ಅಂಕಣ

ಪ್ರಾಕೃತಿಕ ವಿಪತ್ತು ಎದುರಾಗುವ ಮುಂಚಿತವಾಗಿ ಪಶು-ಪಕ್ಷಿಗಳಿಗೆ ಇದು ತಿಳಿದೇ ಬಿಡುತ್ತವಂತೆ!! ಈ ಬಗ್ಗೆ ವಿಜ್ಞಾನಿಗಳೇ ಬಿಚಿಟ್ಟ ಕುತೂಹಲಕಾರಿ ಮಾಹಿತಿ…..

ಬಹುತೇಕ ನಮ್ಮ ಹಿರಿಯರು ಅದೇನೂ ಹೇಳುತ್ತಾರೆ ಎಂದರೆ, “ಪಶು-ಪಕ್ಷಿಗಳಲ್ಲಿ ಕೆಲವು ಅದ್ಭುತವಾದ ಶಕ್ತಿಗಳನ್ನು ಹೊಂದಿದ್ದವೆಯಲ್ಲದೇ, ನಾವು ಗುರುತಿಸಲಾಗದ ಅದೆಷ್ಟೋ ವಿಷಯಗಳನ್ನು ಅವು ಗುರುತಿಸುತ್ತವೆ. ಅಷ್ಟೇ ಅಲ್ಲದೇ, ಶ್ವಾನಗಳಿಗೆ ಅಥವಾ ಇತರೇ ಜೀವಿಗಳಿಗೆ ಮಾತು ಬರುವಂತಿದ್ದರೆ ಈ ಭೂಮಿಯ ಮೇಲೆ ಮಾನವನು ಇರುತ್ತಿರಲಿಲ್ಲ. ಆದ್ದರಿಂದಲೇ ದೇವರು ಮಾನವನಿಗೆ ಎಲ್ಲಾ ಜೀವಿಗಳಿಗಿಂತ ಕಡಿಮೆ ಅರ್ಹತೆಗಳನ್ನು ನೀಡಿ ಮಾತು ಎಂಬುದನ್ನು ಕೊಟ್ಟು ಎಲ್ಲರಿಗಿಂತ ಹೆಚ್ಚಿನ ಅರ್ಹತೆ ನೀಡಿದ್ದಾನೆ” ಎಂದು ಹೇಳುವುದುಂಟು!! ಆ ಮಾತುಗಳನ್ನು ಕೂಲಂಕುಷವಾಗಿ ಗಮನಿಸುವುದಾದರೇ ಮನುಷ್ಯನಿಗಿಂತಲೂ ಪ್ರಾಣಿ-ಪಕ್ಷಿಗಳು ವಿಶೇಷ ಶಕ್ತಿಯನ್ನು ಹೊಂದಿದ್ದಾವೆಯೇ ಎನ್ನುವ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜ.

ಮಾನವನ ಆಪ್ತಸ್ನೇಹಿತನೆಂದು ಶ್ವಾನವರ್ಗ ವಿಶ್ವದಾದ್ಯಂತ ಚಿರಪರಿಚಿತವಾಗಿದ್ದಲ್ಲದೇ ಅಂಧರಿಗೆ ದಾರಿ ತೋರಿಸುವಂತೆ, ಅಪರಾಧಿಗಳ ಪತ್ತೆ ಹಚ್ಚುವುದರಲ್ಲಿ ನಾಯಿಗಳ ಕೊಡುಗೆ ಬಹು ದೊಡ್ಡದು. ಮಿಶ್ರತಳಿಯ ಬಗೆ ಬಗೆಯ ನಾಯಿಗಳು ಮನೆಮನೆಗಳಲ್ಲಿ ಹಿರಿಕಿರಿಯರ ಜೊತೆಗಾರರಾಗಿ ಕುಟುಂಬದ ಸದಸ್ಯರಂತೆ ಪಾಲನೆ, ಪೆÇೀಷಣೆ, ಔಷಧೋಪಚಾರಕ್ಕೆ ಒಗ್ಗಿಹೋಗಿರುವುದು ಈಗಿನ ಕಾಲದಲ್ಲಿ ಸರ್ವೇಸಾಮಾನ್ಯವಾಗಿದೆ!! ಆದರೆ ಮಾನವರಿಗೆ ಕಾಣದಂತಹ ಅನೇಕ ದಿವ್ಯ, ದುಷ್ಟಶಕ್ತಿಗಳನ್ನು ಕಂಡುಹಿಡಿಯುವ ಶಕ್ತಿ ಹೊಂದಿರುವಂತಹ ಶ್ವಾನಗಳಿಗೆ, ಮಾನವನ ಮರಣ ಮೊದಲೇ ತಿಳಿದು ಬಿಡುತ್ತದೆಯಂತೆ!!

ಹೌದು…. ವಾಸನೆ ಹಿಡಿಯುವುದರ ಮೂಲಕ ಕಳ್ಳರನ್ನು ಹೇಗೆ ಪತ್ತೆ ಹಚ್ಚುತ್ತೆವೆಯೋ, ಹಾಗೆಯೇ ಮಾನವರಿಗೆ ಕಾಣದಂತಹ ಅನೇಕ ದಿವ್ಯ, ದುಷ್ಟಶಕ್ತಿಗಳನ್ನು ಕಂಡುಹಿಡಿಯುವ ಶಕ್ತಿ ಶ್ವಾನಗಳಿವೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಇವುಗಳಿಗೆಲ್ಲಾ ಆಧಾರ ಸಿಗುವುದು ಕಷ್ಟದ ಕೆಲಸವೇ ಆಗಿದೆ!! ಹಾಗಾಗಿ ಮಾನವ ಮರಣ ಹೊಂದುವ ಮೊದಲು ಶ್ವಾನಗಳಿಗೆ ಅದು ತಿಳಿದು ಹೋಗುತ್ತದೆಯಲ್ಲದೆ ಶ್ವಾನಗಳು ಮಾಡುವ ವಿಶೇಷವಾದ ಶಬ್ದಗಳು ಅವುಗಳಲ್ಲಿರುವ ಅತೀತ ಶಕ್ತಿಗಳ ಭಾಗವೆಂದು ಹೇಳುತ್ತಾರೆ. ಆದರೆ ಮನುಷ್ಯನಿಗೆ ಕಾಣದ ಅತೀವ ಶಕ್ತಿಗಳು ಶ್ವಾನಗಳಿಗೆ ಕಾಣುತ್ತವೆ ಅನ್ನೋದರ ಬಗ್ಗೆ, ವಿಜ್ಞಾನಿಗಳು ಈಗಾಗಲೇ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ!!

ರೆಡ್ ರೊಡ್ ಎಂಬ ವರ್ದಾ ತುಫಾನು ಚೆನ್ನೈ ನಗರವನ್ನು ಛಿದ್ರಗೊಳಿಸಿರುವ ವಿಚಾರವು ತಿಳಿದೇ ಇದೆ!! 120 ಕಿಲೋ ಮೀಟರ್ ವೇಗದಿಂದ ಬೀಸಿದ ಗಾಳಿಗೆ 20 ಸಾವಿರಕ್ಕೂ ಹೆಚ್ಚಿನ ಮರಗಳು ಕುಸಿದು ಬಿದ್ದಿದ್ದವು. ಅಷ್ಟೇ ಅಲ್ಲದೇ, ವಾಹನಗಳ ಓಡಾಡುವಿಕೆಯೇ ನಿಂತು ಹೋಗಿದ್ದ ಪ್ರದೇಶದಲ್ಲಿ, ರಸ್ತೆ, ರೈಲು ಹಳಿಗಳು ಧ್ವಂಸವಾಗಿದ್ದವು!! ವಿಚಿತ್ರವೆಂದರೆ, ಇಷ್ಟು ಮರಗಳು ದ್ವಂಸವಾಗಿದ್ದರೂ ಕೂಡ, ಒಂದು ಪಕ್ಷಿಯೂ ಮರಣ ಹೊಂದಿಲ್ಲ. ಅಷ್ಟೇ ಅಲ್ಲದೇ ಚೆನ್ನೈನಲ್ಲಿರುವ ಪೂಂಪುಹಾರ್ ನಗರ್ ನಲ್ಲಿ ಮುರಿದು ಬಿದ್ದ ಮರದ ಕೊಂಬೆಯಲ್ಲಿ ಪಕ್ಷಿಯ ಗೂಡುಗಳು ಇದ್ದು, ಅದರಲ್ಲಿ ಒಂದೇ ಒಂದು ಮೊಟ್ಟೆಯೂ ಇರಲಿಲ್ಲ.

ಹೌದು… ವರ್ದಾ ತುಫಾನು ಚೆನ್ನೈ ನಗರವನ್ನು ಛಿದ್ರಗೊಳಿಸಿದೆ ಎಂಬ ಸುಳಿವು ಪಕ್ಷಿಗಳೇ ಅದು ಹೇಗೆ ಗೊತ್ತಾಯಿತೋ ಗೊತ್ತಿಲ್ಲ!! ಆದರೆ ತುಫಾನು ಬರುವುದನ್ನು ಮೊದಲೇ ಗುರುಸಿದ್ದ ಪಕ್ಷಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿವೆ. ಅಷ್ಟೇ ಅಲ್ಲದೇ ತುಫಾನು ಗಾಳಿ ಬೀಸಿದ ಸಮಯದಲ್ಲಿ ಆಕಾಶದಲ್ಲಿ ಒಂದು ಪಕ್ಷಿಯೂ ಕಾಣಿರಲಿಲ್ಲ!! ಬದಲಾಗಿ ಅವುಗಳೆಲ್ಲವೂ ತುಫಾನು ಸಂಭವಿಸುತ್ತದೆ ಎಂದು ಮೊದಲೇ ಗ್ರಹಿಸಿ ತನ್ನ ವಾಸಸ್ಥಳವನ್ನು ಬಿಟ್ಟು ಬೇರೊಂದು ಕಡೆಗೆ ಮೊಟ್ಟೆಯ ಸಮೇತವಾಗಿ ವಲಸೆ ಹೋಗಿದೆ!!

ಈ ವಿಷಯದ ಬಗ್ಗೆ ವನ್ಯಜೀವಿಗಳ ಪ್ರೇಮಿ ಭಾಸ್ಕರ್ ಮಾತನಾಡುತ್ತಾ, “ಯೂರೋಪ್ ನಲ್ಲಿ “ಕೇನರಿ” ಎಂಬ ಪುಟ್ಟ ಪಕ್ಷಿ ಇದೆ. ಈ ಪಕ್ಷಿಯನ್ನು ಹಿಂದಿನ ಕಾಲದಲ್ಲಿ ಒಂದು ಬೋನಿನಲ್ಲಿಟ್ಟುಕೊಂಡು ಸುರಂಗದೊಳಗೆ ಹೋಗುತ್ತಿದ್ದರಂತೆ. ಹಾಗಾಗಿ ಸುರಂಗದೊಳಗೆ ಏನಾದರು ಅವಗಢಗಳು ಸಂಭವಿಸಿದರೆ ಅಥವ ಭೂಕಂಪವಾಗುವ ಸಾಧ್ಯತೆಗಳಿದ್ದಲ್ಲಿ ಆ ಪಕ್ಷಿಯ ನಡವಳಿಕೆಗಳೇ ಬದಲಾಗುತ್ತವೆ. ಹಾಗಾಗಿ ಈ ಪಕ್ಷಿಯಲ್ಲಿ ಕಂಡುಬರುವ ವ್ಯತ್ಯಾಸವನ್ನು ಗುರುತಿಸಿ ಸುರಂಗದಿಂದ ಹೊರಬರುತ್ತಿದ್ದರಂತೆ” ಎನ್ನುವ ವಿಚಾರವನ್ನು ಹೇಳಿದ್ದಾರೆ.

ಅಷ್ಟೇ ಅಲ್ಲದೇ, “ಇದರಿಂದ ಪಕ್ಷಿಗಳಿಗೆ ಪ್ರಕೃತಿಯ ವೈಪರೀತ್ಯವನ್ನು ಗುರುತಿಸುವ ಗುಣವಿದೆ ಎಂದು ತಿಳಿಯುತ್ತದೆಯಲ್ಲದೇ ಪ್ರಾಕೃತಿಕ ವಿಪತ್ತು ಎದುರಾಗುವ ಸಮಯದಲ್ಲಿ ಪಕ್ಷಿಗಳು ದೂರದ ಸ್ಥಳಗಳಿಗೆ ಹೋಗುವಾಗ ಸುರಕ್ಷಿತ ಸ್ಥಳಗಳನ್ನು ಆಯ್ದುಕೊಳ್ಳುತ್ತವೆ” ಎಂದು ಹೇಳಿದ್ದಾರೆ. ಇನ್ನು, ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಪತ್ತುಗಳು ಬರುವ ಸಮಯದಲ್ಲಿ ಪ್ರಾಣಿ-ಪಕ್ಷಿಗಳ ವರ್ತನೆಯು ಎಂದಿಗಿಂತಲೂ ಭಿನ್ನವಾಗಿರುತ್ತವೆ” ಎನ್ನುತ್ತಾರೆ ಶಾಸ್ತ್ರಜ್ಞರು!!

ಇದಕ್ಕೆ ತಕ್ಕ ಇನ್ನೊಂದು ಉದಾಹರಣೆ, ಎಂದರೆ 2008 ಮೇ 12 ರಂದು ಚೈನಾದಲ್ಲಿ ಭೂಕಂಪವಾದ ಸಮಯದಲ್ಲಿ ವೋಲಾಗಂ ನ್ಯಾಷನಲ್ ನೇಚರ್ ರೀಸರ್ಚ್ ಸೆಂಟರ್ ನಲ್ಲಿರುವ ಪಾಮಡಾಗಳು ಭಿನ್ನವಾಗಿ ವರ್ತಿಸಿದ್ದವು. ಸಾಮಾನ್ಯವಾಗಿ ಅವು ಸೋಮಾರಿಗಳಂತಿರುತ್ತವೆ, ಆದರೆ ಕಡಿಮೆ ಬಿದಿರನ್ನು ತಿನ್ನುವ ಅವುಗಳು, ಭೂಕಂಪವಾಗುವ ಮೊದಲು ವೇಗವಾಗಿ ಎಲ್ಲಾ ಬಿದಿರನ್ನು ತಿಂದು ಮುಗಿಸಿವೆ ಎನ್ನುವ ಸತ್ಯವನ್ನು ಸಂಶೋದನೆಯ ಮೂಲಕ ಹೊರಹಾಕಿದ್ದಾರೆ.

ಇನ್ನು, 2004 ರಲ್ಲಿ ಸುನಾಮಿ ಬರುವ ಮುನ್ನ ಆನೆಗಳು ಸಮುದ್ರದ ಅಲೆಗಳ ಶಬ್ಧಗಳನ್ನು ಗ್ರಹಿಸಿ ವಿಚಿತ್ರವಾಗಿ ವರ್ತಿಸಿದ್ದವು ಎನ್ನುವುದನ್ನು ಹೇಳಿದ್ದಾರೆ. ಆದರೆ ಇದರ ಕಂಪನಾಂಕ 20 ಹರ್ಡ್ಸ್ ಗಿಂತ ಕಡಿಮೆ ಇರುತ್ತವೆಯಾದರೂ ಇವುಗಳು ಪ್ರಕೃತಿ ವಿಕೋಪ ಸಂಭವಿಸುವ ಮುಂಚಿತವಾಗಿಯೇ ಇವುಗಳಿಗೆ ತಿಳಿದು ಬಿಡುತ್ತವೆ. ಆದರೆ ಇದು, ಮಾನವನಲ್ಲಿ 27.5 ಹರ್ಡ್ಸ್ ಇದ್ದರೆ ಮಾತ್ರ ಇವುಗಳನ್ನೆಲ್ಲ ಗುರುತಿಸಬಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಸ್ವರ್ಣಬಣ್ಣದ ರೆಕ್ಕೆಗಳನ್ನು ಹೊಂದಿರುವ ಪಕ್ಷಿಗಳು (ಗೋಲ್ಡೆನ್ ವಿಂಗ್ಸ್ ವಾರ್ಬ್ ಲರ್ಸ್) ತುಫಾನು ಬರುವ 48 ಗಂಟೆಗಳ ಮೊದಲೇ ಆ ಸ್ಥಳವನ್ನು ಖಾಲಿ ಮಾಡಿರುವ ಮಾಹಿತಿಯನ್ನು ಹೊರಹಾಕಿರುವ ಇವರು ಪಶು ಪಕ್ಷಿಗಳಲ್ಲಿಯೂ ವಿಶೇಷವಾದ ಶಕ್ತಿಯನ್ನು ಹೊಂದಿದ್ದಾವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಶ್ವಾನ, ಬೆಕ್ಕುಗಳು ಸಹಾ ಹೆಚ್ಚಿನ ಗ್ರಹಣ ಶಕ್ತಿಯನ್ನು ಹೊಂದಿರುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

2011 ರಲ್ಲಿ 9 ತೀವ್ರತೆಯಲ್ಲಿ ಭೂಕಂಪವಾದ ಸಮಯದಲ್ಲಿ “ಹಿರೋಯಿ” ಗೆ “ಯಮೌಚಿ ಆಫ್ ನ್ಯಾಷನಲ್ ಸಿಂಗ್ ಹ್ಯೂ ಯೂನಿವರ್ಸಿಟಿ” ಅಧ್ಯಯನ ಮಾಡಿದ್ದು, ಅದರಲ್ಲಿ ಬೆಕ್ಕುಗಳು ಭೂಕಂಪವಾಗುವ 6 ದಿನಗಳ ಮೊದಲೇ ವಿಚಿತ್ರವಾಗಿ ನಡೆದುಕೊಂಡವು ಎನ್ನುವ ವಿಚಾರ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಪ್ರಕೃತಿ ವಿಕೋಪಗಳು ಸಂಭವಿಸುವ ಮುಂಚಿತವಾಗಿ ಅಥವ ಆಪತ್ತು ಬರುವ ಸಮಯದಲ್ಲಿ ನಡುಗುತ್ತಾ, ಹೊಂದಿಕೊಳ್ಳಲು ಆಗದಂತೆ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಭಯಗೊಂಡಂತೆ ಕಾಣುತ್ತವೆ.

ಇನ್ನು, ಶ್ವಾನಗಳು ವಿಚಿತ್ರವಾಗಿ ಕೂಗುತ್ತವೆ. ಅಷ್ಟೇ ಅಲ್ಲದೇ ಹಸುಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ!! ಹಸುಗಳ ವಿಚಾರಕ್ಕೆ ಬಂದಾಗ, ಭೂಕಂಪಕ್ಕೆ 6 ದಿನಗಳ ಮುಂಚಿತವಾಗಿ ಹಾಲನ್ನು ಕಡಿಮೆ ಪ್ರಮಾಣದಲ್ಲಿ ಕೊಡುತ್ತವೆ. ಇನ್ನು, ಅಧಿಕ ಮಳೆಯಾಗುವ ಸೂಚನೆ ಇದ್ದಲ್ಲಿ ಜೇನುನೊಣಗಳು ಎಲ್ಲೂ ಹೋಗುವುದಿಲ್ಲ. ಇದರಿಂದ ಭೂಕಂಪ ಅಥವಾ ಪ್ರಕೃತಿ ಆಪತ್ತುಗಳನ್ನು ಮೊದಲೇ ಅರಿತುಕೊಳ್ಳಬಹುದು ಎನ್ನುವ ಸಾಕಷ್ಟು ವಿಚಾರಗಳು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಒಟ್ಟಿನಲ್ಲಿ…. ಮನುಷ್ಯನಿಗೆ ಮಾತು ಬರುವ ಶಕ್ತಿ ಇರಬಹುದು. ಆದರೆ ಶ್ವಾನ, ಪಶು-ಪಕ್ಷಿಗಳಿಗೆ ವಿಪತ್ತುಗಳಿಂದ ದೂರವಾಗುವ ದೃಢವಾದ ಗ್ರಹಣ ಶಕ್ತಿಯನ್ನೇ ನೀಡಿರುವ ಮೂಲಕ ತಮಗೆ ಎದುರಾಗುವ ಆಪತ್ತುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತವೆ ಎಂದರೆ ಅದು ನಿಜಕ್ಕೂ ಕೂಡ ಗ್ರೇಟ್!! ಒಟ್ಟಿನಲ್ಲಿ ಪ್ರಾಣಿ ಪಕ್ಷಿಗಳಲ್ಲೂ ಅದ್ಬುತವಾದ ಶಕ್ತಿಗಳು ಇವೆ ಎನ್ನುವುದನ್ನು ಈ ಹಿಂದೆ ಪುರಾಣಗಳೇ ತಿಳಿಸಿದ್ದರೂ ಕೂಡ ಇದೀಗ ಇದನ್ನೆಲ್ಲಾ ಸಂಶೋಧಕರು ದೃಢ ಪಡಿಸಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

– ಅಲೋಖಾ

Tags

Related Articles

Close