ಅಂಕಣ

ಇಸ್ಲಾಮಿನ ಮತಾಂಧರಿಗೆ ಮಣ್ಣು ಮುಕ್ಕಿಸಿ ಕೊನೆವರೆಗೂ ಮಾತೃಭೂಮಿಯ ರಕ್ಷಣೆ ಮಾಡಿದ ಹಿಂದೂ ಸಿಂಹ ಮಹಾರಾಣಾ ಪ್ರತಾಪರ ಜಯಂತಿಯಂದು ಭಾವಪೂರ್ಣ ಶೃದ್ದಾಂಜಲಿ…

ಭಾರತದ ಸನಾತನ ಇತಿಹಾಸದಲ್ಲಿ ಎರಡು ಮಹಾನಾಯಕರ ಹೆಸರು ಅಜರಾಮರವಾಗಿ ಉಳಿದಿದೆ. ಧರ್ಮ ರಕ್ಷಣೆಗಾಗಿ ಸ್ವಯಂ ರೌದ್ರ ರೂಪ ತಾಳಿದ ಮಹಾ ಪರಾಕಮಿ ಮಹಾರಾಣಾ ಪ್ರತಾಪರು ಒಂದೆಡೆಯಾದರೆ, ಇನ್ನೊಬ್ಬರು ಅಖಂಡ ಹಿಂದೂ ಸಾಮ್ರಾಜ್ಯ ಕಟ್ಟಿದ್ದ ಛತ್ರಪತಿ ಶಿವಾಜಿ ಮಹಾರಾಜರು. ಇಂತಹ ಹಿಂದೂ ಕಲಿಗಳಿಂದಾಗಿಯೆ ಇವತ್ತು ನಾವು ಹಿಂದೂಗಳಾಗಿ ಬದುಕುವ ಸೌಭಾಗ್ಯ ದೊರೆತಿದೆ ಎಂದರೆ ತಪ್ಪಾಗಲಾರದು. ಈ ದೇಶದ ಸೌಭಾಗ್ಯವೊ, ಸನಾತನದ ಸೌಭಾಗ್ಯವೊ ಈ ಮಣ್ಣಿನಲ್ಲಿ ಹಲವಾರು ಧರ್ಮ ರಕ್ಷಕರು ಜನ್ಮ ತಳೆದಿದ್ದರೆ ಮಾತ್ರವಲ್ಲ ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.

ಒಮ್ಮೆ ಅಬ್ರಾಹಂ ಲಿಂಕನ್ ಭಾರತಕ್ಕೆ ಪ್ರವಾಸಕ್ಕೆ ಹೊರಟಿದ್ದ ಸಂಧರ್ಭದಲ್ಲಿ ಅವರ ತಾಯಿಯ ಬಳಿ ಭಾರತದಿಂದ ನಿಮಗೇನು ತರಲಿ ಎಂದು ಕೇಳಿದರಂತೆ. ಆಗ ಆಕೆ ” ಆ ಪುಣ್ಯ ಭೂಮಿಯ ರಾಜನೊಬ್ಬ ತನ್ನ ಪ್ರಜೆಗಳಿಗೆ ಎಷ್ಟು ಪ್ರಾಮಾಣಿಕನಾಗಿದ್ದನೆಂದರೆ ಆತ ಅರ್ಧ ಭಾರತದ ಬದಲಿಗೆ ತನ್ನ ಮಾತೃಭೂಮಿಯನ್ನು ಆರಿಸಿದ. ಅಂತಹ ಮಹಾನ್ ದೇಶದ ಹಳದಿ ಘಾಟಿಯಂಬ ಸ್ಥಳದಿಂದ ಒಂದು ಮುಷ್ಟಿ ಮಣ್ಣು ತೆಗೆದುಕೊಂಡು ಬಾ ಎಂದರಂತೆ!!” ಆಕೆ ಹೀಗೆ ಹೇಳಿದ್ದು ನಿಜವೊ ಗೊತ್ತಿಲ್ಲ, ಆದರೆ ಪ್ರತಾಪರ ಪರಾಕ್ರಮ ಮಾತ್ರ ನಿಜಾರ್ಥದಲ್ಲಿ ಹಾಗಿತ್ತು. ಪ್ರತಾಪರ ಶೌರ್ಯ ಎಂಥದ್ದಿತ್ತೆಂದರೆ ಇತಿಹಾಸದ ಪುಟಗಳಲ್ಲಿ “ಮಹಾರಾಣ” ಎಂದು ಕರೆಸಿಕೊಂಡ ಏಕೈಕ ವ್ಯಕ್ತಿ ಅವರೆ!

ನಿಜ, ಮಹಾರಾಣ ಪ್ರತಾಪ ಮನಸ್ಸು ಮಾಡಿದ್ದರೆ ಆತ ಇಡಿಯ ಭಾರತವನ್ನು ಗೆದ್ದು ಏಕ ಚಕ್ರಾಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ಕೇವಲ ಮತ್ತು ಕೇವಲ ತನ್ನ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿದ ಅವರು ಯಾವುದೇ ಸಂಧರ್ಭದಲ್ಲೂ ತಾನು ನಂಬಿದ ನಂಬಿಕೆಗಳ ವಿರುದ್ದವಾಗಿ ನಡೆದುಕೊಳ್ಳಲಿಲ್ಲ. ಜಗತ್ತನ್ನೆ ಗೆಲ್ಲುವ ತೋಳ್ಬಲ, ಸೇನಾ ಬಲ ಅವರ ಕೈಯಲ್ಲಿದ್ದರೂ ತನ್ನನ್ನು ಮೇವಾಡಕ್ಕಷ್ಟೆ ಸೀಮಿತಗೊಳಿಸಿದರು. ಪ್ರತಾಪರ ಪರಾಕ್ರಮಕ್ಕೆ ಪ್ರತಾಪರೆ ಸಾಟಿ. ಲಕ್ಷದಷ್ಟಿದ್ದ ಅಕ್ಬರನೆಂಬ ಮತಾಂಧ ಮುಗಲನ ಸೈನ್ಯದೆದುರು ತನ್ನ ಸಾವಿರದಷ್ಟಿರುವ ಸೇನೆಯ ಜೊತೆ ಹೋರಾಡಿ ಅಕ್ಬರನಂತ ಅಕ್ಬರನಿಗೆ ಮಣ್ಣು ಮುಕ್ಕಿಸಿದವರು ಮಹಾರಾಣ ಪ್ರತಾಪ!!

 

ಭಾರತದ ಅರ್ಧ ಬಾಗದಲ್ಲಿ ಹಬ್ಬಿದ್ದ ಮುಗಲ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಮೇವಾಡದಲ್ಲಿ ಭಗವಾ ದ್ವಜ ಹಾರುವಂತೆ ಮಾಡಿದ ಮಹಾರಾಣ ಪ್ರತಾಪರು ಸಾಕ್ಷಾತ್ ಶಿವನ ಅವತಾರ. ಹೀಗೆ ಹೇಳಲು ಬಲವಾದ ಕಾರಣಗಳಿವೆ. ಏಕೆಂದರೆ ತನ್ನ ಹೆಸರಿಗೆ ಅನ್ವರ್ಥನಾದ ಪ್ರತಾಪರು ಉಡುತ್ತಿದ್ದ ಉಡುಗೆ ತೊಡುಗೆ ಮತ್ತು ಆತನ ತಲವಾರಿನ ತೂಕ ಕೇಳಿದರೆ ನೀವು ನಿಂತಲ್ಲೆ ಕುಸಿದು ಬೀಳುತ್ತಿರಿ!!

ಮಹಾರಾಣ ಪ್ರತಾಪರ ಎತ್ತರ: 7ಫೀಟ್ 5″
ತೂಕ: ಅಂದಾಜು 110 ಕೆಜಿ
ಭರ್ಜಿಯ ತೂಕ: 80 ಕೆಜಿ
ಕವಚದ ತೂಕ: 72 ಕೆಜಿ
ಪಾದರಕ್ಷೆಗಳ ತೂಕ: 5 ಕೆಜಿ
ಕೈಯಲ್ಲಿದ್ದ ಎರಡು ತಲವಾರುಗಳ ತೂಕ: 50 ಕೆಜಿ.
ಒಟ್ಟು ತೂಕ: 207 ಕೆಜಿ

ತನ್ನ ತೂಕದ ಎರಡು ಪಟ್ಟು ತೂಕದ ಶಸ್ತ್ರಾಸ್ತ್ರಗಳನ್ನು ಹೇರಿಕೊಂಡು ರಣರಂಗಕ್ಕೆ ಹೋಗಿ ಶತ್ರುಗಳನ್ನು ಕುದುರೆಯ ಸಮೇತ ಎರಡು ಸೀಳು ಮಾಡುತ್ತಿದ್ದರೆಂದರೆ ಆತ ಶಿವನ ಅವತಾರವಲ್ಲದೆ ಇನ್ನೇನಾಗಿರಲು ಸಾಧ್ಯ? ಭಹಲೋಲ್ ಖಾನ್ ಎಂಬ ಮುಗಲನೊಬ್ಬ ಮಹಾರಾಣಾನಿಗೆ ಯುದ್ದದ ಪಂಥಾಹ್ವಾನಕ್ಕೆ ಕರೆಯುತ್ತಾನೆ. ಮಹಾರಾಣ ಪ್ರತಾಪನ ಶೌರ್ಯ ಯಾವ ರೀತಿ ಇತ್ತೆಂದರೆ ಆತ ಭಹಲೋಲ್ ಖಾನ್ ನನ್ನು ಆತನ ಕುದುರೆಯ ಜೊತೆ ಸೀಳಿ ಸಮನಾದ ಎರಡು ಭಾಗ ಮಾಡಿ ಹಾಕುತ್ತಾರೆ!! ಮತ್ತೆ ಸುಖಾ ಸುಮ್ಮನೆ ಮಹಾರಾಣ ಎಂಬ ಪಟ್ಟ ಬಂದಿದೆಯೆ ಪ್ರತಾಪರಿಗೆ? ತಾನು ಬದುಕ್ಕಿದ್ದಷ್ಟೂ ಕಾಲ ಮುಗಲರಿಗೆ ಮೇವಾಡದ ಒಳಗೆ ಬಿಡಿ, ಸರಹದ್ದಿಗೂ ಕಾಲಿಡಲು ಬಿಟ್ಟಿರಲಿಲ್ಲ ಮಹಾರಾಣ. ಗೆರಿಲ್ಲಾ ಯುದ್ದ ತಂತ್ರದಲ್ಲಿ ನಿಪುಣನಾಗಿದ್ದ ಪ್ರತಾಪರ ಯುದ್ದ ಕೌಶಲ್ಯಕ್ಕೆ ಸರಿಹೊಂದುವ ವೀರರು ಭಾರತದಲ್ಲೆ ಇರಲಿಲ್ಲ. ಭಾರತ ಮಾತೆಯ ಗರ್ಭ ಸಂಜಾತ ಮಹಾರಾಣ ಪ್ರತಾಪ ಈ ದೇಶದ, ಸನಾತನ ಧರ್ಮದ ಅನರ್ಘ್ಯ ರತ್ನಗಳಲ್ಲಿ ಒಬ್ಬರು.

ಮಹಾರಾಣಾ ಪ್ರತಾಪರ ಭರ್ಜಿ, ಖಡ್ಗಗಳು ಮತ್ತು ಕವಚ ಉದಯಪುರ ಮಹಲಿನ ಮ್ಯೂಸಿಯಂನಲ್ಲಿ ಈಗಲೂ ಇವೆ. ಮಹಾರಾಣಾ ಪ್ರತಾಪರೊಡನೆ ಸೆಣಸಲಾಗದೆ ಅಕ್ಬರ ತನ್ನವರಲ್ಲಿ ಪ್ರತಾಪ ನನ್ನ ಮುಂದೆ ಸೋತೆನೆಂದು ಒಪ್ಪಿಕೊಂಡು ತಲೆ ಬಗ್ಗಿಸಿದರೆ “ಅರ್ಧ ಹಿಂದೂಸ್ತಾನವನ್ನು” ಅವನಿಗೆ ನೀಡುತ್ತೇನೆ ಎಂದು ಹೇಳಿ ಕಳುಹಿಸುತ್ತಾನೆ. ಆದರೆ ಒಂದು ಹಿಂದೂ ಸಿಂಹ ತಲೆ ಕಡಿದು ಕೊಳ್ಳುತ್ತದೆಯೆ ಹೊರತು ಮತಾಂಧರ ಮುಂದೆ ತಲೆ ತಗ್ಗಿಸುವುದಿಲ್ಲ. ಅರ್ಧ ಹಿಂದೂಸ್ತಾನದ ಬದಲಿಗೆ ಪ್ರತಾಪ ತನ್ನ ಹಿಂದೂ ಧರ್ಮ ಮತ್ತು ಮಾತೃ ಭೂಮಿಯನ್ನರಿಸಿಕೊಂಡರು!! ಮತಿಕೆಟ್ಟ ನಾವುಗಳು ಪ್ರತಾಪರಂತಹ ಪರಾಕ್ರಮಿಯನ್ನು ಮರೆತು ಅಕ್ಬರನನ್ನು “ದ ಗ್ರೇಟ್” ಎನ್ನುತ್ತೇವೆ. ನಾವು ಹೀಗೆ ಹೇಳುವಾಗಲೆಲ್ಲ ನಮ್ಮ ಮಹಾರಾಣಾರ ಆತ್ಮಕ್ಕೆ ಅದೆಷ್ಟು ನೋವಾಗುತ್ತೊ ಎನೊ?

ಹಳದಿ ಘಾಟಿ ಯುದ್ದದಲ್ಲಿ ವೀರಾವೇಶದಿಂದ ಹೋರಾಡಿದ ಮಹಾರಾಣ ಮತ್ತು ತನ್ನ ಪ್ರಾಣಪ್ರಿಯ ಯಜಮಾನನ ರಕ್ಷಣೆಗಾಗಿ ತನ್ನ ಕಾಲು ಮುರಿದಿದ್ದನ್ನೂ ಲೆಕ್ಕಿಸದೆ ಪ್ರಾಣ ಒತ್ತೆ ಇಟ್ಟು ಓಡಿದ “ಚೇತಕ್” ಎಂಬ ಕುದುರೆಯನ್ನು ಒಬ್ಬ ಹಿಂದೂ ಮರೆಯಲುಂಟೆ? ಮಹಾರಾಣಾ ಎಂಥ ಪರಾಕ್ರಮಿಯೊ ಆತನ ಪ್ರಾಣಪ್ರಿಯ ಕುದುರೆ ಚೇತಕ್ ಕೂಡಾ ಅಷ್ಟೆ ಪರಾಕ್ರಮಿ. ಎರಡು ದೇಹ ಒಂದು ಆತ್ಮದಂತಿದ್ದ ಪ್ರತಾಪ-ಚೇತಕ್ ನ ಪ್ರೀತಿ ಮಾನವೀಯ ಮೌಲ್ಯಗಳ ಅತ್ಯುತ್ಕೃಷ್ಟ ನಿದರ್ಶನ. ಒಡೆಯನ ಪ್ರಾಣ ರಕ್ಷಿಸಿ ಸಾವಿಗೀಡಾದ ಚೇತಕ್ ಗಾಗಿ ಹಳದಿ ಘಾಟಿಯಲ್ಲಿ ಮಂದಿರವನ್ನು ಕಟ್ಟಲಾಗಿದೆ.

ಇತಿಹಾಸದ ಪುಟಗಳಲ್ಲಿ ಜಾಗವಿಲ್ಲದೆ ಹೋದರೂ ದೇಶದ ಪ್ರತಿ ದೇಶಭಕ್ತನ ಹೃದಯದಲ್ಲೂ ಮಹಾರಾಣ ಪ್ರತಾಪರಿಗೆ ಜಾಗವಿದೆ. ದೇಶ ಮತ್ತು ಧರ್ಮ ರಕ್ಷಣೆಗಾಗಿ ಸಮಸ್ತವನ್ನೂ ಪಣಕ್ಕಿಟ್ಟ ಮಹಾರಾಣಾರಂತಹ ವೀರರಿಂದಾಗಿ ನಾವಿವತ್ತು ಹಿಂದೂಗಳಾಗಿಯೆ ಉಳಿದಿದ್ದೇವೆ. ನಮ್ಮನ್ನು ಹಿಂದುಗಳಾಗಿಗೆಯೆ ಉಳಿಯುವಂತೆ ಮಾಡಿದ ನಿಮ್ಮ ಚರಣಗಳಿಗಿದೊ ಹಿಂದೂಗಳ ಸಾಷ್ಟಾಂಗ ನಮನ….. ಪ್ರತಿ ಜನ್ಮದಲ್ಲೂ ಭಾರತಾಂಬೆಯ ಮಗನಾಗಿಯೆ ಜನಿಸಿ ಮಹಾರಾಣಾ……

ಜೈ ಮೇವಾಡ್….ಜೈ ರಜಪೂತಾನ…. ಜೈ ಜನನಿ ಭಾರತಿ…..

-ಶಾರ್ವರಿ

Tags

Related Articles

Close