ಪ್ರಚಲಿತ

ಕೋಮು ವಿಭಜನೆ ಮೂಲಕ ಓಟು ಪಡೆಯುವ ಕೇರಳ ಕಮ್ಯುನಿಸ್ಟ್ ಪಕ್ಷಕ್ಕೆ ಬಿಜೆಪಿ ತಿರುಗೇಟು

ದೇಶಭಕ್ತ ಸ್ವಯಂಸೇವಕರನ್ನು ಹೊಂದಿದ ಆರ್ ಎಸ್ ಎಸ್, ದೇಶದ ಅಭಿವೃದ್ಧಿಯ ಕನಸಿನ ಜೊತೆಗೆ ಹೆಜ್ಜೆ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದರೆ ಕಮ್ಯುನಿಸ್ಟರಿಗೆ, ಕಾಂಗ್ರೆಸ್ ಪಕ್ಷಕ್ಕೆ ಉರಿ ಎನ್ನುವುದು ಆಗಿಂದಾಗ್ಗೆ ಸಾಬೀತಾಗುತ್ತಲೇ ಇರುತ್ತದೆ.

ಕೇರಳದ ಕಮ್ಯುನಿಸ್ಟ್ ಸರ್ಕಾರ ಸಹ ಬಿಜೆಪಿ, ಆರ್ ಎಸ್ ಎಸ್ ಎಂದರೆ ಕೆಂಡ ಮುಟ್ಟಿದಂತಾಡುತ್ತದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅನುಷ್ಟಾನಕ್ಕೆ ತಂದ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಯ ವಿರುದ್ಧ ತನ್ನ ಹತಾಶೆಯನ್ನು ಹೊರಹಾಕಿದ್ದಾರೆ. ಆ ಮೂಲಕ ಅಕ್ರಮಿಗಳಿಂದ ತನಗೂ ಲಾಭ ಇತ್ತು. ಈಗ ಕೇಂದ್ರ ಸರ್ಕಾರದ ಸಿಎಎ ತನ್ನ ಲಾಭಕ್ಕೂ ಕುತ್ತು ತಂದಿತು ಎಂಬ ಸಿಟ್ಟಿನಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಹೊರಹಾಕಿರುವುದಾಗಿದೆ.

ಕಾಸರಗೋಡಿನಲ್ಲಿ ಸಿಎಎ ವಿರೋಧಿ ಸಮಾವೇಶದಲ್ಲಿ ಪಿಣರಾಯಿ ವಿಜಯನ್ ಮಾತನಾಡಿದ್ದು, ಆರೆಸ್ಸೆಸ್ ಮತ್ತು ಬಿಜೆಪಿ, ಪ್ರಧಾನಿ ಮೋದಿ ಅವರ ವಿರುದ್ಧ ಅರಚಾಟ ನಡೆಸಿದ್ದು, ಆ ಮೂಲಕ ತಮ್ಮ ನೋವನ್ನು ಹೊರಹಾಕಿರುವುದಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹಿಟ್ಲರ್, ಬೆನಿಟೊ ಮುಸೋಲೊನಿಯ ಫ್ಯಾಸಿಸಂ‌ಗೆ ಹೋಲಿಕೆ ಮಾಡಿರುವ ಪಿಣರಾಯಿ,‌ ಸಿಎಎ ಇಂದ ಸಂವಿಧಾನದಲ್ಲಿ ಹೇಳಲಾದ ಸಮಾನತೆ ಎಂಬ ಅಂಶ ನುಚ್ಚುನೂರಾಗಿದೆ ಎಂದು ಹೇಳಿದ್ದಾರೆ.

ಪಿಣರಾಯಿ ಮಾಡಿರುವ ಈ ಆರೋಪ ಗಳ ವಿರುದ್ಧ ಬಿಜೆಪಿ ಧ್ವನಿ ಎತ್ತಿದ್ದು, ಅವರು ಮಾಡಿದ ಆರೋಪಗಳಿಗೆ ಸಾಕ್ಷಿ ತೋರಿಸುವ ಹಾಗೆ ಚಾಲೆಂಜ್ ಮಾಡಿದೆ. ಆರೋಪಗಳಿಗೆ ಆಧಾರ ಏನು ಎಂದು ಕೇರಳದ ರಕ್ತಪಿಪಾಸು ‌ಕಮ್ಯುನಿಸ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಕೇರಳದ ಬಿಜೆಪಿ ನಾಯಕ ಕೆ. ಸುರೇಂದ್ರನ್ ಅವರು ಪಿಣರಾಯಿ ‌ವಿಜಯನ್ ವಿರುದ್ಧ ಆಕ್ರೋಶ‌ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳನ್ನು ಕೋಮು ವಿಭಜನೆ ಮಾಡುವ ಉದ್ದೇಶದಿಂದಲೇ ಪಿಣರಾಯಿ ನೀಡುತ್ತಿದ್ದಾರೆ. ಸಿಎಎ ಹೆಸರಿನಡಿಯಲ್ಲಿ ಸುಳ್ಳನ್ನು ಹಬ್ಬಿಸುವ ವ್ಯವಸ್ಥಿತ ಸಂಚು ಇದಾಗಿದೆ. ಕಮ್ಯುನಿಸ್ಟ್ ಸರ್ಕಾರದ ಕೋಮು ದ್ರುವೀಕರಣದ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಿಜೆಪಿ ಸೋಲಬೇಕು ಎಂದು ಸಿಎಎ ಅನ್ನು ಬಳಕೆ ಮಾಡಿ, ಆ ಕುರಿತಾಗಿ ಸುಳ್ಳು ಬಿತ್ತುವ ಕೆಲಸವಾಗುತ್ತಿದೆ. ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ, ಈ ಹಿಂದೆ ಸಿಎಎ ಹೆಸರಿನಲ್ಲಿ ಒಂದು ಸಮುದಾಯ ನಡೆಸಿದ ಹಿಂಸಾಚಾರದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಪಿಣರಾಯಿ ಸರ್ಕಾರ ಹೇಳುತ್ತಿದ್ದು, ಇದು ಓಟು ಗಿಟ್ಟಿಸಿಕೊಳ್ಳುವ ಓಲೈಕೆ ರಾಜಕಾರಣವೇ‌ ಸರಿ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಪಿಣರಾಯಿ ಮತ್ತು ಅವರ ಕಮ್ಯುನಿಸ್ಟ್ ಸರ್ಕಾರದ‌ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Tags

Related Articles

Close