ಪ್ರಚಲಿತ

ಬಲ್ಗೇರಿಯನ್ ಪ್ರಜೆಗಳ ರಕ್ಷಣೆ : ಭಾರತಕ್ಕೆ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾದರಿಯಾದ ನಾಯಕ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಉಪಕ್ರಮವೂ ದೇಶವನ್ನು ಯಾವ ರೀತಿ ನಡೆಸಬಹುದು, ವಿಶ್ವಕ್ಕೆ ಬೇಕಾದ ರಾಷ್ಟ್ರವಾಗಿ ಹೇಗೆ ಪ್ರಗತಿಯ ಹಾದಿಯಲ್ಲಿ ಸಾಗಬಹುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ.

ವಿಶ್ವ ಮೆಚ್ಚುವ ಮತ್ತೊಂದು ಕೆಲಸವನ್ನು ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಮತ್ತೆ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಸಮುದ್ರಯಾನದ ಸ್ವಾತಂತ್ರ್ಯ ಕಾಪಾಡಲು ಮತ್ತು ಭಯೋತ್ಪಾದನೆಯನ್ನು, ಕಡಲ್ಗಳ್ಳತನವನ್ನು ಎದುರಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಏಳು ಮಂದಿ ಬಲ್ಗೇರಿಯನ್ ‌ಪ್ರಜೆಗಳು ಸುರಕ್ಷಿತವಾಗಿ ತಮ್ಮ ರಾಷ್ಟ್ರಕ್ಕೆ ಹಿಂದಿರುಗಿದ್ದು, ಈ ಹಿನ್ನಲೆಯಲ್ಲಿ ಅಲ್ಲಿನ ಅಧ್ಯಕ್ಷ ರುಮೆನ್ ರಾದೇವ್ ಅವರು ಭಾರತಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರ ಕೃತಜ್ಞತೆ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಭಾರತದ ಬದ್ಧತೆಯ ಬಗ್ಗೆ ಮತ್ತೆ ಸ್ಪಷ್ಟವಾಗಿ ಹೇಳಿದ್ದಾರೆ. ಆ ಮೂಲಕ ಕಿಡಿಗೇಡಿಗಳಿಗೆ ಭಾರತ ಯಾವುದೇ ರೀತಿಯ ಮುಲಾಜು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಪಹರಣಕ್ಕೆ ಒಳಗಾದ ಬಲ್ಗೇರಿಯನ್ ಹಡಗಿನಲ್ಲಿದ್ದ ಆ ದೇಶದ ಪ್ರಜೆಗಳನ್ನು ರಕ್ಷಣಾ ಕಾರ್ಯಾಚರಣೆಯ ಮೂಲಕ ಭಾರತ ಯಶಸ್ವಿಯಾಗಿ ರಕ್ಷಣೆ ಮಾಡಿತ್ತು. ಈ ಸಂಬಂಧ ನಿನ್ನೆ ಅಲ್ಲಿನ ಅಧ್ಯಕ್ಷರು ಭಾರತಕ್ಕೆ, ಭಾರತೀಯ ನೌಕಾಪಡೆಗೆ ಕೃತಜ್ಞತೆ ‌ಗಳನ್ನು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಅವರಿಗೆ ತಮ್ಮ ಮೆಚ್ಚುಗೆ ತಿಳಿಸಿದ್ದಾರೆ. ಹಾಗೆಯೇ ಏಳು ಮಂದಿ ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತರಾಗಿದ್ದಾರೆ. ಹಾಗೆಯೇ ಅವರು ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ. ಅವರ ರಕ್ಷಣೆಯ ಬಗ್ಗೆ ಭಾರತ ಸಂತೃಪ್ತಿ ಹೊಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಏಳು ಜನರ ರಕ್ಷಣೆಯ ವಿಚಾರದಲ್ಲಿ ನೀವು ಮಾಡಿರುವ ಸಂದೇಶವನ್ನು ನಾನು ಶ್ಲಾಘಿಸುತ್ತೇನೆ. ಆ ಏಳು ಜನರು ಸುರಕ್ಷಿತವಾಗಿ ಇರುವುದಕ್ಕೆ, ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂಬುದನ್ನು ತಿಳಿದು ನಾವು ಸಂತಸ ಪಡುತ್ತೇವೆ. ಹಿಂದೂ ಮಹಾಸಾಗರದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು, ಕಡಲ್ಗಳ್ಳತನ, ಭಯೋತ್ಪಾದನೆಯನ್ನು ಎದುರಿಸಲು, ತಡೆಯಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

Tags

Related Articles

Close