿಗೂ ಗಾಂಧಿ ನಾಮ ಜಪಿಸುವ ಕಾಂಗ್ರೆಸ್ ಇನ್ನೂ ಅವರ ಅಂತಿಮ ಇಛ್ಚೆಯನ್ನು ಪೂರ್ತಿಗೊಳಿಸಿಲ್ಲ.

ಗಾಂಧೀಜಿಯ ಆಪ್ತ ಕಾರ್ಯದರ್ಶಿ ಕಲ್ಯಾಣಮ್ ಅವರ ಪ್ರಕಾರ ಗಾಂಧೀಜಿಯವರ ಬಳಿ ಕಾಂಗ್ರೆಸನ್ನು ಬರ್ಖಾಸ್ತುಗೊಳಿಸಲು ಬಲವಾದ ಕಾರಣಗಳಿದ್ದವು. ಅವರ ಪ್ರಕಾರ ಕಾಂಗ್ರೆಸ್ ದೇಶದ ಸ್ವಾಂತಂತ್ರ್ಯಕ್ಕಾಗಿ ಸ್ಥಾಪಿಸಲಾದ ಸಂಘಟನೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಅನ್ನು ಜೀವಿತವಾಗಿಡುವುದರಲ್ಲಿ ಯಾವುದೇ ಹುರುಳಿರಲಿಲ್ಲ. ಉದ್ದೇಶವೇ ಈಡೇರಿದ ಮೇಲೆ ಆ ಸಂಘಟನೆಯ ಅವಶ್ಯಕತೆಯೇ ಇರುವುದಿಲ್ಲ ಎಂಬುದು ಅವರ ವಾದವಾಗಿತ್ತು. ಹರಿಜನ ಪತ್ರಿಕೆಯಲ್ಲಿ ತನ್ನ ದೂರದರ್ಶಿ ಲೇಖನದಲ್ಲಿ ಬರೆಯುತ್ತಾ ತನ್ನ ಶರೀರ ಮತ್ತು ಆರೋಗ್ಯ ಅನುವು ಮಾಡಿಕೊಟ್ಟರೆ ತಾವು ಈ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಅನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಗಾಂಧೀಜಿಗೆ ಇಷ್ಟವಿರಲಿಲ್ಲ ಆದ್ದರಿಂದಲೇ ಅವರು ಕಾಂಗ್ರೆಸ್ ಅನ್ನು ಬರ್ಖಾಸ್ತುಗೊಳಿಸಲು ಹೇಳಿದ್ದು.

‘ಸೇವಕರಿಗೆ’ ತಮ್ಮ ‘ಸ್ವಾಮಿ’ ಅಂದರೆ ಜನತೆಯ ಪ್ರತಿ ಯಾವೆಲ್ಲಾ ಕರ್ತವ್ಯಗಳಿವೆ ಎಂಬುದನ್ನು ಮತ್ತು ಮಹಿಳೆ-ಪುರುಷರಾದಿಯಾಗಿ ಒಂದಿಡೀ ವಯಸ್ಕ ಸಮಾಜವನ್ನು ಹೇಗೆ ಮೇಲೆತ್ತಬಹುದೆನ್ನುವುದನ್ನು ತಾನು ಚರ್ಚೆ ಮಾಡಲು ಬಯಸುತ್ತೇನೆನ್ನುವುದನ್ನೂ ತಮ್ಮ ಲೇಖನದಲ್ಲಿ ಹಂಚಿ ಕೊಂಡಿದ್ದರು. ಆದರೆ ಗಾಂಧೀಜಿ ಅವರು ಹೀಗೆ ಹೇಳಿಕೊಂಡ ಮೂರು ದಿನಗಳ ಬಳಿಕ ಅವರು ದೈವಾಧೀನರಾದರು. ಹೊರಗೆ ಅತ್ತಂತೆ ಮಾಡಿದರೂ ಮನದೊಳಗೆ ಅತ್ಯಂತ ಖುಷಿ ಪಟ್ಟದ್ದು ಮಾತ್ರ ನೆಹರು. ಯಾಕೆಂದರೆ ಒಂದು ವೇಳೆ ಗಾಂಧೀಜಿಯೇನಾದರೂ ಬದುಕಿದ್ದಿದ್ದರೆ ಖಂಡಿತವಾಗಿಯೂ ಕಾಂಗ್ರೆಸ್ ಅನ್ನು ಬರ್ಖಾಸ್ತು ಮಾಡುತ್ತಿದ್ದರು ಆಗ ಕಪಟ ನೆಹರೂಗೆ ಪ್ರಧಾನಮಂತ್ರಿ ಗದ್ದುಗೆ ಏರಲಾಗುತ್ತಿರಲಿಲ್ಲ ಬದಲಾಗಿ ಒಬ್ಬ ಸಾಮಾನ್ಯ ಸ್ವಯಂ ಸೇವಕನಾಗಿ ದುಡಿಯಬೇಕಾಗುತ್ತಿತ್ತು. ಗಾಂಧಿ ಹೆಸರು ಹಾಕಿಕೊಂಡು ತಿರುಗಾಡುವ ನೆಹರೂ ಸಂತಾನಗಳಿಗೂ ಗದ್ದುಗೆ ಏರಲಾಗುತ್ತಿಲಿಲ್ಲ.

ಒಬ್ಬ ವ್ಯಕ್ತಿ ಸಾಯುವ ಕೆಲವೇ ಘಳಿಗೆಯ ಮುನ್ನ ಏನನ್ನು ಬರೆಯುತ್ತಾನೋ ಅದು ಆತನ ಅಂತಿಮ ಉಯಿಲೆಂದೇ ಪರಿಗಣಿತವಾಗಲ್ಪಡುತ್ತದೆ. ಅದರಂತೆ ತಾನು ಸಾಯುವ ಮೂರೇ ದಿನಕ್ಕೂ ಮುನ್ನ ಗಾಂಧೀಜಿಯವರು ತನ್ನ ಮನದಿಛ್ಚೆಯನ್ನು ತನ್ನ ಪ್ರೀತಿಯ ಪತ್ರಿಕೆಯಲ್ಲಿ ಬರೆದುಕೊಂಡಿದ್ದು ಅವರ ಅಂತಿಮ ಇಛ್ಚೆ ಮತ್ತು ಅವರ ಅಂತಿಮ ವೀಲುನಾಮೆ ಎಂದು ಪರಿಗಣಿತವಾಗುತ್ತದೆ. ಹಾಗಾದರೆ ಇಷ್ಟು ವರ್ಷದಿಂದಲೂ ಕಾಂಗ್ರೇಸ್ ಏಕೆ ಗಾಂಧೀಜಿಯವರ ಇಛ್ಚೆಯನ್ನು ಪೂರ್ತಿಗೊಳಿಸಲಿಲ್ಲ, ಕಾಂಗ್ರೆಸಿಗೆ ಗಾಂಧೀಜಿಯವರ ಮೇಲೆ ಪ್ರೀತಿಯಿಲ್ಲವೆಂದಾಯ್ತು. ಕಾಂಗ್ರೆಸಿಗರಿಗೆ ಗಾಂಧಿಜಿಯ ಮೇಲೆ ಅಭಿಮಾನವಿದ್ದಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್ ಬರ್ಖಾಸ್ತ್ ಆಗಬೇಕಾಗಿತ್ತು.

ಗಾಂಧೀಜಿಯವರ ಅಂತಿಮ ಇಛ್ಛೆ “ಕಾಂಗ್ರೆಸ್ ಮುಕ್ತ ಭಾರತ”. ಕಾಂಗ್ರೆಸ್ ಇದನ್ನು ಮಾಡಲಿಲ್ಲ ಆದರೆ ಮೋದಿ ಜಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಯ ಅತೃಪ್ತ ಆತ್ಮದ ಶಾಪ ಇಂದು ಕಾಂಗ್ರೆಸ್ ಗೆ ತಟ್ಟಿ ದೇಶವೀಗ ಕಾಂಗ್ರೆಸ್ ಮುಕ್ತವಾಗುವ ಅಂತಿಮ ಹಂತದಲ್ಲಿದೆ. ಯಾವತ್ತು ದೇಶ ಕಾಂಗ್ರೆಸ್ ಮುಕ್ತವಾಗುವುದೋ ಆವತ್ತು ಗಾಂಧೀಜಿಯ ಆತ್ಮಕ್ಕೆ ಶಾಂತಿ ಸಿಗುವುದು. ಗಾಂಧೀಜಿಯ ಆತ್ಮಕ್ಕೆ ಶಾಂತಿ ದೊರಕಿಸಿಕೊಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಅವರ ಅಂತಿಮ ಆಸೆಯನ್ನು ಪೂರೈಸೋಣ…ಕಾಂಗ್ರೆಸ್ ಮುಕ್ತ ಭಾರತ ಮಾಡೋಣ….

 

 

Tags

Related Articles

Close