ಪ್ರಚಲಿತ

ಆಯುಷ್ಮಾನ್ ಭಾರತದಡಿಯಲ್ಲಿ ಅಗ್ಗ ದರದ ಚಿಕಿತ್ಸೆಗೆ ಮುಂದಾದ ಮೋದಿ ಸರಕಾರ!! ಇನ್ನು ಬಡ ಜನತೆಗಿಲ್ಲ ಆಪತ್ತು!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶದ ಪ್ರಗತಿಯಾಗಿದ್ದು ಒಂದಾ ಎರಡಾ? ಪ್ರತೀಯೊಂದು ಕ್ಷೇತ್ರದಲ್ಲಿಯೂ ಮೋದಿ ಮೋಡಿ ನಿಜವಾಗಿಯೂ  ವಿರೋಧ ಪಕ್ಷದವರನ್ನೂ ತಲ್ಲಣಗೊಳಿಸುವಂತೆ ಮಾಡುತ್ತದೆ!! ಒಂದು ಬಾರಿ ದೇಶದ ಅಭಿವೃದ್ಧಿಗಾಗಿ ದೃಢ ನಿರ್ಧಾರ ಮಾಡಿದರೆ ಆ ಕೆಲಸವಾಗದೆ ಅದನ್ನು ಬಿಡುವವರಲ್ಲ ಪ್ರಧಾನಿ ನರೇಂದ್ರ ಮೋದಿಯವರು!! ಮೋದೀಜೀ ಪ್ರಧಾನಮಂತ್ರಿಯಾದಂದಿನಿಂದ, ಅವರು ವಿವಿಧ ಅಭಿವೃದ್ಧಿಯ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ, ಅದು ಜನರ ಜೀವನದಲ್ಲಿ ಪ್ರಮುಖ ಧನಾತ್ಮಕ ಬದಲಾವಣೆಗಳನ್ನು ತಂದಿದೆ. ಮುದ್ರ, ಗ್ರಾಮೀಣ ವಿದ್ಯುದೀಕರಣ, ಉಜ್ವಲ ಯೋಜನೆ ಮುಂತಾದ ಅವರ ಕೆಲವು ಯೋಜನೆಗಳು ಕೋಟಿಗಟ್ಟಲೆ ಜನರಿಗೆ ನೇರ ಪ್ರಯೋಜನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ನೋಟ್ ಬ್ಯಾನ್ ಹಾಗೂ ಜಿಎಸ್‍ಟಿಯಂತಹ ಮಹತ್ವದ ಆದೇಶಗಳನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ಮೇಲೆ ಭರವಸೆಯ ಮಹಾಪೂರವನ್ನೇ ಜನತೆ ಇಟ್ಟುಕೊಂಡಿದ್ದಾರೆ!! ಇದನ್ನು ಹುಸಿ ಮಾಡದ ಮೋದಿ ಸರ್ಕಾರ ಭಾರೀ ಘೋಷಣೆಗಳನ್ನೇ ಬಜೆಟ್‍ನಲ್ಲಿ ಜನತೆಗೆ ಘೋಷಿಸಿದ್ದರು!! ಅಂದುಕೊಂಡಂತೆಯೇ ಮೋದಿ ಸರ್ಕಾರ ಇದೀಗ ಜನರ ಆಶೋತ್ತರಗಳನ್ನು ಈಡೇರಿಸಿದೆ!! ಮೋದಿ ಸರಕಾರ ನಾಳೆಗೆ 4 ವರ್ಷಗಳನ್ನೇ ತುಂಬಲಿದ್ದು, ಇದೀಗ ಆಯುಷ್ಮಾನ್ ಭಾರತ್ ಮೂಲಕ ಅಗ್ಗ ದರದಲ್ಲಿ ಚಿಕಿತ್ಸೆಯನ್ನು ನೀಡಲಿದ್ದು ಇದು ಮೋದಿ ಸರಕಾರ ಮಹತ್ವ ನಿರ್ಧಾರ ಎಂದೇ ಹೇಳಬಹುದು!!

Image result for modi

ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯಾವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಹೇಳಬಹುದು!!

ಆಯುಷ್ಮಾನ್ ಭಾರತದಡಿಯಲ್ಲಿ ಅಗ್ಗ ದರದ ಚಿಕಿತ್ಸೆ!!

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ್’ ಅಡಿಯಲ್ಲಿ ವಿವಿಧ ರೋಗಗಳನ್ನು ಒಳಗೊಂಡಂತೆ 1,354 ಪ್ಯಾಕೇಜ್ ಸೇರ್ಪಡೆಗೊಳಿಸಲಾಗಿದ್ದು, ಇದು ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳಿಗಿಂತ ಶೇ. 15ರಿಂದ 20 ಅಗ್ಗವಾಗಿರಲಿದೆ ಎಂದುಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ನೀಡಿದ್ದಾರೆ. ಹೃದಯ ರಕ್ತನಾಳದ ಬೈಪಾಸ್, ಮಂಡಿ ಚಿಕಿತ್ಸೆ ಮತ್ತು ಸ್ಟೆಂಟ್ ಅಳವಡಿಕೆ ಸಹಿತ ಹಲವು ಮಹತ್ವದ ಚಿಕಿತ್ಸೆಗಳು ಇದರಲ್ಲಿ ಒಳಗೊಂಡಿವೆ. ಆಥ್ಸೋಪೆಡಿಕ್ಸ್, ಕಾರ್ಡಿಯಾಲಜಿ, ಕ್ಯಾನ್ಸರ್ ಚಿಕಿತ್ಸೆ, ನ್ಯೂರೋ ಸರ್ಜರಿಯಂಥ 20 ಚಿಕಿತ್ಸೆಗಳಿಗೆ ದರ ನಿಗದಿ ಮಾಡಲಾಗಿದೆ ಎಂದೂ ಅವರು ತಿಳಿಸಿದರು. ಇದೇ ವೇಳೆ, ರಾಷ್ಟ್ರೀಯ ಸ್ವಾಸ್ಥವಿಮೆ ಯೋಜನೆ ಹಾಗೂ ಇತರ ಕೇಂದ್ರೀಯ ಆರೋಗ್ಯ ಯೋಜನೆಗಳನ್ನು ವಿಶ್ಲೇಷಿಸಿ ಪ್ಯಾಕೇಜ್‍ಗಳ ದರ ವನ್ನು ನಿಗದಿಸಲಾಗಿದೆ.  ಅವುಗಳಿಗಿಂತಲೂ ಇದು ಶೇಕಡ 15ರಿಂದ 20ರಷ್ಟು ಕಡಿಮೆಯಾಗಿರಲಿದೆ ಎಂದು ಆಯುಷ್ಮಾನ್ ಭಾರತ್ ಯೋಜನೆ ಸಿಇಒ ಇಂದು ಭೂಷಣ್ ಹೇಳಿದ್ದಾರೆ. ಈ ಸಂಬಂಧ 205 ಪುಟಗಳ ಕರಡು ಯೋಜನೆಯನ್ನು ರಾಜ್ಯಗಳಿಗೆ ನೀಡಲಾಗಿದೆ.

ದೇಶದ ಬಡವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿರುವ ಆಯುಷ್ಮಾನ್ ಭಾರತ್ ಯೋಜನೆಯು ದೇಶದ 10 ಕೋಟಿ ಜನರಿಗೆ ನೆರವು ಒದಗಿಸಲಿದೆ. ಆಗಸ್ಟ್  15ರಂದು ಪ್ರಧಾನಿ ಮೋದಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಆಸ್ಪತ್ರೆಗಳನ್ನು ವಿಮೆ ವ್ಯಾಪ್ತಿಯಲ್ಲಿ ತರಲು ಖಾಸಗಿ ಆಸ್ಪತ್ರೆಗಳಿಗೆ    ಪ್ರೋತ್ಸಾಹ ಧನ ನೀಡಲು ಕೇಂದ್ರ ಸರಕಾರ ಯೋಚಿಸಿದೆ. ಪ್ರಾಥಮಿಕ ಹಂತದ ಪ್ರಮಾಣಪತ್ರ ಹೊಂದಿರುವ ಆಸ್ಪತ್ರೆಗಳಿಗೆ ಶೇ. 10 ಹಾಗೂ ಸುಧಾರಿತ ಹಂತದ ಪ್ರಮಾಣಪತ್ರ ಹೊಂದಿರುವ ಆಸ್ಪತ್ರೆ ಗಳಿಗೆ ಶೇಕಡ 15ರಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ. ಹಿಂದುಳಿದ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ಶೇಕಡ 10ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತದೆ.

Image result for National Health Protection Scheme

ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಭಾರೀ ಕೊಡುಗೆಯನ್ನು ಘೋಷಣೆ ಮಾಡಿದ ಮೋದಿ ಸರ್ಕಾರ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾದಾಖಲೆಯನ್ನೂ ಮಾಡಿದ್ದು ಇದು ಜನರಿಗೆ ನೇರವಾಗಿ ತಲುಪುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಕೇಂದ್ರ ಸರ್ಕಾರದ ಈ ಮಹತ್ತರ ಯೋಜನೆ ಕೋಟ್ಯಂತರ ಜನರಿಗೆ ಉಪಯೋಗವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.!!

source: udayavani

  • ಪವಿತ್ರ
Tags

Related Articles

Close