ಪ್ರಚಲಿತ

ಸಂಪದ್ಭರಿತ ಹಂಪೆಯನ್ನು ನಾಶ ಮಾಡಿದ ಬಹಮನಿಯ ಉತ್ಸವ ಮಾಡಲು ಹೊರಟಿದೆ ರಾಜ್ಯ ಸರ್ಕಾರ!! ಎಚ್ಚರ ಕನ್ನಡಿಗ ಎಚ್ಚರ!!

ಲೇಖನ ಪ್ರಾರಂಭಿಸುವ ಮುನ್ನವೇ ಹೇಳುತ್ತೇನೆ! ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಪ್ರಮಾಣ ವಚನ ಸ್ವೀಕರಿಸಬೇಕಾದರೇ ತುಘಲಕ್ ಆಡಳಿತವನ್ನು ನಡೆಸುತ್ತೇವೆಂದಿಬಿಟ್ಟಿದೆ! ಅದಕ್ಕೆ ತಕ್ಕನಾಗಿಯೇ ಆಡಳಿತ ನಡೆಸಲು, ಸಿದ್ಧರಾಮಯ್ಯನಂತಹವರನ್ನು ನಮ್ಮ ಕನ್ನಡಿಗರೂ ಕೂಡ ಆರಿಸಿದರಲ್ಲವೇ?! ಈಗ ಅನುಭವಿಸುವಂತಹ ಪರಿಸ್ಥಿತಿಯಾಗಿದೆ ಅಷ್ಟೆ!

ಇದೇ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದಿತೋ, ಟಿಪ್ಪುವಿನ ಜಯಂತಿಯನ್ನು ಮಾಡಬೇಕೆಂದು ನಿರ್ಧರಿಸಿದ ರಾಜ್ಯ ಸರಕಾರಕ್ಕೆ ಅದೆಷ್ಟೋ ವಿವಾದ ಟೀಕೆಗಳ ಸುರಿಮಳೆ ಬಂದರೂ ಜಪ್ಪಯ್ಯ ಅನ್ನಲಿಲ್ಲ! ಕನ್ನಡಿಗರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿದ್ದ ಸರಕಾರ ಕೇವಲ ಟಿಪ್ಪು ಜಯಂತಿಯೊಂದನ್ನು ಆಚರಿಸ ಹೊರಟಿರಲಿಲ್ಲ! ಬದಲಾಗಿ, ಅದೆಷ್ಟೋ ಲಕ್ಷ ಹಿಂದೂಗಳ ಹತ್ಯೆಮಾಡಿದ ಮತಾಂಧನ ಜಯಂತಿಯನ್ನು, ಹಿಂದೂಗಳ ಮಾರಣಹೋಮವನ್ನು ಆಚರಿಸಲು ನಿಂತಿತ್ತು ಸರಕಾರ!

ಬಿಡಿ! ಟಿಪ್ಪುವಿನ ಜಯಂತಿಯೊಂದಾಯಿತು! ಅದೇ ರೀತಿ, ಕೋಮು ವಿವಾದದ ದಳ್ಳುರಿಗೆ ಮೂರು ಜನ ಬಲಿಯಾಗಿಯೂ ಹೋದರು! ಅದೇ ಟಿಪ್ಪುವನ್ನು ಮೈಯ್ಯಲ್ಲಿ ಅವಾಹನೆ ಮಾಡಿಕೊಂಡ ಜಿಹಾದಿಗಳು, ಮತ್ತೆ ಹಿಂದೂಗಳ ಹತ್ಯೆಗಿಳಿದಿದ್ದು ಗೊತ್ತೇ ಇದೆ! ಮೈಸೂರು ಮತ್ತು ಮಡಿಕೇರಿಯ ಭಾಗದಲ್ಲಿ, ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆದಿತ್ತು! ಇಸ್ಲಾಂಗೆ ಮತಾಂತರವಾಗಲು ಒಪ್ಪಲಿಲ್ಲ ಎನ್ನುವುದೊಂದೇ ಮಾತ್ರಕ್ಕೆ, ಮೇಲುಕೋಟೆ ಬ್ರಾಹ್ಮಣರನ್ನು ಮತ್ತು ಮಡಿಕೇರಿಯ ಭಾಗದಲ್ಲಿದ್ದ ಹಿಂದೂಗಳನ್ನು ದಾರುಣವಾಗಿ ಹಿಂಸಿಸಿ -ಹತ್ಯೆ ಮಾಡಲು ಆದೇಶ ಹೊರಡಿಸಿದ್ದ ಟಿಪ್ಪು ಸುಲ್ತಾನ ಅದೆಂತಹ ಕ್ರೂರಿಯಾಗಿದ್ದ ಎಂಬುದಕ್ಕೆ ಅದೆಷ್ಟೋ ಉದಾಹರಣೆಗಳಿವೆ! ಇವತ್ತಿಗೂ ಕೂಡ, ಮೇಲುಕೋಟೆ ಬ್ರಾಹ್ಮಣರು ಟಿಪ್ಪು ಸುಲ್ತಾನ ಮಾಡಿದ ದಾರುಣ ಕೃತ್ಯದ ನೆನಪಿಗೆ ದೀಪಾವಳಿಯನ್ನು ಆಚರಿಸುವುದಿಲ್ಲ!

ಆದರೆ, ಕರ್ನಾಟಕ ಸರಕಾರದ ನಿರ್ಧಾರಗಳನ್ನು ನೋಡಿದರೆ, ಬಹುಷಃ ಇತಿಹಾಸವನ್ನು ಅರಿಯದೇ ರಾಜ್ಯವನ್ನು ನಡೆಸುತ್ತಿರುವ ಸರಕಾರ ಎನ್ನಬಹುದೇನೋ! ಅಥವಾ , ಪರಂಪರೆಯ ವೈಭವೀಕರಣಕ್ಕೆ ಇಂತಹ ನಿರ್ಧಾರಗಳಲ್ಲಿ ಬಿದ್ದು ಹೊರಳುತ್ತಿದೆಯೋ ಗೊತ್ತಿಲ್ಲ!!

ಈ ಬಹಮನಿ ಸುಲ್ತಾನರೆಂದರೆ ಯಾರು ಗೊತ್ತಾ?!

ಡೆಕ್ಕನ್ ಪ್ರದೇಶದ ಆಡಳಿತಗಾರರಾಗಿದ್ದ ಬಹಮನಿ ಸುಲ್ತಾನರ ಕಾಲಘಟ್ಟ ಪ್ರಾರಂಭವಾಗಿದ್ದು ೧೩೪೭ ರಲ್ಲಿ!! ತುರ್ಕಿಕ್ ಜನರಲ್ವಾದ ಅಲ್ ಉದ್ ದಿನ್ ಬಹ್ಮನ್ ಷಾ ನಿಂದ ಪ್ರಾರಂಭವಾದ ಅಧಿಕಾರವೊಂದು, ಮತ್ತದೇ ಜಿಹಾದ್ ನನ್ನು ಪ್ರೇರೇಪಿಸತೊಡಗಿತ್ತು! ಇಡೀ ಹಿಂದೂಸ್ಥಾನಕ್ಕೆ ಇಸ್ಲಾಂ ನನ್ನು ಹರಡಬೇಕೆಂದು ಬಯಸಿ, ೧೫೦೦ ರಷ್ಟೊತ್ತಿಗೆ ವೈಭವೋಪೇತವಾಗಿದ್ದ ವಿಜಯನಗರ ಮಹಾ ಸಾಮ್ರಾಜ್ಯಕ್ಕೆ ಮುತ್ತಿಗೆ ಹಾಕಿದ್ಧರು! ಇಡೀ ದಕ್ಷಿಣ ಭಾರತದಲ್ಲಿಯೇ, ಅತ್ಯಂತ ಶಕ್ತಿಯುತವಾಗಿದ್ದ ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಶ್ರೀಕೃಷ್ಣ ದೇವರಾಯನ ಸಾವಿನ ನಂತರ, ಬಹಮನಿ ಸುಲ್ತಾನರು ವೈಭವೋಪೇತವಾಗಿದ್ದ, ದಕ್ಷಿಣ ಭಾರತ ಪ್ರಾಂತ್ಯದ ಅತ್ಯದ್ಭುತ ಪ್ರದೇಶವಾಗಿದ್ದ ಹಂಪಿಯನ್ನು ಧ್ವಂಸಗೊಳಿಸಿದ್ದರು!!

ವಿಜಯನಗರ ಸಾಮ್ರಾಜ್ಯವನ್ನು ಮುತ್ತಿಗೆ ಹಾಕಲು ಬಹಮನಿಗಳಿಗೆ ಇದ್ದ ಪ್ರಮುಖ ಕಾರಣ ಒಂದೆ!! ವಿಜಯನಗರದ ವೈಭವ, ಶ್ರೀಮಂತಿಕೆ, ಹೆಣ್ಣು ಮತ್ತು ಹೊನ್ನು!! ಇಷ್ಟೇ!! ಪೋರ್ಚುಗೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ವಿಜಯನಗರಕ್ಕೆ ಕುತ್ತಿಗೆ ಹಾಕಿದ್ದರೂ, ಶ್ರೀ ಕೃಷ್ಣ ದೇವರಾಯ ಮತ್ತು ಅವನ ಆಸ್ಥಾನ ಮಂತ್ರಿಗಳಿಂದ ಬಹಮನಿ ಸುಲ್ತಾನರು ಸೋತಿದ್ದರೂ ಸಹ, ದೇವರಾಯನ ಸಾವಿನ ನಂತರ ವಿಜಯನಗರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು!! ರದೇವರಾಯನ ನಂತರ ಬಂದ ರಾಜ ರಾಮರಾಯ, ಮುಸಲ್ಮಾನ ದೊರೆಗಳ ಒಗ್ಗಟ್ಟಿನ ಸೈನ್ಯವನ್ನು ಎದುರಿಸುವಲ್ಲಿ ಸೋತಿದ್ದಲ್ಲದೇ, ಬಹಮನಿ ಸುಲ್ತಾನರ ಅಟ್ಟಹಾಸಕ್ಕೆ ಬಲಿಯಾಗಿ ಹೋಗಿದ್ದ!!

ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ, ಅಲ್ಲಿದ್ದ ಹಿಂದೂಗಳಿಗೆ ನೀಡಿದ್ದು ಎರಡೇ ಆಯ್ಕೆಗಳನ್ನು! ಒಂದೋ ಮತಾಂತರವಾಗಿ! ಇಲ್ಲವೇ, ತಲೆ ಕೊಡಿ!! ಅಷ್ಟೇ!! ಬಹಮನಿಗಳ ಇತಿಹಾಸದ ಸಾಹಿತ್ಯಗಳ ಪ್ರಕಾರ ಐದು ಲಕ್ಷಕ್ಕೂ ಹೆಚ್ಚು ಹಿಂದೂಗಳ ಮಾರಣ ಹೋಮ ನಡೆಸಿದ ಬಹಮನಿಗಳು ಅದೆಷ್ಟು ಹಿಂದೂಗಳನ್ನು ದ್ವೇಷಿಸಿದರೆಂದರೆ, ಹಿಂದೂಗಳ ಪ್ರತಿ ದೇವಸ್ಥಾನವನ್ನೂ ಸಹ ಕೆಡವಿದ್ದರು!! ಹಿಂದೂಗಳ ಕಲೆ, ಸಂಪ್ರದಾಯ ಮತ್ತು ಆಚಾರಗಳಿಗೆ ಬಹುದೊಡ್ಡ ಪೆಟ್ಟು ನೀಡಿದ ಬಹಮನಿಗಳು, ವಿಜಯ ನಗರದ ಪತನದೊಂದಿಗೆ, ಹಿಂದೂ ಆಚಾರಗಳನ್ನೂ ಸಮಾಧಿಗೊಳಿಸಿದ್ದರು!! ಒಂದು ಕಾಲದಲ್ಲಿ, ಬಂಗಾರದ ನಗರವಾಗಿದ್ದ ವಿಜಯ ನಗರ, ಕೊನೆಗೆ ಸ್ಮಶಾನವಾಗಿ ರೂಪುಗೊಂಡಿತ್ತು!!

ವಿಜಯ ವಿಠ್ಠಲ ದೇವಸ್ಥಾನ, ಸಂಗೀತ ಕಂಬಗಳ ದೇವಸ್ಥಾನ, ರಾಮಸ್ವಾಮಿ ದೇವಸ್ಥಾನ, ಕಮಲಾ ಭವನಗಳು ಬಹಮನಿಗಳ ದಾಳಿಗೆ ತತ್ತರಿಸಿದವು! ಪ್ರಸಿದ್ಧ ಉಗ್ರ ನರಸಿಂಹನ ಮೂರ್ತಿಯನ್ನು ತುಂಡರಿಸಲಾಯಿತು! ಶ್ರೀಗಂಧದ ಮರದಲ್ಲಿ ಕೆತ್ತಲಾಗಿದ್ದ ವಿಜಯನಗರ ಸಾಮ್ರಾಜ್ಯದ ಅರಮನೆಗೆ ಬೆಂಕಿ ಇಟ್ಟಿದ್ದಲ್ಲದೇ, ಇಡೀ ಸಾಮ್ರಾಜ್ಯವನ್ನೇ ಬೆಂಕಿಗಾಹುತಿ ಕೊಟ್ಟಿದ್ದರು ಬಹಮನಿಗಳು! ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅದೆಷ್ಟೋ ಹಿಂದೂಗಳು ವಲಸೆ ಹೋದರು! ಅದೆಷ್ಟೋ ದಿನಗಳಗರೆಗೆ ಉರಿಯುತ್ತಿದ್ದ ಬೆಂಕಿ, ಇಡೀ ವಿಜಯನಗರದ ವೈಭವವನ್ನು ಅವಶೇಷಗಳನ್ನಾಗಿಸಿತ್ತು!!

ಬಹಮನಿಗಳ ದಾಳಿಯ ನಂತರ, ಒಮ್ಮೆ ಛತ್ರಪತಿ ಶಿವಾಜಿ ಭೇಟಿ ನೀಡಿದಾಗ ಸ್ವತಃ ಶಿವಾಜಿ ಆಘಾತಕ್ಕೊಳಗಾಗಿದ್ದಲ್ಲದೇ, ಹಂಪಿಯಲ್ಲಿಯೇ ಶಪಥ ಮಾಡಿದ್ದರು!! ಮತ್ತೆ ಹಂಪಿಯ ವೈಭವವನ್ನು ಮರಳಿ ತರಿಸುತ್ತೇನೆಂದು ಪ್ರಯತ್ನ ಮಾಡಿದ್ದರೂ ಸಹ, ವಿದೇಶಿಗರಿಂದಾದ ಪದೇ ಪದೇ ದಾಳಿಗೆ ಹಂಪಿ ಮತ್ತೇಳಲೇ ಇಲ್ಲ!! ಅದಕ್ಕೇ, ಇವತ್ತಿಗೂ ಸಹ ಹಂಪಿಯನ್ನು ಕರ್ನಾಟಕದಲ್ಲಿ “ಹಾಳು ಹಂಪಿ” ಎಂತಲೇ ಕರೆಯುವಂತಹ ಸ್ಥಿತಿ ಇರುವಾಗ ಸಿದ್ಧರಾಮಯ್ಯನ ಸರಕಾರ ಕರ್ನಾಟಕದಲ್ಲಿ ಇಂತಹವರ ಜಯಂತಿಯನ್ನು ಮಾಡ ಹೊರಟಿರುವುದು ದುರಾದೃಷ್ಟವಲ್ಲವೇ?! ಭಾರತದ ಇತಿಹಾಸದಲ್ಲಿ ನಡೆದಂತಹ, ಅತ್ಯಂತ ದುರಂತ ಕಥಾನಕ ಎಂದೇ ಹೇಳಲಾಗುವ ಇಂತಹ ಘಟನೆಯನ್ನು ಜಯಂತಿ ಯೆಂದು ಸಂಭ್ರಮದಿಂದಾಚರಿಸುವರೇ?!

ಭಾರತದ ಇತಿಹಾಸವನ್ನೇ ರಕ್ತದಲ್ಲಿ ಮುಳುಗಿಸಿದವರ, ಭಾರತದ ವೈಭವವನ್ನು ಹಾಳುಗಡೆವಿದರ, ತಮ್ಮ ಧರ್ಮದ ಅಂಧಕಾರಕ್ಕೆ ಅದೆಷ್ಟೋ ಹಿಂದೂಗಳ ಮಾರಣ ಹೋಮ ನಡೆಸಿದವರ, ನಮ್ಮ ದೇವತೆಗಳ ಮೂರ್ರತಿಗಳನ್ನು, ದೇವಸ್ಥಾನಗಳನ್ನು, ವೈದಿಕ ಧರ್ಮವನ್ನು, ನಮ್ಮ ಪೂರ್ವಜರ ಬದುಕನ್ನು ಬೆಂಕಿಗಾಹುತಿ ಕೊಟ್ಟವರನ್ನು ನಾವು ಸಂಭ್ರಮದಿಂದ ನೆನಪಿಸಿಕೊಂಡು ಜಯಂತಿ ಆಚರಿಸಬೇಕೇನು!? ಇವತ್ತಿನ ಹಂಪಿಯ ಸ್ಥಿತಿಯನ್ನು ನೋಡಿ, ನಾವು ಸಂಭ್ರಮಿಸಬೇಕಿದೆಯಾ!! ? ಮೊಘಲರಿಂದ ಅದೆಷ್ಟೋ ಅತ್ಯಾಚಾರಗಳಾಯಿತಲ್ಕವಾ?! ಅದನ್ನಿವತ್ತ ಸಂಭ್ರಮಿಸಬೇಕಿದೆಯಾ?!

ಅಮೇರಿಕಾದ ಜನರು ಒಸಾಮಾ ಬಿನ್ ಲಾಡೆನ್ ನ ಜಯಂತಿಯನ್ನು ಆಚರಿಸುತ್ತರಾ!? ಜ್ಯೂಯಿಷ್ ಗಳು ಹಿಟ್ಲರ್ ನ ಜನ್ಮದಿನೋತ್ಸವಕ್ಕೆ ಅವಕಾಶ ಕೊಡುತ್ತಾರಾ!? ಇಲ್ಲವಲ್ಲ?! ಕೇವಲ ತುಷ್ಟೀಕರಣಕ್ಕೆ ಮುಸಲ್ಮಾನ ಬಂಧುಗಳ ಸಾವಾಯಿತು ಎಂದು ಗೋಳಾಡುವಾಗ, ನಮಗೆ ನಮ್ಮ ಬಂಧುಗಳು ತೀರಿದಾಗ ನೋವಾಗುವುದಿಲ್ಲವೇ?! ಮನುಷ್ಯತ್ವವನ್ನೇ ಗಾಳಿಗೆ ತೂರಿದಂತಹವರನ್ನು ಇವತ್ತು ನಾವು ವೈಭವೀಕರಿಸುತ್ತೇವೆಂದರೆ ಅದಕ್ಕೇನಾದರೂ ಅರ್ಥವಿದೆಯೇ?! ಇಂತಹದ್ದನ್ನು ನಾವು ಭಾರತದೆಡೆಗಿನ ಪ್ರೇಮವೆನ್ನಬೇಕೇ?!

ಕೇವಲ ರಾಜಕೀಯ ಅಧಿಕಾರದ ದಾಹಕ್ಕೋಸ್ಕರ, ಮತ ಬ್ಯಾಂಕುಗಳಿಗೋಸ್ಕರ ಮಾಡುವ ಇಂತಹ ಹೀನ ಸಂಭ್ರಮವನ್ನು ನಾವು ಒಪ್ಪಬೇಕಿದೆಯಾ?! ಒಪ್ಪಿದೆವು ಎಂದಿಟ್ಟುಕೊಳ್ಳಿ!! ನಮ್ಮ ಸ್ವಾಭಿಮಾನವೊಂದು ನೆಲಕಚ್ಚಿದಂತೆಯೇ! ನಮ್ಮ ಪೂರ್ವಜರನ್ನು ನಾಶ ಮಾಡಿದಂತಹದ್ದನ್ನು ನಾವು ಸಂಭ್ರಮಿಸುತ್ತೇವೆಂದರೆ, ನಮಗೆ ಇನ್ನೆಷ್ಟು ಹೀನಾಯ ಪರಿಸ್ಥಿತಿ ಬಂದಿರಬೇಡ!? ಕಲ್ಪಿಸಿಕೊಳ್ಳಿ! ಟಿಪ್ಪೂ ಜಯಂತಿಯನ್ನು ಒಪ್ಪಿದೆವು! ಈಗ ಬಹಮನಿಯವರನ್ನೂ ಒಪ್ಪಬೇಕಿದೆ ಅಲ್ಲವೇ?; ಮುಂದೆ ಔರಂಗಜೇಬನ ಜಯಂತಿ, ತೈಮೂರನ ಜಯಂತಿ, ಖಿಲ್ಜಿಯ ಜಯಂತಿ ಎಂದು ಆಚರಿಸವಬೇಕಾದ ಪರಿಸ್ಥಿತಿ ಬರುವುದರೊಳಗೆ ಎಚ್ಚೆತ್ತುಕೊಳ್ಳಬೇಕಿದೆ! ಇಲ್ಲವೇ, ನಮ್ಮ ಜಯಂತಿಯನ್ನು ನಾವೇ ಮಾಡಿಕೊಂಡು ಗುಲಾಮರಾಗಿ ಹೋಗಬೇಕಾದೀತು! ಸ್ವಾಭಿಮಾನವೇ ಇಲ್ಲದಿದ್ದವನಿಗೇನು ?! ಗೌರವವೋ?! ಸ್ವಾತಂತ್ರ್ಯವೋ?! ಅಥವಾ ಬದುಕೋ?!ಸ್ವಾಭಿಮಾನಿಗಳಾಗಿ!! ಇನ್ನಾದರೂ!!

– ನಿಹಾರಿಕಾ ಶರ್ಮಾ

Tags

Related Articles

Close