ಪ್ರಚಲಿತ

ಭಾರತ- ಫ್ರಾನ್ಸ್ ಒಪ್ಪಂದಕ್ಕೆ ಗಡಗಡನೇ ನಡುಗಿ ಹೋದ ಚೀನಾ!! ಅಷ್ಟಕ್ಕೂ ಇಂಡೋ-ಫ್ರಾನ್ಸ್, ಚೀನಾದ ವಿರುದ್ಧ ಹೂಡಿದ ಪ್ರತಿತಂತ್ರವಾದರೂ ಏನು ಗೊತ್ತಾ??

ಹಿಂದು ಮಹಾಸಾಗರದ ಮೇಲೆ ಅಧಿಪತ್ಯ ಸಾಧಿಸಿ ಸುಯೆಜ್ ಜಲಸಂಧಿಯಿಂದ ಮಲಾಕ್ಕಾ ಜಲಸಂಧಿಯವರೆಗೆ ತನ್ನ ಹಿಡಿತವನ್ನು ಬಿಗಿಗೊಳಿಸಿರುವ ಚೀನಾವು ಪೂರ್ವ ಆಫ್ರಿಕಾದ ಡಿಜಿಬೌಟಿಯಲ್ಲಿ ನೌಕಾ ನೆಲೆಯನ್ನು ಸ್ಥಾಪಿಸಿರುವ ವಿಚಾರ ತಿಳಿದೇ ಇದೆ!! ಹಾಗಾಗಿ ಆ ರಾಷ್ಟ್ರದ ಮೇಲೆ ಹಿಡಿತ ಹೊಂದಿದ್ದ ಫ್ರಾನ್ಸ್ ಗೂ ಚೀನಾದ ನಡೆ ಬೇಸರ ತಂದಿರುವ ಜತೆಗೆ ಆಕ್ರೋಶ ತರಿಸಿದ್ದಂತೂ ಅಕ್ಷರಶಃ ನಿಜ. ಈ ನಿಟ್ಟಿನಲ್ಲಿ ಚೀನಾದ ತಂತ್ರಕ್ಕೆ ಇದೀಗ ಪ್ರತಿ ತಂತ್ರವನ್ನು ಹೂಡಲು ಹೊರಟಿರುವ ಇಂಡೋ-ಫ್ರಾನ್ಸ್ ಮಾಡಿದ್ದಾದರೂ ಏನು ಗೊತ್ತಾ?

ಏಷ್ಯಾ ಮತ್ತು ಹಿಂದು ಮಹಾಸಾಗರ ವಲಯದಲ್ಲಿ ಅಧಿಪತ್ಯ ಸಾಧಿಸುವ ತಂಟೆಕೋರ ಚೀನಾ ಹವಣಿಕೆಗೆ ತಡೆಯೊಡ್ಡುವ ಜತೆಯಲ್ಲೇ ಪರಸ್ಪರ ಅನುಬಂಧ
ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಫ್ರಾನ್ಸ್ ಇದೀಗ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ 4 ದಿನಗಳ ಭಾರತ ಪ್ರವಾಸ ಆರಂಭಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್, ಭಾರತ ಮತ್ತು ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಂಬಂಧದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ ಶನಿವಾರ ಉಭಯ ರಾಷ್ಟ್ರಗಳು ರಕ್ಷಣೆ, ಭದ್ರತೆ, ಸೇರಿದಂತೆ 14 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಚೀನಾದ ಕುತಂತ್ರ ಬುದ್ದಿಗಳನ್ನು ಚೆನ್ನಾಗಿ ಬಲ್ಲ ಪ್ರಧಾನಿ ಮೋದಿ, ರಕ್ಷಣಾ ತಂತ್ರದ ಭಾಗವಾಗಿ ಅನೇಕ ಮಿತ್ರರಾಷ್ಟ್ರಗಳೊಂದಿಗೆ ಭೂ, ಜಲ, ವಾಯು ಗಡಿಯ ರಕ್ಷಣೆಗೆ ಪೂರಕವಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಆಪ್ತ ರಾಷ್ಟ್ರವಾದ ಫ್ರಾನ್ಸ್ ಜತೆಗೆ ನೌಕಾ ನೆಲೆಗಳನ್ನು ಪರಸ್ಪರ ಮುಕ್ತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸಾಗರ ರಕ್ಷಣಾ ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.

ಇಂಡೋ – ಫ್ರಾನ್ಸ್ ಒಪ್ಪಂದದ ವೇಳೆ 90 ನಿಮಿಷಗಳ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ರಕ್ಷಣೆ, ಭದ್ರತಾ ವಿಷಯಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಫ್ರಾನ್ಸ್ ಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಮೂಲಕ ರಾಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ರದ್ದುಗೊಂಡ ಕಾರಣ ಬೇಸರಗೊಂಡಿದ್ದ ಫ್ರಾನ್ಸ್ ನ ಮನತಣಿಸುವ ಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಮಾಡಿದರು.

ಇದೇ ಸಂದರ್ಭದಲ್ಲಿ, “ಭಾರತದ ಜತೆ ಫ್ರಾನ್ಸ್ ಎರಡು ದಶಕಗಳಿಂದ ನಿಕಟ ಬಾಂಧವ್ಯ ಹೊಂದಿದೆ. ಆದರೆ, ಉಭಯ ದೇಶಗಳ ಸಂಸ್ಕೃತಿ, ಆಧ್ಯಾತ್ಮಿಕ ವಿಷಯದ ಒಡನಾಟ ಬಹಳ ಹಿಂದಿನಿಂದಲೂ ಇದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಂತಹ ಉದಾತ್ತ ಅಂಶಗಳನ್ನು ಎರಡೂ ದೇಶಗಳು ಸಾಂವಿಧಾನಿಕವಾಗಿ ಮಾನ್ಯ ಮಾಡಿವೆ” ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಹೇಳಿದ್ದಾರೆ.

ರಫೆಲ್ ಯುದ್ಧ ವಿಮಾನ ವಿವಾದದ ನಡುವೆಯೇ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ!!

ಹಿಂದು ಮಹಾ ಸಾಗರ ವಲಯದಲ್ಲಿ ಭಾರತ ಮತ್ತು ಫ್ರಾನ್ಸ್ ಗಳ ನೌಕಾ ನೆಲೆಯನ್ನು ಉಭಯ ದೇಶಗಳು ಬಳಕೆಗೆ ಮುಕ್ತ ಮಾಡಿಕೊಂಡಿರುವುದು ಚೀನಾದ ಕಣ್ಣನ್ನು ಕೆಂಪಗೆ ಮಾಡಿದೆ. ದಕ್ಷಿಣ ಚೀನಾ ಸಮುದ್ರದ ಪ್ರಾದೇಶಿಕ ವಲಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಚೀನಾ, ತನ್ನ ಅಧಿಪತ್ಯವನ್ನು ಹಿಂದು ಮಹಾಸಾಗರಕ್ಕೂ ವಿಸ್ತರಿಸುವ ಹವಣಿಕೆಯನ್ನು ಮಾಡುತ್ತಿದೆ.

ಇತ್ತ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಭುತ್ವ ಸಾಧಿಸಲು ಚೀನಾ ಹವಣಿಸುತ್ತಿರುವಾಗಲೇ ಚೀನಾಗೆ ಟಾಂಗ್ ನೀಡಲು ಮುಂದಾಗಿರುವ ಭಾರತ ಇದೀಗ ಫ್ರಾನ್ಸ್ ನೊಂದಿಗೆ ಸೇರಿ ಹಲವು ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ. ಫ್ರಾನ್ಸ್ ರಕ್ಷಣಾ ಕಾರ್ಯದರ್ಶಿ ಫ್ಲಾರೆನ್ಸ್ ಪಾರ್ಲಿ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಭಾರತ ಮತ್ತು ಫ್ರಾನ್ಸ್ ನಲ್ಲಿರುವ ವಾಯುನೆಲೆಗಳು, ನೌಕಾ ನೆಲೆಗಳ ಪರಸ್ಪರ ಬಳಕೆ ಮಾಡುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಲ್ಲದೆ ಪರಸ್ಪರ ರಕ್ಷಣಾ ಅಗತ್ಯತೆ ಪೂರೈಕೆ ಮಾಡಿಕೊಳ್ಳುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ!!

ಇದಲ್ಲದೆ ಭಾರತದ ಬಹು ನಿರೀಕ್ಷಿತ ಅಣ್ವಸ್ಚ್ರ ಸಹಿತ ಮತ್ತು ಅಣು ಚಾಲಿತ ಸ್ಕಾರ್ಪೀನ್ ಜಲಾಂತರ್ಗಾಮಿ ನಿರ್ಮಾಣಗಳ ಕುರಿತೂ ಉಭಯ ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ ಈ ಒಪ್ಪಂದಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲವಾದರೂ, ಸರ್ಕಾರಿ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ ಎನ್ನಲಾಗಿದೆ. ರಕ್ಷಣಾ ಒಪ್ಪಂದಗಳಾದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲು ನಿರ್ಧರಿಸಿದ್ದು, ಈ ಹಿಂದೆ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಯಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಈ ಬಾರಿ ಯಾವುದೇ ರೀತಿಯ ಮಾಹಿತಿ ನೀಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿಲ್ಲ ಎನ್ನಲಾಗಿದೆ.

ಫ್ರಾನ್ಸ್ ಯಾವ ಯಾವ ಒಪ್ಪಂದಕ್ಕೆ ಸಹಿ ಹಾಕಿದೆ ಗೊತ್ತೇ??

ಯುರೋಪ್ ಖಂಡದಲ್ಲೇ ನಾವು ಭಾರತಕ್ಕೆ ಮೊದಲ ರಕ್ಷಣಾ ಕಾರ್ಯತಂತ್ರದ ಮಿತ್ರ ರಾಷ್ಟ್ರವಾಗಲು ಬಯಸುತ್ತೇವೆ. ಈ ಮೂಲಕ ಭಯೋತ್ಪಾದನೆ ಮತ್ತು
ತೀವ್ರವಾದಿತನದ ಆತಂಕಗಳ ವಿರುದ್ಧ ಭಾರತದ ಜತೆಗೂಡಿ ಹೋರಾಡುತ್ತೇವೆ ಎಂದಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಗೆ ಅತ್ಯಧಿಕ ಮಹತ್ವ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ವಿಶ್ವದ ಎರಡು ಮಹೋನ್ನತ ಪ್ರಜಾಸತ್ತೆಗಳು ಇನ್ನಷ್ಟು ನಿಕಟವಾಗಿ ಪರಿಶ್ರಮಿಸಬೇಕಾದ ಅಗತ್ಯವಿದೆ ಎಂದು ಹೇಳಿರುವ ಇವರು 14 ಒಪ್ಪಂದಗಳಿಗೆ ಈ ವೇಳೆ ಸಹಿ ಹಾಕಿದ್ದಾರೆ.

ಹಾಗಾಗಿ….. ರಕ್ಷಣೆ, ಅಣುಶಕ್ತಿ, ವರ್ಗೀಕೃತ ಮಾಹಿತಿ ಸಂರಕ್ಷಣೆ, ಶಿಕ್ಷಣ, ಪರಿಸರ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೂಡಿಕೆ, ರೈಲ್ವೆಯಲ್ಲಿ ಅತ್ಯಾಧುನಿಕ ತಾಂತ್ರಿಕ ಸಹಕಾರ, ಇಂಡೋ-ಫ್ರೆಂಚ್ ರೈಲ್ವೆ ವೇದಿಕೆ ಸ್ಥಾಪನೆ, ಸೌರ ಶಕ್ತಿ, ಮಾದಕವಸ್ತು ಕಳ್ಳಸಾಗಣೆಗೆ ತಡೆ, ವಲಸೆ, ಸಾಗರ ಮಾರ್ಗದಲ್ಲಿ ನಿಗಾಕ್ಕೆ ಸ್ಯಾಟಲೈಟ್ ನೆರವು ಮತ್ತು ನೌಕೆಗಳ ಸುರಕ್ಷತೆಗಳಿಗೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೇ, ಅಣುಶಕ್ತಿ ಒಪ್ಪಂದದಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಜೈತಾಪುರದಲ್ಲಿ ಅತ್ಯಾಧುನಿಕ ರೀತಿಯ ಆರು ಅಣುವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಭಾರತದ ಎನ್ ಪಿ ಸಿ ಐ ಎಲ್ ಮತ್ತು ಫ್ರಾನ್ಸ್ ನ ಇ ಡಿ ಎಫ್ ಸಹಿ ಹಾಕಿವೆ.

ಜಲಗಡಿ ಮಾತ್ರವಲ್ಲದೆ ವಾಯುಗಡಿಯ ಮೂಲಕವೂ ಭಾರತವನ್ನು ಕಟ್ಟಿಹಾಕಬೇಕು ಎಂದು ಷಡ್ಯಂತ್ರ ಮಾಡಿರುವ ಚೀನಾ, ತನ್ನ ಕಂಪನಿಗಳ ಮೂಲಕ
ಬಾಂಗ್ಲಾದೇಶದ ವಿಮಾನಯಾನ ವಲಯದ ಷೇರುಗಳನ್ನು ಹೆಚ್ಚಿನ ಮಟ್ಟದಲ್ಲಿ ಖರೀದಿಸುತ್ತಿದೆ. ಚೀನಾದ ಈ ತಂತ್ರಕ್ಕೆ ಪ್ರತಿತಂತ್ರ ಮಾಡಿರುವ ಪ್ರಧಾನಿ ಮೋದಿ, ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾರ್ಕ್ ರಾಷ್ಟ್ರಗಳ ಮುಖಂಡರಿಗೆ ಆಹ್ವಾನ ನೀಡಿ ಚೀನಾಕ್ಕೆ ಶಾಕ್ ನೀಡಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ, ಆಸಿಯಾನ್ ರಾಷ್ಟ್ರಗಳ ಮುಖಸ್ಥರನ್ನು ಗಣತಂತ್ರ ದಿನಾಚರಣೆಯ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದ ನಂತರ ಪೇಚಿಗೆ ಸಿಲುಕಿದ್ದ ಚೀನಾಕ್ಕೆ ಇದೀಗ ಮತ್ತೊಂದು ಶಾಕ್ ನೀಡಿರುವುದೇ ಹೆಮ್ಮೆಯ ವಿಚಾರವಾಗಿದೆ.

ಮಾತುಕತೆ ವೇಳೆ ಉಭಯ ನಾಯಕರು ಹಿಂದು ಮಹಾಸಾಗರ ಮತ್ತು ಶಾಂತ ಸಾಗರದ ಪ್ರಾದೇಶಿಕ ವಲಯದ ಬೆಳವಣಿಗೆ, ಶಾಂತಿ ಸ್ಥಾಪನೆ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಮ್ಯಾಕ್ರಾನ್, ಸಾಗರದ ಮಾರ್ಗಗಳು ಅಧಿಕಾರ ಸ್ಥಾಪಿಸುವ ತಾಣಗಳಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಚೀನಾವನ್ನು ಟೀಕಿಸಿದ್ದು, ಚೀನಾದ ತಂತ್ರಕ್ಕೆ ಭಾರತದೊಂದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

– ಅಲೋಖಾ

Tags

Related Articles

Close