ಪ್ರಚಲಿತ

ನಾನು ಹೆಡ್‌ಲೈನ್‌ಗಾಗಿ ಕೆಲಸ ಮಾಡುವುದಿಲ್ಲ, ಡೆಡ್‌ಲೈನ್ ಮುಗಿಸಲು ಕೆಲಸ ಮಾಡುವುದು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕರ್ನಾಟಕದಲ್ಲಿ ಮಾತನಾಡಿದ್ದು, ರಾಜ್ಯದ ಕೈ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ವ್ಯಂಗ್ಯವಾಡಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಜನಿಸುವ ಗುರಿ ಹೊಂದಿರುವ ಅವರು, ದೇಶದ ಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಸುಧಾರಣೆ ಮಾಡಿತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ಅಬ್ ಕಿ ಬಾರ್ – ಚಾರ್ ಸೌ ಪಾರ್’ ಎಂಬ ಘೋಷಣೆಯನ್ನು ಕೂಗಿದ್ದಾರೆ.

ರಾಜ್ಯದ ಕೈ ಸರ್ಕಾರ ನೀಡಿದ ಪಂಚ ಉಚಿತ ಘೋಷಣೆಗಳಿಗೆ ಪ್ರತಿಯಾಗಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಹಲವಾರು ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಅವರು ಈ‌ ಸಂದರ್ಭದಲ್ಲಿ ತಿಳಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಅವುಗಳ ಪ್ರಯೋಜನಕ್ಕೆ ಸಂಬಂಧಿಸಿದ ಹಾಗೆಯೂ ಅವರು ಮಾಹಿತಿ ನೀಡಿದ್ದಾರೆ. ಯಾವುದೇ ಸರ್ಕಾರ ಸಾಧನೆಗಳನ್ನು ಖಾತರಿ ಮಾಡುವುದರಿಂದ ಆ ದೇಶದ ಅಭಿವೃದ್ಧಿ ಸಾಧ್ಯವೇ ಹೊರತು, ಉಚಿತ ಗ್ಯಾರಂಟಿಗಳನ್ನು ನೀಡುವುದರಿಂದ ಪ್ರಗತಿ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ನಾನು ಹೆಡ್‌ಲೈನ್ ಆಗಲು ಕೆಲಸ ಮಾಡುವುದಿಲ್ಲ. ಬದಲಾಗಿ ಡೆಡ್ ಲೈನ್ ಮುಗಿಸಲು ಕೆಲಸ ಮಾಡುತ್ತೇನೆ ಎಂದು ಅವರು ನುಡಿದಿದ್ದಾರೆ‌. 2029 ನ್ನು ಗುರಿಯಾಗಿರಿಸಿಕೊಂಡು ದೇಶದ ಅಭಿವೃದ್ಧಿ ಮಾಡಲು ಹೊರಟಿಲ್ಲ. ನನ್ನ ಗುರಿ 2047 ರ ಅವಧಿಯಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗುವುದು ನನ್ನ ಗುರಿ. ಎಲ್ಲಾ ವಿಷಯಗಳಲ್ಲೂ ದೇಶ ಸಮೃದ್ಧವಾಗಬೇಕು ಎಂದಿದ್ದಾರೆ.

ಹಾಗೆಯೇ, ನಾನು ಅಂದಾಜು ಮಾಡುವ ಪ್ರಕಾರ ಅಭಿವೃದ್ಧಿ ಹೊಂದಿದ ಭಾರತ ಎಂಬ ಕನಸು ನನಸಾಗಲು 2047 ರ ವರೆಗಿನ ಶ್ರಮ ಅಗತ್ಯ. ಸ್ವಾತಂತ್ರ್ಯದ ಶತ‌ಸಂಭ್ರಮದ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ಭಾರತ ಎಂಬ ಗುರಿ ಸಾಧಿಸಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಆ ಕನಸನ್ನು ಸಾಕಾರ ಮಾಡುವುದು ನನ್ನ ಆಶಯ. ದೇಶದ ಭವ್ಯ ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದ್ದಾರೆ.

Tags

Related Articles

Close