ಪ್ರಚಲಿತ

ಪಾಕಿಸ್ತಾನದ ಪ್ರಧಾನಿ ವಿದೇಶಗಳಿಂದ ಭಿಕ್ಷೆ ಬೇಡುತ್ತಿದ್ದಾರೆ: ನವಾಜ್ ಶರೀಫ್

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಭಾರತದ ಚಂದ್ರಯಾನ ಸಾಧನೆಯ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಬಗೆಗೂ ಮಾತನಾಡಿ ಇರುವ ಅವರು, ಪಾಕಿಸ್ತಾನ ಹಣದ ಸಮಸ್ಯೆ ಎದುರಿಸುತ್ತಿದೆ. ಈ ಆರ್ಥಿಕ ಸಮಸ್ಯೆಯ ಹಿಂದೆ ಭಾರತ ಅಥವಾ ಅಮೆರಿಕಾ ಇಲ್ಲ. ಬದಲಾಗಿ ಪಾಕಿಸ್ತಾನದ ಕಾಲಿಗೆ ನಾವೇ ಗುಂಡು ಹೊಡೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆಯನ್ನು ಉಲ್ಲೇಖಿಸಿ, ಪಾಕಿಸ್ತಾನದ ಈ ದಾರುಣ ಸ್ಥಿತಿಗೆ ಭಾರತ, ಅಮೆರಿಕಾವನ್ನು ಹೇಳುವುದಲ್ಲ. ಬದಲಾಗಿ ಸ್ವತಃ ಪಾಕಿಸ್ತಾನವೇ ತನಗೆ ಇಂತಹ ದುಃಸ್ಥಿತಿ ತಂದುಕೊಂಡಿದೆ ಎಂದು ಅವರು ಟಾಂಗ್ ನೀಡಿದ್ದಾರೆ.

ಪಾಕ್ ಮಿಲಿಟರಿಗೆ ತನ್ನ ಕೈಗೊಂಬೆಯ ಹಾಗೆ ಕುಣಿಯುವ ಪ್ರಧಾನಿಯ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ನನ್ನನ್ನು ಮೂರು ಬಾರಿ ಪದಚ್ಯುತಿ ಮಾಡಲಾಯಿತು ಎಂದು ಅವರು ಪಾಕಿಸ್ತಾನ ಮಿಲಿಟರಿ ಬಗ್ಗೆ ಹೇಳಿದ್ದಾರೆ. ಅವರು ಪ್ರತಿ ಬಾರಿ ಕಾನೂನು ಉಲ್ಲಂಘನೆ ಮಾಡಿದಾಗಲೂ ನ್ಯಾಯಾಧೀಶರು ಅವರಿಗೆ ಹೂ ಹಾರ ಹಾಕಿ, ಅವರ ಆಡಳಿತವನ್ನೇ ಕಾನೂನುಬದ್ಧ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಈಗಿನ ಪಾಕ್ ಸರ್ಕಾರವೇ ಇಂದು ಇಲ್ಲಿನ ಜನರು ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಅವರು ದೂರಿದ್ದಾರೆ.

ಹಾಗೆಯೇ ಭಾರತದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಡೆಸಿದ ಚಂದ್ರಯಾನ -3 ರ ಯಶಸ್ಸನ್ನು ಮತ್ತೊಮ್ಮೆ ಶ್ಲಾಘನೆ ಮಾಡಿರುವ ಅವರು, ನಮ್ಮ ನೆರೆಯ ರಾಷ್ಟ್ರ ಭಾರತ ಚಂದ್ರನನ್ನು ತಲುಪಿದೆ. ಆದರೆ ನಮಗೆ ಇನ್ನೂ ನೆಲದ‌ ಮೇಲೆಯೇ ಸರಿಯಾಗಿ ನಿಲ್ಲುವುದು ಸಾಧ್ಯವಾಗಿಲ್ಲ ಎಂದು ಅವರು ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.

ಸದ್ಯ ಪಾಕ್ ಪ್ರಧಾನಿ ಭಿಕ್ಷೆ ಬೇಡಲು ದೇಶದಿಂದ ದೇಶಕ್ಕೆ ಸುತ್ತತ್ತಿದ್ದಾರೆ. ಭಾರತ ಚಂದ್ರನನ್ನು ತಲುಪಿದೆ.ಜಿ-20 ಶೃಂಗ ಸಭೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪಾಕ್ ವಿರುದ್ಧ ಅಲ್ಲಿನ ಜನರೇ ಮಾತನಾಡುತ್ತಿದ್ದು, ಇದು ಪಾಕಿಸ್ತಾನದ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ನಿದರ್ಶನವೇ ಸರಿ.

Tags

Related Articles

Close