ಅಂಕಣ

ದಾನಶೂರನಾಗಿದ್ದ ಕರ್ಣನ ಕವಚ ಹಾಗೂ ಕುಂಡಲಿ ಇನ್ನೂ ಭೂಮಿಯಲ್ಲಿದೆಯೇ?! ಮಹಾಭಾರತದ ಕಥೆಗಳು ಹೇಳಿದ್ಧೇನು ಗೊತ್ತೇ?!

ಮಹಾಭಾರತದಲ್ಲಿ ಕರ್ಣನ ಹೆಸರನ್ನು ಎಲ್ಲರೂ ಕೇಳಿರಬಹುದು..ಆದರೆ ಕರ್ಣನ ಕವಚ ಮತ್ತು ಕುಂಡಲಿಯ ಬಗ್ಗೆಯೂ ಎಲ್ಲರಿಗೂ ತಿಳಿದಿರಬಹುದು… …ಕರ್ಣನ ಕವಚ ಮತ್ತು ಕುಂಡಲಿ ಇನ್ನೂ ಭೂಮಿಯಲ್ಲಿ ಇದೆ ಎಂದರೆ ನಂಬಲೂ ತಯಾರಿದ್ದೀರಾ? ಹೌದು ನೀವು ನಂಬಲೇ ಬೇಕು…

ದೂರ್ವಾಸ ಮುನಿಯಿಂದ ಪಡೆದ ವರದಿಂದ ಕರ್ಣ ಸೂರ್ಯ ಪುತ್ರನಾಗಿ ಜನಿಸಿ ಕವಚ ಕುಂಡಲಿ ಅವನ ದೇಹದ ಭಾಗಗಳಾಗಿ ಬೆಳೆಯುವ ಒಂದು ಅಪರೂಪದ ಪಾಪದ ಕೂಸು ತಾಯಿಯನ್ನು ಅರಿಯದೆ ಬೇರೆಲ್ಲೋ ಬೆಳೆಯಿತು. ಅಶ್ವ ನದಿಯಲ್ಲಿ ಕುಂತಿ ಕರ್ಣನನ್ನು ತೇಲಿ ಬಿಟ್ಟಾಗ ಮಗದೊಂದು ದಂಡೆಯಲ್ಲಿದ್ದ ಅಧಿರಥ, ಧೃತರಾಷ್ಟ್ರನ ಸಾರಥಿ, ಅವನ್ನು ಸಾಕಲು ಮುಂದಾಗುತ್ತಾನೆ.

ದ್ರೋಣಾಚಾರ್ಯರಿಂದ ತಿರಸ್ಕೃತನಾದ ಕರ್ಣ, ಪರಶುರಾಮರ ಬಳಿಗೆ ಬಂದು ಶಸ್ತ್ರಭ್ಯಾಸ ಮಾಡುತ್ತಾನೆ ಆದರೆ ತಾನೊಬ್ಬ ಬ್ರಾಹ್ಮಣನೆಂದು ಅಸತ್ಯ ಹೇಳಿದ ಕಾರಣ “ಯುದ್ಧದಲ್ಲಿ ನಿನಗೆ ನಾನು ಪಠಿಸಿದ ಮಂತ್ರ ನೆನಪಾಗದೆ ಹೋಗಲಿ” ಏನು ಶಾಪವನಿಟ್ಟು ಕರ್ಣನ ದುರಂತಕ್ಕೆ ಮೊದಲ ಅಧ್ಯಾಯ ಬರೆಯುತ್ತಾನೆ.

ತದನಂತರ, ಇಂದ್ರನು ಇಂದ್ರಾಸ್ತ್ರವನ್ನು ಕರ್ಣನಿಗೆ ದಯಪಾಲಿಸಿ – ಇದು ನೀ ಒಮ್ಮೆ ಉಪಯೋಗಿಸಿದರೆ ಅದು ನನ್ನ ಬಳಿಗೆ ಮರಳಿ ಇಲ್ಲೇ ಉಳಿಯುತ್ತದೆ ಎಂದು ಹೇಳಿ ಇಂದ್ರಸ್ಥವನ್ನು ದಯಪಾಲಿಸುತ್ತಾನೆ. ಇಂದ್ರನ ಯೋಜನೆಯನ್ನರಿಯದ ಕರ್ಣ ಅಸ್ತ್ರವನ್ನು ಸ್ವೀಕರಿಸುತ್ತಾನೆ. ಕುರು-ಪಾಂಡವರ ಯುದ್ಧದಲ್ಲಿ ಘಟೋತ್ಕಚನನ್ನ ಸೋಲಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಸುಯೋಧನ ಘಟೋತ್ಕಚನನ್ನು ಮಣ್ಣಿಸಲು ಕರ್ಣನಿಗೆ ಹೇಳಿದಾಗಿ, ಕರ್ಣ ತನ್ನ ಎಲ್ಲ ಶಕ್ತಿಯನ್ನು ಪ್ರಯೋಗಿಸಿಯಾದರು ಘಟೋತ್ಕಚ ಸ್ವಲ್ಪವೂ ಅಲುಗಾಡಲಿಲ್ಲ ಆಗ ನೆನಪಿಗೆ ಬಂದದ್ದೇ ಇಂದ್ರಾಸ್ತ್ರ. ಘಟೋತ್ಕಚನನ್ನ ಸೋಲಿಸಲು ಅಸ್ತ್ರ ಬಳಸಿ ಅವನನ್ನು ಧರೆಗುರುಳಿಸತ್ತಾನೆ. ಇದು ಆ ಕ್ಷಣಕ್ಕೆ ಗೆಲುವಾದರೂ, ಕರ್ಣ ಆ ಅಸ್ತ್ರವನ್ನು ಅರ್ಜನ ಅಥವಾ ಭೀಮನ ಮೇಲೆ ಉಪಯೋಗಿಸಿದ್ದಿದ್ದರೆ ಮಹಾಭಾರತದ 18 ದಿನ ಅಧ್ಯಾಯ ಬೇರೆಯಾಗಿರುತ್ತಿತ್ತು.

ಒಂದೊಮ್ಮೆ ಮಹೇಂದ್ರ ಪರ್ವತದಲ್ಲಿ ಅಗ್ನಿಹೋತ್ರದ ಬ್ರಾಹ್ಮಣನ ಹಸುವನ್ನು ತನ್ನ ಬಾಣದಿಂದ ಅಚಾತುರ್ಯವಾಗಿ ಕೊಂದ ಕಾರಣಕ್ಕಾಗಿ ಕ್ಷಮೆಯಾಚಿದರು, ಬ್ರಾಹ್ಮಣ ಕರ್ಣನಿಗೆ “ಯುದ್ಧದಲ್ಲಿ ನಿನ್ನ ರಥದ ಚಕ್ರ ರಕ್ತದಿಂದ ಕೂಡಿದ ತೇವದ ಮಣ್ಣಿನಲ್ಲಿ ಹೂತು ಹೋಗಲಿ” ಎಂದು ಶಾಪವನಿತ್ತುತ್ತಾರೆ . ಕರ್ಣನ ಪತನಕ್ಕೆ ಮತ್ತೊಂದು ಅಸ್ತ್ರ ಸದ್ದಿಲ್ಲದೇ ಸಿದ್ದವಾಗಿತ್ತು.

ಹೀಗಿರುವಾಗ, ಹೆತ್ತಮ್ಮನ ಮಡಿಲಿನ ಸುಖ ನೋಡದ ಪಾಪದ ಕೂಸನ್ನು, ಒಡಹುಟ್ಟಿದವರು ಸೂತ ಪುತ್ರನೆಂದು ಅವಮಾನಿಸಿದಾಗ ಸ್ನೇಹದ ಸೇತುವೆ ಕಟ್ಟಿದ್ದು ಇದೆ ದುರ್ಯೋಧನ. ಕರ್ಣ ಸುಯೋಧನರು ಒಂದೇ ಗರ್ಭದಲ್ಲಿ ಹುಟ್ಟಿಲ್ಲವಾದರೂ – ಧರ್ಮಜನು ವಾಯುಪುತ್ರ ಅರ್ಜುನ ಮಾದ್ರಿಯ ಪುತ್ರರಾದ ನಕುಲ ಸಹದೇವರಲ್ಲಿಯೂ ಇರದ ಬಂಧುತ್ವ ಇವರಲ್ಲಿತ್ತು. ಸುಯೋಧನ ಕುಂತಿ ಪುತ್ರನನ್ನು ತನ್ನ ಅಂಗ ರಾಜನಾಗಿ ಮಾಡಿದ. ಅವನ ಮಾತೆ ಕುರು ಹಿರಿಯನಿಗೆ ವೇದವಾಕ್ಯವಾಗಿ ಹೋಯಿತು. ಏನೂ ಇಲ್ಲದವನ್ನು ತಲೆ ಎತ್ತಿ ಸಮಬಲನಾಗಿ ಮಾಡಿದವ ಇದೆ ಸುಯೋಧನ. ಅವನ ಈ ಪರಿ ನಂಬಿಕೆ ಪ್ರೀತಿಗೆ ಮನಸ್ಸೋತ ಸೂತನು ಬೇರೆಲ್ಲವೂ ಅವನಿಗೆ ಯಕಶ್ಚಿತ್ ಎನಿಸಿತು. ಅವನಿಗೆ ರಾಜ್ಯ ಬೇಕಿರಲಿಲ್ಲ, ಕೃಷ್ಣ ಆಚಾರ್ಯರು ಬೇಕಿರಲಿಲ್ಲ, ಪದವಿ ಹೆತ್ತಮ್ಮ ಯಾರು ಬೇಕಿರಲಿಲ್ಲ ಅವನಿಗೆ ದುರ್ಯೋಧನನೇ ಪ್ರಪಂಚವಾಗಿದ್ದ.

ಕೃಷ್ಣ ಕರ್ಣನನ್ನು ದಾನ ವೀರ ಎಂದು ವರ್ಣಿಸುವಾಗ ಪಾಂಡು ಪುತ್ರ ಅರ್ಜುನನಿಗೆ ಏನೋ ಗೊಂದಲ. ಕೃಷ್ಣನನ್ನು ಕುರಿತು ಅರ್ಜುನ ಕೇಳುತ್ತಾನೆ – ನೀನು ಅವನಿಗೆ ದಾನ ವೀರ ಎಂದು ಕರೆಯುವೆ ಆದರೆ ನನಗು ಅಂತಹ ಅವಕಾಶ ಸಿಕ್ಕರೆ ನಾನು ಸಾಬೀತು ಪಡಿಸಬಲ್ಲೆ ಎಂದ. ಮರ್ಮವನ್ನರಿತ ಗೋಪಾಲ ಒಂದು ದಿನ ಒಬ್ಬ ಬಡವನನ್ನು ಅರ್ಜುನನ ಬಳಿಗೆ ದಾನ ಕೇಳಲು ಕಳುಹಿಸುತ್ತಾನೆ. ಆಗ ಆ ಬಡವ ನನಗೆ ಚಿನ್ನ ಬೇಕು ಎಂದಾಗ ಅರ್ಜುನ ನಿನಗೆ ಎಷ್ಟು ಬೇಕು ಎಂದು ಚಿನ್ನದ ಬೆಟ್ಟಕ್ಕೆ ಕರೆದೊಯ್ಯುತ್ತಾನೆ. ತದನಂತರ ಅದೇ ಬಡವ ಕರ್ಣನ ಬಳಿ ಬಂದು ಬೇಡಿದಾಗ ಸೂತನು ನಿನಗೆ ಎಷ್ಟು ಬೇಕೋ ಅಷ್ಟು ತೆಗೆದುಕೋ ಎಂದು ಕೊಡಲಿಯನ್ನು ಬಡವನಿಗೆ ಕೊಡುತ್ತಾನೆ. ಕರ್ಣ ಉದಾರತ್ವನನ್ನು ಅರ್ಜುನನಿಗೆ ತಿಳಿಸಿ ಯಾಕೆ ಕರ್ಣನಿಗೆ ಬಿರುದು ಬಂದದ್ದು ಎಂದು ಒಂದು ಮನವರಿಕೆ ಮಾಡುತ್ತಾನೆ. ಅರ್ಜುನ ಮಾತಿಲ್ಲದೆ ಸಮ್ಮತಿ ಸೂಚಿಸುತ್ತಾನೆ.

Related image

ಜನನದಿಂದ, ತಾಯಿಂದ, ದೈವದಿಂದ, ಗುರುವಿನಿಂದ ಹೀಗೆ ಎಲ್ಲರಿಂದ ಕರ್ಣನು ಒಂದಲ್ಲ ಒಂದು ಕ್ಷುಲ್ಲಕ ಕಾರಣಕ್ಕೆ ಶಾಪಕ್ಕೀಡಾಗುತ್ತಾನೆ. ದುಶ್ಯಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಕರ್ಣ ಒಂದೇ ಒಂದು ಮಾತು ದುರ್ಯೋಧನಿಗೆ ಇದು ಶ್ರೇಷ್ಠವಲ್ಲ ಎಂದಿದ್ದರೆ ಆ ಹೆಣ್ಣಿನ ಅಳಲು ನಿಲ್ಲುತ್ತಿತ್ತು. ಮಾನ ಉಳಿಯುತ್ತಿತ್ತು. ಆದರೆ ಸುಯೋಧನನ ಕಾರ್ಯರೂಪಕ್ಕೆ, ಸೇಹದ ಔದಾರ್ಯಕ್ಕೆ, ಜೀವನ ಕೊಟ್ಟ ಉಪಕಾರಕ್ಕೆ ಕರ್ಣನ ಅದರಗಳು ಅಲುಗಾಡದೆ ಹೋಗಿತ್ತು.

ಇನ್ನು ಚಕ್ರವ್ಯೂಹವನ್ನು ಬೇಧಿಸಲು ಹೋಗಿ ವಿಫಲ ಯತ್ನದಿಂದ ಮಾಡಿದ ಅಭಿಮನ್ಯುವನ್ನು ಒಂದೇ ಬಾಣಕ್ಕೆ ಚಮರ ಶ್ಲೋಕ ಹಾಡುವ ಎಲ್ಲ ಶಕ್ತಿ ಇದ್ದರು ಕುರು ವಂಶಿಕರ ಹುಡುಗನ ಪ್ರಾಣವನ್ನು ಹಾವಿನ ಬಾಯಿಗೆ ಸಿಲುಕಿದ ಇಲಿಯಂತೆ ತಮ್ಮ ತೀಕ್ಷ್ಣ ಬಾಣದಿಂದ ಹಿಂಸಿಸಿ, ವೀರತ್ವದಿಂದ ಪಾರ್ಥನ ಪುತ್ರ ಎದೆಯೊಡ್ಡಿ ಬಿದ್ದಿದ್ದಾಗ ಒಂದು ಬೊಗಸೆ ನೀರಿಗಾಗಿ ಹಾತೊರೆಯುತ್ತಿದ್ದರು ದಾನ ಶೂರ ವೀರ ಎನಿಸಿಕೊಂಡವ ಪಕ್ಕದಲ್ಲೇ ಹರಿಯುತ್ತಿದ್ದ ತೊರೆ ಇಂದ ಒಂದು ಗುಕುಟು ನೀರು ನೀಡದೆ ಬದುಕಿನಲ್ಲಿ ಗಳಿಸಿದ್ದ ಅಷ್ಟೂ ಪುಣ್ಯವನ್ನು ಅಭಿಮನ್ಯುವಿನ ಸಾವಿನ ಕೊನೆಯ ಕಣ್ಣೀರಿನಲ್ಲಿ ತೇಲಿ ಬಿಟ್ಟ.

ತನ್ನ ತಾಯಿಗೆ ಕೊಟ್ಟ ಮಾತಿನಂತೆ ಕರ್ಣನು ಅರ್ಜುನನ್ನು ಮಾತ್ರ ಕೊಲ್ಲುವ ಶಪಥ ಮಾಡಿದನು, ಮಹಾ ಸಂಗ್ರಾಮದ 16ನೇ ದಿನ ಪಾಂಡವರನ್ನು ಸಾಯಿಸದೆ ಕೇವಲ ಸೋಲಿಸಿ ತನ್ನ ಸಾರಥಿ ಶಲ್ಯನಿಗೆ ಅರ್ಜುನನ ಕಡೆಗೆ ಹೋರಾಡಲು ಹೇಳುತ್ತಾನೆ. ಶಲ್ಯ ಪಾಂಡವರನ್ನು ಹೊಗಳುವ ಪರಿ ನೋಡಿ ಕರ್ಣನಿಗೆ ರೋಸಿಹೋಗಿತ್ತು. ಕರ್ಣ ಅರ್ಜುನನ ಮೇಲೆ ಅದಿಪಥ ಸಾಧಿಸುವಾಗ ಶಲ್ಯನು ಪಾರ್ಥನ ಎದೆಗೆ ಗುರಿ ಇಡು ಎಂದು ಹೇಳಿದನಾದರೂ ಅವನ ಮಾತನ್ನು ದಿಕ್ಕರಿಸಿ ಅರ್ಜುನನ ಹಣೆಗೆ ಗುರಿ ಇಡುತ್ತಾನೆ. ಇದನ್ನು ಗಮನಿಸಿದ ಕೃಷ್ಣ ರಥವನ್ನು ಕೆಳಗೆ ದೂಕಿದ ಪರಿಣಾಮ ನಾಗಾಸ್ತ್ರವು ಅರ್ಜುನನ ಕೀರಿಟವನ್ನು ಮಾತ್ರ ಹೊಡೆಯುತ್ತದೆ. ಅಲ್ಲಿಗೆ ಕೃಷ್ಣ ತನ್ನ ತಂತ್ರ ದಿಂದ ಕರ್ಣ ರಥದ ಚಕ್ರ ಮಣ್ಣಿನಲ್ಲಿ ಸಿಲುಕಿಕೊಳ್ಳುವ ಹಾಗೆ ಮಾಡುತ್ತಾನೆ

ಕರ್ಣನು ಯುದ್ಧ ಮಾಡುತ್ತಿರಬೇಕಾದರೆ ಕೃಷ್ಣನು ಬ್ರಾಹ್ಮಣನ ಮಾರು ವೇಷದಲ್ಲಿ ಬಂದು ನಿನ್ನಲ್ಲಿರುವ ಎರಡು ಬಂಗಾರದ ಹಲ್ಲುಗಳನ್ನು ಕರ್ಣನಲ್ಲಿ ದಾನವಾಗಿ ಕೇಳುತ್ತಾನೆ… ಕರ್ಣ ಯಾವುದೇ ಪ್ರಶ್ನೆಯನ್ನು ಮಾಡದೆ ಆ ಎರಡೂ ಹಲ್ಲುಗಳನ್ನು ಕಿತ್ತು ಕೃಷ್ಣನಿಗೆ ದಾನವಾಗಿ ಕೊಡುತ್ತಾನೆ.. ಆದರೆ ಕೃಷ್ಣ ಮಾತ್ರ ಅದನ್ನು ಸ್ವೀಕರಿಸದೆ ನಿನ್ನ ಎಂಜಲಿನಲ್ಲಿದ್ದ ಆ ಹಲ್ಲನ್ನು ಬ್ರಾಹ್ಮಣನಾದ ನನಗೆ ಕೊಡುತ್ತೀದ್ದೀಯಾ ಎಂದು ಶಾಪ ಕೊಡುತ್ತಾನೆ…ಆ ಸಮಯದಲ್ಲಿ ಕರ್ಣ ಸಾಯುವ ಸ್ಥಿತಿಯಲ್ಲಿರುತ್ತಾನೆ… ಆದರೂ ಬಿಲ್ಲು ಬಾಣವನ್ನು ಎತ್ತಿ ಭೂಮಿಗೆ ಬಿಡುತ್ತಾನೆ.. ಅಲ್ಲಿಂದ ಚುಮ್ಮಿದ ನೀರಿನಿಂದ ಆ ಎರಡು ಬಂಗಾರದ ಹಲ್ಲನ್ನು ಚೆನ್ನಾಗಿ ಶುಚಿಗೊಳಿಸಿ ಬ್ರಾಹ್ಮಣ ವೇಷದಲ್ಲಿರುವ ಕೃಷ್ಣನ ಕೈಗೆ ಒಪ್ಪಿಸುತ್ತಾನೆ…ಆ ಸಮಯದಲ್ಲಿ ಕೃಷ್ಣ ಕರ್ಣನಿಗೆ ಮೆಚ್ಚಿ ಕೃಷ್ಣನ ಅವತಾರವನ್ನು ತೋರಿಸುತ್ತಾನೆ..

ಹೀಗೆ ಜೀವನದುದ್ದಕ್ಕೂ ಶಾಪಗ್ರಸ್ತಾನಾಗಿ ಕೊನೆಗೆ 17ನೆ ದಿನ ರಥದ ಚಕ್ರ ರಕ್ತದಿಂದ ತೋಯ್ದ ಮಣ್ಣಿನಲ್ಲಿ ಸಿಲುಕಿಕೊಂಡಾಗ, ಕರ್ಣ ಅರ್ಜುನನನ್ನು ಯುದ್ಧ ನೀತಿ ಇಂದ ಹೋರಾಡೋಣ, ನಾನು ರಥದ ಚಕ್ರವನ್ನು ಸರಿಪಡಿಸುತ್ತೇನೆ ಎಂದಾಗ ತಲೆಯಾಡಿಸಿದ ಅರ್ಜುನ, ಕೃಷ್ಣನ ಮಾತಿಗೆ ಸಮ್ಮತಿ ಸೂಚಿಸಿ ಅಂಜಲಿಕ ಬಾಣವನ್ನು ಕರ್ಣ ಕಪೆÇೀಲಕ್ಕೆ ಗುರಿ ಇಡುತ್ತಾನೆ, ಕರ್ಣ ಚೀರಾಡುತ್ತಾ ನೆಲಕ್ಕುರುಳಿ, ನೋವಿನಿಂದ ತಾನು ಸ್ನೇಹಕ್ಕೆ ಮನಸೋತು ಮಾಡಿದ ಅಚಾತುರ್ಯವನ್ನು ಸ್ಮರಿಸುತ್ತಿರುವಾಗ ಬ್ರಾಹ್ಮಣನ ರೂಪದಲ್ಲಿ ಬಂದ ಇಂದ್ರ ಕರ್ಣನನ್ನು ಉದ್ದೇಶಿಸಿ ಕವಚ ಕುಂಡಲಿಯನ್ನು ದಾನ ಪಡಿಯುತ್ತಾನೆ, ನಿನಗೂ ನನ್ನಲ್ಲಿ ಬೇಡುವ ಮನಸ್ಸಾಯಿತೇ ದೇವಾ ಎಂದು, ಕಳೆದುಕೊಳ್ಳುವುದಕಿಂಥ ದಾನವೇ ಲೇಸು ಎಂದು ಕವಚ ಕುಂಡಲಿಯನ್ನು ದಾನ ನೀಡುತ್ತಲೇ ಸೂತನು ಇಹ ಲೋಕ ತ್ಯಜಿಸುತ್ತಾನೆ.. ಅಲ್ಲಿಂದ ಇಂದ್ರ ಆ ಕವಚ ಮತ್ತು ಕುಂಡಲಿಯನ್ನು ಸ್ವರ್ಗಕ್ಕೆ ಹೋಗುವ ಸಮಯದಲ್ಲಿ ಇನ್ನೂ ಯಾರಿಗೂ ಈ ಭೂಮಿಯಲ್ಲಿ ಕರ್ಣನ ಕವಚ ಮತ್ತು ಕುಂಡಲಿ ಸಿಗಬಾರದು ಎನ್ನುವ ಉದ್ಧೇಶದಿಂದ ಹಿಮಾಲಯದಲ್ಲಿ ಮಣ್ಣಿನಲ್ಲಿ ಇಂದ್ರ ಹೂತಿಟ್ಟ ಎಂಬ ಪ್ರತೀತಿ ಇದೆ. ಹಾಗಾಗಿ ಇನ್ನೂ ಕರ್ಣನ ಕವಚ,ಕುಂಡಲಿ ಭೂಮಿಯಲ್ಲಿದೆ ಎಂಬ ಪ್ರತೀತಿ ಇದೆ.

-ಪವಿತ್ರ

Tags

Related Articles

Close