ಪ್ರಚಲಿತ

ಧರ್ಮ ಮತ್ತು ಮಾನ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಹಿಂದೂ ವೀರ ರಮಣಿಯರಾದ ಬೇಲಾ ಮತ್ತು ಕಲ್ಯಾಣಿಯರ ಬಲಿದಾನ ಪ್ರತಿಯೊಬ್ಬ ಮಹಿಳೆಗೂ ಆದರ್ಶ!!

ಭರತ ಭೂಮಿಯಿದು ಹಲವಾರು ಮಾಹಾ ನಾಯಕ-ನಾಯಕಿಯರ ಜನನಿ. ಧರ್ಮಕ್ಕಾಗಿ, ಮಾನ ಮತ್ತು ದೇಶ ರಕ್ಷಣೆಗಾಗಿ ಇಲ್ಲಿನ ವೀರಾಂಗನೆಯರು ದುರ್ಗೆ-ಕಾಳಿಯ ರೂಪ ತಾಳಿ, ಧರ್ಮಾಂಧ-ಕಾಮಾಂಧರ ರುಂಡ ಚೆಂಡಾಡಿದ್ದಾರೆ. ಜಿಹಾದಿಗಳ ಕೈಗೆ ಸಿಲುಕಿ ನಲುಗುವದಕ್ಕಿಂತ ಪ್ರಾಣಾರ್ಪಣೆ ಮಾಡುವುದೇ ಲೇಸೆಂದು ಬಗೆದು ಧಗಧಗಿಸುವ ಅಗ್ನಿ ಕುಂಡಕ್ಕೆ ಹಾರಿ ತಮ್ಮ ಸಾಹಸ ಮೆರೆದಿದ್ದಾರೆ. ಅಂತಹ ವೀರ ರಮಣಿಯರ ಜೀವನ ನಮಗೆ ಆದರ್ಶವಾಗಬೇಕೆ ಹೊರತು ಪ್ರೇಮದಲ್ಲಿ ಅಂಧರಾಗಿ ತಮ್ಮ ಮಾತೃ ಧರ್ಮವನ್ನೆ ತ್ಯಜಿಸುವ ಮಹಿಳೆಯರು ಆದರ್ಶವಾಗ ಕೂಡದು. “ನಿಜವಾದ ಪ್ರೇಮ” ಮತಾಂತರವನ್ನು ಬಯಸುವುದಿಲ್ಲ. ಪ್ರಪಂಚದಲ್ಲಿ “ಎರಡು ಮತಗಳನ್ನು” ಹೊರತು ಪಡಿಸಿ ಬೇರಾವ ಮತವೂ ಮದುವೆಯಾಗಲು ಮತಾಂತರಗೊಳ್ಳಬೇಕೆಂದು ಒತ್ತಾಯ ಮಾಡುವುದಿಲ್ಲ.

ಕಪಟ ನಾಟಕದ ಪ್ರೇಮ ಪಾಶದಲ್ಲಿ ಬಿದ್ದು ತನ್ನ ಮಾನ ಮತ್ತು ಧರ್ಮವನ್ನು ತೊರೆಯುವ ಇಂದಿನ ಪೀಳಿಗೆ ಬೇಲಾ ಮತ್ತು ಕಲ್ಯಾಣಿಯಂತಹ ವೀರಾಂಗನೆಯರ ಬಲಿದಾನವನ್ನು ನೆನೆಸಿಕೊಳ್ಳಬೇಕು. ಕಾಮಾಂಧರ ಕೈಯಲ್ಲಿ ಸಿಲುಕಿ ಪರದೇಶದಲ್ಲಿಯೂ ತಮ್ಮ ಮಾನ ರಕ್ಷಣೆ ಮಾಡುತ್ತಾ ರಾಷ್ಟ್ರಭಕ್ತಿ ಮೆರೆದು ಹಿಂದುತ್ವದ ಶಕ್ತಿಯನ್ನು ಪರಿಚಯಿಸಿದ ಈ ಹೆಣ್ಣು ಮಕ್ಕಳ ಜೀವನ ಪ್ರತಿ ಭಾರತೀಯನಿಗೂ ಆದರ್ಶವಾಗಬೇಕು. ಮಹಾನ್ ಧರ್ಮ ರಕ್ಷಕ ಪೃಥ್ವಿರಾಜ್ ಚೌಹಾನರ ಮಗಳು ಬೇಲಾ ಮತ್ತು ಜಯಚಂದರ ಪೌತ್ರಿ ಕಲ್ಯಾಣೀ ಹೆಸರು ಇತಿಹಾಸದ ಪುಟಗಳಲ್ಲಿ ಅಡಗಿ ಹೋಗಿದೆ. ಅವರ ಬಲಿದಾನವನ್ನು ನಾವು ಯಾವತ್ತೂ ಮರೆಯಬಾರದು.

ಮೊಹಮ್ಮದ್ ಘೋರಿಯೆಂಬ ಮತಾಂಧ ಭಾರತವನ್ನು ಕೊಳ್ಳೆ ಹೊಡೆದು, ಮಂದಿರಗಳನ್ನು ಒಡೆದು, ಜಿಹಾದಿನಿಂದ ಇಸ್ಲಾಂ ಅನ್ನು ಭಾರತದಲ್ಲಿ ಪಸರಿಸಿ ತನ್ನ ದೇಶಕ್ಕೆ ವಾಪಾಸು ಹೋಗುವಾಗ ಇಲ್ಲಿಂದ ಲಕ್ಷಾಂತರ ಹಿಂದೂಗಳನ್ನು ಬಂಧಿಸಿ ಗುಲಾಮರನ್ನಾಗಿ ಮಾಡಿಕೊಂಡು ಹೋಗುತ್ತಾನೆ. ಈ ಬಂಧಕರಲ್ಲಿ ಕ್ಷತ್ರಾಣಿಯರಾದ ಬೇಲಾ ಮತ್ತು ಕಲ್ಯಾಣಿಯೂ ಇರುತ್ತಾರೆ. ಹುಟ್ಟೂರಿನಲ್ಲಿ ಘೋರಿಯನ್ನು ಆತನ ಕಾಜಿ ನಿಜಾಮುಲ್ಕ್ ಬರಮಾಡಿಕೊಳ್ಳುತ್ತಾನೆ. ನಿಜಾಮುಲ್ಕ್ ಅತ್ಯಂತ ಪ್ರಸನ್ನನಾಗಿ ಭಾರತವನ್ನು ಕೊಳ್ಳೆ ಹೊಡೆದು ಜಿಹಾದ್ ಕೈಗೊಂಡು ಇಸ್ಲಾಂ ಅನ್ನು ಪಸರಿಸಿದ್ದಕ್ಕಾಗಿ ಘೋರಿಯನ್ನು ಹಾಡಿ ಹೊಗಳುತ್ತಾ, ಭಾರತದಿಂದ ತನಗೇನು ಉಡುಗೊರೆ ತಂದಿದ್ದಿ ಎಂದು ಕೇಳುತ್ತಾನೆ.

ಆಗ ಘೋರಿಯು ಬೇಲಾ ಮತ್ತು ಕಲ್ಯಾಣಿಯರನ್ನು ಮುಂದಿಡುತ್ತಾ ಅವರಿಬ್ಬರನ್ನು ತಮಗಾಗಿ ತಂದಿದ್ದೇನೆ ಎನ್ನುತ್ತಾನೆ. ಬೇಲಾ ಮತ್ತು ಕಲ್ಯಾಣಿಯ ಅಪ್ರತಿಮ ಸೌಂದರ್ಯ ನೋಡಿ ಬೆಕ್ಕಸ ಬೆರಗಾದ ಮುದುಕ, ಕಾಮ ಪಿಪಾಸು ಕಾಜಿ ಇವರಿಬ್ಬರನ್ನು ವಿವಾಹವಾಗುವುದಾಗಿ ನಿಶ್ಚಯಿಸುತ್ತಾನೆ. ಆದರೆ ಚತುರಮತಿ ಹೆಣ್ಣು ಮಕ್ಕಳಿಬ್ಬರೂ ವಿವಾಹಕ್ಕೆ ಎರಡು ಶರತ್ತುಗಳನ್ನಿಡುತ್ತಾರೆ. ಮೊದಲನೆಯದು, ವಿವಾಹವಾಗುವವರೆಗೂ ಕಾಜಿ ಅವರಿಬ್ಬರನ್ನೂ ಮುಟ್ಟಿ ಅಪವಿತ್ರಗೊಳಿಸಬಾರದು. ಎರಡನೆಯದು ಮದುಮಗನ ವಿವಾಹದ ವಸ್ತ್ರ ಮಾತೃಭೂಮಿಯಾದ ಭಾರತದಿಂದಲೇ ಬರಬೇಕೆನ್ನುವುದು. ಕಾಮಾಂಧ ಕಾಜಿ ಎರಡೂ ಶರತ್ತುಗಳಿಗೆ ಒಪ್ಪಿಕೊಳ್ಳುತ್ತಾನೆ.

ಈ ಹೆಣ್ಣುಮಕ್ಕಳು ಬಹು ಉಪಾಯದಿಂದ ಭಾರತದ ತಮ್ಮ ವಿಶ್ವಾಸ ಪಾತ್ರ ಕವಿ ಚಂದನಿಗೆ ರಹಸ್ಯ ಪತ್ರವನ್ನು ಬರೆಯುತ್ತಾ ತೀಕ್ಷ್ಣ ವಿಷ ಲೇಪಿತ ವಸ್ತ್ರವನ್ನು ಮಾಡಿಸಿ ಕಳುಹಿಸಲು ಹೇಳುತ್ತಾರೆ. ಅದರಂತೆಯೇ ಆತ ವಸ್ತ್ರ ವಿನ್ಯಾಸ ಗೊಳಿಸಿ ಕಳಿಸಿ ಕೊಡುತ್ತಾನೆ. ಮದುವೆಯ ದಿನ ಈ ವಸ್ತ್ರವನ್ನು ತೊಡುತ್ತಾ ಸಂಭ್ರಮ ಪಡುವ ಕಾಜಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಸಾವಾಗುವುದೆಂಬ ಕಲ್ಪನೆಯೂ ಇರುವುದಿಲ್ಲ. ಮದುವೆಯ ಕೆಲವೇ ಘಳಿಗೆಯ ಮುನ್ನ ಈ ಇಬ್ಬರು ಹೆಣ್ಣು ಮಕ್ಕಳು ಮಹಲಿನ ಛಾವಣಿಗೆ ಹೋಗಿ ಜನತೆಯ ದರ್ಶನ ಮಾಡಬೇಕೆಂದು ಕಾಜಿಯಲ್ಲಿ ಹೇಳುತ್ತಾರೆ. ಒಪ್ಪಿದ ಕಾಜಿ ಮದುವೆ ಹೆಣ್ಣುಗಳ ಜೊತೆ ಛಾವಣಿಗೆ ಬರುವಷ್ಟರಲ್ಲೆ ಅವನ ಮೈಯಲ್ಲ ಉರಿಯಲು ಶುರುವಿಟ್ಟು ಹುಚ್ಚು ನಾಯಿಯಂತೆ ಅತ್ತಿಂದಿತ್ತ ಓಡಾಡುತ್ತಾನೆ. ಏನಾಗುತ್ತಿದೆ ಎಂದು ತಿಳಿಯದೆ ಕಂಗಾಲಾಗುವಾಗ ಇಬ್ಬರು ಸಿಂಹಿಣಿಯರು ಘರ್ಜಿಸುತ್ತಾರೆ.

” ಭಾರತದ ಮೇಲೆ ಆಕ್ರಮಣ ಮಾಡಲು ನೀನೆ ಘೋರಿಯನ್ನು ಪ್ರಚೋದಿಸಿದ್ದು, ನಾವು ನಿನ್ನನ್ನು ಕೊಲ್ಲುವ ಷಡ್ಯಂತ್ರವನ್ನು ರಚಿಸಿ ಪ್ರತೀಕಾರವನ್ನು ತೆಗೆದುಕೊಂಡಿದ್ದೇವೆ. ಹಿಂದುತ್ವವೆ ನಮ್ಮ ಪ್ರಾಣ, ನಾವು ಹಿಂದೂ ಕುವರಿಯರು, ನಾವು ಬದುಕಿರುವಾಗಲೇ ನಮ್ಮ ಮೈ ಮುಟ್ಟುವ ಸಾಹಸ ಯಾರಲ್ಲಿದೆ?” ಎಂದು ಬೇಲಾ ಹೇಳಿದರೆ, “ನೀನು ಬಾರಿ ಸ್ವ ಮತ ಪ್ರಿಯನಾಗಿದ್ದೀಯೆ, ನಿನ್ನ ಮತವನ್ನು ಶಾಂತಿಯ ಧರ್ಮವೆಂದು ಪ್ರತಿಪಾದಿಸುತ್ತೀಯ, ಜಿಹಾದಿನ ಡೋಲು ಬಡಿಯುತ್ತಾ ಜನರನ್ನು ಕೊಳ್ಳೆ ಹೊಡೆಯುತ್ತಾ, ಶಾಂತಿಯಿಂದ ಜೀವಿಸುವ ಜನರ ಮೇಲೆ ಅತ್ಯಾಚಾರ ಮಾಡುತ್ತೀಯಾ, ಥೂ ನಿನ್ನ ಜನ್ಮಕ್ಕೆ ಧಿಕ್ಕಾರವಿರಲಿ” ಎಂದು ಕಲ್ಯಾಣಿ ಹೇಳುತ್ತಾ, ವಿಷಯುಕ್ತ ಚೂರಿಯಿಂದ ಒಬ್ಬರು ಇನ್ನೊಬ್ಬರ ಎದೆ ಬಗಿಯುತ್ತಾ ಛಾವಣಿಯಿಂದ ಹಾರಿ ಪ್ರಾಣ ತ್ಯಜಿಸುತ್ತಾರೆ. ಅತ್ತ ಕಾಜಿಯೂ ವಿಷದ ಪ್ರಭಾವದಿಂದ ವಿಲ ವಿಲ ಒದ್ದಾಡುತ್ತಾ ಪ್ರಾಣ ಬಿಡುತ್ತಾನೆ.

ಇದು ಭಾರತೀಯ ನಾರಿಯರ ಶಕ್ತಿ. ಇದುವೇ ಸನಾತನ ಹಿಂದುತ್ವದ ಶಕ್ತಿ. ತಮಗಿಂತಲೂ ದೇಶ ಮತ್ತು ಧರ್ಮವೇ ಮೇಲು ಎಂದು ಸಾಬೀತು ಪಡಿಸಿದ ಇಂತಹ ವೀರ ನಾರಿಯರಿಂದಾಗಿಯೆ ಇಂದಿಗೂ ಸನಾತನ ಧರ್ಮ ಉಳಿದಿರುವುದು. ಇಂತಹ ನಾರಿಯರ ಬಲಿದಾನಕ್ಕೆ ಶರಣು. ಬೇಲಾ ಮತ್ತು ಕಲ್ಯಾಣಿಯರು ಸದಾ ನಮಗೆ ಆದರ್ಶವಾಗಿರಲಿ. ಹಿಂದುತ್ವವೇ ಉಸಿರಾಗಿರಲಿ.

source: http://www.sudarshannews.com/category/national/know-who-was-bela-and-kalyani-who-had-killed-akhata-gauris-kazi-for-the-sake-of-protecting-hindutva-she-committed-suicide-2073 

sharvari

Tags

Related Articles

Close