ಪ್ರಚಲಿತ

ಪ್ರಧಾನಿ ಮೋದಿಜಿ ಮುಸಲ್ಮಾನರ ಬಗ್ಗೆ ಏನಂದ್ರು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮುಸಲ್ಮಾನರನ್ನು ಕಡೆಗಣಿಸಲಾಗುತ್ತಿದೆ. ಹಿಂದೂಗಳ ಪರ ಇರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಸಲ್ಮಾನರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೆಲ ಮೋದಿಜಿ ವಿರೋಧಿಗಳ ಬಾಯಲ್ಲಿ ಸದಾ ಗುನುಗುನಿಸುವ ಹಾಡು. ಆದರೆ ಪ್ರಧಾನಿ ಮೋದಿ ಅವರ ಸರ್ಕಾರ ಎಲ್ಲಾ ಧರ್ಮದವರನ್ನೂ ‌ಸಮಾನ ಭಾವದಲ್ಲಿ ಕಾಣುತ್ತಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ ಎನ್ನುವುದು ಸತ್ಯ ಸಂಗತಿ.

ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾತನಾಡಿದ್ದು, ಬ್ರಿಟಿಷ್ ಪ್ರಕಟಣೆ ಫೈನಾನ್ಸಿಯಲ್ ಟೈಮ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಭಾರತದಲ್ಲಿ ಮುಸಲ್ಮಾನರ ಭವಿಷ್ಯದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ನಾವು ಯಾವುದೇ ರೀತಿಯ ತಾರತಮ್ಯ ಧೋರಣೆ ತಾಳಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜೊತೆಗೆ ಕೆಲ ವಿದೇಶಿ ಮತ್ತು ದೇಶೀಯ ವಿಮರ್ಶಕರು ಭಾರತದ ಮುಸಲ್ಮಾನರ ಕುರಿತು, ಪ್ರಧಾನಿ ಮೋದಿ ಅವರ ಕುರಿತು ಮಾತನಾಡುವಾಗ ‘ಭಾರತದಲ್ಲಿ 2014 ರ ಬಳಿಕ ಭಾರತದಲ್ಲಿ ಇಸ್ಲಾಂ ವಿರೋಧಿ ಭಾವನೆಗಳು, ದ್ವೇಷ ಪ್ರವರ್ಧಮಾನಕ್ಕೆ ಬಂತು’ ಎಂಬುದಾಗಿ ಆರೋಪಿಸುತ್ತಿದ್ದು, ಈ ವಾದ ಸಂಪೂರ್ಣ ಸುಳ್ಳು ಎಂಬುದಾಗಿಯೂ ಅವರು ಹೇಳಿದ್ದಾರೆ. ಈ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದಲ್ಲಿನ ಪಾರ್ಸಿ ಸಮುದಾಯದ ವರ ಆರ್ಥಿಕ ಯಶಸ್ಸನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಜೊತೆಗೆ ಅವರನ್ನು ಭಾರತ‌‌ ದೇಶದಲ್ಲಿ ವಾಸಿಸುತ್ತಿರುವ ಧಾರ್ಮಿಕ ಸೂಕ್ಷ್ಮ ಅಲ್ಪಂಸಖ್ಯಾತರು ಎಂದೂ ಬಣ್ಣಿಸಿದ್ದಾರೆ. ಭಾರತ ಪಾರ್ಸಿಗಳಿಗೆ ‌ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ರಾಷ್ಟ್ರವಾಗಿದೆ. ಭಾರತವನ್ನು ಹೊರತುಪಡಿಸಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಪಾರ್ಸಿ ಸಮುದಾಯದ ಜನರು ಕಿರುಕುಳ ಅನುಭವಿಸುತ್ತಿದ್ದಾರೆ, ಭಾರತದಲ್ಲಿ ಅವರು ಸಂತೋಷ, ಸಮೃದ್ಧಿಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆಯೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧ್ಯಮಗಳ ಮೂಲಕ ಈ ಆರೋಪವನ್ನು ಪ್ರತಿನಿತ್ಯ ನಮ್ಮ ಸರ್ಕಾರದ ಮೇಲೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಬಳಕೆ ಮಾಡಿಕೊಂಡು ನಮ್ಮ ಮೇಲೆ ಇಂತಹ ಆರೋಪವನ್ನು ಮಾಡಲಾಗುತ್ತಿದೆ. ಇದು ಆರೋಪ ಮಾಡುವವರ ಹಕ್ಕು.‌ ಆದರೆ ಸತ್ಯ ಏನು ಎಂಬುದನ್ನು ತಿಳಿಸಲು, ಅವರ ಸುಳ್ಳು ಆರೋಪಗಳಿಗೆ ಸತ್ಯದ ಜೊತೆಗೆ ಉತ್ತರಿಸುವ ಹಕ್ಕು ನಮಗೆ ಇದೆ‌ ಎಂದು ಅವರು ಹೇಳಿದ್ದಾರೆ.

ಹಾಗೆಯೇ‌ ಭಾರತದ ಆರ್ಥಿಕ ಪ್ರಗತಿಯ ಬಗೆಗೂ ಸಂತಸ ವ್ಯಕ್ತಪಡಿಸಿರುವ ಅವರು, ವಿಶ್ವದಲ್ಲಿಯೇ ‌ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮ ಭಾರತದ್ದಾಗಿದೆ ಎಂದು ಹೇಳಿದ್ದಾರೆ.

Tags

Related Articles

Close