ಪ್ರಚಲಿತ

ಪೆಟ್ರೋಲಿಯಂ ತೈಲಗಳ ವಿಚಾರವಾಗಿ ಮೋದಿಯನ್ನು ದೂರಲು ಹೋದ ರಾಹುಲ್ ಗಾಂಧಿ ತನ್ನ 60 ವರ್ಷಗಳ ವೈಫಲ್ಯವನ್ನು ಟ್ವಿಟ್ಟರ್ ಮೂಲಕ ಬಿಚ್ಚಿಟ್ಟದ್ದು ಹೇಗೆ ಗೊತ್ತೇ?

ಭಾರತದಲ್ಲಿ 60 ವರ್ಷಗಳಿಂದ ಇದ್ದ ವಂಶಾಡಳಿತದ ರಾಜಕೀಯದಲ್ಲಿ ದೇಶ ಅದೆಷ್ಟು ಬದಲಾವಣೆಯನ್ನು ಕಂಡಿತೆಂದರೆ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಬಡ ರಾಷ್ಟ್ರವಾಗಿ ವಿಶ್ವದಲ್ಲಿಯೇ ಮೂಲೆಗೆ ಸೇರಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿ ಹೋಯಿತು. ಹಾಗೆಯೇ ಭಾರತ ಬಡ ರಾಷ್ಟ್ರವಾಗಿ ಬಿಂಬಿತವಾಯಿತಲ್ಲದೇ ತನ್ನ ಅಧಿಕಾರವಾಧಿಯಲ್ಲಿ ಭಾರತದಲ್ಲಿದ್ದ ಸಂಪತ್ತನ್ನೆಲ್ಲ ದೋಚಿ, ನುಂಗಿ ನೀರುಕುಡಿದ ಅದೆಷ್ಟೋ ಕಾಂಗ್ರೆಸ್ಸಿಗರು ಇಂದು ಮೋದಿ ಸರ್ಕಾರದ ದಿಟ್ಟ ಹೆಜ್ಜೆಯಿಂದಾಗಿ ಅದೆಷ್ಟೋ ಭ್ರಷ್ಟಾಚಾರಿಗಳ ಹೆಡೆಮುರಿಕಟ್ಟಿ ಜೈಲಿಗಟ್ಟುತ್ತಿರುವುದು ಕಾಂಗ್ರೆಸ್ಸಿಗರಿಗೆ ದೊಡ್ಡ ತಲೆನೋವಾಗಿ ಬಾಧಿಸಿದ್ದಂತೂ ಅಕ್ಷರಶಃ ನಿಜ.

ಪೆಟ್ರೋಲ್ ಡಿಸೇಲ್ ಬೆಲೆಯ ವಿಚಾರವಾಗಿ ಇಂದು ನರೇಂದ್ರ ಮೋದಿಯವರನ್ನು ಹೀನಾಯವಾಗಿ ನಿಂದಿಸುತ್ತಿರುವ ಕಾಂಗ್ರೆಸ್ಸಿಗರು, ತನ್ನ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲದ ವಿಚಾರದಲ್ಲಿ ತಾನೇನು ಮಾಡಿದರು ಎಂಬುವುದನ್ನು ತಿಳಿಯುವುದು ಅತೀ ಮುಖ್ಯ ಎಂದನಿಸುತ್ತದೆ!! ಯಾಕೆಂದರೆ ಭಾರತದಲ್ಲಿದ್ದ ಇಂಧನ ಮೂಲವನ್ನು ಹುಡುಕದೇ ಬೇರೆ ರಾಷ್ಟ್ರಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸುತ್ತಿದ್ದ ಅಂದಿನ ಸರ್ಕಾರ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸನ್ನು ಸಹಿಸಲಾಗದೇ ಇಂದು ಪೆಟ್ರೋಲ್ ಡಿಸೇಲ್ ಬೆಲೆಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಸಲ್ಮಾನ್ ವಿಡಿಯೋ ಬಳಸಿ, ರಾಹುಲ್ ಗಾಂಧಿ ತನ್ನ 60 ವರ್ಷಗಳ ವೈಫಲ್ಯವನ್ನು ಟ್ವಿಟ್ಟರ್ ಮೂಲಕ ಬಿಚ್ಚಿಟ್ಟಿದ್ದಾರೆ.

ಹೌದು… ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ “ಬಡ ಮತ್ತು ಮಧ್ಯಮ ವರ್ಗದ ಜನರು ಇಂಧನಗಳ ಬೆಲೆ ಏರಿಕೆಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಈ ವಿಡಿಯೋ ದಲ್ಲಿ ನಮ್ಮ ಪ್ರಧಾನಿಗಳೂ ನಿಜಕ್ಕೂ ಬೇರೆ ದೇಶದ ಕುರಿತಾಗಿ ಮಾತನಾಡುತ್ತಿರಬಹುದು” ಎಂದು ವ್ಯಂಗವಾಡಿದ್ದಾರೆ. ಅಷ್ಟೇ ಅಲ್ಲದೇ ಎಡಿಟ್ ಮಾಡಿರುವ ಈ ವಿಡಿಯೋದಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ‘ಕಿಂಗ್ ಆಫ್ ಮಿಸ್ ಇನ್ಫಾರ್ಮೇಷನ್’ ಎಂದು ಬರೆಯಲಾಗಿದೆ.

ಆದರೆ ಪೆಟ್ರೋಲಿಯಂ ವಿಚಾರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕಲೆಹಾಕುವುದಾದರೆ, ಬ್ಯಾರೆಲ್‍ಗೆ ಒಂದು ಡಾಲರ್ ಹೆಚ್ಚಾದರೂ ಲೀಟರ್ ಗೆ 2 ರೂಪಾಯಿ ಹೆಚ್ಚಾಗುತ್ತದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಎಂದು ಆಗಾಗ ಹೋರಾಟ ನಡೆಯುತ್ತಲೇ ಇದೆ. ಯಾರಿಗಾದರೂ ಪೆಟ್ರೋಲಿಯಂ ದರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ? ಮೋದಿ ಅಲ್ಲ ಯಾರೇ ಬಂದರೂ ಪೆಟ್ರೋಲ್ ದರ ಕಡಿಮೆ ಮಾಡಲು ಸಾಧ್ಯವೇ ಇಲ್ಲ!! ಯಾಕೆಂದರೆ ಅದರ ಬೆಲೆ ನಿಯಂತ್ರಣ ನಮ್ಮ ಕೈಯ್ಯಲ್ಲಿಯೇ ಇಲ್ಲ.ನಮ್ಮ ದೇಶದಲ್ಲಿ ಸಿಗದ ಪೆಟ್ರೋಲಿಯಂ ಅನ್ನು ಆಮದು ಮಾಡುವುದರಿಂದ ಅದರಿಂದ ಉಂಟಾಗುವ ನಷ್ಟ ಏನೆಂದು ಎಲ್ಲರಿಗೂ ಚೆನ್ನಾಗಿ ಗೊತ್ತಿದ್ದು ಅದನ್ನು ಮತ್ತೊಮ್ಮೆ ಸ್ಪಷ್ಟವಾಗಿ ವಿವರಿಸಬೇಕಾಗಿಲ್ಲ.

ಹೀಗಿರಬೇಕಾದರೆ ಕಾಂಗ್ರೆಸ್ ಇದರಲ್ಲೂ ರಾಜಕೀಯ ನಡೆಸುತ್ತಿದೆಯಲ್ಲದೇ ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿ ನುಂಗಿ ನೀರು ಕುಡಿದ, ಸೋ ಕಾಲ್ಡ್ ಗಾಂಧಿ ಉಪನಾಮ ಹೊತ್ತಿರುವ ನೆಹರೂ ವಂಶಾಡಳಿತದಿಂದಾಗಿ ಪೆಟ್ರೋಲಿಯಂ ವಿಚಾರವಾಗಿ ಬದಲಿ ವ್ಯವಸ್ಥೆಯನ್ನು ತರುವ ಒಂದು ನಿರ್ನಾಯಕ್ಕೂ ಬರಲಿಲ್ಲ!! ಆದರೆ ಇದೀಗ ಪೆಟ್ರೋಲ್ ಡಿಸೇಲ್ ಬೆಲೆಯ ಕುರಿತಾಗಿ ನರೇಂದ್ರ ಮೋದಿಯವರನ್ನು ದೂಷಿಸುತ್ತಿದ್ದಾರೆ ಎಂದರೆ ರಾಹುಲ್ ಗಾಂಧಿ ಆಕಾಶಕ್ಕೆ ಮುಖ ಮಾಡಿ ಉಗುಳಿದಂತಾಗಿದೆ!!

ಒಂದಂತೂ ತಿಳಿದುಕೊಳ್ಳಲೇಬೇಕು!! ಅದೇನೆಂದರೆ, ಕೇವಲ 4 ವರ್ಷದ ಆಡಳಿತಾವಧಿಯಲ್ಲಿ ನರೇಂದ್ರ ಮೋದಿ ಸರ್ಕಾರವು ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಹೊಂದಿದ್ದು, ಒಂದು ಕಾಲದಲ್ಲಿ ಭಾರತವನ್ನು ಮೂಲೆಗುಂಪು ಮಾಡುತ್ತಿದ್ದ ರಾಷ್ಟ್ರಗಳೆಲ್ಲವೂ ಇಂದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ತಾ ಮುಂದು ನಾ ಮುಂದು ಎಂದು ಭಾರತದ ಸ್ನೇಹ ಬಯಸಲು ಮುಂದಾಗುತ್ತಿದೆ ಎಂದರೆ ಇದಕ್ಕಿಂತಲೂ ಅಚ್ಛೇ ದಿನ್ ಬೇರೊಂದಿದೆಯೇ?? ಭಾರತದಲ್ಲಿರುವ ಇಂಧನ ಮೂಲವನ್ನು ಹುಡುಕದೇ ಇದೀಗ ಮೋದಿಯನ್ನು ತೆಗಳುವ ರಾಹುಲ್ ಗಾಂಧಿಗೆ ಅದೇನೂ ಹೇಳಬೇಕೋ ನಾ ಕಾಣೆ!!

ಒಂದು ಕಾಲದಲ್ಲಿ ನಮ್ಮ ದೇಶದಲ್ಲಿದ್ದ ಕಚ್ಛಾವಸ್ತುಗಳನ್ನು ರಫ್ತು ಮಾಡಿ ಮತ್ತೆ ನಮ್ಮ ದೇಶಕ್ಕೆ ಆಮದು ಮಾಡುತ್ತಿದ್ದ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ಅವರನ್ನು ಅಸೂಯೆ ಪಟ್ಟಿಕೊಳ್ಳದಂತೆ ಮಾಡದೇ ಇರುತ್ತದೆಯೇ?? ಆದರೆ ಇದೀಗ ಪೆಟ್ರೋಲಿಯಂ ತೈಲವನ್ನೇ ಬಿಟ್ಟು ಬೇರೆ ಇಂಧನ ಮೂಲವನ್ನು ಹುಡುಕಿರುವ ಮೋದಿ ಸರ್ಕಾರವು 2030ರ ಒಳಗೆ ಪೆಟ್ರೋಲಿಯಂ ರಹಿತ ವಾಹನಗಳು ಬೀದಿಯಲ್ಲಿ ಸಂಚರಿಸಲಿವೆ ಎನ್ನುವ ಮಾತಾನ್ನು ಈಗಾಗಲೇ ಹೇಳಿದೆ!!!

ಕಳೆದ ಬಾರಿ ಬಿಎಸ್3 ವಾಹನಗಳನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಎಲ್ಲರಿಗೂ ಆತಂಕ ಉಂಟಾಗಿತ್ತು. ಸುಪ್ರೀಂ ಆದೇಶ ಹೊರಡಿಸಿದ ಬೆನ್ನಲ್ಲೇ ವಾಹನ ವ್ಯಾಪಾರ ಸಂಸ್ಥೆಗಳು ಬಿಎಸ್3 ವಾಹನ ಮಾರಾಟವನ್ನು ನಿಲ್ಲಿಸಿದವು. ಈ ವೇಳೆ ಕೇಂದ್ರ ಸಾರಿಗೆ ಸಚಿವ ವಾಹನ ಉತ್ಪನ್ನ ಕಂಪೆನಿಗಳಿಗೆ ಎಚ್ಚರಿಕೆಯೊಂದನ್ನು ಕೊಟ್ಟಿದ್ದರು.
`ಕೆಲವೇ ವರ್ಷಗಳಲ್ಲಿ ಪೆಟ್ರೋಲಿಯಂ ರಹಿತ ವಾಹನಗಳ ಬದಲಿಗೆ ವಿದ್ಯುತ್ ಚಾಲಿತ ವಾಹನಗಳು ಬರಲಿವೆ. ವಾಹನ ತಯಾರಕ ಕಂಪೆನಿಗಳು ತನ್ನ ವಾಹನಗಳನ್ನು ಈಗಿಂದಲೇ ವಿದ್ಯುತ್ ವ್ಯವಸ್ಥೆಗೆ ಸರಿಹೊಂದುವಂತೆ ವಾಹನಗಳನ್ನು ತಯಾರಿಸಲಿ. ಆಮೇಲೆ ಮತ್ತೆ ಹಲುಬುವುದು ಬೇಡ?? ಎಂದು ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವಾಹನ ತಯಾರಕ ಕಂಪೆನಿಗಳು ವಿದ್ಯುತ್ ವ್ಯವಸ್ಥೆಗೂ ಸರಿಹೊಂದುವಂಥಾ ಇಂಜಿನ್ ಇರುವ ವಾಹನಗಳನ್ನು ತಯಾರಿಸಲು ಮುಂದಾಗಿವೆ.

ಹೌದು… ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವಾಗಿರುವುದು ಅದು ವಿದ್ಯುತ್ ಮಾತ್ರ!! ಹಾಗಾಗಿ ಇಡೀ ದೇಶದಲ್ಲಿ ವಿದ್ಯುತ್ ಕ್ರಾಂತಿ ನಡೆಸಿ ಆ ಮೂಲಕ ವಿದ್ಯುತ್ ಚಾಲಿತ ವಾಹನಗಳನ್ನು ಜಾರಿಗೊಳಿಸುವುದು. ಅದಕ್ಕಾಗಿ ಮೋದಿ ಸರಕಾರ ದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ!! ಮೊದಲು ದೇಶವನ್ನು ಸಂಪೂರ್ಣ ವಿದ್ಯುತ್ ಕ್ರಾಂತಿಗೊಳಿಸಿ ಆಮೇಲೆ ಪೆಟ್ರೋಲ್ ರಹಿತ ವಾಹನಗಳನ್ನು ಜಾರಿಗೊಳಿಸಲು ಮೋದಿ ಸರಕಾರ ಹೆಜ್ಜೆ ಇಟ್ಟಿದೆ. ಈ ದೇಶದಲ್ಲಿ 2030ರ ವೇಳೆಗೆ ಪೆಟ್ರೋಲಿಯಂ ವಾಹನಗಳು ಮೂಲೆ ಸೇರಲಿದ್ದು, ವಿದ್ಯುತ್ ಚಾಲಿತ ವಾಹನಗಳು ರಸ್ತೆಯಲ್ಲಿ ಪಾರಮ್ಯ ಮೆರೆಯಲಿದೆ.

ಎಲೆಕ್ಟ್ರಿಕ್ ಬ್ಯಾಟರಿಯಿಂದ ಓಡುವ ವಾಹನಗಳ ಮಸೂದೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಇಂಧನ ಆಮದನ್ನು ಕಡಿಮೆಗೊಳಿಸಿ ದೇಶದಲ್ಲಿ ವಾಹನಗಳ ಚಾಲನಾ ವೆಚ್ಚವನ್ನು ಕಡಿಮೆಗೊಳಿಸುವುದು ಈ ಬಿಲ್‍ನ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ಇಂಧನ ಸಚಿವ ಪಿಯೂಷ್ ಘೋಯಲ್ ಈ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ನೀತಿ ಆಯೋಗ ಇ-ವಾಹನ ಯೋಜನೆ ಕುರಿತಂತೆ ಕರಡು ಪ್ರತಿ ರಚನೆ ಮಾಡಿದ್ದು, ಕರಡು ಪ್ರತಿಯಲ್ಲಿ ಇ-ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಹಾಗಾಗಿ ಇಷ್ಟು ವರ್ಷಗಳ ಕಾಲ ಅಧಿಕಾರ ಕೈಯಲ್ಲಿದ್ದು ಏನೋ ಕೂಡ ಮಾಡದ ಕಾಂಗ್ರೆಸ್ ಸರ್ಕಾರವು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸನ್ನು ಸಹಿಸಲಾಗದೇ ದೂಷಿಸುವ ಬರದಲ್ಲಿ ತಾನು ಮಾಡಿರುವ ತಪ್ಪನ್ನು ಮರೆತು ಅದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ಸಿಗರನ್ನು ಅದೆನೂ ಹೇಳಬೇಕೋ ನಾ ಕಾಣೆ!! ಆದರೆ ವಿದ್ಯಾರ್ಥಿಗಳು ಕೇಳಿದ ಸಣ್ಣ ಪ್ರಶ್ನೆಗಳಿಗೂ ಉತ್ತರಿಸಲಾಗದ ರಾಹುಲ್ ಗಾಂಧಿಯವರು ದೇಶದ ಇತಿಹಾಸದ ಜೊತೆಗೆ ಕಾಂಗ್ರೆಸ್ಸಿನ ಇತಿಹಾಸವನ್ನು ಅರಿಯುವುದು ಬಹಳಷ್ಟಿದೆ ಎಂದನಿಸುತ್ತೆ!!

source: http://zeenews.india.com/kannada/india/rahul-gandhi-trolls-pm-modi-through-salman-khan-video-4790
– ಅಲೋಖಾ

Tags

Related Articles

Close