ಪ್ರಚಲಿತ

ಪ್ರಧಾನಮಂತ್ರಿ ಮೋದಿಯವರ ಪಕೋಡಾ ಮಾರುವ ಸಲಹೆಯಿಂದಾಗಿ ವಡೋದರಾದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಜೀವನವೆ ಬದಲಾಗಿದೆ ಎಂದರೆ ನಂಬಲೇಬೇಕು ನೀವೆಲ್ಲ!!

ಎನ್.ಎಸ್.ಯು.ಐ ಸದಸ್ಯ, ಕಾಂಗ್ರೆಸ್ನ ಕಾರ್ಯಕರ್ತ ಮತ್ತು ಹಿಂದಿ ಪದವೀಧರ ನಾರಾಯಣಭಾಯ್ ರಜಪೂತ್, ವಡೋದರಾ ನಗರದಲ್ಲಿ ‘ಶ್ರೀರಾಮ್ ದಲ್ವಾಡಾ’ ಎಂಬ ಹೆಸರಿನ ಪಕೋಡಾ ಅಂಗಡಿಯನ್ನು ಸ್ಥಾಪಿಸಿದ್ದು, ಈ ಅಂಗಡಿ ಈಗ ಒಂದೇ ನಗರದ ವಿವಿಧ ಪ್ರದೇಶಗಳಲ್ಲಿ 35 ಫ್ರಾಂಚೈಸಿಗಳನ್ನು ಹೊಂದಿದೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ!! ಹೌದು ಇದು ಸತ್ಯ, ಪ್ರಧಾನಮಂತ್ರಿ ಮೋದಿಯವರ ಪಕೋಡಾ ಮಾರುವ ಸಲಹೆಯಿಂದಾಗಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಜೀವನವೆ ಬದಲಾಗಿ ಹೋಗಿದೆ.

ಪ್ರಧಾನಿ ಮೋದಿಯವರ ಮಾತುಗಳಿಂದ ಪ್ರೇರಿತರಾಗಿ ತಾನು ಪಕೋಡಾ ಅಂಗಡಿ ತೆರೆದಿದ್ದೇನೆ ಎನ್ನುತ್ತಾರೆ ನಾರಾಯಣ ಭಾಯ್ ರಜಪೂತ್! ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದಾಗ, ನಿರುದ್ಯೋಗಿಯಾಗಿ ಕಾಲ ಕಳೆಯುವುದಕ್ಕಿಂತ ದಿನಕ್ಕೆ 200 ರುಪಾಯಿ ಸಂಪಾದಿಸಬಹುದಂತಹ ಪಕೋಡಾ ಮಾರುವುದು ಕೂಡಾ ಒಂದು ಉದ್ಯೋಗವೆ ಎಂದು ಹೇಳಿದ್ದನ್ನೆ ಕಾಂಗ್ರೆಸ್ ಕಡ್ದಿಯನ್ನು ಗುಡ್ಡ ಮಾಡಿ, ವಿದ್ಯಾವಂತರನ್ನು ಪಕೋಡಾ ಮಾರಲು ಹೇಳಿದರು ಎಂದು ಬಾಯಿ ಬಡಿದುಕೊಂಡು ಊರು ತುಂಬಾ ತಿರುಗಾಡಿದ್ದರು. ಮೋದಿ ಅವರನ್ನು ಹೀಯಾಳಿಸಲು, ಪದವೀಧರರಿಂದ ಪಕೋಡಾ ಮಾಡುವ ನಾಟಕವನ್ನೂ ಮಾಡಿಸಿದ್ದರು.

ಆದರೆ ನಾರಾಯಣ ಭಾಯ್ ಮಾತ್ರ ಮೋದಿ ಅವರ ಈ ಸಲಹೆಯನ್ನು ಸವಾಲಾಗಿ ಸ್ವೀಕರಿಸಿದರು. ನಾನೊಬ್ಬ ಕಟ್ಟರ್ ಕಾಂಗ್ರೆಸಿಗ, ಮತ್ತು ನನ್ನ ಮುಂದಿನ ಜನುಮದಲ್ಲಿಯೂ ನಾನು ಕಾಂಗ್ರೆಸಿಗನಾಗಿಯೆ ಹುಟ್ಟಲು ಬಯಸುತ್ತೇನೆ ಎನ್ನುವ ನಾರಾಯಣ ಭಾಯ್, ಮೋದಿ ಅವರ ಪಕೋಡಾ ಮಾರುವ ಸಲಹೆಯಂತೆ ತಾನು ಮೊದಲು ಪಕೋಡಾ ಮಾಡಲು 10 ಕೆ.ಜಿಯಷ್ಟು ಕಚ್ಚಾ ಸಾಮಾಗ್ರಿ ಕೊಂಡುಕೊಳ್ಳುತ್ತಿದ್ದೆ . ಆದರೆ ಅದೆ ಈಗ 500 ರಿಂದ 600 ಕೆಜಿಗಳಷ್ಟು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದೇನೆ ಎನ್ನುತ್ತಾರೆ! ಪ್ರಧಾನಿ ಮೋದಿಯವರ ಒಂದೆ ಒಂದು ಹೇಳಿಕೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತನ ಜೀವನವೆ ಹೇಗೆ ಬದಲಾಯಿತು ನೋಡಿ!

ತನ್ನ ಅಂಗಡಿಗೆ ‘ಶ್ರೀರಾಮ್’ ಎನ್ನುವ ಹೆಸರು ಏಕೆ ಇಟ್ಟಿದ್ದು ಎಂದು ಕೇಳಿದಾಗ, ಶ್ರೀರಾಮ್ ಹೆಸರಿನಿಂದ ಸಾಮಾನ್ಯ ಕಲ್ಲು ನೀರಿನಲ್ಲಿ ತೇಲಬಹುದಾದರೆ, ಶ್ರೀರಾಮ್ ಹೆಸರಿನಿಂದ ಮೋದಿ ಮತ್ತು ಅಮಿತ್ ಶಾ ದೇಶವನ್ನಾಳಬಲ್ಲರಾದರೆ, ನನ್ನ ಅಂಗಡಿಯೂ ಇದೆ ಹೆಸರಿನಿಂದ ಚೆನ್ನಾಗಿ ನಡೆಯಬಲ್ಲದು ಎಂದು ಈ ಹೆಸರು ಇಟ್ಟೆ ಎನ್ನುತ್ತಾರೆ! ಅಂತೂ ಅವರ ನಂಬಿಕೆ ಸುಳ್ಳಾಗಲಿಲ್ಲ, ಶ್ರೀ ರಾಮ ಅವರ ಕೈ ಬಿಡಲಿಲ್ಲ!! ಇದನ್ನು ಉಳಿದ ಕಾಂಗ್ರೆಸಿಗರು ಅರ್ಥ ಮಾಡಿಕೊಳ್ಳುವರೆ? 100 ಗ್ರಾಮಿನ ಬೇಳೆಯ ಪಕೋಡಾವನ್ನು ಹತ್ತು ರುಪಾಯಿ ಬೆಲೆಗೆ ಮಾರುವ ನಾರಾಯಣ ಭಾಯ್ ಗೆ ಮೊದಲನೆ ವಾರದಲ್ಲಿಯೆ ಗ್ರಾಹಕರು ಮುತ್ತಿಕೊಂಡಿದ್ದರು ಎಂದರೆ ಈ ಪಕೋಡಾಗೆ ಎಷ್ಟು ಬೆಲೆ ಇದೆ ಎಂದು ಊಹಿಸಿ.

ಬೆಳಿಗ್ಗೆ 7-11 ಗಂಟೆವರೆಗೆ ಅಂಗಡಿ ತೆರೆಯುವ ಈ ವ್ಯಕ್ತಿ ನಾಲ್ಕು ಗಂಟೆಗಳಲ್ಲಿ 300 kg ಯಷ್ಟು ಪಕೋಡಾ ಮಾರುತ್ತಾರೆ ಅದೂ ಕೂಡಾ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು! ಹಾಗಾದರೆ ದಿನಕ್ಕೆ ಅವರ ಆದಾಯ ಎಷ್ಟಿರಬಹುದು ನೀವೇ ಯೋಚಿಸಿ! ಪ್ರಧಾನ ಮಂತ್ರಿ ಅವರ ಈ ಹೇಳಿಕೆಯಿಂದಾಗಿ ತನ್ನ ಜೀವನವೆ ಬದಲಾಗಬಹುದೆನ್ನುವ ಪರಿವೆ ತನಗಿರಲಿಲ್ಲ ಎನ್ನುವ ನಾರಾಯಣ ಭಾಯ್, ಮೋದಿ ಅವರು ಈ ದೇಶದ ಮುಖ್ಯಸ್ಥ ಮತ್ತು ರಾಹುಲ್ ಗಾಂಧಿಗೆ ಕೂಡಾ ಎಂದು ಹೇಳುವ ಮೂಲಕ ಮೋದಿ ನಮಗೆಲ್ಲರಿಗೂ ಪ್ರಧಾನಿ ಎನ್ನುವುದನ್ನು ನೆನಪಿಸುತ್ತಾರೆ. ಮೋದಿ ಅವರ ಹೇಳಿಕೆಗೆ ಸವಾಲೊಡ್ಡುವ ಸಲುವಾಗಿಯೆ ತೆರೆದ ಅಂಗಡಿಯೊಂದು ಇಂದು ಕಾಂಗ್ರೆಸ್ ಕಾರ್ಯಕರ್ತನ ಜೀವನವನ್ನು ಬದಲಾಯಿಸಿತು. ಇನ್ನಾದರೂ ಮೋದಿ ಅವರನ್ನು ಹೀಯಾಳಿಸುವುದನ್ನು ಬಿಡಿ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಿ ಮತ್ತು ದೇಶ ಕಟ್ಟುವ ಕೆಲಸದಲ್ಲಿ ಅವರ ಜೊತೆ ಕೈ ಜೋಡಿಸಿ…

-ಶಾರ್ವರಿ

Tags

Related Articles

Close