ಅಂಕಣಇತಿಹಾಸ

ಸತತ 20 ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಕುಟುಂಬದ ಮೇಲೆ ಬೇಹುಗಾರಿಕೆ ಮಾಡಿದ್ದ ನೆಹರೂ!! ಬಹಿರಂಗವಾದ ದಾಖಲೆಗಳು ಹೇಳಿದ್ದೇನು ಗೊತ್ತೇ?!

ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರಲಾಲ್ ನೆಹರೂ!!

ಒಬ್ಬ ಭಾರತೀಯನಿಗೆ ಈ ಎರಡು ಹೆಸರು ಕೇಳಿದರೆ ಯಾವೆಲ್ಲ ಭಾವಗಳು ಒಮ್ಮೆಗೆ ಮೂಡಬಹುದು?! ದೇಶಕ್ಕೋಸ್ಕರ ಪ್ರಾಣವನ್ನೇ ಬದಿಗಿಟ್ಟ ಒಬ್ಬ ನೇತಾ, ಪ್ರಾಣಕ್ಕೋಸ್ಕರ ದೇಶವನ್ನೇ ಬದಿಗಿಟ್ಟ ಒಬ್ಬ ಚಾಚಾ! ತೀರಾ ಸರಳವಾಗಿ ಹೇಳ ಬೇಕೆಂದರೆ ಇವರಿಬ್ಬರಿಗೂ ಇರುವ ವ್ಯತ್ಯಾಸವಷ್ಟೇ! ಇವರಿಬ್ಬರನ್ನು ಆರಾಧಿಸುವ ಅಥವಾ ಬೆಂಬಲಿಗರ ಮನಃಸ್ಥಿತಿಯೂ !! ಸುಭಾಷ ರು ಎನ್ನುತ್ತಲೇ ದೇಶ ಕಾರ್ಯಕ್ಕಿಳಿಯುವ ಒಬ್ಬ ಮತ್ತು, ನೆಹರೂವೆನ್ನುತ್ತ ಪಾಕಿಸ್ಥಾನಕ್ಕೆ ಜಯಕಾರ ಹಾಕುವ ಇನ್ನೊಬ್ಬ! ಬಿಡಿ!! ಪ್ರಸ್ತುತ ಭಾರತದಲ್ಲಿ ಇವತ್ತಿಗೂ ಸಹ, ಇವರಿಬ್ಬರ ಬಗ್ಗೆ ಅದೆಷ್ಟೋ ಕುತೂಹಲಗಳು ಇನ್ನೂ ಬಾಕಿ
ಉಳಿದಿದೆ! ಅದರಲ್ಲಿಯೂ, ಸುಭಾಷರ ಬಗ್ಗೆ ಏನಾದರೂ ದುರ್ಲಭ ದಾಖಲೆಗಳು ಸಿಕ್ಕಿದೆ ಎಂದರೆ, ಭಾರತ ಒಮ್ಮೆ ನಿಶ್ಯಬ್ದವಾಗಿ ಆಲಿಸುತ್ತದೆ! ಯಾಕೆಂದರೆ, ಸುಭಾಷರು “ಇನ್ನೂ ಜೀವಂತವಾಗಿದ್ದಾರೆ” ಎನ್ನುವ ನಂಬಿಕೆಯೊಂದು ಅದ್ಹೇಗೋ ಉಳಿದುಬಿಟ್ಟಿದೆ! ಸುಭಾಷರು ವಿಮಾನ ಅಪಘಾತದಲ್ಲಿ ತೀರಿರಲಿಲ್ಲ ಎನ್ನುವ ಸುಳಿವೊಂದು ಭಾರತದಲ್ಲಿ ಹರಿದಾಡಿದೆ! ಭಾರತೀಯರಿಗೆ ಬೇಕಾಗಿರುವುದು ಸುಭಾಷರ ಬಗ್ಗೆ ಇದಃಮಿತ್ಥಂ ಎನ್ನುವ ದಾಖಲೆ! ಜೊತೆಗೆ, ಸುಭಾಷರು ಕಣ್ಮರೆಯಾಗುವುದಕ್ಕೆ ನೆಹರೂವೇ ಕಾರಣ ಎನ್ನುವ ಅನುಮಾನ! ಅದಕ್ಕೆ ಸರಿಯಾಗಿಯೇ, ನೆಹರೂವಿನ ಹೀನಾಯ ನಡೆಯೊಂದು ಬಹಿರಂಗವಾಗಿತ್ತು!!

ಸತತ ಇಪ್ಪತ್ತು ವರ್ಷಗಳ ಕಾಲ ಸುಭಾಷರ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿದ್ದ ನೆಹರೂ!!

ಇದು ಕೇವಲ ಗೂಢಾಚಾರವಲ್ಲ! ಬದಲಿಗೆ, ಹಿಂಸೆ ಎಂದು ಬಿಡಿ! ಸುಭಾಷರ ಕುಟುಂಬದ ಜನರ ಪ್ರತಿ ಚಲನ ವಲನಗಳಿಂದ ಹಿಡಿದು, ಸುಭಾಷರ ಮನೆಗೆ ಯಾರು ಬರುತ್ತಾರೆ, ಹೋಗುತ್ತಾರೆ ಎನ್ನುವ ತನಕ ಮೂರನೆಯ ವ್ಯಕ್ತಿಯಾಗಿದ್ದ ನೆಹರೂ ವಿಗೆ ತಿಳಿದಿರುತ್ತದೆಂದರೆ, ಸತತ ಇಪ್ಪತ್ತು ವರ್ಷಗಳ ಕಾಲ ಅವರ್ಯಾರೂ ಸಹ, ತಮ್ಮ ವೈಯುಕ್ತಿಕ ಬದುಕನ್ನೂ ಬದುಕಲಾರದ ಸ್ಥಿತಿಗೆ ತಂದಿಟ್ಟ ನೆಹರೂ ಮಾತ್ರ ಕ್ಷಮೆಗೆ ಅರ್ಹವಾದ ವ್ಯಕ್ತಿಯೇ ಅಲ್ಲ ಎನ್ನುವುದು ಇಂತಹ ಕೆಲ ಕಾರಣಗಳಿಂದಾಗಿ!

ಇತ್ತೀಚೆಗೆ ಬಹಿರಂಗವಾಗಿದ್ದ ಗುಪ್ತಚರ ಇಲಾಖೆಯ ಎರಡು ದಾಖಲೆಗಳು, ಜವಾಹರಲಾಲ್ ನೆಹರೂ ಸರಕಾರ, ನಿರಂತರವಾಗಿ, ಬರೋಬ್ಬರಿ ಎರಡು ದಶಕಗಳ ಕಾಲ, ರಾಷ್ಟ್ರೀಯ ನಾಯಕ ಸುಭಾಷ್ ಚಂದ್ರರ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿತ್ತು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದೆ! ಈ ದಾಖಲೆಗಳೆಲ್ಲವೂ ಸಹ, ನೆಹರೂ ಸರಕಾರ ೧೯೪೮ ರಿಂದ ೧೯೬೮ ರವರೆಗೆ, ಸುಭಾಷರ ಮನೆಯ ಸದಸ್ಯರ ಮೇಲೆ ಅತಿರೇಕವೆನ್ನುವಷ್ಟು ಗೂಢಾಚಾರಿಕೆ ನಡೆಸಿತ್ತು ಎನ್ನುವುದನ್ನು ಸಾಬೀತು ಪಡಿಸುತ್ತದೆ! ನೆಹರೂ, ಭವ್ಯ ಭಾರತದ ಮೊದಲನೇ ಪ್ರಧಾನಿಯಾಗಿ ಯಾವಾಗ ೧೬ ರಿಂದ ೨೦ ವರ್ಷಗಳ ಕಾಲ ಭಾರತವನ್ನು ಆಳಿದರೋ, ಆಗ ಸುಭಾಷರ ಮನೆಯ ಪ್ರತಿದಿನದ ವರದಿಗಳು ಗುಪ್ತಚರ ಇಲಾಖೆಯಿಂದ ನೇರವಾಗಿ ಹೋಗುತ್ತಿದ್ದದ್ದು ನೆಹರೂವಿಗೆ!

ಬಹಿರಂಗವಾಗಿರುವ ಎರಡು ದಾಖಲೆಗಳಲ್ಲಿ, ನೆಹರೂ ಸರಕಾರ, ಥೇಟು ಬ್ರಿಟಿಷರ ಕಾಲದಲ್ಲಿ ಬೋಸರ ಮನೆಯ ಮೇಲೆ ನಡೆಸಿದ್ದ ಗೂಢಾಚಾರಿಕೆಯನ್ನೇ ಸ್ವತಂತ್ರ್ಯದ ನಂತರವೂ ಮುಂದುವರೆಸಿದ್ದರಷ್ಟೇ!! ನಮ್ಮ ಭಾರತದಲ್ಲಿ ಸ್ವತಂತ್ರ್ಯ ಪೂರ್ವಕ್ಕೂ, ಸ್ವತಂತ್ರ್ಯ ನಂತರದ ಭಾರತಕ್ಕೂ ವ್ಯತ್ಯಾಸವೇ ಇಲ್ಲ! ಯಾಕೆಂದರೆ, ಸ್ವಾತಂತ್ರ್ಯ ಪೂರ್ವಕ್ಕೂ ಬ್ರಿಟಿಷರಿಗೆ ಗುಲಾಮರಾಗಿದ್ದೆವು!! ವಿದೇಶಿಯರಿಂದ ದೌರ್ಜನ್ಯಕ್ಕೊಳಗಾಗಿದ್ದೆವು! ಕೊನೆಗೆ, ಸ್ವಾತಂತ್ರ್ಯದ ನಂತರ ಗುಲಾಮರಾಗಿದ್ದು ನೆಹರೂ ಮತ್ತು ಗಾಂಧಿಗೆ! ನಮ್ಮದೇ ಜನರಿಂದ ದೌರ್ಜನ್ಯಕ್ಕೊಳಾದೆವು! ಹೀನಾಯವಾಗಿ! ಅದೇ ಆಗಿದ್ದಲ್ಲವೇ, ರಾಷ್ಟ್ರೀಯ ನಾಯಕರಾಗಿದ್ದ ಬೋಸ್ ರವರಿಗೆ?! ಬೋಸರಿಗೆ ಪ್ರೇರಣೆ ನೀಡಿದ್ದ ಸಾವರ್ಕರ್ ಕುಟುಂಬಕ್ಕೆ?!

ಬಿಡಿ!! ಕಲ್ಕತ್ತಾದಲ್ಲಿದ್ದ (೧ ವುಡ್ ಬರ್ನ್ ಪಾರ್ಕ್, ೩೮/೨ ಎಲ್ಗಿನ್ ರಸ್ತೆ) ಬೋಸರ ಮನೆಯ ಮೇಲೆ ಅದೆಷ್ಟು ಗೂಢಾಚಾರಿಕೆ ನಡೆಸಿತ್ತೆಂದರೆ, ಪ್ರತಿ ದಿನವೂ ಸಹ ಗುಪ್ತಚರ ಇಲಾಖೆ, ಬೋಸರ ಮನೆಯ ಪ್ರತಿ ಸದಸ್ಯರ ಹಿಂದೆ ಗಸ್ತು ತಿರುಗುತ್ತಿತ್ತು! ಬೋಸರ ಮನೆಯ ಮೇಲೆ ಕಣ್ಗಾವಲಿಡಲು, ವಿಶೇಷ ಪಡೆಯನ್ನೂ ನೇಮಿಸಲಾಗಿತ್ತು! ಬೋಸರ ಮನೆಗೆ ಬರುವಂತಹ ಪತ್ರಗಳು, ಬೋಸರ ಸದಸ್ಯರ ಪ್ರಯಾಣದ ಮಾಹಿತಿಗಳು, ಭೇಟಿ,. ಹೀಗೆ ಪ್ರತಿಯೊಂದರ ಬಗ್ಗೆಗೂ ಮಾಹಿತಿ ಕಲೆ ಹಾಕುತ್ತಿದ್ದ ಗುಪ್ತಚರ ಇಲಾಖೆ, ಬೋಸರ ಮನೆಗೆ ಬಂದ ಪತ್ರಗಳನ್ನು ನಕಲು ತೆಗೆದು ನೆಹರೂವಿಗೆ ರವಾನಿಸುತ್ತಿತ್ತು!! ಪತ್ರದಲ್ಲಿ ರಹಸ್ಯ ಮಾಹಿತಿಗಳೇನಾದರೂ ಇವೆಯೇ ಎನ್ನುವುದರ ಬಗ್ಗೆ ದಿನಗಟ್ಟಲೇ ತಯಾರಿ ನಡೆಸುತ್ತಿತ್ತು! ಪ್ರತಿದಿನದ ವರದಿಗಳು ಚಾಚೂ ತಪ್ಪದೇ ಚಾಚಾನ ಟೇಬಲ್ಲಿಗೆ ಹೋಗಿ ಕೂರುತ್ತಿತ್ತು!! ಅಕಸ್ಮಾತ್, ದೂರವಾಣಿ ಕರೆಯನ್ನೂ ಕದ್ದಾಲಿಸುತ್ತಿದ್ದ ಗುಪ್ತಚರ ಇಲಾಖೆ, ಒಂದೂ ಮಾತನ್ನು ಬಿಡದೇ ಬರೆದುಕೊಳ್ಳುತ್ತಿತ್ತೆಂದರೆ ಊಹಿಸಿ!! ಬೋಸರ ಕುಟುಂಬ ಅದೆಷ್ಟು ಹಿಂಸೆಯನ್ನು ಅನುಭವಿಸಿರಬಹುದು?! ಅದೂ ಸಹ, ಸ್ವತಂತ್ರ್ಯ ಭಾರತದಲ್ಲಿ?!

Subhas Chandra Bose

ಅದ್ಯಾಕೋ!! ಗುಪ್ತಚರ ಇಲಾಖೆ, ಅತಿರೇಕವೆನ್ನುವಷ್ಟು ಹಿಂಬಾಲಿಸಿದ್ದು ಬೋಸರ ಸೋದರ ಸಂಬಂಧಿಗಳಾದ ಶಿಶಿರ್ ಕುಮಾರ್ ಬೋಸ್ ಮತ್ತು ಅಮಿಯಾ ನಾಥ್ ಬೋಸ್ ರನ್ನು!! ದಾಖಲೆಗಳಲ್ಲಿ, ಯಾವ ಕಾರಣಕ್ಕಾಗಿ, ಇವರಿಬ್ಬರನ್ನು ಗುಪ್ತಚರ ಇಲಾಖೆ ಅತಿರೇಕವೆನ್ನುವಷ್ಟು ಹಿಂಸಿಸಿತ್ತು ಎನ್ನುವುದರ ಬಗ್ಗೆ ಕಾರಣವಿಲ್ಲವಾದರೂ ಸಹ, ದಾಖಲೆಗಳಲ್ಲಿ ಹೆಚ್ಚು ಉಲ್ಲೇಖವಾಗಿರುವುದು ಇವರಿಬ್ಬರ ಹೆಸರೇ!! ಶರತ್ ಚಂದ್ರ ಬೋಸರ ಮಕ್ಕಳಾದ ಇವರಿಬ್ಬರೂ ಸಹ, ಎರಡು ದಶಕಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೂ ಸಹ, ಸುಭಾಷ್ ಚಂದ್ರ ಬೋಸರಿಗೆ ಬಹಳ ಆತ್ಮೀಯರೂ ಸಹ! ಅದಲ್ಲದೇ, ನೇತಾಜಿಯ ಹೆಂಡತಿಯಾಗಿದ್ದ ಎಮಿಲಿ ಶೆಂಕ್ಲ್ ಳಿಗೂ ಸಹ ಪತ್ರಮುಖೇನ ಸಂಭಾಷಣೆ ನಡೆಸುತ್ತಿದ್ದರು! ಅದಷ್ಟೂ ಸಹ, ನೆಹರೂವಿನ ಬಳಿ ಹೋಗುತ್ತಿತ್ತು! ಆಸ್ಟ್ರಿಯಾದಿಂದ ಎಮಿಲಿ ಕಳುಹಿಸಿದ ಪ್ರತ್ಯುತ್ತರಗಳ ನಕಲು ಪ್ರತಿ ಮೊದಲು ತಲುಪುತ್ತಿದ್ದದ್ದು ನೆಹರೂವಿನ ಕಚೇರಿಗೆ! ನಂತರ, ಬೋಸರ ಕುಟುಂಬಕ್ಕೆ!
ಸ್ವತಃ , ಬೋಸ್ ಕುಟುಂಬಕ್ಕೂ ಸಹ ತಮ್ಮ ಮೇಲೆ ಈ ಮಟ್ಟದ ಗೂಢಾಚಾರಿಕೆಯನ್ನು ಕಾಂಗ್ರೆಸ್ ನಡೆಸಿತ್ತು ಎನ್ನುವುದಾಗಲಿ, ತಮ್ಮ ಕುಟುಂಬದ ಮೇಕೆ ಗೂಢಾಚಾರಿಕೆ ನಡೆಸಲು ಹುಕುಂ ಕೊಟ್ಟಿದ್ದು ನೆಹರೂವೆಂದಾಗಲಿ, ಗೊತ್ತಿರಲೇ ಇಲ್ಲ!! ಆದರೆ, ಅದೆಷ್ಟೋ ದಶಕಗಳು ಕಳೆದ ಮೇಲೆ, ಯಾವಾಗ ಈ ದಾಖಲೆಗಳೆಲ್ಲ ನೆಹರೂವಿನ ಕರಾಳ ಮುಖವೊಂದು ಬೆತ್ತಲೆಯಾಗಿತ್ತೋ, ಸುಭಾಷರ ಕುಟುಂಬ ಆಘಾತಕ್ಕೊಳಗಾಗಿ ಹೋಗಿತ್ತು!

Woodburn Park, Netaji’s house

ಅದಕ್ಕೇ, ಸೋದರಳಿಯ ಚಂದ್ರ ಶೇಖರ್ ಬೋಸ್ ಹೇಳಿದ್ದರು!! “ಅಪರಾಧ ಮಾಡಿದವರ ಮೇಲೆ ಅಥವಾ, ಭಯೋತ್ಪಾದಕ ಸಂಪರ್ಕಗಳನ್ನು ಹೊಂದಿರುವವರ ಮೇಲೆ ಮಾತ್ರ ಈ ಮಟ್ಟದ ಕಣ್ಗಾವಲು, ಗೂಢಾಚಾರಿಕೆ ನಡೆಸಲಾಗುತ್ತದೆ! ಆದರೆ, ಸುಭಾಷ್ ಬಾಬು ಭಾರತ ದೇಶಕ್ಕೋಸ್ಕರ ಹೋರಾಡಿದವರು! ಅಂತಹವರನ್ನು, ಅಥವಾ ಅವರ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸುವ ಕಾರಣವಾದರೂ ಏನಿತ್ತು?!

“Surveillance is conducted on those who have committed a crime or have terror links. Subhas babu and his family fought for India’s freedom; why should be they placed under surveillance?”

– Grand-nephew Chandra Kumar Bose, a Kolkata-based businessman.

ಜರ್ಮನಿಯಲ್ಲಿರುವ ನೇತಾಜಿಯ ಒಬ್ಬಳೇ ಮಗಳಾದ ಅನಿತಾ ಬೋಸ್ ಫಿಫ್ಫ್ ಈ ಗೂಢಾಚಾರಿಕೆ ಬಹಿರಂಗವಾದ ಕೂಡಲೇ, ನೇರವಾಗಿ ಪ್ರಶ್ನಿಸಿದ್ದರು!!
“ನನ್ನ ಚಿಕ್ಕಪ್ಪ ಶರತ್ ಚಂದ್ರ ಬೋಸ್ ೧೯೫೦ ರ ವರೆಗೂ ಸಹ, ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು! ಮತ್ತು, ಕೊನೆಗೆ ಕಾಂಗ್ರೆಸ್ ನ ನಾಯಕತ್ವವನ್ನು
ಕಾರಣಾಂತರಗಳಿಂದ ಧಿಕ್ಕರಿಸಿದರು! ಆದರೆ, ನನಗೆ ಆಶ್ಚರ್ಯವಾಗುವುದೇನೆಂದರೆ, ನನ್ನ ಸೋದರ ಸಂಬಂಧಿಗಳ ಮೇಲೂ ಗೂಢಾಚಾರಿಕೆ ನಡೆಸಬಹುದೇ ಎಂಬುದು! ಇದು ಹೇಗೆ ಸಾಧ್ಯ?! ”

“My uncle (Sarat Chandra) was politically active until the 1950s and disagreed with the Congress leadership. But what surprises me is that my cousins could have been under surveillance? they had no security implications at all,”

–  Anita Bose-Pfaff  (Netaji’s only child)

ಬಿಡಿ! ಸ್ವತಃ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಅಶೋಕ್ ಕುಮಾರ್ ಗಂಗೂಲಿಯೇ ನೆಹರೂವಿಮ ನಡೆಯನ್ನು
ವಿರೋಧಿಸಿದ್ದರು! ” ಈ ದಾಖಲೆಗಳೆಲ್ಲವೂ, ಬೋಸ್ ಮತ್ತು ಅವರ ಕುಟುಂಬದ ಮೇಲಾದ ಗೂಢಾಚಾರಿಕೆ ಯಾವ ಮಟ್ಟದಲ್ಲಾಗಿದೆ ಎಂಬುದನ್ನು ತೋರಿಸುತ್ತದೆ ಅಷ್ಟೇ! ತೀರಾ ಆಘಾತವೇನೆಂದರೆ, ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತಹ ಮಹಾ ನಾಯಕರ ಮೇಲೆ, ಸ್ವತಂತ್ರ್ಯ ಭಾರತದ ಸರಕಾರವು ಹೀನಾಯವಾದಂತಹ ನಿರ್ಧಾರ ತೆಗೆದುಕೊಂಡಿದ್ದು!! ಒಬ್ಬ ದೇಶಭಕ್ತನ ವಿರುದ್ಧವೇ ಸ್ವತಂತ್ರ್ಯ ಭಾರತ ಸರಕಾರವು ನಿಂತಿದ್ದು ಅಪರಾಧ! ”

“The documents show the intensity of the bias against Netaji and his family. More shockingly, the bias is by a government of independent India against a man who sacrificed everything for the country.”

– Former Supreme Court judge Asok Kumar Ganguly,

ಹಾಗಾದರೆ, ಅಷ್ಟಕ್ಕೂ ಬೋಸರ ಮನೆಯ ಮೇಲೆ ಆ ರೀತಿಯಾದಂತಹ ಕಣ್ಗಾವಲು ನಡೆಸಿದ್ದೇಕೆ ನೆಹರೂ ಸರಕಾರ?! ದ್ವೇಷವೋ?! ಹೆದರಿಕೆಯೋ?! ಅಥವಾ, ನೆಹರೂ ಬಗ್ಗೆ ಏನಾದರೂ ರಹಸ್ಯ ದಾಖಲೆಗಳು ಬೋಸರಿಗೆ ಸಿಕ್ಕಿತ್ತೇ?! ಸತತ ೨೦ ವರ್ಷಗಳ ಕಾಲ ಬೋಸರ ಮನೆಯ ಮೇಲೆ ಗೂಢಾಚಾರಿಕೆ ನಡೆಸಿದ್ದ ನೆಹರೂ ಮತ್ತು ಕಾಂಗ್ರೆಸ್ಸಿಗೆ ಇದ್ದದ್ದು ಒಂದೇ ಕಾರಣ!!

“ಬೋಸರ ಮರು ಆಗಮನಕ್ಕೆ ಹೆದರಿತ್ತು ಕಾಂಗ್ರೆಸ್!!”

ಬರಹಗಾರರು ಮತ್ತು ಭಾರತೀಯ ಜನತಾ ಪಕ್ಷದ ವಕ್ತಾರರಾದ ಎಮ್ ಜೆ ಅಕ್ಬರ್ ಹೇಳುವ ಪ್ರಕಾರ, ನೆಹರೂ ಮತ್ತು ಕಾಂಗ್ರೆಸ್ ಗೆ ಬೋಸ್ ಕುಟುಂಬದ ಮೇಲೆ, ಇಷ್ಟು ವರ್ಷಗಳ ಕಾಲ ಕಣ್ಗಾವಲು ನಡೆಸುವುದಕ್ಕೆ ಇದ್ದದ್ದು ಒಂದೇ ಕಾರಣ! ಅದೂ ಸಹ, ರಾಜಕೀಯವಾಗಿದ್ದಂತಹ ಬಲವಾದ ಕಾರಣ!

ಮೊದಲನೆಯದಾಗಿ, ಭಾರತ ಸರಕಾರಕ್ಕೆ ಬೋಸರು ಸತ್ತಿದ್ದಾರೋ ಇಲ್ಲವೋ ಎಂಬ ಮಾಹಿತಿಯೇ ಖಚಿತವಾಗಿರಲಿಲ್ಲ! ಅಕಸ್ಮಾತ್, ಇನ್ನೂ
ಬದುಕಿದ್ದಿದ್ದರೂ, ತಮ್ಮ ಕುಟುಂಬವನ್ನು ಸಂಪರ್ಕಿಸದೇ ಬಿಡುತ್ತಿರಲಿಲ್ಲ ಬೋಸ್! ಯಾವುದಾದರೂ ಮಾರ್ಗದಲ್ಲಿ, ಖಚಿತವಾಗಿ ಕುಟುಂಬವನ್ನು ಭೇಟಿಯಾಗುತ್ತಿದ್ದರು ಬೋಸ್! ಆದರೆ, ಇದರಿಂದ ಕಾಂಗ್ರೆಸ್ ಗ್ಯಾಕೆ ನಷ್ಟವಾಗುತ್ತಿತ್ತು?! ಯಾಕಷ್ಟು ಆತಂಕಕ್ಕೊಳಗಾಗಿತ್ತು ನೆಹರೂ ಸರಕಾರ?! ವಿಷಯ ಇಷ್ಟೇ!! ನೆಹರೂವಿಗಿಂತ, ಅಥವಾ ಅವತ್ತಿನ ಭಾರತದಲ್ಲಿ ಬೋಸರಷ್ಟು ವರ್ಚಸ್ವಿಯಾದ ನಾಯಕರು ಇದ್ದರೂ ಸಹ, ರಾಜಕೀಯದಿಂದ ದೂರ ಸರಿದಿದ್ದರು! ಅದಲ್ಲದೇ, ಬೋಸರ ಆಗಮನಕ್ಕೆ ಭಾರತ ಎದ್ದು ನಿಂತು ಕಾಯುತ್ತಲಿತ್ತು! ಕಾಂಗ್ರೆಸ್ ಅಥವಾ, ವಿರೋಧ ಪಕ್ಷಗಳಿಗೆ ವಿರುದ್ಧವಾಗಿ ಒಂದು ಪಕ್ಷವನ್ನು ಕಟ್ಟಿದ್ದರೂ ಸಹ, ಕಾಂಗ್ರೆಸ್ ೧೯೫೭ ರ ಚುನಾವಣೆಯಲ್ಲಿಯೇ ಮಕಾಡೆ ಮಲಗುತ್ತಿತ್ತು! ಇಡೀ ಭಾರತವನ್ನು ಒಂದು ರಾಜಕೀಯ ನೆಲೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯವಿದ್ದದ್ದು ಬೋಸರಿಗೆ ಮಾತ್ರ! ಬೋಸ್ ಜೀವಂತವಾಗಿದ್ದಿದ್ದರೆ, ಸಾರ್ವತ್ರಿಕ ಚುನಾವಣೆಯಲ್ಲಿಯೂ ಸಹ, ಕಾಂಗ್ರೆಸ್ ಸೋಲಿನ ರುಚಿ ಕಾಣುವ ಭಯವಿತ್ತು! ಅದೊಂದೇ ಕಾರಣವಿದ್ದಿರ ಬಹುದಾದರೂ ಸಹ, ಬೋಸರ ಆಗಮನಕ್ಕೆ ನೆಹರೂ ತಯಾರಿರಲಿಲ್ಲ! ಅಥವಾ, ಬಂದರೂ ಸಹ ನೆಹರೂ ಬೋಸರನ್ನು , ಉಳಿಸುತ್ತಿದ್ದರೋ ಇಲ್ಲವೋ! “

ಗುಪ್ತಚರ ಇಲಾಖೆಯ ಈ ರಹಸ್ಯ ದಾಖಲೆಗಳನ್ನು ಇನ್ನೂ ಸಹ ಪಶ್ಚಿಮ ಬಂಗಾಳ ಸರಕಾರ ತನ್ನ ಅಧೀನದಲ್ಲಿರಿಸಿಕೊಂಡಿದೆ. ಅದಲ್ಲದೇ, ಈ ದಾಖಲೆಗಳೆಲ್ಲವನ್ನೂ ಸಹ ಯಾವುದೇ ಕಾರಣಕ್ಕೂ ಕೂಡ ಬಹಿರಂಗಪಡಿಸಬಾರದೆಂದು ಆಜ್ಞೆಯನ್ನೂ ಪಾಲಿಸಿದ್ದ ಪಶ್ಚಿಮ ಬಂಗಾಳ ಸರಕಾರ ಅದೆಷ್ಟೋ ದಶಕಗಳ ವರೆಗೂ ಸಹ, ಹಾಗೆಯೇ ಇಟ್ಟುಕೊಂಡಿದೆ!

The government was not sure whether Bose was dead, and thought that if he were alive he would be in some form of communication with his family in Calcutta. But why would the Congress be apprehensive? The nation, after all, would have welcomed Bose’s return. But that exactly was the reason for its apprehension. Bose was the only charismatic leader who could
have mobilised Opposition unity against Congress, and offered it a serious challenge in the 1957 elections. It is safe to say that if Bose were alive, the coalition that defeated the Congress in 1977 would have trounced it in the 1962 general elections, ie 15 years sooner.”

– M.J. Akbar, author and BJP national spokesperson.

ಇಂಡಿಯಾಸ್ ಬಿಗ್ಗೆಸ್ಟ್ ಕವರ್ ಅಪ್ ಬರೆದ ಅನುಜ್ ಧಾರ್, ಮೊದಲ ಬಾರಿಗೆ ನ್ಯಾಷನಲ್ ಆರ್ಕೈವ್ಸ್ ನಲ್ಲಿ ಈ ದಾಖಲೆಗಳನ್ನು ಕಂಡು ಹಿಡಿದರಷ್ಟೇ! ಸ್ವತಃ ಅವರೇ ಹೇಳುವ ಪ್ರಕಾರ, ನೇತಾಗೆ ಸಂಬಂಧ ಪಟ್ಟ ಈ ದಾಖಲೆಗಳು ಬಹಿರಂಗವಾಗಿರುವುದು ಉದ್ದೇಶಪೂರ್ವಕವಾಗಿಯಲ್ಲವಾದರೂ ಸಹ, ದೇಶದಲ್ಲಿ ಹೊಸ ಅಲೆ ಸೃಷ್ಟಿಸಿದೆ ಎಂದಿರುವ ಅನುಜ್, “೧೯೭೧ ರಲ್ಲಿ, ಶ್ರೀಮತಿ ಗಾಂಧಿ ಅವರಿಗೆ ಸಂಬಂಧಿಸಿದ , ಸಿಐಎ ವರ್ಗೀಕರಿಸಿದ್ದ ದಾಖಲೆಗಳನ್ನು ರಾಜ್ಯ ಇಲಾಖೆ ಗೊತ್ತಿಲ್ಲದೇ ಬಹಿರಂಗ ಪಡಿಸಿತ್ತು” ಎನ್ನುತ್ತಾರೆ!

೧೯೩೯ ರಲ್ಲಿ ಐಎನ್ ಸಿಯ ಅಧ್ಕ್ಷರಾಗಿದ್ದ ಬೋಸ್, ಕಾಂಗ್ರೆಸ್ ಅನ್ನು ತೊರೆದಿದ್ದು ನೆಹರೂ ಮತ್ತು ಗಾಂಧಿಯ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮತ್ತು,
ರಾಜಕೀಯ ಸಿದ್ದಾಂತಗಳಿಂದ ! ಆಗಲೇ, ಬೋಸ್ ರಿಗೆ ಬದುಕಿನ ಉಳಿವಿನ ಪ್ರಶ್ನೆ!! ಜೊತೆಗೆ ದೇಶದ ಐಕ್ಯತೆ ಮತ್ತು ಸ್ವಾತಂತ್ರಯದ ಪ್ರಶ್ನೆ!! ಸರಿಯಾಗಿ, ಸಾವರ್ಕರ್ ಸಿಕ್ಕರು! ದೇಹದಲ್ಲಿ ಮಿಂಚಿನ ಸಂಚಾರ! ಹೆಚ್ಚು ಯೋಚಿಸಲೇ ಇಲ್ಲ ನೇತಾ! ಸೀದಾ ಹಿಟ್ಲರನನ್ನು ಭೇಟಿಯಾಗಲು ಜರ್ಮನಿಗೆ ನಡೆದರು! ಅಲ್ಲಿಂದ, ಜಪಾನ್! ಜಪಾನಿನಲ್ಲಿ, ೪೦೦೦೦ ತರಬೇತಿ ಹೊಂದಿದ ನಿಪುಣ ಯೋಧರ ಸೈನ್ಯವನ್ನು ಕಟ್ಟಿದ ಸುಭಾಷ್ ಚಂದ್ರ ಬೋಸ್, ೧೮೫೭ ರ ನಂತರ ಮೊದಲನೇ ಬಾರಿಗೆ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಲ್ಲಬಂತಹ ಸೈನ್ಯ ಕಟ್ಟಿದ್ದರು! ಆದರೆ, ಜಪಾನ್ ತನ್ನ ವಿರೋಧಿಗಳಿಗೆ ಶರಣಾಗುವ ಮೂರು ದಿನಗಳ ಹಿಂದೆ ಅಂದರೆ, ಆಗಸ್ಟ್ ೧೮,೧೯೪೫ ರಲ್ಲಿ ತೈವಾನ್ ನಲ್ಲಿ ನಡೆದ ನಿಗೂಢ ವಾಯು ಪರೀಕ್ಷೆಯಲ್ಲಿ ಮೃತರಾದರು ಎಂದೇ ಭಾವಿಸಲಾಗಿತ್ತು!!

“There have been such cases in the US where documents classified by the CIA, like the mole in Mrs Gandhi’s cabinet in 1971, were declassified by the state department.”

– Anuj Dhar, the author of ‘India’s Biggest Cover-Up’

ಅಚ್ಚರಿಯೆಂದರೆ, ಬೋಸ್ ರ ಕಣ್ಮರೆಗೆ ಸಂಬಂಧ ಪಟ್ಟಂತೆ, ಇದುವರೆಗೂ ಸಹ ೧೫೦ ಕಡತಗಳು, ಪ್ರಧಾನಿಯ ಕಚೇರಿ, ಗುಪ್ತಚರ ಇಲಾಖೆಗಳಲ್ಲಿ, ಗೃಹ ಸಚಿವಾಲಯದಲ್ಲಿ, ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ರಕ್ಷಿಸಲ್ಪಟ್ಟಿದೆಯಾದರೂ ಸಹ, ಇಲ್ಲಿಯವರೆಗೂ ಯಾವುದೇ ರೀತಿಯ ದಾಖಲೆಗಳನ್ನು ಬಹಿರಂಗಪಡಿಸಲಿಲ್ಲ!

ಯಾವಾಗ ಸಾರ್ವಜನಿಕರು ನೇತಾಜಿಗೆ ಸಂಬಂಧಪಟ್ಟಂತಹ ದಾಖಲೆಗಳನ್ನು ಬಹಿರಂಗಪಡಿಸಲು ಒತ್ತಡ ಹೇರಿತೋ, ೨೦೧೪ ರ ಡಿಸೆಂಬರ್ ೧೭ ರಂದು ಬರೆದ ಲಿಖಿತ ಉತ್ತರದಲ್ಲಿ ಕೇಂದ್ರ ಸರಕಾರದ ಗೃಹ ಸಚಿವರಾಗಿದ್ದ ಹರಿಭಾಯ್ ಚೌಧರಿ ರಾಜ್ಯಸಭೆಗೆ ಅರಿಕೆ ಮಾಡಿದ್ದಿಷ್ಟೇ!! “ನೇತಾಜಿ ಗೆ ಸಂಬಂಧಪಟ್ಟ ಕಡತಗಳನ್ನು ಬಹಿರಂಗಪಡಸುವುದರಿಂದ, ಭಾರತದ ವಿದೇಶಿ ದೇಶಗಳ ಸ್ನೇಹ ಸಂಬಂಧಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದ್ದು, ಬಹಿರಂಗಪಡಿಸಲು ಸಾಧ್ಯವಿಲ್ಲ!”

In a written reply on December 17, 2014, Union Minister of State for Home Haribhai Parthibai Chaudhary told the Rajya Sabha that the de -classification of ‘Netaji Files’ would impact India’s relations with friendly foreign countries.

ಆದರೆ, ಬೋಸ್ ಕುಟುಂಬ ಮಾತ್ರ, ಬೋಸ್ ಗೆ ಸಂಬಂಧಪಟ್ಟ ಕಡತಗಳನ್ನು ಅವರಿಗಾದರೂ ಬಹಿರಂಗಪಡಿಸುವಂತೆ ಕೋರಿದೆಯಾದರೂ, ಇನ್ನೂ ಬಹಿರಂಗಪಡಿಸದ ಸರಕಾರ ಇಷ್ಟು ಹಿಂಜರಿಯುತ್ತಿದೆ ಎಂದಾದರೆ ಬೋಸರಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅದೆಷ್ಟು ಮಹತ್ತರವಾದ ಗುಪ್ತ ಮಾಹಿತಿಯಿರಬಹುದು?! ಕಲ್ಪಿಸಿಕೊಳ್ಳಿ! ಇಲ್ಲಿಯವರೆಗೂ, ಯಾವ ಸರಕಾರವೂ ಸಹ ನೇತಾಜಿಯವರ ಕಡತಗಳನ್ನು ಬಿಡುಗಡೆ ಮಾಡಲು ಒಪ್ಪುವುದೇ ಇಲ್ಲವೆಂದಾದರೆ, ನೇತಾಜಿ ಸಾವು, ಅನುಮಾನ, ಬದುಕು ಮತ್ತು ಅವತ್ತಿನ ನೆಹರೂ!! ತದನಂತರದ ಇಂದಿರಾ ಗಾಂಧಿ!! ಅವೆಲ್ಲವೂ ಸೇರಿ ಭಾರತ!! ಏನಿರಬಹುದು ದಾಖಲೆಗಳಲ್ಲಿ! ಊಹಿಸಿ! ಅಕಸ್ಮಾತ್, ಕಡತಗಳು ಬಿಡುಗಡೆಯಾಗಿದ್ದೇ ಆದರೆ, ಇಡೀ ಭಾರತ ಒಮ್ಮೆ ಅದುರುವುದಂತೂ ಖಚಿತವಷ್ಟೇ!!

Subhas Chandra Bose

– ತಪಸ್ವಿ

Tags

Related Articles

Close