ಅಂಕಣ

ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ಸಿಗಲಿದೆ ಸ್ವಂತ ಮನೆ!!

ದೇಶದಾದ್ಯಂತ ಸಾಮಾಜಿಕ ಕ್ಷೇಮಾಭಿವೃದ್ದಿ ಯೋಜನೆಗಳನ್ನು ಜಾರಿ ತರುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಮನೆಮಾತಾಗಿದ್ದಾರೆ. ಕೇಂದ್ರ ಸರ್ಕಾರ ಹಲವಾರು ರೀತಿಯ ಜನಕಲ್ಯಾಣ ಯೋಜನೆಗಳನ್ನು ಘೋಷಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಕೂಡ!! ಬಡವರಿಗೆ, ಕೆಳಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ, ಪ.ಪಂಗಡ, ಪ.ಜಾತಿ ಹೀಗೆ ಎಲ್ಲ ವರ್ಗದ 44 ಕೋಟಿ ಜನರ ಕ್ಷೇಮಾಭಿವೃದ್ದಿಗೆ ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯು ಒಂದಾಗಿದೆ!!

ಸರ್ಕಾರಗಳು ಕಾಲ ಕಾಲಕ್ಕೆ ಅನೇಕ ಜನೋಪಯೋಗಿ ಯೋಜನೆಗಳನ್ನು ಘೋಷಿಸುತ್ತವೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಸಂತಸದ ವಿಚಾರ!! ಇನ್ನು ಭಾರತದಲ್ಲಿ ಅದೆಷ್ಟೋ ಲಕ್ಷಾಂತರ ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿದ್ದು ಜೀವನ ಸಾಗಿಸುತ್ತಿದ್ದು, ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯ. ಹಾಗಾಗಿ ಕೇಂದ್ರ ಸರ್ಕಾರ “ಪ್ರಧಾನ ಮಂತ್ರಿ ಅವಾಸ ಯೋಜನೆ” ಎಂಬ ಉತ್ತಮವಾದ ಯೋಜನೆಯನ್ನು ಜಾರಿಗೆಗೆ ತಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ವರ್ಷದ ಆರಂಭದ ದಿನ ರಾಷ್ಟ್ರದ ಪ್ರಜೆಗಳಿಗೆ ಶುಭಾಶಯ ಹೇಳುವ ವೇಳೆ ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಪ್ರಧಾನಿಗಳ ನಿರ್ಧಾರದ ಬೆನ್ನ ಹಿಂದೆಯೇ ರಾಷ್ಟ್ರೀಕೃತ ಬ್ಯಾಂಕುಗಳು, ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವುದಾಗಿ ಘೋಷಣೆ ಹೊರಡಿಸಿದ್ದವು. ಇದರಿಂದ ಬಡವರು ಕಡಿಮೆ ಮೊತ್ತದಲ್ಲಿ ಮನೆ ನಿರ್ಮಿಸಲು ಹಾಗೂ ಖರೀದಿಸಲು ಸೂಕ್ತ ಕಾಲ ಕೂಡಿ ಬಂದಂತಾಗಿದೆ!!

Related image

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ!! 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು ಕಟ್ಟಿಸುವ ಯೋಜನೆ ಇದೆ!! ಹಾಗಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ಯೋಜನೆಯ ಅಡಿಯಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು ಕಡಿಮೆ ಮಾಡಿರುವುದರಿಂದ ಬಡವರಿಗೂ ಸ್ವಂತ ಮನೆ ಹೊಂದುವ ಕನಸು ಗರಿಗೆದರಿದ್ದು, ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೇರವಾಗಿ ರೂ. 1.30 ಲಕ್ಷದಿಂದ 1.50ಲಕ್ಷಗಳವರೆಗೆ ಗುಡ್ಡಗಾಡು ಮತ್ತು ಮೈದಾನದಂತಹ ಪ್ರದೇಶಗಳಲ್ಲಿ ವಾಸವಾಗಿರುವ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎನ್ನುವುದು ಸಂತಸದ ವಿಚಾರ!!

2019ರೊಳಗೆ ಒಂದು ಕೋಟಿ ಮಂದಿಗೆ ಮನೆ ಕಟ್ಟಿಸಿಕೊಡುವ ಗುರಿ

2022ರ ಹೊತ್ತಿಗೆ ದೇಶದ ಎಲ್ಲರಿಗೂ ಮನೆ ಒದಗಿಸುವ ಭರವಸೆ ನೀಡಿರುವ ಮೋದಿ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯೇ ರಾಜೀವ್ ಆವಾಸ್ ಯೋಜನಾ ಹಾಗೂ ಇಂದಿರಾ ಆವಾಸ್ ಯೋಜನಾ… ಹೀಗೆ ವಿವಿಧ ಯೋಜನೆಗಳನ್ನು ತರಲಾಗಿದೆ. ಈ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ಅನುದಾನ ನೀಡುವುದು, ಸಾಲದಲ್ಲಿ ಸಬ್ಸಿಡಿ ನೀಡುವ ಯೋಜನೆ, ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸುವುದಕ್ಕೆ ರಾಜ್ಯ ಸರಕಾರಗಳ ಜತೆ ಸೇರಿ ಹಣಕಾಸು ನೆರವು ನೀಡಲಾಗುತ್ತಿದೆ. ಇವೆಲ್ಲ ಹೊರತುಪಡಿಸಿ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಕಾಯ್ದೆ ಜಾರಿಗೆ ತಂದಿದ್ದು, ಇದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಗ್ರಾಹಕರಿಗೆ ರಕ್ಷಣೆ ನೀಡಲಿದೆ.

1985ರಲ್ಲಿ ಆರಂಭವಾದ ಇಂದಿರಾ ಆವಾಸ್ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣ-ದುರಸ್ತಿಗೆ ನೆರವು ನೀಡುವ ಉದ್ದೇಶ ಹೊಂದಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಆ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲೇ ಸೇರಿಸಲಾಯಿತು. ಆದರೆ 2019ರೊಳಗೆ ಒಂದು ಕೋಟಿ ಮಂದಿಗೆ ಮನೆಗಳನ್ನು ಕಟ್ಟಿಕೊಡುವ ಗುರಿಯನ್ನು ಸರಕಾರ ಹೊಂದಿದ್ದು, ಇದಕ್ಕಾಗಿ ಮನೆಯ ಕನಿಷ್ಠ ಗಾತ್ರವನ್ನು ಇಪ್ಪತ್ತು ಚದರ ಮೀಟರ್ ನಿಂದ ಇಪ್ಪತ್ತೈದು ಚದರ ಮೀಟರ್ ಗೆ ಹೆಚ್ಚಿಸಲಾಗಿದೆ. ಇನ್ನು ಅನುದಾನವನ್ನು ಎಪ್ಪತ್ತೈದು ಸಾವಿರದಿಂದ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಏರಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ) ಅಡಿಯಲ್ಲಿ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್) ಅವಧಿಯನ್ನು 15ರಿಂದ 20 ವರ್ಷಗಳಿಗೆ ವಿಸ್ತರಿಸಲು ಸಂಪುಟದ ಅನುಮೋದನೆ!!

1. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಭಿಯಾನದ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್.) ಅವಧಿಯನ್ನು 15ರಿಂದ 20 ವರ್ಷಗಳಿಗೆ ವಿಸ್ತರಿಸಲು (ಇದಕ್ಕೆ ಇಡಬ್ಲ್ಯುಎಸ್/ಎಲ್.ಐ.ಜಿ.ಯ ಸಿಎಲ್.ಎಸ್.ಎಸ್. ಎಂದು ಮರು ನಾಮಕರಣ ಮಾಡಲಾಗಿದೆ). ಇದನ್ನು ಕಡಿಮೆ ಆದಾಯ ವರ್ಗ/ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಿ.ಎಲ್.ಎಸ್.ಎಸ್. ಎಂದು ಕರೆಯಲಾಗುವುದು;
2. ಎಂ.ಐ.ಜಿ. ವರ್ಗವನ್ನು ಗುರಿಯಾಗಿಟ್ಟುಕೊಂಡು ಎಂ.ಐ.ಜಿ.ಗಳಿಗೆ ಹೊಸ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆಯ ಪರಿಚಯ;
3. ಕೇಂದ್ರೀಯ ನೋಡಲ್ ಸಂಸ್ಥೆಗಳೊಂದಿಗೆ (ಸಿ.ಎನ್.ಎ.ಗಳು) ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಿಗೆ (ಪಿ.ಎಲ್.ಐ.ಗಳು) ಪಿ.ಎಂ.ಎ.ವೈ. (ನಗರ) ಸಿ.ಎಲ್.ಎಸ್.ಎಸ್. (ಈಗ ಇಡಬ್ಲ್ಯುಎಸ್/ಎಲ್.ಐ.ಜಿಗಳ ಸಿ.ಎಲ್.ಎಸ್.ಎಸ್.), ಅಡಿಯಲ್ಲಿ ಎಂ.ಐ.ಜಿ.ಗಳಿಗೆ ಸಿ.ಎಲ್.ಎಸ್.ಎಸ್. ಅವಕಾಶವನ್ನು ವಿಸ್ತರಿಸುವುದನ್ನು ಕಡ್ಡಾಯ ಮಾಡಲು ಅಗತ್ಯವಾದ ಅವಶ್ಯ ಬದಲಾವಣೆಗಳನ್ನು ಅವುಗಳ ತಿಳಿವಳಿಕೆ ಒಪ್ಪಂದದಲ್ಲಿ ಮಾಡಲು ಅವಕಾಶ ನೀಡುತ್ತದೆ.;
4. ಯೋಜನೆಯಡಿ ಮಂಜೂರು ಮಾಡಲಾಗುವ ಸಾಲಗಳಿಗೆ ಪಿ.ಎಲ್.ಐ.ಗಳಿಗೆ ಪಾವತಿಸಬೇಕಾದ ಪ್ರಕ್ರಿಯೆಯ ಶುಲ್ಕ ತರ್ಕಬದ್ಧವಾಗಿಸಲು /ಪರಿಚಯಿಸಲು;
5. ಉದ್ದೇಶಿತ ಎಂ.ಐ.ಜಿ. ಸಿ.ಎಲ್.ಎಸ್.ಎಸ್.ಗಾಗಿ ಬಿ.ಇ. ಹಂತದಲ್ಲಿ2017-18ನೇ ಸಾಲಿನ ಆಯವ್ಯಯದಲ್ಲಿ ಆರಂಭಿಕವಾಗಿ 1000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲು;ಮತ್ತು
6. ಉಸ್ತುವಾರಿ ಸಚಿವರ ಅನುಮೋದನೆಯೊಂದಿಗೆ ಎಂ.ಐ.ಜಿ.ಯ ಸಿ.ಎಲ್.ಎಸ್.ಎಸ್. ಗಾಗಿ ಕಾರ್ಯಾತ್ಮಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

Image result for pradhan mantri awas yojana

ವಾಸ್ತವದಲ್ಲಿ ನೀವು ಸ್ವಂತ ಮನೆ ಹೊಂದಿಲ್ಲದಿದ್ದರೆ ಈ ಯೋಜನೆ ಅಡಿಯಲ್ಲಿ ಮನೆ ಪಡೆಯಲು ಖಂಡಿತ ಪ್ರಯತ್ನಿಸಿ. ಅದಕ್ಕೆ ಸಂಬಂಧಿಸಿದ ಕೆಲ ಪ್ರಮುಖ ಅಂಶಗಳು ಇಲ್ಲಿವೆ;

* ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರು ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಈ ವರ್ಗದ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಬರುವುದರಿಂದ ತುಂಬಾ ಕುಟುಂಬಗಳಿಗೆ ಮನೆ ಸೌಲಭ್ಯ ಸಿಗಲಿದೆ.

* ಅಷ್ಟೇ ಅಲ್ಲದೇ, ನಮ್ಮ ದೇಶದಲ್ಲಿ ಸಾವಿರಾರು ಕುಟುಂಬಗಳು ಇಲ್ಲಿಯವರೆಗೂ ಸ್ವಂತ ಮನೆಗಳನ್ನು ಹೊಂದಿಲ್ಲ. ಅನೇಕರು ಟೆಂಟ್ ಮತ್ತು ಗುಡಿಸಲುಗಳಲ್ಲಿ ವಾಸವಾಗಿರುವುದರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯ ಪಡೆಯಲು ನೀವು ಉತ್ತಮವಾದ ಸ್ವಂತ ಮನೆಯನ್ನು ಹೊಂದಿರಬಾರದು ಎಂಬುದು ಎರಡನೇ ಪ್ರಮುಖ ಮಾನದಂಡವಾಗಿದೆ.

* ನೀವು ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲಿ (ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ) ಬರುವವರಾದರೆ ಸರ್ಕಾರ ನಿಮಗೆ ರೂ.1.5 ಲಕ್ಷಗಳ ನೆರವಿನಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತಾರೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಗೃಹಸಾಲ ಸಬ್ಸಿಡಿ ಯೋಜನೆ ಅಡಿಯಲ್ಲಿ ಶೇ. 6.5ರಷ್ಟು ಹೆಚ್ಚಿನ ಬಡ್ಡಿದರಕ್ಕೆ ಸಾಲ ಸಿಗುತ್ತದೆ. ಜತೆಗೆ ಮನೆ ಸಾಲ ಬಡ್ಡಿದರ ಶೇ. 9ರಷ್ಟು ಇರುತ್ತದೆ. ಹೀಗಾಗಿ ತೀರಾ ಕಡುಬಡವರು ಈ ಬಡ್ಡಿದರದಲ್ಲಿ ಗೃಹ ಸಾಲ ಪಡೆದು ಮನೆ ಕಟ್ಟುವುದು ಕಷ್ಟ. ಅಂತವರಿಗೆ ಶೇ. 2.5ರಷ್ಟು ಬಡ್ಡಿದರದಲ್ಲಿ ಗೃಹಸಾಲ ಲಭ್ಯವಿದ್ದು, ಕನಸಿನ ಮನೆ ಕಟ್ಟಬಹುದಾಗಿದೆ!!

* ಕೊಳಗೇರಿ ವಾಸಿಗಳಿಗೂ ಸಹ ಕೊಳಗೇರಿ ಪುನರ್ವಸತಿ ಸೌಲಭ್ಯ ಕಲ್ಪಿಸಿದ್ದು, ಪುನರ್ವಸತಿಗಾಗಿ ಒಂದು ಲಕ್ಷ ಮೊತ್ತ ನೀಡಲಾಗುತ್ತದೆ. ಕೊಳಗೇರಿ ನಿವಾಸಿಗಳೆಲ್ಲರೂ ಮೂಲಭೂತ ಸೌಕರ್ಯಗಳನ್ನು ಹಾಗೂ ಯೋಗ್ಯ ಪ್ರದೇಶವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕಡಿಮೆ ಆದಾಯ ಗುಂಪಿನವರಿಗೆ ಬಡ್ಡಿದರ ಪ್ರಯೋಜನಗಳು:

ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲಗಳ ಮೇಲೆ ಕಡಿಮೆ ಬಡ್ಡಿದರ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದನ್ನು 60 ಚದರ ಮೀಟರ್ ಅಂತರದ ಮನೆ ಕಟ್ಟುವ ಜಾಗಕ್ಕಾಗಿ ನೀಡಲಾಗುತ್ತದೆ.

ಪ್ರಧಾನಮಂತ್ರಿ ಅವಾಸ್ ಯೋಜನೆ ಆನ್‍ಲೈನ್ ಮೂಲಕ ಪಡೆಯುವುದು ಹೇಗೆ?

ಯಾವುದೇ ಸೋರಿಕೆ ಅಥವಾ ವಿಚಲನೆ ಅಥವಾ ದೌರ್ಬಲ್ಯತೆ ಇಲ್ಲದೆ ಸರ್ಕಾರದ ಸೇವೆಗಳು ಜನರಿಗೆ ತಲುಪಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ, ಫಲಾನುಭವಿಗಳ ಮನವಿಯನ್ನು ವೇಗವಾಗಿ ಸಕ್ರಿಯಗೊಳಿಸಲು ಜನರು ಸಲ್ಲಿಸುವ ನೇರ ಆನ್ಲೈನ್ ಅಪ್ಲಿಕೇಶನ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಗಮನಹರಿಸಿ ಅನುಷ್ಠಾನಕ್ಕೆ ತರಲಾಗಿದೆ!! ಪ್ರತಿ ಅರ್ಜಿಗೆ ರೂ. 25 ಇದ್ದು, ನಗರ ಪ್ರದೇಶಗಳಲ್ಲಿ ಇರುವ ಸುಮಾರು 60,000 ಸಿಎಸ್‍ಸಿಎಸ್ ಮೂಲಕ ಈ ಸೇವೆ ಲಭ್ಯವಾಗಲಿದೆ.

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಗರದಲ್ಲಿನ ಕಳಪೆ ಮಟ್ಟವನ್ನು ತೊಡೆದು ಹಾಕುವಲ್ಲಿ ಸಹಾಯಕವಾಗುತ್ತದೆ. ಡಿಜಿಟಲ್ ಇಂಡಿಯ ಮಿಷನ್ ದೇಶವನ್ನು ಹೊಸ ದಿಕ್ಕಿನತ್ತ ಸಾಗುವಲ್ಲಿ ಪರಿವರ್ತನೆಗೊಳ್ಳುವಂತೆ ಮಾಡುತ್ತಿರುವುದು ಹೆಮ್ಮೆಯ ವಿಚಾರ!!

-ಅಲೋಖಾ

Tags

Related Articles

Close