ಪ್ರಚಲಿತ

ದಲಿತರ ಹೆಸರಲ್ಲಿ ನೀಚ ರಾಜಕಾರಣ ಮಾಡುವವರೇ! ದೇಶದಲ್ಲಿ ಒಬ್ಬ ದಲಿತ ರಾಷ್ಟ್ರಪತಿ, 79 ದಲಿತ ಸಂಸದರು, 543 ದಲಿತ ಶಾಸಕರು, ಮತ್ತು ಸಾವಿರಾರು ದಲಿತ ಅಧಿಕಾರಿಗಳಿದ್ದಾರೆ ತಿಳಿಯಿರಿ!

ಭಾರತಕ್ಕೆ ತನ್ನದೇ ಆದ ಸಂವಿಧಾನ ದೊರಕಿ 68 ವರ್ಷಗಳು ಕಳೆದು ಹೋದವು. ಇಷ್ಟು ವರ್ಷಗಳಲ್ಲಿ ಮೀಸಲಾತಿಯ ಸವಿಯುಂಡವರು ಅಲ್ಪ ಸಂಖ್ಯಾತರು ಮತ್ತು ದಲಿತರು. ಆ ಕಾಲಘಟ್ಟದಲ್ಲಿ ದಲಿತರ ಉತ್ಥಾನಕ್ಕಾಗಿ ಮೀಸಲಾತಿ ಅವಶ್ಯವಾಗಿತ್ತು. ಆದರೆ ಜಾತಿ ಆಧಾರಿತ ಈ ಮೀಸಲಾತಿ ಕೇವಲ ಓಲೈಕೆ ರಾಜಕಾರಣಕ್ಕೆ ಸೀಮಿತವಾಗಿ ದೇಶದ ಅಭಿವೃದ್ಧಿಗೇ ಮಾರಕವಾಯಿತು. ಇವತ್ತು ದೇಶ ಹಿಂದುಳಿಯಲು, ನಿರುದ್ಯೋಗ ಹೆಚ್ಚಲು ಈ ಜಾತಿ ಮೀಸಲಾತಿಯೇ ಕಾರಣ. ಅರ್ಹತೆ ಮತ್ತು ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲಷ್ಟೇ ಇರಬೇಕಾಗಿದ್ದ ಮೀಸಲಾತಿಯ ಪಿಡುಗು ಇಂದು ಪ್ರತಿ ಜಾತಿಗೂ ಹರಡಿದೆ.

ದಲಿತರು ತುಳಿತಕ್ಕೊಳಗಾಗಿದ್ದಾರೆ, ದಲಿತರಿಗೆ ನ್ಯಾಯ ಇಲ್ಲ, ದಲಿತರ ಬಗ್ಗೆ ಮೋದೀ ಜೀ ಗೆ ಕಾಳಜಿ ಇಲ್ಲ ಎಂದು ಹುಯಿಲೆಬ್ಬಿಸುವ ಮೋದಿ ವಿರೋಧಿಗಳಿಗೆ ದಲಿತರ ದಮನವನ್ನು ಸ್ವತ ದಲಿತರೆ ಮಾಡುತ್ತಿರುವ ಸತ್ಯವನ್ನು ಜನತೆಗೆ ತಿಳಿಸಲು ಬಾಯಿ ಬರುತ್ತಿಲ್ಲ. ಈ ದೇಶಕ್ಕೆ ಒಬ್ಬ ದಲಿತ ರಾಷ್ಟ್ರಪತಿಯನ್ನು ಕೊಟ್ಟದ್ದು ಭಾಜಪಾದ ಮೋದಿ ಸರಕಾರ. ದೇಶದಲ್ಲಿ ಒಟ್ಟು 79 ದಲಿತ ಸಂಸದರಿದ್ದಾರೆ ಇದರಲ್ಲಿ 40, ಅಂದರೆ ಅರ್ಧಕ್ಕಿಂತಲೂ ಹೆಚ್ಚು ಸಂಸದರು ಭಾಜಪಾ ಪಕ್ಷದವರು!! ಆದರೂ ಭಾಜಪಾ ದಲಿತ ವಿರೋಧಿ, ಮೋದಿ ದಲಿತ ವಿರೋಧಿ ಎನ್ನುತ್ತಾರೆ ವಿರೋಧಿಗಳು.

ಇಡಿಯ ದೇಶದಲ್ಲೇ ಒಟ್ಟು 543 ದಲಿತ ಎಮ್ಎಲ್ಎಗಳಿದ್ದಾರೆ ಅಷ್ಟು ಮಾತ್ರವಲ್ಲ, ಸರಕಾರೀ ಕೆಲಸಗಳಲ್ಲಿ ದಲಿತರಿಗೇ ಮೊದಲನೇ ಪ್ರಾಶಸ್ತ್ಯ. ದೇಶದ ಸರಕಾರದ ಪ್ರತಿ ಆಯಕಟ್ಟಿನ ಜಾಗಗಳಲ್ಲಿ ದಲಿತರೇ ಕೆಲಸ ನಿರ್ವಹಿಸುವುದು. ಅಲೀಗಢ ಮುಸ್ಲಿಮ್ ವಿಶ್ವ ವಿದ್ಯಾಲಯ ಮತ್ತು ಜಾಮಿಯಾ ಇಸ್ಲಾಮಿಕ್ ವಿಶ್ವ ವಿದ್ಯಾಲಯವನ್ನು ಹೊರತು ಪಡಿಸಿ ದೇಶದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲೂ ದಲಿತರಿಗೆ ಮೀಸಲಾತಿ. ದಲಿತ- ದಲಿತ ಜಪ ಮಾಡುವವರು ಈ ಮುಸ್ಲಿಂ ವಿಶ್ವ ವಿದ್ಯಾಲಯಗಳಲ್ಲಿ ದಲಿತರಿಗೆ ಮೀಸಲಾತಿ ಯಾಕೆ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡಿ ನೋಡಣ. ಮೋದೀ ಸರಕಾರ ಈ ಎರಡು ವಿಶ್ವ ವಿದ್ಯಾಲಯಗಳಲ್ಲೂ ದಲಿತರಿಗೆ ಮೀಸಲಾತಿ ಬೇಕೆಂದು ಹೋರಾಡುತ್ತಿರುವ ವಿಷಯ ದಲಿತ ಪ್ರೇಮಿಗಳಿಗೆ ಗೊತ್ತಿಲ್ಲವೇ? ಕಾಂಗ್ರೆಸಿನಿಂದ ಮಾಡಲಾಗದ ಕೆಲಸವನ್ನು ಮೋದಿಜಿಯವರು ಮಾಡುತ್ತಿರುವ ವಿಚಾರ ಇವರಿಗೆ ಗೊತ್ತಿಲ್ಲವೇ?

ಸೈನ್ಯ ಮತ್ತು ಖಾಸಗಿ ಕ್ಷೇತ್ರವನ್ನು ಬಿಟ್ಟು ಉಳಿದೆಲ್ಲಾ ಕಡೆಯಲ್ಲೂ ದಲಿತರದ್ದೇ ಪಾರಮ್ಯ. ಪ್ರತಿಭೆ ಇದ್ದರೂ ಅವಕಾಶ ವಂಚಿತರು, ಹಸಿವೆಯಿದ್ದೂ ಅನ್ನದಿಂದ ವಂಚಿತರು ಉಳಿದ ತಥಾಕಥಿತ ಮೇಲ್ವರ್ಗದ ಜನರು. ಅವರ ತಪ್ಪಾದರೂ ಏನು? ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನದಲ್ಲೇಕೆ ಈ ಜಾತಿ ಮೀಸಲಾತಿ? ಸಂವಿಧಾನದ ಪ್ರಕಾರ ಸಾರ್ವಜನಿಕ ಮತ್ತು ಸರಕಾರಿ ಕ್ಷೇತ್ರಗಳಲ್ಲಿ ಕೇವಲ ಹತ್ತು ವರ್ಷದವರೆಗೆ ಮಾತ್ರ ಮೀಸಲಾತಿಯ ಫಲ ಅನುಭವಿಸಬೇಕು ಮತ್ತು ಕಾಲಕಾಲಕ್ಕೆ ಇದರಲ್ಲಿ ಬದಲಾವಣೆ ತಂದು ಉಳಿದ ದಲಿತರಿಗೆ ಅದರ ಫಲ ವರ್ಗಾವಣೆಯಾಗಬೇಕೆಂದು ಬರೆಯಲಾಗಿದೆ. ಲೋಕಸಭೆಯನ್ನು ಪ್ರತಿನಿಧಿಸುವ 543 ಕ್ಷೇತ್ರಗಳಲ್ಲಿ 85 ಕ್ಷೇತ್ರ(15.47%) ಎಸ್.ಸಿ ಮತ್ತು 48 ಕ್ಷೇತ್ರ (8.66%) ಎಸ್.ಟಿಗಳಿಗೆ ಮೀಸಲಾಗಿದೆ!!

ಇಷ್ಟೆಲ್ಲಾ ಅವಕಾಶಗಳಿದ್ದೂ ದಲಿತರು ಇನ್ನೂ ಶೋಷಿತರು, ತುಳಿತಕ್ಕೊಳಗಾದವರು ಎನ್ನುತ್ತಾರೆ. ದೇಶದಲ್ಲಿ ಹಲವು ಕಡೆಗಳಲ್ಲಿ ದಲಿತರು ಇವತ್ತಿಗೂ
ಶೋಷಣೆಗೊಳಗಾಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊನ್ನೆ-ಮೊನ್ನೆಯಷ್ಟೇ ಕೇರಳದಲ್ಲಿ ಹಸಿದ ದಲಿತನೊಬ್ಬ ಅನ್ನ ಕದ್ದನೆಂದು ಮನಸೋ ಇಛ್ಚೆ ಆತನಿಗೆ ಥಳಿಸಿ ಕೊಂದೇ ಹಾಕಲಾಯಿತು. ಕೇರಳದಲ್ಲಿರುವುದು ಭಾಜಪಾ ಅಲ್ಲ, ಕಮ್ಯೂನಿಷ್ಟರ ಸರಕಾರ ಆದರೆ ಏನಾಗ್ತಿದೆ ಕರ್ನಾಟಕದಲ್ಲಿ ಎಂದು ಅಬ್ಬರಿಸಿ ಬೊಬ್ಬಿರಿದವರು ಕೇರಳದಲ್ಲಾದ ದಲಿತ ಹತ್ಯೆಗೆ ತುಟಿ ಪಿಟಿಕ್ ಎನ್ನಲಿಲ್ಲ. ಭಾಜಪಾ ಶಾಸಿತ ರಾಜ್ಯಗಳಲ್ಲಿ ದಲಿತರಿಗೆ ಸುಖವಿಲ್ಲ ಎನ್ನುವ ಸುಳ್ಳುಗಾರರು ದಲಿತರ ಮೇಲೆ ಅನ್ಯ ರಾಜ್ಯಗಳಲಾಗುವ ದೌರ್ಜನ್ಯಕ್ಕೆ ಗಾಂಧಿಯ “ಮೂರು ಮಂಗಗಳಂತೆ” ತಣ್ಣನೆ ಕೂತು ಬಿಡುತ್ತಾರೆ.

ದೇಶದ ಸರ್ವೋಚ್ಚ ನ್ಯಾಯಾಲಯವು ಜಾತಿ ಮೀಸಲಾತಿಯ ಬಗ್ಗೆ ತೀರ್ಪು ನೀಡುತ್ತಾ ಯಾವುದೇ ಸರಕಾರಿ ಕ್ಷೇತ್ರದಲ್ಲಿ 50% ಕ್ಕಿಂತ ಹೆಚ್ಚು ಮೀಸಲಾತಿ
ಕೊಡಬಾರದೆಂದು ತಾಕೀತು ಮಾಡಿರುತ್ತದೆ. ನ್ಯಾಯಲಯದ ಪ್ರಾಕಾರ ಹೀಗೆ ಮಾಡುವುದರಿಂದ ಸಂವಿಧಾನದ ಆಶಯವಾದ ಸಮಾನ ನಾಗರಿಕ ಸಂಹಿತೆಯ ಆಶಯಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ ರಾಜಕೀಯ ಪಕ್ಷಗಳು ಸಂವಿಧಾನದ ಆಶಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆಜ್ಞೆಯನ್ನು ಅವಗಣಿಸಿ ಸರಕಾರಿ ಮಾತ್ರವಲ್ಲ ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿ ಬೇಕೆಂದು ಹುಯಿಲೆಬ್ಬುಸುತ್ತಿವೆ. AIIMS ನಂತಹ ವೈದ್ಯಕೀಯ ಸಂಸ್ಥೆಯಲ್ಲೂ ಎಸ್.ಸಿಗಳಿಗೆ 14% ಮತ್ತು ಎಸ್.ಟಿಗಳಿಗೆ 8% ಮೀಸಲಾತಿ. ಸರಕಾರಿ ಕಾಲೇಜಿನಲ್ಲಿ ಸೀಟ್ ಸಿಗಲು ದಲಿತರಿಗೆ ಕೇವಲ 50% ಅಂಕಗಳಿದ್ದರೆ ಸಾಕು. ಇಲ್ಲೊಂದು ವಿಚಿತ್ರವೆಂದರೆ ಯಾವುದೇ ದಲಿತ ಪ್ರೇಮಿ ಸಂಘಟನೆಗಳು ಸೈನ್ಯದಲ್ಲೂ ಮೀಸಲಾತಿ ಕೊಡಿ, ಮೊದಲು ದಲಿತರು ಉಗ್ರರನ್ನು ಎದುರಿಸಲಿ ತದನಂತರ ಅಲ್ಪಸಂಖ್ಯಾತರು ಆಮೇಲೆ ಸಾಮಾನ್ಯ ವರ್ಗದ ಜನರು ಹೋರಾಡಲಿ ಎಂದು ಹೇಳುವುದೇ ಇಲ್ಲ!!

ಇದರಿಂದಲೇ ಗೊತ್ತಾಗುವುದು ಇವರ ದಲಿತ ಪ್ರೇಮ ಮತ್ತು ದೇಶ ಪ್ರೇಮ. ಸಾಮಾನ್ಯ ವರ್ಗದವರು ಇವರ ವಿರುದ್ದ ಎರಡು ಮಾತನಾಡಿದರೂ ಕೇಸ್ ಜಡಿಯುವ ದಲಿತ ನಾಯಕರು ದಲಿತರಿಂದ ಶೋಷಣೆಗೊಳಗಾದ ಸಾಮಾನ್ಯ ವರ್ಗದವರಿಗೆ ಯಾವ ನ್ಯಾಯವನ್ನೂ ಒದಗಿಸುವುದಿಲ್ಲ. ಕಳೆದ ಅರ್ವತ್ತೆಂಟು ವರ್ಷಗಳಿಂದ ಮೀಸಲಾತಿಯ ಸವಿ ತಿಂದವರೆ ತಿಂದು ದಲಿತರ ಹಕ್ಕನ್ನು ಕಸಿದುಕೊಂಡದ್ದೇ ಹೊರತು ಸಾಮಾನ್ಯ ವರ್ಗದವರಲ್ಲ. ಸಾಮಾನ್ಯ ವರ್ಗದವರು ಮೈ ಮುರಿದು ದುಡಿದು ತಮ್ಮ ಸಂಪಾದನೆಯನ್ನು ತಾವೇ ಮಾಡಿಕೊಂಡು, ತಮಗಾದ ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಂದಿದ್ದರೂ ದಲಿತರನ್ನು ಶೋಷಿಸುತ್ತಾರೆ ಎಂದು ಅವರ ಮೇಲೆಯೇ ಗೂಬೆ ಕೂರಿಸುತ್ತಾರೆ. ತಮ್ಮ ಹಕ್ಕಿಗಾಗಿ ಪ್ರತಿಭಟನೆಯೂ ಮಾಡದ ಸಾಮಾನ್ಯ ವರ್ಗದವರು ತಮ್ಮದೇ ದೇಶದಲ್ಲಿ ಶೋಷಣೆಗೊಳಗಾದವರು. ಹೊಟ್ಟೆ ಪಾಡಿಗಾಗಿ ಕತ್ತೆ ದುಡಿತ ಮಾಡಿ, ದುಡಿದದ್ದೆಲ್ಲವನ್ನೂ ತೆರಿಗೆ ಮತ್ತು ಲೋನ್ ಕಟ್ಟಿ ಕಟ್ಟಿ ಹೈರಾಣಾಗಿ, ಪ್ರತಿಭೆ ಇದ್ದರೂ ಕಾಲೇಜಿನಲ್ಲಿ ಸೀಟ್ ಸಿಗದೆ, ಸರಕಾರಿ ಉದ್ಯೋಗದಲ್ಲಿ ಕಡೆಗಣಿಸಲಾಗುವ ಸಾಮಾನ್ಯ ವರ್ಗದವರು ಶೋಣೆಮಾಡುವವರೊ ಇಲ್ಲ ಶೋಷಿತರೋ ನೀವೇ ಹೇಳಿ.

https://en.wikipedia.org/wiki/Reservation_in_India

-Sharwari

Tags

Related Articles

Close