ಪ್ರಚಲಿತ

ಮೋದಿಯವರ IBC ಮಾಸ್ಟರ್ ಸ್ಟ್ರೋಕ್ ನ ಫಲ!! ಬ್ಯಾಂಕ್ ಗೆ ಮರು ಪಾವತಿಯಾಯಿತು 36,400 ಕೋಟಿ ರುಪಾಯಿ ಕೆಟ್ಟ ಸಾಲ!! ದೇಶದ ಆರ್ಥಿಕತೆಗೆ ಬಂತು ಆನೆಬಲ!!

ಯುಪಿಎ ಕಾಲದಲ್ಲಿ ಮದುವೆ ಮನೆಯಲ್ಲಿ ಊಟ ಹಾಕಿದ ಹಾಗೆ ದೊಡ್ಡ ದೊಡ್ಡ ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ ಮಲ್ಯ ಮುಂತಾದವರಿಗೆ ಕೋಟ್ಯಂತರ ರುಪಾಯಿ ಸಾಲ ನೀಡಲಾಗಿತ್ತು. ವಿತ್ತ ಸಚಿವ ಚಿದಂಬರಂ ಮತ್ತು ಆರ್.ಬಿ.ಐ ಗವರ್ನರ್ ರಘುರಾಮ್ ರಾಜನ್ ಕೃಪಾಕಟಾಕ್ಷದಿಂದ ಎಗ್ಗಿಲ್ಲದೆ ಈ ಸಾಲಗಳನ್ನು ನೀಡಲಾಗಿತ್ತು. ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡಿ, ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ನೀರವ್, ಮೆಹುಲ್, ಮಲ್ಯ ದೇಶ ಬಿಟ್ಟು ಓಡಿಹೋದಾಗ ವಿರೋಧಿಗಳೆಲ್ಲ ಮೋದಿ ಮೇಲೆ ಮುಗಿಬಿದ್ದರು. ಕೊಟ್ಟೋನ್ ಕೋಡಂಗಿ, ಇಸ್ಕೊಂಡೋನ್ ಈರ್ ಭದ್ರ ಆದರೂ ಅಪವಾದ ಮಾತ್ರ ಮೋದಿ ಮೇಲೆ. ಯೂಪಿಎ ಮಾಡಿದ ಅನಾಚಾರಗಳಿಗೆ ಬೆಲೆ ತೆರುತ್ತಿರುವುದು ಮೋದಿ!! ಎಂತಹ ಅನ್ಯಾಯ.

ಯೂಪಿಎ ಸರಕಾರ ಯದ್ವಾತದ್ವ ಸಾಲ ನೀಡಿದ ಫಲವಾಗಿ ಭಾರತದಲ್ಲಿ ವಿವಿಧ ಬ್ಯಾಂಕುಗಳಿಂದ ಬೃಹತ್ ಸಾಲವನ್ನು ಪಡೆದ ಹಲವಾರು ಕಂಪೆನಿಗಳಿವೆ ಮತ್ತು ವರ್ಷಗಳ ನಂತರವೂ ಅವುಗಳು ಸಾಲವನ್ನು ಹಿಂದಿರುಗಿಸಲು ವಿಫಲವಾಗಿವೆ. ಈ ಸಾಲಗಳು ನಾನ್-ಪರ್ಫಾರ್ಮಿಂಗ್ ಆಸ್ತಿಗಳಾಗಿ (NPA) ಬದಲಾಗಿದ್ದು, ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅಕ್ಷರಶಃ ಕುಸಿಯುತ್ತಿರುವ ವಿಷಯ ಎಲ್ಲರಿಗೂ ಗೊತ್ತೆ ಇದೆ. ಇಂತಹ NPAಗಳನ್ನು ಗುರುತಿಸಿ ಅವುಗಳನ್ನು ಹರಾಜು ಹಾಕಿ ಬ್ಯಾಂಕ್ ಗಳ ಸಾಲ ಹಿಂದಿರುಗುವಂತೆ ಮಾಡಲು ಮೋದಿಯವರು IBC(ಇನ್ಸೋಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್) ಅನ್ನು 2016 ರಲ್ಲಿ ಜಾರಿಗೆ ತಂದರು. ಇದರ ಫಲವಾಗಿ ಮೋದಿಯವರ ಪ್ರಯತ್ನಕ್ಕೆ ಮೊದಲ ಜಯ ದೊರಕಿದೆ. ಇನ್ನು ಮೋದಿಯವರ ಮೇಲೆ ಟೀಕೆಗಳ ಬಾಣಗಳನ್ನು ಹೂಡಲು ವಿರೋಧಿಗಳು ತಮ್ಮ ಬತ್ತಳಿಕೆಯಿಂದ ಬೇರೆ ಯಾವುದಾದರೂ ಅಸ್ತ್ರ ತೆಗೆಯುವುದೊಳಿತು.

ಕಷ್ಟ ಕಾಲದಲ್ಲಿ ದೇಶಕ್ಕೆ ಸದಾ ಸಹಾಯ ಹಸ್ತ ಚಾಚುವ ಟಾಟಾ ಗ್ರೂಪ್ ಕಂಪೆನಿಯು ಈ ಬಾರಿಯೂ ಬ್ಯಾಂಕ್ ಗಳ ರಕ್ಷಣೆಗೆ ಧಾವಿಸಿದೆ. ಟಾಟಾ ಗ್ರೂಪಿನ ಕಂಪನಿಯು 36,400 ಕೋಟಿ ರುಪಾಯಿ ಭೂಷಣ್ ಸ್ಟೀಲ್ ಅನ್ನು ಖರೀದಿಸಿದೆ!!  ಇದರಿಂದಾಗಿ ಕಂಪನಿಯು ಬ್ಯಾಂಕ್ ಗೆ ಕೊಡಬೇಕಾಗಿದ್ದ ಹಣ ಮರುಸಂದಾಯವಾಗಿದೆ. ದೇಶದ ಅರ್ಥ ವ್ಯವಸ್ತೆ ಸುಧಾರಿಸಲು NPA ವಿರುದ್ಧದ ಯುದ್ಧದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ IBC ಸುಧಾರಣೆಯಡಿಯಲ್ಲಿ ಬರಲು ಹಲವು ಮಂದಿ ಬಲವಾದ ಹೆಜ್ಜೆ ಇಟ್ಟು ಮೋದಿಯವರಿಗೆ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಗುರುತಿಸಲ್ಪಟ್ಟ ಮೊದಲ 12 ಬ್ಯಾಂಕ್ ಗಳಲ್ಲಿ ಇದು ಮೊದಲನೆಯದಾಗಿದೆ. ಅಲ್ಲಿಗೆ NPA ಯ ಕರಿಮೋಡ ಹಂತ ಹಂತವಾಗಿ ತಿಳಿಯಾಗಿ ಬ್ಯಾಂಕ್ ಗಳು ಚಿಗುರುವ ಲಕ್ಷಣಗಳು ಕಾಣುತ್ತಿವೆ. ಸರಕಾರದಿಂದ ಹಣ ಪಡೆದು ಹಿಂದಿರುಗಿಸಲಾಗದ ಕೆಟ್ಟ ಸಾಲಗಳನ್ನು ಪರಿಹರಿಸುವಲ್ಲಿ ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದೆ ಎಂದು ಮಧ್ಯಂತರ ಹಣಾಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಇದೆಲ್ಲವೂ ಮೋದಿಯವರ ಮತ್ತು ಅರುಣ್ ಜೇಟ್ಲಿಯವರ ದೂರದೃಷ್ಟಿ ಮತ್ತು ಪರಿಶ್ರಮದ ಫಲ ಎಂದೂ ಅವರು ಹೇಳಿದ್ದಾರೆ.

ಉದ್ಯಮಿಗಳಿಗೆ ಸಾಲ ಕೊಟ್ಟದ್ದು ಮೋದಿ ಸರಕಾರವಲ್ಲ, ಬದಲಾಗಿ ಯೂಪಿಎ ಸರಕಾರ. ಎಲ್ಲಾ ಅಕ್ರಮಗಳು ನಡೆದಿರುವುದು ಯೂಪಿಎ ಸರಕಾರದ ಅವಧಿಯಲ್ಲಿ, ಆದರೆ ಈಗ ಎಲ್ಲರೂ ಬೆರಳು ತೋರಿಸುತ್ತಿರುವುದು ಮೋದಿ ಕಡೆಗೆ. ಆದರೆ ನಮ್ಮ ಪುಣ್ಯ, ಮೋದಿಯವರು ದೂರದರ್ಶಿತ್ವ ಹೊಂದಿದ ನಾಯಕ. ಸರಿಯಾದ ಸಮಯಕ್ಕೆ ನೋಟ್ ಬ್ಯಾನ್, ಜಿ.ಎಸ್.ಟಿ ಮತ್ತು ಐ.ಬಿ.ಸಿ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಬೆನ್ನೆಲುಬಾದ ಬ್ಯಾಂಕ್ ಗಳಿಗೆ ಆನೆಬಲ ತುಂಬಿದರು. ನೋಟ್ ಬ್ಯಾನ್, ಜಿ,ಎಸ್.ಟಿ. ಎನ್.ಪಿ.ಎಗಳಿಗಾಗಿ ಮೋದಿ ಏನೆಲ್ಲಾ ಕೇಳಬೇಕಾಗಿ ಬಂತು. ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ಹಗರಣಗಳನ್ನು ಮಾಡಿದ್ದು ಯೂಪಿಎ. ಮಜಾ ಮಾಡಿದ್ದು ಕಾಂಗ್ರೆಸ್, ಈಗ ಕಷ್ಟ ಅನುಭವಿಸುತ್ತಿರುವುದು ಜನರು, ಶಿಕ್ಷೆ ಮೋದಿಗೆ.

ಮೋದಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿರುತ್ತಿದ್ದರೆ ಬ್ಯಾಂಕ್ ಗಳು ದಿವಾಳಿಯೆದ್ದು ಭಾರತ ವಿಶ್ವ ಬ್ಯಾಂಕ್ ನೆದುರು ಭಿಕ್ಷಾ ಪಾತ್ರೆ ಹಿಡಿದು ನಿಲ್ಲ ಬೇಕಾಗುತ್ತಿತ್ತು. ಯೂಪಿಎ ಸರಕಾರ ತೆಗೆದುಕೊಂಡ ಸಾಲದ ಕಂತುಗಳನ್ನೆ ಕಟ್ಟಿ ಹೈರಾಣುಗುತ್ತಿದ್ದಾರೆ ಮೋದಿ. ಇನ್ನು ಹೊಸ ಸಾಲ ತೆಗೆದುಕೊಂಡರೆ ಅಧೋಗತಿ. ಜಿ.ಎಸ್.ಟಿ, ನೋಟ್ ಬ್ಯಾನ್, ಕಲ್ಲಿದ್ದಲು ಹರಾಜಿನಿಂದ ಬಂದ ಹಣ ಎಲ್ಲಿ ಹೋಯಿತು ಎಂದು ಕೇಳುವವರೆ, ಮೋದಿ ಆ ಹಣವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಿಗಿರಲಿ ಎಂದು ವಿದೇಶೀ ಬ್ಯಾಂಕ್ ಗಳಲ್ಲಿ ಬಚ್ಚಿಟ್ಟಿಲ್ಲ. ಬದಲಾಗಿ ವಿದೇಶಗಳಿಂದ ತೆಗೆದುಕೊಂಡ ಸಾಲ ಹಿಂತಿರುಗಿಸಲು ಮತ್ತು ದೇಶದ ಅಭಿವೃದ್ದಿ ಕೆಲಸಗಳಿಗೆ ಆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಮೋದಿ ಏನೇ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ದೇಶದ ಹಿತವೆ ಅಡಗಿರುತ್ತದೆ ಎನ್ನುವುದನ್ನು ನೆನಪಿಡಿ.

-ಶಾರ್ವರಿ

Tags

Related Articles

Close