ಪ್ರಚಲಿತ

ಮೋದಿಯವರ ಮೇಕ್ ಇನ್ ಇಂಡಿಯಾ ವಿಫಲಗೊಂಡಿದೆ ಎಂದು ಹೇಳುವವರು ಈ ಸುದ್ದಿಯನ್ನು ಓದಿದರೆ ದಂಗಾಗುವುದಂತೂ ಖಂಡಿತ!!

ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವಾರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆಯಲ್ಲದೇ ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ ಎನ್ನುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರಕಾರವು ಭಾವಿಸಿದಷ್ಟು ವೇಗದಲ್ಲಾಗಿಲ್ಲವಾದರೂ ಒಂದಿಷ್ಟು ನಿರೀಕ್ಷೆಗಳು ಗರಿಗೆದರಿದ್ದಂತೂ ಅಕ್ಷರಶಃ ನಿಜ. ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವ ನರೇಂದ್ರ ಮೋದಿ ಸರ್ಕಾರದ ಮಹತ್ತರವಾದ ಕನಸಿಗೆ ಇದೀಗ ಮತ್ತೊಂದು ಬಲ ಬಂದಂತಾಗಿದೆ.

ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವ ಸಲುವಾಗಿ ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ಜಾರಿಗೊಳಿಸಿ ವಿದೇಶಿ ವಸ್ತುಗಳಿಗೆ ಭಾರತದಲ್ಲಿ ನೆಲೆ ಕಾಣದಂತೆ ಮಾಡಿದ್ದು ಗೊತ್ತೇ ಇದೆ!! ಹಾಗಾಗಿ ಇದೀಗ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ವಿಫಲಗೊಂಡಿದೆ ಎಂದು ಹೇಳುವವರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ!!

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಪಕೋಡ ಮಾರಾಟ ಮಾಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು!! ಅಷ್ಟೇ ಯಾಕೆ?? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಬಿಜಾಪುರದಲ್ಲಿ ನಡೆದಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, “ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮೇಕ್ ಇನ್ ಇಂಡಿಯಾ’ ಆರಂಭಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಪ್ರತೀಯೊಂದು ವಸ್ತುವೂ ಮೇಡ್ ಇನ್ ಚೀನಾ ಇರುತ್ತದೆ ಎಂದು” ವ್ಯಂಗ್ಯವಾಡಿದ್ದರು!!

ಹೀಗೆ ಬುದ್ದಿಜೀವಿಗಳೆಂದೆನಿಸಿದವರೆಲ್ಲರೂ ಮೇಕ್ ಇನ್ ಯೋಜನೆಯ ಬಗ್ಗೆ ವ್ಯಂಗ್ಯವನ್ನಾಡಿ ನರೇಂದ್ರ ಮೋದಿಯವರ ಪ್ರಮುಖ ಯೋಜನೆಗಳಲ್ಲೊಂದಾದ ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಟೀಕಾ ಪ್ರಹಾರಗಳನ್ನೇ ಹರಿಸಿದ್ದರು!! ಆದರೆ ಇದೀಗ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮೂಡಿ ಬಂದಂತಹ ಮೊಬೈಲ್ ಇದೀಗ ಜನಮನ್ನಣೆಯನ್ನು ಪಡೆದುಕೊಂಡಿದೆಯಲ್ಲದೇ ವಿಶ್ವದಲ್ಲೇ 2ನೇ ಅತೀದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿ ಭಾರತ ಇಂದು ಬೆಳೆದು ನಿಂತಿದೆ!!

ಹೌದು… ಈಗಾಗಲೇ ಚೀನಾವನ್ನು “ಜಾಗತಿಕ ವರ್ಕ್ ಶಾಪ್’ ಎಂದು ಕರೆಯುವುದುಂಟು. ಮಾರುಕಟ್ಟೆಯಲ್ಲಿ ಮೇಡ್ ಇನ್ ಚೀನಾ ಸರಕುಗಳ ಹೊಳೆಯೇ ಹರಿಯುತ್ತಿದ್ದು, ಇದರಲ್ಲಿ ಮೇಕ್ ಇನ್ ಇಂಡಿಯಾದ ಉದ್ದೇಶ ಭಾರತದ ಬ್ರಾಂಡನ್ನು ಜಗತ್ತಿಗೆ ಪರಿಚಯಿಸುವುದೇ ಒಂದು ದೃಢ ಸಂಕಲ್ಪವಾಗಿತ್ತು!! ಎಲ್ಲಿ ನೋಡಿದರಲ್ಲಿ ಮೇಡ್ ಇನ್ ಚೈನಾದ್ದೇ ಹಾವಳಿ. ಅತಿ ಕಡಿಮೆ ಬೆಲೆಗೆ, ಒಳ್ಳೆಯದೇ ಎನ್ನಬಹುದಾದ ಗುಣಮಟ್ಟದ ಫೆÇೀನ್ ಗಳು ರಾರಾಜಿಸುತ್ತಿರುವುದನ್ನು ನೋಡಿದರೆ ಮೇಕ್ ಇನ್ ಇಂಡಿಯಾ ಸಫಲವಾಗಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರವೇ ಮತ್ತೊಂದಿಲ್ಲ!!!

ಹಾಗಾಗಿ ಇದೀಗ ಭಾರತ ವಿಶ್ವದಲ್ಲೇ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದರೆ ಮೊದಲ ಸ್ಥಾನವನ್ನು ಚೀನಾವೇ ಕಾಯ್ದಿರಿಸಿದೆ!! ಈ ಬಗ್ಗೆ ಇಂಡಿಯನ್ ಸೆಲ್ಯೂಲರ್ ಅಸೋಸಿಯೇಶನ್ ಈ ಮಾಹಿತಿಯನ್ನು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಹಂಚಿಕೊಂಡಿದೆ. ಅಷ್ಟೇ ಅಲ್ಲದೇ “ಸರ್ಕಾರ, ಐಸಿಎ ಮತ್ತು ಎಫ್ ಟಿ ಟಿ ಎಫ್ ನ ಪರಿಶ್ರಮದ ಫಲವಾಗಿ ಇಂದು ಭಾರತ ವಿಶ್ವದ 2 ನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂಬುದನ್ನು ಘೋಷಿಸಲು ಸಂತೋಷವಾಗುತ್ತಿದೆ” ಎಂದು ಐಸಿಎ ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಮಹೀಂದ್ರು ಅವರು ಇಬ್ಬರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತಕ್ಕೆ ಪ್ರಥಮ ಶತ್ರು ಎಂದು ಯಾವ ದೇಶವಾದರೂ ಇದ್ದರೆ ಅದು ಚೀನಾವೇ ಹೊರತು ಮತ್ತಿನ್ನಾರೂ ಅಲ್ಲ. ಆದರೆ ಅಂತಹ ಹಿತಶತ್ರುವಿನೊಡನೆ ನಮ್ಮ ವ್ಯಾಪಾರ ಸಂಬಂಧ ಗಮನಾರ್ಹವಾಗಿದೆ. ಹಾಗಾಗಿ ವಾರ್ಷಿಕ 71.5 ಶತಕೋಟಿ ಡಾಲರ್ ವ್ಯವಹಾರ ಭಾರತ ಹಾಗೂ ಚೀನಾಗಳ ನಡುವೆ ಇದೆ. ಆದರೆ ಅದರಲ್ಲಿ 61 ಶತಕೋಟಿ ಡಾಲರ್ ಗೂ ಅಧಿಕ ನಮ್ಮ ಆಮದಾದರೆ ಚೀನಾಗೆ ಭಾರತದಿಂದಾಗುವ ರಫ್ತು ಕೇವಲ 10 ಶತಕೋಟಿ ಡಾಲರ್ ಆಗಿತ್ತು!! ಹಾಗಾಗಿ ಭಾರತದ ಸ್ಮಾರ್ಟ್ ಫೆÇೀನ್ ಮಾರುಕಟ್ಟೆಯಲ್ಲಿ 50%ಗೂ ಹೆಚ್ಚು ಚೀನಾದ ಫೆÇೀನುಗಳೇ ಮಾರಾಟವಾಗುತ್ತಿದ್ದು, ಅದಕ್ಕೆ ಪರೋಕ್ಷವಾಗಿ ಚೀನಾದ ಆರ್ಥಿಕ ಬಲವರ್ಧನೆಯಲ್ಲಿ ನಾವು ಅತಿದೊಡ್ಡ ಪಾತ್ರ ವಹಿಸುತ್ತಿದ್ದೇವು!!

ಅಷ್ಟೇ ಅಲ್ಲದೇ ಈ ಹಿಂದೆ ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದಂತೆಯೇ ಜಪಾನ್, ತೈವಾನ್, ಕೊರಿಯಾ ಮುಂತಾದ ರಾಷ್ಟ್ರಗಳೂ ಮುಂಚೂಣಿಯಲ್ಲಿತ್ತು!! ಆದರೆ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದಾಗಿ ಇಂದು ಚೈನಾ ಉತ್ಪನ್ನಗಳ ಬಳಕೆ ನಿಲ್ಲಬೇಕೆಂದರೆ, ಅದಕ್ಕೆ ಪೈಪೆÇೀಟಿ ಒಡ್ಡುವ ಭಾರತೀಯ ವಸ್ತುಗಳ ಅಭಿವೃದ್ಧಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೊಳಿಸಿ ಇಂದು ಭಾರತ ಅಭಿವೃದ್ಧಿಯ ಕಡೆ ಸಾಗುತ್ತಿದೆ ಎಂದರೆ ಅದಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಯ ಕೊಡುಗೆಯೂ ಬಹುದೊಡ್ಡದಿದೆ ಎಂದೇ ಹೇಳಬಹುದು.

ಈಗಾಗಲೇ 2014ರಲ್ಲಿ 3 ಮಿಲಿಯನ್ ಯುನಿಟ್ ಇದ್ದ ಭಾರತದ ಮೊಬೈಲ್ ಉತ್ಪಾದನೆಯೂ 2017ಕ್ಕೆ 11 ಮಿಲಿಯನ್ ಯುನಿಟ್ ಗೆ ಏರಿಕೆ ಕಂಡಿದೆ ಎಂದರೆ ನರೇಂದ್ರ ಮೋದಿ ಸರ್ಕಾರವನ್ನೇ ತೆಗಳುವ ಬುದ್ದಿಜೀವಿಗಳು ಈ ಬಗ್ಗೆ ಅದೇನು ಹೇಳುತ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ!! ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ವಿಶ್ವದಲ್ಲೇ 2ನೇ ಅತೀದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿ ಭಾರತ ಇಂದು ಬೆಳೆದು ನಿಂತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದ ಮಾತ್ರ ಸಾಧ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ!!

source: http://www.financialexpress.com/industry/india-is-now-worlds-second-largest-mobile-phone-producer-after-china-indian-cellular-association/1117759/
https://tech.economictimes.indiatimes.com/news/mobile/indias-electronics-ministry-moots-duties-on-key-smartphone-component-sources/63574238

– ಅಲೋಖಾ

Tags

Related Articles

Close