ಪ್ರಚಲಿತ

ಇಂಡಿ ಒಕ್ಕೂಟದ ಹಿಂದೂ ವಿರೋಧಿ ನೀತಿಯ ವಿರುದ್ಧ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ದೇಶದ ಮೇಲೆ, ಹಿಂದೂ ಧರ್ಮ – ಧಾರ್ಮಿಕ ನಂಬಿಕೆಗಳ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಅದೇನು ಕೋಪವೋ ಗೊತ್ತಿಲ್ಲ. ಸದಾ ಕಾಲ ದೇಶ, ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತದೆ ಎನ್ನುವುದು ಪ್ರತಿನಿತ್ಯ ಎಂಬಂತೆ ಸಾಬೀತಾಗುತ್ತಲೇ ಇದೆ.

ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ. 

ಹಿಂದೂಗಳ ಭಾವನೆಗಳನ್ನು ಸದಾ ಘಾಸಿಗೊಳಿಸುವ, ಕೆಣಕುವ ಕೆಲಸವನ್ನು ಇಂಡಿ ಒಕ್ಕೂಟದ ಸದಸ್ಯರು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹಿಂದೂಗಳ ನಂಬಿಕೆಯನ್ನು ಪದೇ ಪದೇ ಅವಮಾನಿಸುತ್ತಾರೆ ಎಂದು ಅವರು ಕಿಡಿ ಕಾರಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸುತ್ತಿವೆ. ತಮಿಳುನಾಡಿನ ಸೇಲಂ ನಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟದ ಅಭ್ಫರ್ಥಿ ಪರ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವಿನ ವಿರುದ್ಧ ಕೆಂಡಾಮಂಡಲವಾಗಿರುವುದಾಗಿದೆ‌. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ‘ಶಕ್ತಿ’ ಹೇಳಿಕೆಗೆ ಸಂಬಂಧಿಸಿದ ಹಾಗೆ ಮಾತನಾಡಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಿರುವುದಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ವಿರುದ್ಧ ವಾಗಿ ದಾಳಿ ನಡೆಸಿದ ಅವರು, ಈ ಎರಡೂ ಪಕ್ಷಗಳು ಹಿಂದೂ ಧರ್ಮವನ್ನು ಅವಮಾನಿಸುತ್ತಲೇ ಇರುತ್ತವೆ. ಹಿಂದೂ ಧರ್ಮದ ಹೊರತಾಗಿ ಬೇರೆ ಇನ್ಯಾವ ಧರ್ಮವನ್ನು ಅವರು ಟೀಕೆ ಮಾಡುವುದಿಲ್ಲ. ಬೇರೆ ಯಾವ ಧರ್ಮವನ್ನು ಅವಮಾನಿಸುವುದು ತಮ್ಮ ಗುರಿ ಎಂದುಕೊಂಡಿಲ್ಲ ಎಂದು ಪ್ರಧಾನಿ ವಿರೋಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಭಾರತದ ಸರ್ವ ಶ್ರೇಷ್ಠ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ತಮ್ಮದೇ ಆದ ಸ್ಥಾನ ಇದೆ. ಮಹಿಳೆಯರನ್ನು ಶಕ್ತಿ ಎಂಬಂತೆ ಪೂಜನೀಯ, ಗೌರವಯುತವಾಗಿ ಕಾಣಲಾಗುತ್ತದೆ. ಶಕ್ತಿ ಎಂದರೆ ಮಾತೃ ಶಕ್ತಿ, ನಾರೀ ಶಕ್ತಿ.‌ ಅಂತಹ ಶಕ್ತಿಗಳನ್ನು ನಾಶ ಮಾಡುವುದಾಗಿ ಇಂಡಿ ಒಕ್ಕೂಟ ಹೇಳಿದೆ. ಶಕ್ತಿ ಎಂದರೆ ಜೈವಿಕ ಸಂಕೇತ. ಶಕ್ತಿಯನ್ನು ಮಾರಿಯಮ್ಮ, ಕಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಎಂಬಂತೆ ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಅಂತಹ ಶಕ್ತಿಗಳನ್ನು ನಾಶ ಮಾಡಲು ಬಯಸುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ‌ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಬಿಜೆಪಿಯನ್ನು ಅಸುರ ಶಕ್ತಿಗೆ ಹೋಲಿಸಿತ್ತು. ಪ್ರಧಾನಿ ಮೋದಿ ಒಂದು ಶಕ್ತಿಯ ಪರ ಕೆಲಸ ಮಾಡುತ್ತಿದ್ದಾರೆ ಎಂದು ನಂಜು ಕಾರಿದ್ದರು.

Tags

Related Articles

Close