ಪ್ರಚಲಿತ

ನಮಗೆ ಹಣ ಬೇಡ, ಅಕ್ಕಿ ಕೊಡಿ: ಕೈ ಸರ್ಕಾರಕ್ಕೆ ಬಡ ಜನರ ಮನವಿ

ಉಚಿತ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ, ಜನರನ್ನು ಮರುಳು ಮಾಡಿ ರಚನೆಯಾದ ಸರ್ಕಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರ. ಸದ್ಯ ನೀಡಿದ ಭರವಸೆಗಳಿಗೆ ಸಾವಿರ ಷರತ್ತುಗಳನ್ನು ಹಾಕಿ, ಆ ಬಳಿಕವೂ ನೀಡಿದ ಭರವಸೆ ಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕದ ಕೈ ಸರ್ಕಾರ ಸೋತ ವಿಚಾರ ಎಲ್ಲರಿಗೂ ತಿಳಿದಿದೆ.

ಒಂದು ಕಡೆಯಲ್ಲಿ ರಾಜ್ಯದ ಎಲ್ಲಾ ವರ್ಗದ ಜನರನ್ನು, ಎಲ್ಲಾ ಮತ ಧರ್ಮಗಳ ಜನರನ್ನು ಸಮ ಭಾವದಿಂದ ಕಾಣುವಲ್ಲಿ ಎಡವಿರುವ ಸರ್ಕಾರ, ಜನರ ದೈನಂದಿನ ಅವಶ್ಯಕತೆಗಳನ್ನು ಸಹ ಸರಿಯಾಗಿ ಒದಗಿಸಿ‌ಕೊಡುವಲ್ಲಿ ‌ವಿಫಲವಾಗಿದೆ. ಈಗ ಕಾಂಗ್ರೆಸ್‌ ಪಕ್ಷದ ಪೊಳ್ಳು ಆಶ್ವಾಸನೆಗಳಿಗೆ ಮಣೆ ಹಾಕಿ, ಮತ‌ ನೀಡಿದ ಜನರು ಕೈ ನಾಯಕರನ್ನು ಪ್ರಶ್ನೆ ಮಾಡುವಂತಾಗಿದೆ ಎನ್ನುವುದು ಸತ್ಯ.

ನಾವು ಗೆದ್ದು ಸರ್ಕಾರ ರಚನೆ ಮಾಡಿದರೆ ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್, ಅಕ್ಕಿ ನೀಡದೆ ಕೇವಲ ಐದು ಕೆಜಿ ಅಕ್ಕಿ ಬೆಲೆಯನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದೆ. ಕೇಂದ್ರದ ಮೋದಿ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನು ಸಹ ತಾನು ನೀಡಿದ್ದು ಎಂಬುದಾಗಿ ಬಿಂಬಿಸಲು ಹೊರಟು ಮಾನ ಕಳೆದುಕೊಂಡದ್ದೂ ಇದೆ. ಜೊತೆಗೆ ತಾನು ಉಚಿತವಾಗಿ ನೀಡಬೇಕಾದ ಅಕ್ಕಿಯನ್ನು ಕೇಂದ್ರ ಸರ್ಕಾರ ಒದಗಿಸುತ್ತಿಲ್ಲ ಎನ್ನುವ ಮೂಲಕ ತನ್ನ ತಪ್ಪನ್ನು ಕೇಂದ್ರದ ಮೋದಿ ಸರ್ಕಾರದ ಮೇಲೆ ಹಾಕಲು ಹೋಗಿ ಛೀಮಾರಿ ಹಾಕಿಸಿಕೊಂಡದ್ದು ಕರ್ನಾಟಕದ ಜನತೆ ಮರೆತಿಲ್ಲ.

ಇಂತಹ ಗ್ಯಾರಂಟಿ ಮೂಲಕ ಬಂದ ಗ್ಯಾರಂಟಿ ಇಲ್ಲದ ಸರ್ಕಾರದ ವಿರುದ್ಧ ಜನರು ಸಿಡಿದೇಳುತ್ತಿದ್ದಾರೆ. ತುಮಕೂರಿನಲ್ಲಿ ನಡೆದ ಜನತಾ ದರ್ಶನದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದ ಹಾಗೆ ವ್ಯಕ್ತಿಯೋರ್ವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿ, ಈಗ ಅದರ ಬದಲು ಹಣ ಕೊಡುತ್ತಿದ್ದೀರಲ್ಲಾ. ನಮಗೆ ನಿಮ್ಮ ಹಣದ ಅಗತ್ಯ ಇಲ್ಲ. ಹತ್ತು ಕೆಜಿ ಅಕ್ಕಿ ನೀಡಿ. ನೀವು‌ ಕೊಡುವ‌ ಮೂರು ಕೆಜಿ ಅಕ್ಕಿ ಹೊಟ್ಟೆ ತುಂಬಲು ಸಾಲುತ್ತಿಲ್ಲ. ಹೀಗೆ ರೇ ಮುಂದುವರೆದರೆ ಮಕ್ಕಳು, ಮರಿಗಳು ಹಸಿವಿನಿಂದ ಬಳಲಬೇಕಾಗುತ್ತದೆ ಎನ್ನುವ ಮೂಲಕ ಕರ್ನಾಟಕ‌ ಸರ್ಕಾರಕ್ಕೆ ಬಡವರ ಹಸಿವಿನ ಸಮಸ್ಯೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ಬಡ ಜನರ ನೋವಿಗೆ ಸ್ರಂದಿಸದ ಕಾಂಗ್ರೆಸ್, ಅಧಿಕಾರದ ಮದದಲ್ಲಿ ತೇಲಾಡುತ್ತಿರುವುದು ದುರಂತವೇ ಸರಿ.

Tags

Related Articles

Close