ಪ್ರಚಲಿತ

ಮೊಘಲರ ವಿರುದ್ಧ ಮತ್ತೆ ಕಿಡಿ ಕಾರಿದ ಉತ್ತರ ಪ್ರದೇಶದ ಮುಖ್ಯಮಂತ್ರಿ!! ಕಾಶ್ಮೀರಿ ಪಂಡಿತರಿಗೆ ಹೇಗೆ ಚಿತ್ರ ಹಿಂಸೆ ನೀಡಿದ್ದರು ಎಂದು ನೆನೆಪಿಸಿದ ಯೋಗಿ!!

ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ನರೇಂದ್ರ ಮೋದೀಜೀ ಹಾದಿಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ!! ಕಂಡು ಕೇರಳಿಯದ ರೀತಿಯಲ್ಲಿ ಇಡೀ ದೇಶವೇ ಉತ್ತರ ಪ್ರದೇಶದತ್ತ ಮುಖ ಮಾಡಿ ನೋಡುವತ್ತ ಮಾಡಿದ್ದಾರೆ ಯೋಗೀಜೀ!! ಇಡೀ ಉತ್ತರ ಪ್ರದೇಶ ರೌಡಿಗಳ ಅಟ್ಟಹಾಸದಿದ ತುಂಬಿ ತುಳುಕುತ್ತಿತ್ತು!! ಆದರೆ ಯೋಗಿ ಆದಿತ್ಯನಾಥರು ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಲ್ಲಿಂದ ಎಲ್ಲರ ಚಿತ್ತ ಉತ್ತರ ಪ್ರದೇಶದತ್ತ ನೋಡುವ ತರಹ ಮಾಡಿದ್ದಾರೆ!!

ಲಖನೌದಲ್ಲಿ ನಡೆದ ಸಭೆಯಲ್ಲಿ ಬಂಜಾರ ಜನಾಂಗದವರನ್ನುದ್ಧೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥರು ಮತ್ತೆ ಮೊಘಲರ ವಿರುದ್ಧ ಸಿಡಿದೆದ್ದಿದ್ದಾರೆ!! ಮೊಘಲ್ ದೊರೆ ಜೌರಂಗಜೇಬ ಕಾಶ್ಮೀರದ ಪಂಡಿತರುಗಳನ್ನು ಮತಾಂತರ ಮಾಡಲು ಪ್ರಯತ್ನಿಸಿದ್ದ ಎಂದು ಕಿಡಿಕಾರಿದ್ದಾರೆ!! ಮೊಘಲರು ಹಿಂದೂಗಳನ್ನು ಅತ್ಯಂತ ತುಚ್ಯ ರೀತಿಯಲ್ಲಿ ನೋಡಿದ್ದು ತಮ್ಮ ಧರ್ಮಕ್ಕೆ ಮತಾಂತರ ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನಿಸಿದ್ದಲ್ಲದೆ ಹಿಂದೂಗಳಿಗೆ ಚಿತ್ರಹಿಂಸೆ ನೀಡಿದ್ದರು!!

Related image

ಕಾಶ್ಮೀರ ಪಂಡಿತರ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಪಂಡಿತರ ಗುಂಪೆÇಂದು ಸಿಖ್ಕರ ಒಂಬತ್ತನೇ ಗುರು ತೇಗ್ ಬಹಾದ್ದೂರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಿತ್ತು.

ಇಸ್ಲಾಂ ಸಮುದಾಯಕ್ಕೆ ಮತಾಂತರಗೊಳ್ಳಲು ಔರಂಗಜೇಬ್ ಕೊಡುತ್ತಿದ್ದ ಕಷ್ಟಕಾರ್ಪಣ್ಯಗಳನ್ನು ಕಾಶ್ಮೀರ ಪಂಡಿತರು ತೇಗ್ ಬಹಾದ್ದೂರ್ ಅವರಿಗೆ ವಿವರಿಸಿದ್ದರು. ನಮ್ಮ ಗುರುಗಳನ್ನು ಒಪ್ಪಿಕೊಂಡರೆ ಮಾತ್ರ ಇಸ್ಲಾಂಗೆ ನಾವು ಮತಾಂತರಗೊಳ್ಳುತ್ತೇವೆ ಎಂದು ಔರಂಗಜೇಬ್ ಗೆ ತಿಳಿಸಿ ಎನ್ನುವ ಸಲಹೆಯನ್ನು ಪಂಡಿತರಿಗೆ ತೇಗ್ ಬಹಾದ್ದೂರ್ ನೀಡಿದ್ದರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ, ತೇಗ್ ಬಹಾದ್ದೂರ್ ಅವರನ್ನು ಬಂಧಿಸಿದ ಔರಂಗಜೇಬ್ ಅವರಿಗೆ ಕೊಡಬಾರದು ಕಷ್ಟವನ್ನು ಕೊಡುತ್ತಾನೆ. ಇದನ್ನೆಲ್ಲವನ್ನೂ ಸಹಿಸಿಕೊಂಡ ತೇಗ್ ಬಹಾದ್ದೂರ್ ಅವರನ್ನು ಇಸ್ಲಾಂಗೆ ಪರವರ್ತನೆಗೊಳಿಸಲು ಔರಂಗಜೇಬ್ ಗೆ ಸಾಧ್ಯವಾಗಲಿಲ್ಲ ಎಂದು ಯೋಗಿ ಕಿಡಿಕಾರಿದ್ದಾರೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಡೀ ದೇಶ ಉತ್ತರ ಪ್ರದೇಶದತ್ತ ನೋಡುವತ್ತ ಮಾಡಿದ್ದಾರೆ!! ಅದಲ್ಲದೆ ಮೇವಾರ ರಾಜರ ದಿನಾಚರಣೆಯನ್ನು ಆಚರಿಸಿದ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೂಡಾ ಯೋಗಿ ಆದಿತ್ಯನಾಥರು ಮೊಘಲರ ವಿರುದ್ಧ ದ್ವನಿ ಎತ್ತಿದ್ದರು!! ನಿಜವಾಗಿ ಹೇಳಬೇಕೆಂದರೆ ಮೊಘಲರು ಭಾರತದಲ್ಲಿರುವ ಎಲ್ಲಾ ಸಂಪತ್ತನ್ನು ನಾಶ ಮಾಡಿದ್ದಲ್ಲದೆ ಹಿಂದೂಗಳನ್ನು ಮತಾಂತರ ಮಾಡಲು ಪ್ರಯತ್ನಸಿ ತಮಗಿಷ್ಟ ಬಂದಂತೆ ಉಪಯೋಗಿಸಿ ತಮ್ಮ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ್ದಾರೆ!!

ಆದರೆ ಕೆಲವರು ಮೊಘಲ್‍ರೇ ಪ್ರಮುಖರು ಎಂಬುವುದನ್ನು ಬಿಂಬಿಸುತ್ತಾರೆ!! ಅಕ್ಬರ್ಗಿಂತ ಮಹಾರಾಣ ಪ್ರತಾಪರೇ ಎಲ್ಲಾ ಜನರಿಗೆ ಮಾದರಿ ಎಂಬುದನ್ನು ಯೋಗೀಜೀ ಆರ್‍ಎಸ್‍ಎಸ್ ಸಭೆಯಲ್ಲಿ ಹೇಳಿದ್ದರಲ್ಲದೆ ಮೊಘಲರ ವಿರುದ್ಧ ದ್ವನಿ ಎತ್ತಿದ್ದರು!! ಎಲ್ಲಾ ಹಿಂದುಳಿದ ಜಾತಿಗಳು ತಮ್ಮನ್ನು ತಾವು ಮಹಾರಾಣ ಪ್ರತಾಪರ ವಂಶಸ್ಥರು ಎಂದು ಪರಿಗಣಿಸಿ ಮಹಾರಾಣ ಪ್ರತಾಪರನ್ನು ತಮಗೆ ಸ್ಫೂರ್ತಿ ನೀಡಿದವರು ಎಂದು ಆರಾಧಿಸುತ್ತಿದ್ದಾರೆ!! ಇಂತವರು ನಿಜವಾಗಿ ಎಲ್ಲಿರಿಗೂ ಸ್ಫೂರ್ತಿದಾಯಕ!! ಆದರೆ ಮೊಘಲರು ಯಾರಿಗೆ ಸ್ಫೂರ್ತಿ ಎಂಬುವುದು ತಿಳಿಯುತ್ತಿಲ್ಲ!! ಇಲ್ಲಿಯವರಿಗೆ ಪಠ್ಯಪುಸ್ತಕದಲ್ಲಿ ಮತ್ತು ಇತರ ಎಲ್ಲಾ ಕಡೆಗಳಲ್ಲಿ ಮೊಘಲರ ಶ್ರೇಷ್ಟ ರಾಜರುಗಳು ಎಂದು ಬಿಂಬಿಸಿ ಎಲ್ಲರನ್ನು ನಂಬಿಸಲಾಗಿತ್ತು!! ಆದರೆ ಯಾರು ಶ್ರೇಷ್ಟ ವ್ಯಕ್ತಿಗಳು ಎಂಬುವುದು ಒಂದೊಂದಾಗಿಯೇ ಜಗತ್ತಿಗೆ ತಿಳಿಸುವ ಸಮಯ ಬಂದಿದೆ!!

ಮೇವಾರದ ರಾಜರ ಆಚರಣೆಯನ್ನು ನಡೆಸಿದ್ದ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥರು ಮಹಾರಾಣ ಪ್ರತಾಪರ ಬಗ್ಗೆ ಹಾಡಿಹೊಗಳಿದ್ದರು!! ಅದಲ್ಲದೆ ಮೊಘಲ್ ದೊರೆ ಅಕ್ಬರ್ ಯಾವತ್ತೂ ಉತ್ತವ ವ್ಯಕ್ತಿ ಅಲ್ಲ ಅವರವನ್ನು ಕೆಲ ಹಿಂದೂ ವಿರೋಧಿಗಳು ಈ ರೀತಿಯಾಗಿ ಒಳ್ಳೆಯವರಾಗಿ ಬಿಂಬಿಸಿದ್ದಾರೆ!! ಅಕ್ಬರ್ ಬೀರಬಲ್ ಕತೆ ಓದಿ ಓದಿ ನಮಗೆ ಅಕ್ಬರ್ ಎಂದಾಗ ಇವನೊಬ್ಬ ಉತ್ತಮ ದೊರೆ ಎಂಬ ಭಾವನೆ ಮೂಡುತ್ತದೆ. ಈತ ಇತರ ಮೊಘಲ್ ದೊರೆಗಳಂತೆ ಕ್ರೂರಿಯಲ್ಲದಿದ್ದರೂ ಈತ ಹಿಂದೂಗಳಿಗೆ ಮಾಡಿದ ದ್ರೋಹ ಮಾತ್ರ ಕಡಿಮೆಯಿಲ್ಲ!!

 

ಇದೀಗಾಗಲೇ ಉತ್ತರ ಪ್ರದೇಶದಲ್ಲಿ ಮೊಘಲರ ಅಟ್ಟಹಾಸವನ್ನು ಮೆರೆದಿದ್ದಕ್ಕೆ ಅನೇಕ ಕುರುಹುಗಳಿವೆ!! ಅದನ್ನೀಗ ಒಂದೊಂದಾಗಿಯೇ ಅಳಿಸಿ ಹಾಕಲು ಯೋಗೀಜೀ ಪ್ರಯತ್ನ ಮಾಡುತ್ತನೇ ಇದ್ದಾರೆ!! ಈಗಾಗಲೇ ಉತ್ತರಪ್ರದೇಶವನ್ನು ಕಂಡು ಕೇಳರಿಯದಂತೆ ಬದಲಾವಣೆ ಮಾಡಿದ ಯೋಗೀಜೀ ಉತ್ತರಪ್ರದೇಶದ ಮೊಘಲ್ ಸರಾಯ್ ರೈಲ್ವೇ ಸ್ಟೇಶನ್ನಿನ ಹೆಸರನ್ನ ಬದಲಿಸಿ ಯೋಗಿ ಆದಿತ್ಯನಾಥರ ಸರ್ಕಾರ ಅದನ್ನ ಪಂಡಿತ್ ದೀನದಯಾಳ್ ಸ್ಟೇಷನ್ ಅಂತ ಕೂಡಾ ಮರುನಾಮಕರಣ ಮಾಡಿದ್ದಾರೆ!! ಅಲಹಾಬಾದನ್ನು ಪ್ರಯಾಗ್‍ರಾಜ್ ಎಂದು ಮರುನಾಮಕರಣ ಸಿದ್ದತೆ ನಡೆಸಿದ್ದಾರೆ!! ಫಜಿಯಾಬಾದ್ ಅನ್ನು ಕೂಡಾ ಅಯೋಧ್ಯಾ ಧಾಮ್ ಎಂದು ನಾಮಕರಣ ಮಾಡುವ ಮೂಲಕ ಉತ್ತರಪ್ರದೇಶದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು, ಇಡೀ ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿ ಇದ್ದರೆ ಸಾಕು ದೇಶ ಅಭಿವೃದ್ಧಿಯಾಗುವುದು ಖಂಡಿತ!!

source: postcard.news

  • ಪವಿತ್ರ
Tags

Related Articles

Close