ಪ್ರಚಲಿತ

ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರದ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ಮೋದಿ ಕರೆ

ಭಾರತದ ಬಡ ವರ್ಗಗಳು, ಜನ ಸಾಮನ್ಯರನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಸಾಮಾನ್ಯ ಜನರನ್ನು ಸರಿಯಾಗಿ ತಲುಪಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಲು ಮತ್ತು ಯೋಜನೆಗಳಲ್ಲಿ ಜನರು ಇನ್ನೂ ತೊಡಗಿಸಿಕೊಳ್ಳದೇ ಇದ್ದಲ್ಲಿ, ಅವರನ್ನು ಸಹ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ವಿನೂತನ ಕ್ರಮವೇ ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆ.

ಈ ಯೋಜನೆಯ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಅನುಕೂಲಗಳನ್ನು ಪಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಮಜ್ದೂರನ್ ಕಾ ಹಿತ್, ಮಜ್ದೂರನ್ ಕೋ ಸಮರ್ಪಿತ್ ಎಂಬ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಜನರಲ್ಲಿ ಈ ಮನವಿ ಮಾಡಿದ್ದಾರೆ. ನಮ್ಮ ಸರ್ಕಾರದ ಸಂಕಲ್ಪ ಪತ್ರ ಮತ್ತು ಅದರ ಖಾತರಿಯನ್ನು ಪೂರೈಸಲು ಕೇಂದ್ರ ಸರ್ಕಾರವು ವೇಗವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ಯಾತ್ರೆಯನ್ನು ಉಜ್ಜಯಿನಿ ಇಂದ ಆರಂಭ ಮಾಡಲಾಗಿದ್ದು, ಈಗಾಗಲೇ 600 ಕ್ಕೂ ಹೆಚ್ಚು‌ ಪ್ರದೇಶಗಳನ್ನು ತಲುಪಿದೆ ಎಂದು ತಿಳಿಸಿದ್ದಾರೆ.

ಭಾರತ ದೇಶದ ನಾಲ್ಕು ಮುಖ್ಯ ಜಾತಿಗಳು ಎಂದರೆ, ಬಡವರು, ಯುವಜನರು, ಮಹಿಳೆಯರು ಮತ್ತು ರೈತಾಪಿ ವರ್ಗದ ಜನರು. ನಮ್ಮ ಸರ್ಕಾರ ಬಡವರ, ಹಿಂದುಳಿದ ವರ ಸೇವೆಯನ್ನೇ ಆದ್ಯತೆ ಎಂಬುದಾಗಿ ಪರಿಗಣಿಸಿದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಒಟ್ಟಿನಲ್ಲಿ ದೇಶದ ಎಲ್ಲಾ ಜನರಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.‌ ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೂಲಕ ಭಾರತದ ಅಭಿವೃದ್ಧಿಯ ಕನಸನ್ನು ಮತ್ತಷ್ಟು ನನಸಾಗಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ನಾವು ಅಭಿನಂದನೆಗಳನ್ನು ತಿಳಿಸಲೇ ಬೇಕಿದೆ.

Tags

Related Articles

Close