ಪ್ರಚಲಿತ

ಕಾಂಗ್ರೆಸ್ ಸಂಸ್ಕೃತಿ ಏನು ಎಂಬುದನ್ನು ಯತೀಂದ್ರ ಸಿದ್ದರಾಮಯ್ಯ ಬಯಲು ಮಾಡಿದ್ದಾರೆ: ಪ್ರಲ್ಹಾದ ಜೋಶಿ

ಕಾಂಗ್ರೆಸ್‌ ಸಂಸ್ಕೃತಿ ಏನು ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಭಾರತ ದೇಶವನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು, ಬಿಜೆಪಿ ಪಕ್ಷದ ಇತರರು ಮತ್ತು ತಮ್ಮ ಎಲ್ಲಾ ವಿರೋಧಿಗಳನ್ನು ಬಾಯಿಗೆ ಬಂದ ಹಾಗೆ ತೆಗಳುವುದೇ ಕಾಂಗ್ರೆಸಿಗರ ದೈನಂದಿನ ಚಟುವಟಿಕೆಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ.

ಕೇಂದ್ರ ಗೃಹ ಸಚಿವ ಅಮಿತ್ ಶಾ‌ ಅವರ ವಿರುದ್ಧ ನಾಲಿಗೆ ಹರಿಯ ಬಿಟ್ಟ ಕಾಂಗ್ರೆಸ್ ನಾಯಕ, ಸಿ ಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಿಡಿ ಕಾಕಿದ್ದಾರೆ‌.‌‌

ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ ನಾಲಿಗೆ ಎಳೆದ ಯತೀಂದ್ರ ‌ಸಿದ್ದರಾಮಯ್ಯ ಅವರ ಮಾತುಗಳು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿ ಏನು ಎಂಬುದಾಗಿ ತೋರಿಸುತ್ತದೆ. ಯತೀಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಠೇವಣಿ ಕಳೆದು ಹೋಗುವ ಭಯದಲ್ಲಿ ಅಮಿತ್ ಶಾ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿರುವುದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಹಾಗೆಯೇ ಈ ಹಿಂದೆ ಅಮಿತ್ ಶಾ ಆವರ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಕರಣ ದಾಖಲು ಮಾಡಿತ್ತು. ಆದರೆ ಆ ಎಲ್ಲಾ ಪ್ರಕರಣಗಳನ್ನು ಸಹ ನ್ಯಾಯಾಲಯ ತಿರಸ್ಕರಿಸಿದ್ದು, ಅವರನ್ನು ಸಂಪೂರ್ಣ ದೋಷ ಮುಕ್ತ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕೃತಿ ಬಗೆಗೂ ಅವರು ಮಾತನಾಡಿದ್ದು, ಕಾಂಗ್ರೆಸ್‌ನವರು ನಲಪಾಡ್‌ನಂತಹವರನ್ನು ತಮ್ಮ ಪಕ್ಷದಲ್ಲಿ ಇರಿಸಿಕೊಂಡು ಗೂಂಡಾಗಿರಿ ಬಗ್ಗೆ ಮಾತನಾಡುತ್ತಾರೆ. ಗೂಂಡಾಗಳ ಹಾಗೆ ವರ್ತಿಸುವ ಹಲವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಆದರೆ ಅವರು ಕೇಂದ್ರ ಸರ್ಕಾರದ ಓರ್ವ ದಕ್ಷ ಮಂತ್ರಿ ಅಮಿತ್ ಶಾ ಅವರ ಬಗ್ಗೆ ಮಾತನಾಡುತ್ತಾರೆ. ಇದು ಅವರ ಸಂಸ್ಕೃತಿ ಏನು ಎಂಬುದನ್ನು ಜಗಜ್ಜಾಹೀರು ಮಾಡಿದೆ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರ‌ವನ್ನು ಭಾರತದಿಂದ ಬೇರ್ಪಡಿಸಿದ್ದ ಆರ್ಟಿಕಲ್ 370 ರದ್ದು ಮೊದಲಾದ ಮಹತ್ವದ ನಿರ್ಣಯಗಳನ್ನು ನಾವು ಕಾನೂನಾತ್ಮಕವಾಗಿ ಮಾಡಿದ್ದೇವೆ. ಕಾಂಗ್ರೆಸ್ ಸಂವಿಧಾನಕ್ಕೆ ಗೌರವ ನೀಡುವುದಿಲ್ಲ. ಬದಲಾಗಿ ಕತ್ತು ಹಿಸುಕಿದವರು. ನಾವು ಸಂವಿಧಾನ ದಿನವನ್ನು ಆಚರಣೆಗೆ ತಂದರೆ, ಕಾಂಗ್ರೆಸ್ ಈ ಬಗ್ಗೆ ಅಪ‌ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಜನ್ಮ ಜಾಲಾಡಿದ್ದಾರೆ.

Tags

Related Articles

Close