ಪ್ರಚಲಿತ

ಇಸ್ಲಾಮಿಕ್ ಭಯೋತ್ಪಾದನೆಯ ಕುರಿತು ಕೋರ್ಸ್ ತೆರೆಯಲು ಮುಂದಾಗಿದ್ದ ಜೆ ಎನ್ ಯು ಸೃಷ್ಟಿಸಿದೆ ಮತ್ತೊಂದು ಆತಂಕ!!

ಎಡಪಂಥೀಯ ವಿಚಾರಧಾರೆಗಳನ್ನೇ ಮೈಗೂಡಿಸಿಕೊಂಡಿರುವ ಜೆ ಎನ್ ಯು ವಿದ್ಯಾರ್ಥಿಗಳು ದೇಶದ್ರೋಹಿಗಳಿಗೆ ಬೆಂಬಲವನ್ನು ನೀಡಿ ರಾಷ್ಟ್ರದ್ರೋಹವನ್ನು ಎಸಗುತ್ತಿರುವ ವಿಚಾರದಲ್ಲಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುವ ವಿಚಾರ ಗೊತ್ತೇ ಇದೆ!! ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಇಸ್ಲಾಮಿಕ್ ಭಯೋತ್ಪಾದನೆಯ ಕುರಿತು ಕೋರ್ಸ್ ತೆರೆಯುವ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದ್ದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಇದೀಗ ತಾವು ವಿದ್ಯಾರ್ಥಿಗಳಿಗೆ ನಡೆಸುವ ಉಪನ್ಯಾಸಗಳು ಅದೆಷ್ಟು ಮಾರಕ ಎನ್ನುವ ವಿಚಾರ ಇದೀಗ ಬಟಾಬಯಲಾಗಿದೆ.

ಇತ್ತೀಚೆಗಷ್ಟೇ ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ ಮಾಹಿತಿ ಈಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ ಇದೀಗ ಇಂತಹದ್ದೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬೀಳುವ ಮೂಲಕ ಮತ್ತೆ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದೆ!! ಹೌದು… ಪ್ರತಿಬಾರಿಯೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ದೇಶ ವಿರೋಧಿ ಸಂಘಟನೆಗಳನ್ನು ನಡೆಸುತ್ತಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯವು ಭೂಗತ ಲೋಕವನ್ನೇ ಸೃಷ್ಟಿ ಮಾಡುತ್ತಿದೆಯೇ ಎನ್ನುವ ಪ್ರಶ್ನೆಯೂ ಮೂಡಿ ಬರುವಂತೆ ಮಾಡಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಪುಣೆ ಪೊಲೀಸರು ಈ ಕುರಿತಾದ ಭಯಾನಕ ಸುದ್ದಿಯೊಂದನ್ನು ಬಹಿರಂಗ ಪಡಿಸಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ನಡೆದ ಭೀಮಾಕೋರೆಗಾಂವ್ ಗಲಭೆ ಆರೋಪಿಗಳಿಂದ ದೇಶಕ್ಕೆ ಮಾರಕವಾಗುವಂತ ಆಘಾತಕಾರಿ ವಿಷಯಗಳು ಹೊರ ಹೊಮ್ಮುತ್ತಿದ್ದು, ಈ ವಿಚಾರಣೆಯಲ್ಲಿ ಇಡೀ ಗಲಭೆಯ ಹಿಂದಿನ ವ್ಯವಸ್ಥಿತ ಸಂಚು ಬಯಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ಈ ಗಲಭೆ ಆರೋಪದಲ್ಲಿ ಬಂಧಿಸಲಾಗಿರುವ ವ್ಯಕ್ತಿಗಳೇ ಆಘಾತಕಾರಿ ವಿಷಯವೊಂದನ್ನು ಹೊರ ಹಾಕಿದ್ದು, ದೆಹಲಿಯ ಪ್ರತಿಷ್ಟಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಗಳನ್ನು ಏರ್ಪಡಿಸಿ, ಯುವ ವಿದ್ಯಾರ್ಥಿಗಳನ್ನು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಲು ಸಂಚು ರೂಪಿಸಿದ್ದರು ಎಂದು ತಿಳಿಸಿರುವ ವಿಚಾರವನ್ನು ಪುಣೆ ಪೊಲೀಸರು ಹೇಳಿದ್ದಾರೆ.

 

ಈ ಹಿಂದೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಪಾಪಿ ಅಫ್ಜಲ್ ಗುರು ತಿಥಿ ಆಚರಿಸುವ ಭರದಲ್ಲಿ, ಭಾರತದ ಅನ್ನವೇ ತಿನ್ನುವ ಕೆಲವು ಕುತ್ಸಿತ ಮನಸ್ಸುಗಳು ಭಾರತದ ವಿರುದ್ಧ ಘೋಷಣೆ ಕೂಗಿದ್ದರು. ಇಂತಹ ವಿದ್ಯಾರ್ಥಿಗಳು ಇದ್ದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮತ್ತೆ ಬದಲಾವಣೆಯ ಪುಟ್ಟ ಗಾಳಿಯೊಂದು ಬೀಸಿದ್ದು, ವಿಶ್ವದ ಶಾಂತಿಗೇ ಭಂಗ ತಂದಿರುವ ಇಸ್ಲಾಮಿಕ ಭಯೋತ್ಪಾದನೆ ಕುರಿತು ಕೋರ್ಸ್ ಒಂದನ್ನು ತೆರೆಯಲು ಜೆಎನ್ ಯು ವಿವಿಯ ಅಕಾಡೆಮಿಕ್ ಕೌನ್ಸಿಲ್ ಕೇಂದ್ರದ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸುವ ಮೂಲಕ ಸುದ್ದಿಯಾಗಿದ್ದರು!!

ಆದರೆ ಇದೀಗ ಮಹಾರಾಷ್ಟ್ರದಲ್ಲಿ ನಡೆದ ಭೀಮಾಕೋರೆಗಾಂವ್ ಗಲಭೆ ಆರೋಪಿಗಳಿಂದ ದೇಶಕ್ಕೆ ಮಾರಕವಾಗುವಂತ ಆಘಾತಕಾರಿ ವಿಷಯಗಳು ಹೊರಬಿದ್ದಿದೆ!! ಆರೋಪಿಗಳಾದ ಸುಧೀರ್ ದಾವಲೆ, ಮಹೇಶ್ ರೌತ್, ಶೋಮಾ ಸೇನ್, ರೋನಾ ವಿಲ್ಸನ್ ರನ್ನು ಕೋರ್ಟ್ ಗೆ ಹಾಜರು ಪಡಿಸಿದ್ದು, ಈ ವೇಳೆ “ಮೃತ ನಕ್ಸಲರ ಸ್ಮರಣೆ” (ಪೊಲೀಸರಿಂದ ಹತರಾದ ನಕ್ಸಲರ) ಹೆಸರಲ್ಲಿ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸವನ್ನು ಏರ್ಪಡಿಸಿ, ವಿದ್ಯಾರ್ಥಿಗಳನ್ನು ನಕ್ಸಲ ಚಟುವಟಿಕೆಗೆ ತಳ್ಳುವ ಷಡ್ಯಂತ್ರ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಹೊರ ಹಾಕಿದ್ದಾರೆ. ಜೆಎನ್ ಯು ವಿದ್ಯಾರ್ಥಿಗಳನ್ನು  ನಿಷೇಧಿತ ನಕ್ಸಲರ “ಸಿಪಿಐ (ಮಾವೋಇಸ್ಟ್) ಬಂಡಾಯಕಾರರ” ಸಂಘಟನೆಗೆ ಸೇರಿಸುವ ಉದ್ದೇಶ ಇದರ ಹಿಂದೆ ಹೊಂದಲಾಗಿತ್ತು ಎನ್ನಲಾಗಿದೆ.

Image result for JNU

ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಇಂತಹ ಪ್ರಯತ್ನಗಳು ಭಾರತದ ರಕ್ಷಣಾ ವ್ಯವಸ್ಥೆಗೆ ಆಘಾತಕಾರಿಯಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ, ಪಬ್ಲಿಕ್ ಪ್ರಾಸಿಕೂಟರ್ ಉಜ್ವಲ್ ಪವಾರ್ ಈ ಕುರಿತು ಮಾಹಿತಿ ನೀಡಿದ್ದು, “ಪೊಲೀಸ್ ಎನ್ ಕೌಂಟರ್ ನಲ್ಲಿ ಮೃತಪಟ್ಟಿರುವ ನಕ್ಸಲ್  ನವೀನ್ ಬಾಬು ಸ್ಮರಣೆಯಲ್ಲಿ ಉಪನ್ಯಾಸ ಏರ್ಪಡಿಸಿ, ನಕ್ಸಲರ ಮಾರ್ಗದರ್ಶನಂತೆ ವಿದ್ಯಾರ್ಥಿಗಳನ್ನು ಪ್ರಚೋದನೆಗೆ ಒಳಪಡಿಸಿ, ದೇಶವಿರೋಧಿ ಚಟುವಟಿಕೆಗಳಿಗೆ ಭಾಗಿಯಾಗುವಂತೆ ಮಾಡುವ ಹುನ್ನಾರ ಹೊಂದಿದ್ದರು” ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಇಸ್ಲಾಮಿನ ಹೆಸರಿನಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದವನ ತಿಥಿಯನ್ನೇ ಆಚರಿಸಿದ್ದ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಕುರಿತು ಅಧ್ಯಯನ ಮಾಡಲು ನೂತನ ಕೋರ್ಸ್ ತೆರೆಯಲು ಮುಂದಾಗಿದ್ದ ವಿಚಾರ ನಿಜಕ್ಕೂ ಕೂಡ ಆಂತಕವನ್ನು ಸೃಷ್ಟಿ ಮಾಡಿತ್ತು!! ಆದರೆ ಇದೀಗ “ಮೃತ ನಕ್ಸಲರ ಸ್ಮರಣೆ” ಹೆಸರಲ್ಲಿ ವಿದ್ಯಾರ್ಥಿಗಳನ್ನು ನಕ್ಸಲ ಚಟುವಟಿಕೆಗೆ ತಳ್ಳುವ ಷಡ್ಯಂತ್ರ ನಡೆಸುತ್ತಿದೆ ಎಂದರೆ ಇದಕ್ಕೆ ಅದೇನೂ ಹೇಳಬೇಕೋ ನಾ ಕಾಣೆ!!

ಮೂಲ:
 https://www.oneindia.com/india/were-naxals-planning-a-recruitment-drive-at-jnu-2716518.html

– ಅಲೋಖಾ

Tags

Related Articles

Close