ಪ್ರಚಲಿತ

ಪ್ರಧಾನಿ ಮೋದಿ ಅವರಿಗೆ ಅಂಧ ಕ್ರೀಡಾಪಟುವಿನಿಂದ ಅಪರೂಪದ ಗಿಫ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತಕ್ಕೇರಿದ ಬಳಿಕ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಮಾನ್ಯತೆ ಸಿಗುವಂತಾಗಿದೆ‌. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಕ್ರೀಡಾಪಟುಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿರುವುದು ಸಂತಸದ ವಿಷಯ.

ಇತ್ತೀಚೆಗಷ್ಟೇ ಚೀನಾದಲ್ಲಿ ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳು ನಡೆದಿದ್ದವು. ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಉನ್ನತಿಗೆ ಏರಿಸುವುದರ ಜೊತೆಗೆ, ಭಾರತದ ಮುಡಿಗೆ ಹಲವಾರು ಪದಕಗಳ ಗರಿಯನ್ನು ತಂದು ಕೊಟ್ಟಿದ್ದರು ಎನ್ನುವುದು ಸತ್ಯ.

ಭಾರತದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ಅವರಿಗೆ ಅಗತ್ಯವಾದ ಅನುಕೂಲತೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪಾತ್ರ ದೊಡ್ಡದು. ಈ ಹಿಂದೆ ಭಾರತದ ಆಡಳಿತ ನಡೆಸಿದ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡದಿದ್ದರೂ, ಪ್ರಧಾನಿ ಮೋದಿ ಸರ್ಕಾರ ಮಾತ್ರ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ನೀಡಿದ ಸ್ಫೂರ್ತಿ ನಿಜಕ್ಕೂ ಶ್ಲಾಘನೀಯ. ಕ್ರೀಡಾಳುಗಳು ಮತ್ತು ಕ್ರೀಡೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ಖೇಲೋ ಇಂಡಿಯಾ ಉಪಕ್ರಮ ಇದಕ್ಕೊಂದು ಸ್ಪಷ್ಟ ನಿದರ್ಶನ ಎನ್ನಬಹುದು.

ದೆಹಲಿಯಲ್ಲಿ ಪ್ಯಾರಾ ಒಲಿಂಪಿಕ್‌ನಲ್ಲಿ ಭಾಗವಹಿಸಿ, ದೇಶದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಲ ದಿನಗಳ ಹಿಂದಷ್ಟೇ ಚೀನಾದಲ್ಲಿ ನಡೆದ ಪ್ಯಾರಾ ಒಲಿಂಪಿಕ್ ‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೂಡಿಗೆರೆ ತಾಲೂಕಿನ ಅಂಧ ಹುಡುಗಿ ರಕ್ಷಿತಾ ರಾಜು ಅವರು ಪ್ರಧಾನಿ ಮೋದಿ ಅವರಿಗೆ ವಿಶೇಷವಾದ ಮತ್ತು ಭಾರತದಲ್ಲಿ ದೊರೆಯದಂತಹ ಉಡುಗೊರೆಯೊಂದನ್ನು ನೀಡಿದ್ದಾರೆ. ಭಾರತದಲ್ಲಿ ದೊರೆಯದ ಅಪರೂಪದ ವಸ್ತುವನ್ನು ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಉಡುಗೊರೆ ಪಡೆದ ಪ್ರಧಾನಿ, ಒಲಿಂಪಿಕ್ಸ್ ‌ನಲ್ಲಿಯೂ ಚಿನ್ನ ಗೆಲ್ಲುವಂತೆ ಆಕೆಯನ್ನು ಹಾರೈಸಿದ್ದಾರೆ.

ರಕ್ಷಿತಾ ಅವರು ಪ್ರಧಾನಿ ಮೋದಿ ಅವರಿಗೆ ತನ್ನ ಓಟದ ಸಹಾಯಕ ಟಿಟ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಬಳಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ರಕ್ಷಿತಾಗೆ 2018 ರಲ್ಲಿಯೂ ಚಿನ್ನದ ಪದಕ ಲಭಿಸಿತ್ತು. ಅದರಂತೆ ಈ ಬಾರಿಯೂ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಟಿಟ್ಟರ್ ಅನ್ನು ಪ್ರಧಾನಿ ಮೋದಿ ಅವರಿಗೆ ನೀಡಿ ರಕ್ಷಿತಾ ಸಂಭ್ರಮಿಸಿದ್ದಾರೆ. ಇವರ ಈ ಗಿಫ್ಟ್ ನೋಡಿ ಪ್ರಧಾನಿ ಮೋದಿ ಅವರೂ ಸಂತಸಗೊಂಡಿದ್ದಾರೆ.

Tags

Related Articles

Close