ಪ್ರಚಲಿತ

ವಿಶ್ವಕ್ಕೆ ಭಾರತದ ಶಕ್ತಿಯ ಅರಿವಾಗಿದೆ: ಪ್ರಲ್ಹಾದ ಜೋಶಿ

ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ವಹಿಸಿಕೊಂಡ ಬಳಿಕ ಅಮೆರಿಕಾಗೆ ‌ಸಲಾಂ ಹೊಡೆಯುವ ಪದ್ದತಿ ಮಾಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಅಧಿಕಾರದ ಚುಕ್ಕಾಣಿ ಬಿಜೆಪಿಯ ಕೈ ಸೇರುವ ಮುನ್ನ ಅಮೆರಿಕ ಹೇಳಿದ್ದೇ ‌ವೇದವಾಕ್ಯ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಈಗ ಭಾರತದ ಶಕ್ತಿ ಏನು ಎಂಬುದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಶಕ್ತಿಯನ್ನು ವಿಶ್ವದ ಎದುರು ತೆರೆದಿಟ್ಟಿದ್ದಾರೆ ‌ಎಂದು ಅವರು ಹೇಳಿದ್ದಾರೆ.

ಭಾರತವನ್ನು ವಿಶ್ವದ ಮೂರನೇ ಆರ್ಥಿಕತೆಯನ್ನಾಗಿ ಪ್ರಧಾನಿ ಮೋದಿ ಅವರು ರಚಿಸುವ ಮೂರನೇ ಅವಧಿಯ ಸರ್ಕಾರ ಮಾಡಿ ತೋರಿಸಲಿದೆ. ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸ್ವತಃ ಐಎಂಎಫ್ ಹೇಳಿದೆ. ಜಗತ್ತಿನ ಹಲವಾರು ರಾಷ್ಟ್ರಗಳು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ. ದೇಶೀಯ ಉತ್ಪಾದನಾ ಪ್ರಮಾಣ ಸಹ ಹೆಚ್ಚಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಭಯೋತ್ಪಾದನೆ ಮಟ್ಟ ಹಾಕಲ್ಪಟ್ಟಿದೆ. ಪ್ರಧಾನಿ ಮೋದಿ ಅವರ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ನಂ.1 ದೇಶವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ವಹಿಸಿದ ಬಳಿಕ ವಿಶ್ವದಲ್ಲಿ ಭಾರತದ ಸ್ಥಾನ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ವಿಶ್ವದ ಹಲವು ರಾಷ್ಟ್ರಗಳ ಮುಂದೆ ಭಾರತ ಕೈ ಕಟ್ಟಿ ನಿಲ್ಲುವ ಸ್ಥಿತಿ ಇತ್ತು. ಆದರೆ ಪ್ರಸ್ತುತ ವಿಶ್ವದ ದೊಡ್ಡ ದೊಡ್ಡ ದೇಶಗಳು ಭಾರತದ ಮುಂದೆ ಕೈ ಕಟ್ಟಿ ನಿಲ್ಲುವ ಸ್ಥಿತಿ ಬಂದಿದೆ.‌ವಿಶ್ವದ ಹಲವು ರಾಷ್ಟ್ರಗಳು ಭಾರತದ ಸ್ನೇಹ ಬಯಸಿ ಬರುತ್ತಿದ್ದು, ಪ್ರಪಂಚದಲ್ಲಿ ಭಾರತ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದೆ.

ಜೊತೆಗೆ ಭಾರತದ ಆರ್ಥಿಕತೆಯೂ ಬಹಳಷ್ಟು‌ ವೇಗವಾಗಿ ಮುಂದುವರಿಯುತ್ತಿದ್ದು, ವಿಶ್ವದ ಮುಂದುವರಿದ ಆರ್ಥಿಕತೆಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂದಿನ ಬಾರಿಯೂ ಪ್ರಧಾನಿ ಮೋದಿ ಅವರಿಗೆಯೇ ಸರ್ಕಾರ ರಚಿಸುವ ಅವಕಾಶ ಸಿಕ್ಕಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ.

Tags

Related Articles

Close