ಪ್ರಚಲಿತ

ತಮಿಳುನಾಡಿನ ಹಿಂದೂ ವಿರೋಧಿ ಡಿ ಎಂ ಕೆ ವಿರುದ್ಧ ಪ್ರಧಾನಿ ಮೋದಿ ಕಿಡಿ: ಯಾಕೆ ಗೊತ್ತಾ

ಹಿಂದೂ ವಿರೋಧಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.

ಇಂದು ಕನ್ಯಾಕುಮಾರಿಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಅಲ್ಲಿನ ಆಡಳಿತಾರೂಢ ಡಿ ಎಂ ಕೆ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ‌ ನಡೆಸಿರುವುದಾಗಿದೆ. ಕಾಂಗ್ರೆಸ್‌ ಮತ್ತು ಡಿಎಂಕೆ‌ಗಳು ಎರಡೂ ಪಕ್ಷಗಳೂ ಹಗರಣ ಮತ್ತು ಭ್ರಷ್ಟಾಚಾರದ ಹಿನ್ನೆಲೆಯನ್ನು ಹೊಂದಿವೆ. ಈ ಪಕ್ಷಗಳಿಂದ ತಮಿಳುನಾಡಿನ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಅದು ಕೇವಲ ಕನಸಿನ ಮಾತು ಎಂದು ಪ್ರಧಾನಿ ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ತಮ್ಮ ಮತ್ತು ತಮಿಳುನಾಡಿನ ನಡುವಿನ ಬಾಂಧವ್ಯದ ಕುರಿತು ಮಾತನಾಡಿದ ಅವರು, ಕನ್ಯಾಕುಮಾರಿ ಜೊತೆಗಿನ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡಿಡ್ಡಾರೆ. ನಾನು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 1991 ರ ಅವಧಿಯಲ್ಲಿ ಏಕತಾ ಯಾತ್ರೆ ಆರಂಭ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ. ಈ ಎರಡೂ ಕಡೆಗಳಲ್ಲಿ ವಿಭಜಕ ಸಿದ್ದಾಂತಗಳನ್ನು ತಿರಸ್ಕರಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಭಾರತದ, ತಮಿಳುನಾಡಿನ ಭವಿಷ್ಯದ ಶತ್ರು ಡಿ ಎಂ ಕೆ. ಅಮೋಘ ಸಂಸ್ಕೃತಿಯನ್ನು ತಮಿಳುನಾಡು ಹೊಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ‌ಮೊದಲು ನಾನು ಈ ರಾಜ್ಯಕ್ಕೆ ಆಗಮಿಸಿ, ಹಲವಾರು ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದ್ದೆ. ಆದರೆ ಇಲ್ಲಿನ ಸರ್ಕಾರ ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ನೇರಪ್ರಸಾರವನ್ನೇ ತಡೆಯಲು ಪ್ರಯತ್ನ ನಡೆಸಿತು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಛೀಮಾರಿ ಹಾಕಿದೆ ಎಂದರು.

ಹಾಗೆಯೇ ನೂತನ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವುದು ತಮಿಳುನಾಡಿನ ಸರ್ಕಾರಕ್ಕೂ ಇಷ್ಟವಾಗಲಿಲ್ಲ. ಇಲ್ಲಿನ ಸಂಸ್ಕೃತಿ ಜಲ್ಲಿಕಟ್ಟುವಿಗೆ ದಾರಿ ಮಾಡಿ ಕೊಟ್ಟದ್ದು ನಮ್ಮ ಸರ್ಕಾರ ಎಂದು ಅವರು ಹೇಳಿದ್ದಾರೆ.

ಹಾಗೆಯೇ ತಮಿಳುನಾಡಿನಲೇಲಿ ಮಹಿಳೆಯರನ್ನು ಕಾಣುತ್ತಿರುವ ರೀತಿಗೂ ಮರುಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಬಗ್ಗೆ ಆಡಳಿತರೂಢ ಡಿಎಂಕೆಯ ವಿರುದ್ಧ ಛೀಮಾರಿ ಹಾಕಿದ್ದಾರೆ. 

Tags

Related Articles

Close