ಪ್ರಚಲಿತ

ವಿದ್ಯಾರ್ಥಿ ಪೋಷಕರಿಗೆ ಮೋದಿ ಸರ್ಕಾರದ ಗುಡ್ ನ್ಯೂಸ್! ಇನ್ನು ವಿದ್ಯಾಭ್ಯಾಸ ಮಾಡಲು ಇಷ್ಟು ಕಷ್ಟಪಡಬೇಕಾಗಿಲ್ಲ..!

ಇತ್ತೀಚೆಗೆ ಎಷ್ಟೇ ಕಷ್ಟ ಆದರೂ ತಂದೆ ತಾಯಿಯಂದಿರು ಖಾಸಗಿ ಶಾಲೆಯಲ್ಲೇ ತಮ್ಮ ಮಕ್ಕಳನ್ನು   ಸೇರಿಸುತ್ತಾರೆ!! ಆದರೆ ಇತ್ತೀಚೆಗೆ ಗಗನ್ಕೇರುತ್ತಿರುವ ಖಾಸಗಿ ಶಾಲಾ ಶುಲ್ಕದಿಂದ ಹೆತ್ತವರು ತತ್ತರಿಸಿ ಹೋಗಿದ್ದಾರೆ!! ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳ ಹಾವಳಿಯಿಂದ ಪಾಲಕರನ್ನು ಪಾರುಮಾಡಲೆಂದೇ ಕೇಂದ್ರ ಸರ್ಕಾರ ಚಿಂತನೆ ನಡೆಸಲು ಮತ್ತೊಂದು ಮಹತ್ವದ ನಿರ್ಧಾರವನ್ನು ಮಾಡಿದೆ!!

ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ನಿರ್ಧಾರ!!

ಹೌದು ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಗಗನಕ್ಕೇರುತ್ತಿರುವ ಶುಲ್ಕದಿಂದಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ  ಸೇರಿಸಲು ಹೆತ್ತವರು ತತ್ತರಿಸುವಂತಾಗಿದೆ!! ಅದಕ್ಕಾಗಿಯೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ  ಮಾಡಲು ತಯಾರಾಗಿದೆ!! ರಾಜ್ಯ ಸರ್ಕಾರಗಳಿಗೆ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳನ್ನು ನೇರವಾಗಿ ನಿಯಂತ್ರಿಸಲಾಗದ ಕಾರಣ, ಆಯಾ ರಾಜ್ಯ ಸರ್ಕಾರಗಳಿಗೆ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವಂತೆ ನಿರ್ದೇಶಿಸಲು ತಜ್ಞರಿಂದ ಸೂಕ್ತ ಸಲಹೆಗಳನ್ನು ಪಡೆಯುತ್ತಿದೆ.

Related image

ಪ್ರತಿ ವರ್ಷ ಪ್ರವೇಶ ಶುಲ್ಕ ಮತ್ತು ಸಮವಸ್ತ್ರಕ್ಕೆ ಶುಲ್ಕ ಪಡೆಯುವುದಕ್ಕೂ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. 2017ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಲ್ಲಿ ಶುಲ್ಕ ನಿಯಂತ್ರಣ ಕಾಯ್ದೆ ಅನುಮೋದನೆ ಪಡೆದಿದೆ.

ಕಳೆದ ಏಪ್ರಿಲ್‍ನಲ್ಲಿ ಉತ್ತರ ಪ್ರದೇಶ ಸರ್ಕಾರ ಸ್ವಂತ ಹಣಕಾಸು ನಿರ್ವಹಣೆಯ ಸ್ವತಂತ್ರ ಶಾಲೆಗಳ (ಶುಲ್ಕ ನಿಯಂತ್ರಣ) ಕಾಯ್ದೆ 2018 ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಅನ್ವಯ ಖಾಸಗಿ ಶಾಲೆಗಳು ವಾರ್ಷಿಕ ಶೇಕಡಾ 8 ಮೀರುವಂತೆ ಶುಲ್ಕ ಹೆಚ್ಚಿಸುವಂತಿಲ್ಲ. ಜತೆಗೆ ಕಟ್ಟಡ, ಮೂಲಸೌಕರ್ಯ ವೃದ್ಧಿ ನಿಧಿ ಹೆಸರಿನಲ್ಲಿ ಹೆಚ್ಚಿನ ಶುಲ್ಕವನ್ನೂ ಸ್ವೀಕರಿಸುವಂತಿಲ್ಲ. ಈ ಕಾಯ್ದೆಯನ್ನು ಕೂಡ ಕೇಂದ್ರ ಸರ್ಕಾರ ಅಧ್ಯಯನ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳು ಶುಲ್ಕಗಳ ಹೆಸರಿನಲ್ಲಿ ಮಕ್ಕಳ ಹೆತ್ತವರನ್ನು ಸುಲಿಗೆ ಮಾಡುವ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಲು ನಿರ್ಧರಿಸಿರುವುದರಲ್ಲಿ ಈ ಮೊದಲು ಉತ್ತರ ಪ್ರದೇಶ ಸರಕಾರ, ಖಾಸಗಿ ಶಾಲೆಗಳ ಶುಲ್ಕವನ್ನು ಸರಕಾರವೇ ನಿಗದಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿತ್ತು!! “ಸ್ವವಿತಾಪೋಷಿತ್ ಸ್ವತಂತ್ರ ವಿದ್ಯಾಲಯ (ಶುಲ್ಕ ನಿರ್ಧರಣ್) ಅಧ್ಯಾದೇಶ್-2018 ಎಂಬ ಹೆಸರಿನ ಈ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮತಿ ಸಿಕ್ಕರೆ, ಆ ರಾಜ್ಯದಲ್ಲಿ ವಿದ್ಯಾರ್ಥಿಗಳಿಂದ ವರ್ಷಕ್ಕೆ ಕನಿಷ್ಟ 20 ಸಾವಿರ ರೂ.ಗಳಷ್ಟು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಬೀಳುತ್ತೆ!

ರಾಜ್ಯದ ಪ್ರತಿ ವಲಯದಲ್ಲಿಯೂ ಶುಲ್ಕ ನಿಯಂತ್ರಣ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು, ಆ ಸಮಿತಿಗಳು 1ನೇ ತರಗತಿಯಿಂದ ಪ್ರೌಢ ಶಾಲೆಗಳವರೆಗಿನ ಶಿಕ್ಷಣ ನೀಡುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಶುಲ್ಕಗಳನ್ನು ನಿರ್ಧರಿಸುತ್ತವೆ. ಸಿಬಿಎಸ್‍ಇ, ಐಸಿಎಸ್‍ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳು ಮಾತ್ರವಲ್ಲ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೂ ಈ ಸಮಿತಿಗಳ ವ್ಯಾಪ್ತಿಯೊಳಗೆ ಬರಲಿವೆ. ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು ಸೇರಿದಂತೆ, ವಿದ್ಯಾರ್ಥಿಗಳ ಪೋಷಕರ ವಲಯದ ಪ್ರತಿನಿಧಿಗಳೂ ಸದಸ್ಯರಾಗಿ ಇರಲಿದ್ದಾರೆ. ಈ ಪ್ರಾದೇಶಿಕ ಸಮಿತಿಗಳಿಗೆ ಎಲ್ಲಾ ಖಾಸಗಿ ಶಾಲೆಗಳೂ ತಮ್ಮ ವಾರ್ಷಿಕ ಆದಾಯದ ವರದಿಯನ್ನು ಸಲ್ಲಿಸಬೇಕಿರುತ್ತದೆ. ವರದಿ ಸಲ್ಲಿಸುವಲ್ಲಿ ಮೊದಲ ಬಾರಿ ವಿಫಲವಾದರೆ, 1 ಲಕ್ಷ ರೂ., ಪುನಃ ಪುನಃ ವಿಫಲವಾದರೆ ಅಂಥ ಪ್ರತಿ ಸಂದರ್ಭದಲ್ಲಿಯೂ 5 ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿತ್ತು!!

ಕೇಂದ್ರ ಸರಕಾರದ ಇಂತಹ ನಿರ್ಣಯ ನಿಜವಾಗಿಯೂ ಪೋಷಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಲಿದೆ!! ಖಾಸಗಿ ಶಾಲೆಗಳು ತಮಗಿಷ್ಟ ಬಂದಂತೆ ಶಾಲಾ ಶುಲ್ಕವನ್ನು ಏರಿಸುತ್ತಿದ್ದಾರೆ!! ಅದಕ್ಕೆ ಇದೀಗ ಮೋದಿ ಸರಕಾರ ಕಡಿವಾಣ ಹಾಕಲು ಮುಂದಾಗಿದ್ದು ಎಲ್ಲರ ಮೊಗದಲ್ಲೂ ಸಂತಸ ಮೂಡಿದೆ!!

source: http://vijayavani.net

  • ಪವಿತ್ರ
Tags

Related Articles

Close