ಪ್ರಚಲಿತ

ಚಂದನ್ ಗುಪ್ತ ಹತ್ಯೆಯ ಉದ್ವಿಗ್ನತೆಯ ನಡುವೆಯೂ ಆ ಮುಸ್ಲಿಂ ಯುವಕ ಹಿಂದೂ ಕಾರ್ಯಕರ್ತರನ್ನು ದೇವರು ಅಂದಿದ್ಯಾಕೆ?!

ಭಾರತದಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಸಮಯದಲ್ಲಿ ದೇಶಕ್ಕೆ ಹಲವಾರು ಬಾರಿ ಉಗ್ರರು ನುಸುಳುವ ಭಯ ಅದಾಗಲೇ ಕಾಡಿತ್ತು… ಅದು ಜನವರಿ 26. ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ. ದೇಶವೇ ರಾಷ್ಟ್ರ ಪ್ರೇಮದಲ್ಲಿ ಮಿಂದು ತೇಲಾಡುತ್ತಿತ್ತು. ಭಯೋತ್ಪಾದಕರ ಬೆದರಿಕೆಯ ಮಧ್ಯೆಯೂ ರಾಷ್ಟ್ರದಲ್ಲಿ ಅದ್ಧೂರಿಯಾಗಿ ಪ್ರಜಾ ಪ್ರಭುತ್ವ ದಿನಾಚರಣೆಯನ್ನು ಮಾಡಿಯೇ ಬಿಟ್ಟಿದ್ದರು ಪ್ರಧಾನಿ ನರೇಂದ್ರ ಮೋದೀಜಿ. ಅದೂ ಆಸಿಯಾನ್ ನಾಯಕರನ್ನೆಲ್ಲಾ ಕರೆಸಿಕೊಂಡು. ಅದೆಷ್ಟೇ ಪ್ರಯತ್ನ ಪಟ್ಟಿದ್ದರೂ ಒಬ್ಬನೇ ಒಬ್ಬ ಉಗ್ರನಿಂದ ಭಾರತವನ್ನು ಮುಟ್ಟಲೂ ಆಗಲಿಲ್ಲ. ಭಾರತ ಮತ್ತೊಮ್ಮೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಬಿಟ್ಟಿತ್ತು.

ಒಂದು ಕಡೆಯಲ್ಲಿ ಇಡೀ ರಾಷ್ಟ್ರದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದರೆ ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಚಂದನ್ ಗುಪ್ತಾ ಎನ್ನುವ ಯುವಕನ ಭೀಕರ ಹತ್ಯೆಯಾಗಿತ್ತು. ಜನವರಿ 26ರಂದು ಉತ್ತರ ಪ್ರದೇಶದಲ್ಲಿ ಎಬಿವಿಪಿ ಕಾರ್ಯಕರ್ತರ ತಂಡವೊಂದು ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದ್ದರು. ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡು ಸಾರ್ವತ್ರಿಕವಾಗಿ ವಂದೇ ಮಾತರಂ ಗೀತೆಯನ್ನು ಹಾಡುವಂತಹ ಬಲು ಸುಂದರವಾದ ಕಾರ್ಯಕ್ರಮ.

ಆದರೆ ಈ ಕಾರ್ಯಕ್ರಮಕ್ಕೆ ಮುಸ್ಲಿಂ ಮತಾಂಧರಿಂದ ಭಾರೀ ಬೆದರಿಕೆಗಳು ಬಂದಿದ್ದವು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮವನ್ನು ಮಾಡಲು ಬಿಡೋದಿಲ್ಲ ಎಂದು ಟೊಂಕ ಕಟ್ಟಿ ನಿಂತಿದ್ದರು. ಆದರೆ ದೇಶಭಕ್ತ ಯುವಕರು ಹಿಂದೇಟು ಹಾಕಲೇ ಇಲ್ಲ. ಜನವರಿ 26ರಂದು ತ್ರಿವರ್ಣ ಧ್ವಜ ಹಿಡಿದುಕೊಂಡು ತಿರಂಗಾ ಯಾತ್ರೆಗೆ ಇಳಿದೇ ಬಿಟ್ಟಿದ್ದರು.

ಇದು ಮುಸಲ್ಮಾನರಿಗೆ ಭಾರೀ ಮುಜುಗರವನ್ನೇ ತಂದಿಟ್ಟಿತ್ತು. ಗಲಭೆಗಳು ಆರಂಭವಾಗುತ್ತದೆ. ದೇಶಪ್ರೇಮಿ ಎಬಿವಿಪಿ ಕಾರ್ಯಕರ್ತರಿಗೂ ಮುಸಲ್ಮಾನರಿಗೂ ಗಲಾಟೆಗಳು ಆರಂಭವಾಗುತ್ತದೆ. ವಿರೋಧದ ನಡುವೆಯೂ ವಂದೇ ಮಾತರಂ ಗೀತೆಯನ್ನು ಹಾಡಿಯೇ ತೀರುತ್ತಾರೆ ಎಬಿವಿಪಿ ಕಾರ್ಯಕರ್ತರು. ಅಷ್ಟರಲ್ಲೇ ದೂರದಿಂದ ಬಂದ ಗುಂಡೊಂದು ಚಂದನ್ ಗುಪ್ತಾ ಎನ್ನುವ ಎಬಿವಿಪಿ ಕಾರ್ಯಕರ್ತನ ದೇಹವನ್ನು ಹೊಕ್ಕಿ ಬಿಡುತ್ತದೆ. ವಂದೇ ಮಾತರಂ ಎನ್ನುತ್ತಲೇ ಆ ದೇಶಪ್ರೇಮಿ ಯುವಕ ಧರೆಗುರುಳುತ್ತಾನೆ. ತನ್ನ ಕೊನೆಯುಸಿರನ್ನು ಭಾರತ ಮಾತೆಯ ಸೇವೆಗೆ ಮುಡಿಪಾಗಿಟ್ಟು ತನ್ನ ಜೀವವನ್ನೇ ದೇಶಕ್ಕಾಗಿ ಸವೆಸುತ್ತಾನೆ. ಎಬಿವಿಪಿ ಹತ್ಯೆಯಾಗುತ್ತಿದ್ದಂತೆಯೇ

ಯಾವಾಗ ಎಬಿವಿಪಿ ಕಾರ್ಯಕರ್ತನ ಹತ್ಯೆಯಾಗುತ್ತೋ ಅಂದು ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಡಿದೆದ್ದಿದ್ದರು. ಯಾವುದೇ ಕಾರಣಕ್ಕೂ ಆರೋಪಿಯನ್ನು ಬಂಧಿಸದೆ ಬೀಡೋದಿಲ್ಲ ಎಂಬ ಹಠಕ್ಕೆ ಬಿದ್ದಿದ್ದರು. “ಆರೋಪಿ ಯಾವ ಮೂಲೆಯಲ್ಲಿಯೇ ಇರಲಿ. ನಾವು ಹಂತಕನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡೋದಿಲ್ಲ. ಹತ್ಯೆಯಾಗಿದ್ದು ಓರ್ವ ದೇಶಪ್ರೇಮಿ ಯುವಕ. ವಂದೇ ಮಾತರಂ ಹೇಳಿದ್ದಕ್ಕೆ ಹತ್ಯೆ ಮಾಡಿದ ಆ ಕಿರಾತಕರನ್ನು ಯಾವ ಮೂಲೆಯಲ್ಲಿ ಅವಿತಿದ್ದರೂ ಬಿಡೋದಿಲ್ಲ” ಎಂಬ ವಾಗ್ದಾನ ಆಗಲೇ ನೀಡಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅಂದರೆ ಹಾಗೇನೆ. ದೇಶದ್ರೋಹಿಗಳನ್ನು ಕಂಡರೆ ಉರಿದು ಬೀಳುತ್ತಾರೆ. ಮೈಯಲ್ಲಿ ಕಾವಿ ತೊಟ್ಟು “ಅಹಿಂಸೋ ಪರಮೋ ಧರ್ಮ” ಎಂದು ಅಹಿಂಸೆಯನ್ನು ಪಾಲಿಸುತ್ತಿದ್ದರೂ ಕೂಡಾ, ದೇಶದ್ರೋಹಿಗಳಿಗೆ ಹಾಗೂ ಧರ್ಮದ್ರೋಹಿಗಳಿಗೆ “ಧರ್ಮಹಿಂಸಾ ತಥೈವಚಾ” ಎಂಬ ಕಠಿಣ ಸಂದೇಶವನ್ನು ಸಾರಿದವರು. ತಾವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬರೋಬ್ಬರಿ 1000ಕ್ಕಿಂತಲೂ ಅಧಿಕ ಗೂಂಡಾಗಳನ್ನು ಎನ್‍ಕೌಂಟರ್ ಮೂಲಕ ಕೊಂದು ಬಿಸಾಕಿದವರು.

ಯಾವುದೋ ದುಷ್ಕøತ್ಯದಲ್ಲಿ ಭಾಗಿಯಾದ ಈ ರೌಡಿಗಳನ್ನು ಮಟ್ಟಹಾಕಿದ್ದ ಯೋಗಿ ತಮ್ಮ ಧರ್ಮ ಹಾಗೂ ದೇಶ ನಿಂದಕರನ್ನು ಬಿಡುತ್ತಾರೆಯೇ..? ತಿರಂಗಾ ಯಾತ್ರೆಯ ದಿನ ಹತ್ಯೆಯಾದ ಚಂದನ್ ಗುಪ್ತಾ ಎನ್ನುವ ಎಬಿವಿಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದ ಆ ಪಾಪಿಯನ್ನು ಗಲ್ಲಿ ಗಲ್ಲಿಯಲ್ಲಿ ಹುಡುಕುತ್ತಿದ್ದಾರೆ. ಒಬ್ಬ ದ್ರೋಹಿಯನ್ನು ಹುಡುಕಲು ಯಾವ ರೀತಿ ಪೆÇಲೀಸ್ ಪಡೆಯನ್ನು ಉಪಯೋಗಿಸುತ್ತಿದ್ದಾರೆ ಎಂದರೆ, ತನ್ನ ಸರ್ಕಾರದ ಅರೆ ಮಿಲಿಟರಿ ಪಡೆಯನ್ನೇ ಹಂತಕನ ಬಂಧನಕ್ಕೆ ನಿಯೋಜಿಸಿದ್ದಾರೆ. ಕಪ್ರ್ಯೂ ಜಾರಿಗೊಳಿಸಿದ ಸಂದರ್ಭದಲ್ಲಿ ಈ ಪಡೆಯನ್ನು ನಿಯೋಜಿಸುವು ಸಾಮಾನ್ಯ. ಆದರೆ ಓರ್ವ ಹಂತಕನನ್ನು ಬಂಧಿಸಲು ಈ ರೀತಿ ಸೈನ್ಯವನ್ನೇ ನಿಯೋಜಿಸುವುದು ಭಾರೀ ಅಪರೂಪ. ಉತ್ತರ ಪ್ರದೇಶದಲ್ಲಿ ಯಾವೊಬ್ಬ ಹಂತಕನನ್ನೂ ನಾವು ಸುಮ್ಮನೆ ಬಿಡೋದಿಲ್ಲ ಎನ್ನವುದಕ್ಕೆ ಇದೇ ಸಾಕ್ಷಿ.

ಚಂದನ್ ಗುಪ್ತಾ ಹತ್ಯೆಯ ಆರೋಪಿಗಳ ಪತ್ತೆಹಚ್ಚಲು ತನ್ನ ಸೈನ್ಯವನ್ನೇ ಆ ನಗರದಲ್ಲಿ ಇರಿಸಿಬಿಟ್ಟಿದೆ. ಕಸ್ಗಂಜ್ ಎಂಬ ನಗರದಲ್ಲಿರುವ ಪೇಟೆಯಲ್ಲಿರುವ ಗಲ್ಲಿ ಗಲ್ಲಿಯನ್ನೂ ಬಿಡದೆ ಹಂತಕನಿಗೆ ಬಲೆ ಬೀಸಿದ್ದರು.. ಆ ಗಲ್ಲಿಯಿಂದ ಆರೋಪಿ ತಪ್ಪಿಸಿಕೊಂಡು ಹೊರಹೋಗದಂತೆ ನೋಡಿಕೊಳ್ಳಲು ಡ್ರೋನ್ ಕ್ಯಾಮರಾವನ್ನು ಉಪಯೋಗಿಸಿದ್ದರು.. ಹಂತಕ ಯಾವ ಮೂಲೆಯಲ್ಲೇ ಅವಿತಿದ್ದರೂ ನಾವು ಬಿಡೋದಿಲ್ಲ ಎಂಬ ಸಂದೇಶವನ್ನೇ ಸಾರಿದ್ದರು.. ಬಡವರಿಗೆ ತನ್ನ ಬಟ್ಟೆಗಳನ್ನು ದಾನವಾಗಿ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿದ್ದ ಓರ್ವ ಸಾಮಾನ್ಯ ಯುವಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳ ಬಂಧನಕ್ಕೆ ಯೋಗಿ ಸರ್ಕಾರ ಈ ರೀತಿಯಾಗಿ ಬಲೆ ಬೀಸಿದ್ದು ಹೊಸ ಇತಿಹಾಸಕ್ಕೆ ನಾಂದಿಯಾಗಿತ್ತು ..

ಚಂದನ್ ಗುಪ್ತನ ಸಾವಿನ್ನು ಇಡೀ ಉತ್ತರ ಪ್ರದೇಶದ ಜನರು ಸಹಿಸುವಂತಿರಲಿಲ್ಲ!! ಅದೇ ಸಮಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.. ಆತನ ಸಾವನ್ನು ಯಾರೂ ಮರೆಯುವಂತವರಾಗಿರಲಿಲ್ಲ!! ಯಾಕೆಂದರೆ ಅಲ್ಲಲ್ಲಿ ಹಿಂದೂ ಹಿಂದೂಗಳ ಮಾರಣ ಹೋಮವಾಗುತ್ತಿರುವುದನ್ನು ಆ ಜನತೆ ಸಹಿಸುವಂತಾಗಿರಲಿಲ್ಲ!! ಅದೇ ಸಮಯದಲ್ಲಿ ಒಬ್ಬ ಮುಸ್ಲಿಮ್‍ನನ್ನು ಹಿಂದೂ ಕಾರ್ಯಕರ್ತರು ರಕ್ಷಣೆ ಮಾಡಿದ ಪರಿ ಇದೆಯಲ್ಲವೇ ಅದು ನಿಜವಾಗಿಯೂ ಎಲ್ಲರ ಮನಸ್ಸಲ್ಲೂ ಒಂದು ಹಿಂದೂಗಳನ್ನು ದೂರುತ್ತಿರುವವರಿಗೆ ಮಾದರಿಯಾಗಬೇಕು!1

ಹಿಂದೂ ಕಾರ್ಯಕರ್ತರನ್ನು ದೇವರು ಎಂದಿದ್ಯಾಕೆ ಗೊತ್ತಾ?

ಕಾಸ್ಗಂಜ್ ನಲ್ಲಿ ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿಯೇ ಅಕ್ರಮ್ ಹಬೀಬ್ ಎನ್ನುವಾತ ಅಜ್ಮೀರ್‍ಗೆ ತನ್ನ ಪತ್ನಿಯನ್ನು ನೋಡಲು ಅದೇ ದಾರಿಯಲ್ಲಿ ತೆರಳುತಿದ್ದ… ಅದೇ ಸಮಯದಲ್ಲಿ ಸುಮಾರು 100 ರಿಂದ 150 ಜನರಿದ್ದ ಗುಂಪೊಂದು ಆತನ ಮೇಲೆ ದಳಿ ಮಾಡುತ್ತಾರೆ… ಹಿಂಸಾತ್ಮತ ಗಲಭೆಯಲ್ಲಿ ತನ್ನ ಬಲ ಕಣ್ಣನ್ನು ಕಳೆದುಕೊಳ್ಳುತ್ತಾನೆ…ಅದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಆತನೊಬ್ಬ ಮುಸ್ಲಿಮ್ ಎಂದೂ ಭೇದ ಭಾವ ತೋರಿಸದೆ ಆತನ ನೆರವಿಗೆ ಧಾವಿಸುತ್ತಾರೆ… ಹಿಂದೂ ಧರ್ಮವೇ ಹಾಗೆ.. ಯಾರಾದರೂ ಕಷ್ಟದಲ್ಲಿ ಇದ್ದಾರೆ ಎಂದರೆ ಯಾವ ಧರ್ಮವೆಂದು ತಿಳಿಯದೆ ಅವರನ್ನು ರಕ್ಷಿಸಲು ಧಾವಿಸುವ ಮಹಾ ಹೃದಯವಂತರು!!

ತನ್ನನ್ನು ರಕ್ಷಣೆ ಮಾಡಿದ ಬಳಿಕ ಆ ಮುಸ್ಲಿಮ್ ಪ್ರತಿಕ್ರಿಸಿದ್ದು ಹೇಗೆ ಗೊತ್ತಾ? ನನ್ನ ರಕ್ಷಣೆಗೆ ಬಂದವರು ಹಿಂದೂ ಸಹೋದರರು ಅವರು ನನ್ನ ಪಾಲಿನ ದೇವರುಗಳು.. ನಿಜವಾಗಿಯೂ ಹಿಂದೂ ಧರ್ಮ ಶ್ರೇಷ್ಟವಾದ್ದು… ಹಿಂದೂ ಸಹೋದರರು ನನ್ನ ನೆರವಿಗೆ ಬಾರದಿರುತ್ತಿದ್ದರೆ ನಾನು ನನ್ನ ಹೆಣ್ಣುಮಗಳನ್ನು ನೋಡಲು ಸಾಧ್ಯವಿರುತ್ತಿರಲಿಲ್ಲ ಎಂದು ಕಂಬನಿ ಮಿಡಿಯುತ್ತ ತಮ್ಮನ್ನ ರಕ್ಷಿಸಿದ ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ!!

ಎಲ್ಲರೂ ತಿಳಿಯ ಬೇಕಾಗಿರುವುದು ಇದೇ.. ಯಾಕೆಂದರೆ ಹಿಂದೂ ಧರ್ಮ ಅಷ್ಟೆ ಶ್ರೇಷ್ಟ!! ತನ್ನ ಧರ್ಮವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ… ಆದರೆ ಕಷ್ಟದಲ್ಲಿ ಯಾವ ಧರ್ಮವಿದ್ದರೂ ಸಹಾಯ ಮಾಡುವ ದೊಡ್ಡ ಗುಣವನ್ನು ಹೊಂದಿರುವವರು…

ಪವಿತ್ರ

Tags

Related Articles

Close