ಪ್ರಚಲಿತ

ಮೋದಿಯನ್ನು ಸೋಲಿಸಲು ವಿರೋಧಿಗಳಿಂದ ಮಾಸ್ಟರ್ ಪ್ಲಾನ್.! ಕಾಂಗ್ರೆಸ್ ರಣತಂತ್ರ ಕಂಡೂ ಕ್ಯಾರೇ ಅನ್ನದ ಕೇಂದ್ರ.! ಮಹಾಘಟಬಂಧನ್ ಭೇದಿಸಲು ಸಜ್ಜಾದ ನಮೋ.!

ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದ ಬಳಿಕ ವಿದೇಶದಲ್ಲಿ ವಿರೋಧಿಗಳ ಸಂಖ್ಯೆ ಹುಟ್ಟಿಕೊಳ್ಳುವ ಮೊದಲೇ ದೇಶದಲ್ಲಿ ಒಂದು ವಿರೋಧಿ ತಂಡ ರಚನೆಯಾಗಿತ್ತು. ಯಾಕೆಂದರೆ ಮೋದಿ ಪ್ರಧಾನಿಯಾದರೆ ತಮಗೆ ಉಳಿಗಾಲವಿಲ್ಲ ಎಂದು ಮೊದಲೇ ಅರಿತಿದ್ದ ಎಲ್ಲಾ ತೃತೀಯ ರಂಗಗಳು ಒಟ್ಟಾಗಿ ನರೇಂದ್ರ ಮೋದಿಯವರನ್ನು ವಿರೋಧಿಸಲು ಪ್ರಾರಂಭಿಸಿದವು. ಆದರೂ ನರೇಂದ್ರ ಮೋದಿ ಮಾತ್ರ ಯಾರ ಒಗ್ಗಟ್ಟಿಗೂ ಬಗ್ಗದೆ , ಅವರ ವಿರುದ್ಧ ಯಾವುದೇ ರಣತಂತ್ರ ಹೂಡದೆ ತಮ್ಮಷ್ಟಕ್ಕೇ ತಾವು ದೇಶದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಿ , ಹಂತ ಹಂತವಾಗಿ ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸಲು ಪಣತೊಟ್ಟಿದ್ದಾರೆ. ೧೦೨೪ರ ಲೋಕಸಭಾ ಚುನಾವಣೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಅದಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲಲು ತಯಾರಿ ನಡೆಸುತ್ತಿದ್ದಾರೆ. ಆದರೆ ಇತ್ತ ಕಾಂಗ್ರೆಸ್ ತನ್ನ ಎಲ್ಲಾ ಅಸ್ತಿತ್ವ ಕಳೆದುಕೊಂಡು ಮೂಲೆಗುಂಪಾಗುವ ಮುನ್ಸೂಚನೆ ಇರುವುದರಿಂದ ಮೋದಿಯವರನ್ನು ವಿರೋಧಿಸುವ ಎಲ್ಲಾ ಕಾಂಜಿಪೀಂಜಿ ಪಕ್ಷಗಳ ಕಾಲಿಗೆರಗಿ ಸಹಾಯಕ್ಕೆ ಕೈಚಾಚಿದೆ. ದೇಶವನ್ನು ೬೦ ವರ್ಷ ಆಡಳಿತ ನಡೆಸಿದ ಪಕ್ಷವೊಂದು ಇಂದು ಪ್ರಾದೇಶಿಕ ಪಕ್ಷಗಳ ಸಹಾಯ ಯಾಚಿಸಿದೆ ಎಂದರೆ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

Related image

ಬಿಜೆಪಿ ಸೋಲಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್..!

ಈಗಾಗಲೇ ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಎಲ್ಲಾ ರಾಜ್ಯಗಳನ್ನು ಕಳೆದುಕೊಂಡಿದ್ದು, ಬಿಜೆಪಿ ೨೨ ರಾಜ್ಯಗಳಲ್ಲಿ ಕೇಸರಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆ ನರೇಂದ್ರ ಮೋದಿ ಸರಕಾರಕ್ಕೆ ಮಹತ್ತರವಾದ ಘಟ್ಟವಾಗಿದ್ದು, ವಿರೋಧಿಗಳಿಗೆ ತಕ್ಕ ಉತ್ತರ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ನರೇಂದ್ರ ಮೋದಿಯವರ ವಿರೋಧಿಗಳನ್ನೆಲ್ಲಾ ಒಗ್ಗೂಡಿಸಿ ಚುನಾವಣೆ ಎದುರಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಅಖಾಡಕ್ಕಿಳಿಯದೆ, ತಮಗೆ ಗೆಲ್ಲಲು ಯಾವ ಕ್ಷೇತ್ರ ಸೂಕ್ತವಾಗಿದೆ ಎಂದು ತಿಳಿದು ಕೇವಲ ಈ ಪ್ರದೇಶಗಳಲ್ಲಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಪ್ರತೀ ರಾಜ್ಯಗಳಲ್ಲೂ ಹೀನಾಯವಾಗಿ ಸೋಲನುಭವಿಸಿದ ಪರಿಣಾಮವಾಗಿ ಕಾಂಗ್ರೆಸ್ ಕೂಡ ಒಂದು ಪ್ರಾದೇಶಿಕ ಪಕ್ಷದ ಸ್ಥಿತಿಗೆ ತಲುಪಿದೆ. ಆದ್ದರಿಂದಲೇ ಮೋದಿಯವರನ್ನು ಎದುರಿಸಲು ಸಾಧ್ಯವಾಗದೇ ಇರುವುದರಿಂದ ಆಯಾ ಕ್ಷೇತ್ರಗಳಲ್ಲಿ ಮಾತ್ರ ಕಣಕ್ಕಿಳಿಯಲಿದೆ. ಕಾಂಗ್ರೆಸ್ ಲೆಕ್ಕಾಚಾರದ ಪ್ರಕಾರ ಇದರಿಂದಾಗಿ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಈ ರೀತಿ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಲ್ಪ ಮಟ್ಟಿಗೆ ತೊಂದರೆಯಾಗಬಹುದು, ಆದರೂ ನರೇಂದ್ರ ಮೋದಿಯವರ ವರ್ಚಸ್ಸು ದಿನೇ ದಿನೇ ಹೆಚ್ಚಾಗುತ್ತಲೇ ಇರುವುದರಿಂದ, ವಿರೋಧಿಗಳ ಎಲ್ಲಾ ತಂತ್ರವೂ ನುಚ್ಚು ನೂರಾಗಲಿದೆ.!

Image result for modi crowd

ಮಹಾಘಟಬಂಧನದ ಮೂಲಕ ಚುನಾವಣೆ ಎದುರಿಸಲು ಕಾಂಗ್ರೆಸ್ ತಯಾರಿ..!

ಕರ್ನಾಟಕ ಸೇರಿದಂತೆ ಗೋರಖ್‌ಪುರ , ಫುಲ್ಲುರ್ ಹಾಗೂ ಕೈರಾನದಲ್ಲಿ ಇದೇ ರೀತಿ ಸ್ಥಳೀಯ ಪಕ್ಷಗಳ ಜೊತೆ ಸೇರಿಕೊಂಡೇ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ ಕಾಂಗ್ರೆಸ್ ಇದೀಗ ಮುಂದಿನ ಲೋಕಸಭಾ ಚುನಾವಣೆಯನ್ನು ಕೂಡ ಇದೇ ರೀತಿ ಎದುರಿಸಲು ತಯಾರಿ ನಡೆಸುತ್ತಿದೆ. ಯಾಕೆಂದರೆ ಕಾಂಗ್ರೆಸ್‌ಗೆ ಒಬ್ಬಂಟಿಯಾಗಿ ಮೋದಿಯವರನ್ನು ವಿರೋಧಿಸುವುದು ಅಸಾಧ್ಯ ಎಂಬುದು ಈಗಾಗಲೇ ಅರಿವಾಗಿದೆ. ಆದ್ದರಿಂದಲೇ ಈ ರೀತಿ ಸಣ್ಣಪುಟ್ಟ ಪಕ್ಷಗಳ ಸಹಾಯ ಬೇಡಿಕೊಂಡಿದೆ. ಕಾಂಗ್ರೆಸ್ ಯಾವುದೇ ಉಪಾಯ ಹೂಡಿದರು ಕೂಡ ನರೇಂದ್ರ ಮೋದಿ ಸರಕಾರ ಮಾತ್ರ ಕ್ಯಾರೇ ಅನ್ನದೆ ಸುಮ್ಮನಿರುವುದನ್ನು ಗಮನಿಸಿದಾಗ ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರವಾಗಿ ಮೋದಿ ಕೂಡ ಭಾರೀ ಉಪಾಯ ಒಂದನ್ನು ಹೂಡಿರುವುದು ಸ್ಪಷ್ಟ. ಯಾಕೆಂದರೆ ಕೇಂದ್ರ ಸರಕಾರ ಚುನಾವಣೆಯ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳದೆ , ದೇಶದ ಅಭಿವೃದ್ಧಿಯ ಮಂತ್ರ ಜಪಿಸಿಕೊಂಡು ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿಕೊಂಡು ಇದ್ದಾರೆ.‌ ಆದ್ದರಿಂದ ಚುನಾವಣೆಗೆ ಬೇಕಾದ ಎಲ್ಲಾ ತಯಾರಿಯನ್ನು ಮೋದಿ ಸರಕಾರ ಕೂಡ ನಡೆಸುತ್ತಿದ್ದು, ಕಾಂಗ್ರೆಸ್ ಯಾವುದೇ ತಂತ್ರ ಹೂಡಿದರು ಅದನ್ನು ವಿಫಲಗೊಳಿಸಲು ಮೋದಿ ಟೀಂ ಸಜ್ಜಾಗಿದೆ ಎಂಬುದರಲ್ಲಿ ಸಂಶಯವಿಲ್ಲ.!

Related image

ಒಬ್ಬ ನರೇಂದ್ರ ಮೋದಿಯನ್ನು ಎದುರಿಸಲು ರಾಷ್ಟ್ರೀಯ ಪಕ್ಷವೊಂದು ಪಡುತ್ತಿರುವ ಕಷ್ಟ ನೋಡಿದರೆ, ಇಂತಹ ಸ್ಥಿತಿಗೆ ತಲುಪುವಷ್ಟು ಹೀನವಾದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆಯಾ ಎಂಬ ಅನುಮಾನ ಪ್ರತಿಯೊಬ್ಬರಲ್ಲೂ ವ್ಯಕ್ತವಾಗದೇ ಇರದು. ಆದರೂ ಈಗಾಗಲೇ ಅಸ್ತಿತ್ವ ಕಳೆದುಕೊಂಡು ಪರದಾಡುತ್ತಿರುವ ಕಾಂಗ್ರೆಸ್‌ಗೆ ಸರಿಯಾಗಿ ಹೆಸರು ತಿಳಿಯದ ಸಣ್ಣಪುಟ್ಟ ಪಕ್ಷಗಳು ಕೂಡ ಸಾಥ್ ನೀಡಲು ಮುಂದಾಗಿದೆ. ಆದರೆ ಇದು ಕೇವಲ ವ್ಯರ್ಥ ಪ್ರಯತ್ನವಷ್ಟೇ, ಯಾಕೆಂದರೆ ನರೇಂದ್ರ ಮೋದಿ ಈಗಾಗಲೇ ದೇಶದ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಾಗಿದೆ..!

–ಪಿ.ಆರ್.ಶೆಟ್ಟಿ

Tags

Related Articles

Close