ಪ್ರಚಲಿತ

ಅಜಾನ್ ವೇಳೆ ಸಂಗೀತ : ಅಂಗಡಿ ಮಾಲೀಕನ ಮೇಲೆ ಮು#ಸ್ಲಿಂ ಪುಂಡರಿಂದ ಥಳಿತ

ರಾಜ್ಯದ ಜನತೆ ನಾವು ಕರ್ನಾಟಕದಲ್ಲೇ ಇದ್ದೇವೆಯೋ, ಇಲ್ಲ ಪಾಕಿಸ್ತಾನದಲ್ಲಿ ಇದ್ದೇವೆಯೋ ಎಂಬ ಸಂದೇಹಕ್ಕೆ ಒಳಪಡುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಮಸೀದಿಯಲ್ಲಿ ಆಜಾನ್ ಕೂಗುವ ಸಮಯದಲ್ಲಿ ಬೆಂಗಳೂರಿನ ಬನಶಂಕರಿಯ ಅಂಗಡಿಯೊಂದರಲ್ಲಿ ಸಂಗೀತ ಕೇಳುತ್ತಿತ್ತು ಎಂಬ ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಕೆಲವು ಪುಂಡ ಮುಸಲ್ಮಾನರು ಆ ಅಂಗಡಿಯವನ ‌ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ಹಾಗೆ ಇರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಬನಶಂಕರಿ ಸಿದ್ಧಣ್ಣ ಲೇ ಔಟ್‌ನ ಅಂಗಡಿಯೊಂದರಲ್ಲಿ ಇಂತಹ ಸಂಘರ್ಷ ನಡೆದಿರುವುದಾಗಿದೆ. ಮುಸ್ಲಿಂ ಪುಂಡರ ಗುಂಪೊಂದು ಅಂಗಡಿಯವನನ್ನು ಕೊರಳ ಪಟ್ಟಿ ಹಿಡಿದು ಥಳಿಸುತ್ತಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಲ್ಲಿಂದ ಈ ವರೆಗೆ ಅವರ ಅಲ್ಪಸಂಖ್ಯಾತರ ಓಲೈಕೆ ನೀತಿಗಳು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡುವುದಕ್ಕೂ ಕಾರಣವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಇತರರನ್ನು ತುಚ್ಛವಾಗಿ ಕಾಂಗ್ರೆಸ್ ಸರ್ಕಾರ ಕಾಣುತ್ತಿದ್ದು, ಸರ್ಕಾರದ ಇಂತಹ ನಿಲುವುಗಳು ಅಶಾಂತಿದೂತ ಪುಂಡರಿಗೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಮತ್ತಷ್ಟು ಅವಕಾಶಗಳ ಜೊತೆಗೆ ಶಕ್ತಿಯನ್ನು ನೀಡಿರುವುದಾಗಿದೆ ಎಂಬ ಅಭಿಪ್ರಾಯವನ್ನೂ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ನಾವು ಭಾರತದಲ್ಲಿದ್ದೇವೆ. ಇಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ. ಮಸೀದಿಯಲ್ಲಿ ಆಜಾನ್ ಕೂಗುವಾಗ ಬೇರೆಲ್ಲೂ, ಯಾವುದೇ ರೀತಿಯ ಸದ್ದು ಕೇಳಿಸಬಾರದು, ಎಲ್ಲರೂ ನಿಶ್ಯಬ್ಧರಾಗಿ ಮೌನ ಪಾಲಿಸಬೇಕು ಎನ್ನುವ ನಿಯಮ ವೂ ಇಲ್ಲ. ಇಂತಹ ನಿಯಮವನ್ನು ಪಾಲನೆ ಮಾಡಲು ಭಾರತ ಸರ್ವ ಜನಾಂಗದ ಶಾಂತಿಯ ತೋಟವೇ ಹೊರತು ಇಸ್ಲಾಂ ರಾಷ್ಟ್ರವಲ್ಲ ಎನ್ನುವುದು ಸ್ಪಷ್ಟ.

ಸರ್ಕಾರ ಇಂತಹ ದುಷ್ಕೃತ್ಯ ನಡೆಸಿದ ಕಿಡಿಗೇಡಿ ಅಶಾಂತಿದೂತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಂಜಾನ್‌ನಂತಹ ಮುಸಲ್ಮಾನರ ಪವಿತ್ರ ತಿಂಗಳಿನಲ್ಲಿ ಇನ್ನೊಬ್ಬರಿಗೆ ಹೊಡೆದು, ಬಡಿದು ಪಾಪ ಕೃತ್ಯ ಎಸಗಿರುವ ಕೆಲವು ಸೋ ಕಾಲ್ಡ್ ಮುಸಲ್ಮಾನ ಪುಂಡರಿಗೆ, ಈ ದೇಶದ ನಿಜವಾದ ಮುಸಲ್ಮಾನರ ಬೆಂಬಲವೂ ಈ ಕೃತ್ಯಕ್ಕೆ ದೊರೆಯದು. ನೈಜ ಮುಸಲ್ಮಾನರು ಸಹ ಈ ಪುಂಡರ ವಿರುದ್ಧ ತಮ್ಮ ಧ್ವನಿ ಎತ್ತುವ ಮೂಲಕ ನಿಜವಾದ ಮುಸ್ಲಿಂ ತತ್ವಗಳಿಗೆ ಬೆಲೆ ನೀಡಬೇಕಿದೆ. ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ಇಂತಹ ನಿಟ್ಟಿನಲ್ಲಿ ಅಧರ್ಮಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕಿದೆ.

https://x.com/nabilajamal_/status/1769585823815770243?s=20
Tags

Related Articles

Close