ಪ್ರಚಲಿತ

ಭಾರತದ ವಿರುದ್ಧ ಕಾರ್ಯಾಚರಿಸಿದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ಗೊತ್ತಾ?

ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಸ್ನೇಹ ಬಯಸಿ ಬರುತ್ತಿವೆ.‌ ವಿಶ್ವದ ಹಲವು ರಾಷ್ಟ್ರಗಳು ತಮ್ಮಲ್ಲಿ ಏನಾದರೂ ಸಮಸ್ಯೆ ಉದ್ಭವವಾದಲ್ಲಿ, ಅದನ್ನು ಪರಿಹರಿಸಿಕೊಳ್ಳಲು ಭಾರತದ ನೆರವನ್ನು ಯಾಚಿಸುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಎಲ್ಲಾ ಪ್ರಪಂಚಕ್ಕೆ ಭಾರತದ ಶಕ್ತಿಯ ಅರಿವಾಗಿದೆ. ಭಾರತ ವಿಶ್ವ ಪ್ರಿಯ ರಾಷ್ಟ್ರವಾಗಿದೆ. ವಿಶ್ವದ ಕೆಲವು ರಾಷ್ಟ್ರಗಳನ್ನು ಹೊರತು ಪಡಿಸಿ, ಹೆಚ್ಚಿನ ದೇಶಗಳಿಗೆ ಭಾರತದ ನಾಯಕತ್ವ ಮಾದರಿ ಎನಿಸಿದೆ ಎನ್ನುವುದರಲ್ಲಿ ‌ಸಂಶಯವಿಲ್ಲ.

ಪ್ರಧಾನಿ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತಿಕ ಜಾಗತಿಕವಾಗಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಆದರೆ ಕೆಲವು ರಾಷ್ಟ್ರಗಳಿಗೆ ಭಾರತದ ಈ ಜನಪ್ರಿಯತೆಯ ವೇಗವನ್ನು ತಡೆದುಕೊಳ್ಳುವ ಶಕ್ತಿ, ಸಾಮರ್ಥ್ಯ ಇಲ್ಲದಾಗಿದೆ. ವಿನಾ ಕಾರಣ ಭಾರತದ ವಿರೋಧ ಕಟ್ಟಿಕೊಂಡು ಸಮಸ್ಯೆ ಸೃಷ್ಟಿ ಮಾಡಿಕೊಳ್ಳುತ್ತಿವೆ ಎನ್ನುವುದು ಸ್ಪಷ್ಟ.

ಅಂತಹ ರಾಷ್ಟ್ರಗಳ ಪಾಲಿಗೆ ಕೆಲ ಸಮಯದ ಹಿಂದಷ್ಟೇ ಮಾಲ್ಡೀವ್ಸ್ ಸಹ ಸೇರಿಕೊಂಡಿದೆ. ಪ್ರಧಾನಿ ಮೋದಿ ಅವರನ್ನು ಧಿಕ್ಕರಿಸಿ, ಇಡೀ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪರಿಣಾಮ ಆ ರಾಷ್ಟ್ರದ ಪ್ರವಾಸೋದ್ಯಮ, ಆರ್ಥಿಕ ಸ್ಥಿತಿಯ ಮೇಲೆಯೂ ಇದು ದುಷ್ಪರಿಣಾಮ ಬೀರಿದೆ.

ಭಾರತ ವಿರೋಧಿ ಮಾನಸಿಕತೆ ಹೊಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜಿ ವಿರುದ್ಧ ಸ್ವದೇಶದ ಜನರಿಂದಲೇ ಅಪಸ್ವರ ಕೇಳಿ ಬರಲಾರಂಭಿಸಿದೆ. ಅವರು ತಮ್ಮ ಮೊಂಡು ಹಠ ಬಿಟ್ಟು, ಭಾರತದ ಜೊತೆಗಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಮಹಮ್ಮದ್ ಸೊಲಿಹ್ ಸಹ ಮೊಯಿಜಿ ವಿರುದ್ಧ ಹೇಳಿಕೆ ನೀಡಿದ್ದು, ಮೊಂಡುತನ ಬಿಟ್ಟು, ಆರ್ಥಿಕ ಸವಾಲುಗಳನ್ನು ಪರಿಹರಿಸಿಕೊಳ್ಳುವ ‌ನಿಟ್ಟಿನಲ್ಲಿ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಮಾತುಕತೆಗೆ ಪ್ರಯತ್ನ ನಡೆಸುವಂತೆ ಸೂಚಿಸಿದ್ದಾರೆ.

ಮೊಯಿಜಿ ಚೀನಾ ದೇಶದ ಪರವಾದ ನಿಲುವನ್ನು ಹೊಂದಿದವರಾಗಿದ್ದು, ಭಾರತದ ಜೊತೆಗೆ ತನ್ನ ದ್ವೀಪ ರಾಷ್ಟ್ರಕ್ಕೆ ಸಾಲ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಇದೀಗ ಸೊಲಿಹ್ ಮಾಲ್ಡೀವ್ಸ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿರುವುದಾಗಿದೆ. ಸೊಲಿಹ್ ಅವರು ಭಾರತದ ಪರವಾದ ನಿಲುವು ಹೊಂದಿರುವ ನಾಯಕನಾಗಿದ್ದು, ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ಆಡಳಿತ ನಡೆಸುತ್ತಿರುವ ಮೊಯಿಜಿ ಭಾರತದ ಶತ್ರು ರಾಷ್ಟ್ರ ಚೀನಾ ಪರವಾದ ನಿಲುವು ಹೊಂದಿದವರಾಗಿದ್ದಾರೆ.

ಮೊಯಿಜಿ ಅವರು ತಮ್ಮ ಮೊಂಡುತನ ಬಿಡಬೇಕು. ನಮ್ಮ ನೆರೆಹೊರೆಯವರು ನಮಗೆ ನೆರವಾಗುತ್ತಾರೆ ಎನ್ನುವ ವಿಶ್ವಾಸ ನಮಗಿದೆ. ಆದ್ದರಿಂದ ನೆರೆಹೊರೆಯ ದೇಶಗಳ ಜೊತೆಗೆ ಮಾತುಕತೆಗೆ ಪ್ರಯತ್ನ ನಡೆಸಬೇಕು. ನಮಗೆ ನೆರವಾಗುವ ಹಲವು ಪಕ್ಷಗಳಿದ್ದು, ಮೊಯಿಜಿ ಅವರು ರಾಜಿ ಮಾಡಿಕೊಳ್ಳಲು ಬಯಸುತ್ತಿಲ್ಲ. ಸದ್ಯದ ಮಾಲ್ಡೀವ್ಸ್ ಪರಿಸ್ಥಿತಿಯನ್ನು ಅವರ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಚೀನಾಗೆ ಸಹಾಯ ಮಾಡಲು, ಭಾರತದ ವಿರುದ್ಧ ಕೆಲಸ ಮಾಡಿದ ಮಾಲ್ಡೀವ್ಸ್ ಪರಿಸ್ಥಿತಿ ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ಎಂದರೆ ಅತಿಶಯವಾಗದು.

Tags

Related Articles

Close