ಪ್ರಚಲಿತ

ಸಮೃದ್ಧ ದೇಶ ನಿರ್ಮಾಣಕ್ಕೆ ಮತ ಚಲಾಯಿಸಲು ಜೆ.ಪಿ. ನಡ್ಡಾ ಮನವಿ

ದೇಶದಲ್ಲಿ ಇಂದು ಲೋಕಸಭಾ ಚುನಾವಣಾ ಹಬ್ಬದ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ದೇಶದ ಜನರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಬರೆಯಲು ಮತದಾನ ಮಾಡುತ್ತಿದ್ದಾರೆ.

ಈ ಮೊದಲ ಹಂತದ ಚುನಾವಣೆಯ ಸಂದರ್ಭದಲ್ಲಿ ಮಾತನಾಡಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು, ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾರರು ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣದ ವಿರುದ್ಧ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವಾಗಿದೆ. ಈ ಮಹಾರಥೋತ್ಸವದಲ್ಲಿ ಎಲ್ಲಾ ಮತದಾರರು ಭಾಗವಹಿಸಬೇಕು. ಇದು ನನ್ನ ವಿನಮ್ರ ವಿನಂತಿಯಾಗಿದೆ. ಪ್ರತಿಖೋರ್ವ ಮತದಾರರೂ ತುಷ್ಟೀಕರಣದ ವಿರುದ್ಧ ಮತ ನೀಡಬೇಕು. ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಗೆ ಮತದಾರರು ಶಕ್ತಿ ತುಂಬುತ್ತಾರೆ ಎಂದು ನಾನು ನಂಬಿಕೆ ಇಡುತ್ತೇನೆ ಎಂದು ಅವರು ಹೇಳಿದ್ದಾರೆ.

ನೀವು ನೀಡುವ ಪ್ರತಿ ಮತವೂ ದೇಶದ ಹಳ್ಳಿ ಹಳ್ಳಿಗಳನ್ನು ಬಲಪಡಿಸುತ್ತದೆ. ದೇಶದ ಮಹಿಳೆಯರಿಗೆ ಶಕ್ತಿ ತುಂಬಿ, ಅವರನ್ನು ಸಬಲರನ್ನಾಗಿ ಮಾಡುತ್ತದೆ. ಯುವ ಜನರ ಆಸೆ ಆಕಾಂಕ್ಷೆಗಳಿಗೆ ರೆಕ್ಕೆ ತುಂಬುತ್ತದೆ. ರೈತರಿಗೆ ಘನತೆ, ಗೌರವದಿಂದ ಬದುಕು ನಡೆಸಲು, ಮುನ್ನಡೆಯಲು ಕೊಡುಗೆ ನೀಡುತ್ತದೆ ಎನ್ನುವುದು ನನಗೆ ತಿಳಿದಿದೆ. ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿಮ್ಮ ಪ್ರತಿಯೊಂದು ಮತವೂ ಬಹಳ ಮುಖ್ಯವಾಗುತ್ತದೆ ಎಂದು ಅವರು ನುಡಿದಿದ್ದಾರೆ.

ಭಾರತವನ್ನು ಸುರಕ್ಷಿತವನ್ನಾಗಿ ಮಾಡಲು, ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ನಾವು ಸಂಕಲ್ಪ ಹೊಂದಿದ್ದೇವೆ. ಈ ಸಂಕಲ್ಪವನ್ನು ಈಡೇರಿಸಲು ನೀವೆಲ್ಲರೂ ಮತ ಚಲಾಯಿಸುತ್ತೀರಿ ಎನ್ನುವುದು ನಮ್ಮ ನಂಬಿಕೆ. ಈ ಚುನಾವಣೆಯಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯಾವಾಗಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close