ಪ್ರಚಲಿತ

ಪ್ರತಿ ವರ್ಷ ಸೆ. 17 ರಂದು ಹೈದರಾಬಾದ್ ವಿಮೋಚನಾ ದಿನ ಆಚರಣೆ: ಕೇಂದ್ರ ಸರ್ಕಾರದ ಘೋಷಣೆ

ಹೈದರಾಬಾದ್ ‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.

ಎಲ್ಲಾ ವರ್ಷ ಸೆಪ್ಟೆಂಬರ್ 17 ರಂದು ‘ಹೈದರಾಬಾದ್ ವಿಮೋಚನಾ ದಿನ’ ಆಚರಣೆ ಮಾಡುವುದಾಗಿ ಕೇಂದ್ರ ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಭಾರತ ಸರ್ಕಾರದ ವತಿಯಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದನ್ನು ದಶಕಗಳ ಹಿಂದೆ ಹೈದರಾಬಾದ್ ಅನ್ನು ನಿಜಾಮರ ಕೈ‌ಮುಷ್ಟಿಯಿಂದ ವಿಮೋಚನೆ ಮಾಡಿದ, ಯುವ ಜನರ ಮನಸ್ಸಿನಲ್ಲಿ ದೇಶ ಭಕ್ತಿಯ ಕಿಚ್ಚು ತುಂಬಿದ ಹುತಾತ್ಮರಿಗೆ ಗೌರವ ಸಲ್ಲಿಸಲು ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿರುವುದಾಗಿದೆ.

ಈ ಬಗ್ಗೆ ಹೊರಡಿಸಲಾದ ‌ಅಧಿಸೂಚನೆಯಲ್ಲಿ ಆಗಸ್ಟ್ 15, 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಹದಿಮೂರು ತಿಂಗಳ ಬಳಿಕವೂ ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಹೈದರಾಬಾದ್ ಸ್ವಾತಂತ್ರ್ಯ ಪಡೆಯಲಿಲ್ಲ. ಸೆಪ್ಟೆಂಬರ್ 17, 1948 ರಲ್ಲಿ ನಿಜಾಮರ ಆಡಳಿತದಿಂದ ಹೈದರಾಬಾದ್ ಅನ್ನು ಆಪರೇಶನ್ ಪೋಲೋ ಮೂಲಕ ಬಂದ ಮುಕ್ತ ಮಾಡಲಾಯಿತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಾಗೆಯೇ ಸೆಪ್ಟೆಂಬರ್‌ 17, 1948 ರ ಸಮಯದಲ್ಲಿ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನೇತೃತ್ವದ ಮಿಲಿಟರಿ ಕಾರ್ಯಾಚರಣೆ ಮೂಲಕ ನಿಜಾಮರ ಕೈಯಿಂದ ಹೈದರಾಬಾದ್‌ ಅನ್ನು ಮುಕ್ತಗೊಳಿಸಿ, ಭಾರತದ ಒಕ್ಕೂಟದ ಜೊತೆಗೆ ಸೇರಿಸಲಾಯಿತು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಂದು ಪ್ರತಿ ವರ್ಷ ಹೈದರಾಬಾದ್ ವಿಮೋಚನಾ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಜನರಿಂದ ಮನವಿಗಳು ಬಂದಿವೆ. ಆದ್ದರಿಂದ ಈ ನಿರ್ಧಾರವನ್ನು ಕೈಗೊಂಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Tags

Related Articles

Close