ಪ್ರಚಲಿತ

ಶ್ರೀರಾಮನ ಚುಂಬಿಸಿದ ಸೂರ್ಯ ರಶ್ಮಿ: ಆನಂದದಿಂದ ಕಣ್ತುಂಬಿಕೊಂಡ ಭಕ್ತ ಸಮೂಹ

ದೇಶದೆಲ್ಲೆಡೆ ಶ್ರೀರಾಮ ನವಮಿಯ ಪುಣ್ಯ ದಿನದಲ್ಲಿ ಶ್ರೀರಾಮನ ಭಕ್ತರು ಮಿಂದೇಳುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗಿಂತ ಕೊಂಚ ಹೆಚ್ಚೇ ಸಂತಸದ ಶ್ರೀರಾಮ ನವಮಿಯನ್ನು ದೇಶದ ಜನರು ಆಚರಣೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅಯೋಧ್ಯೆಯ ಶ್ರೀರಾಮ ಮಂದಿರ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಾನುಕೋಟಿ ಶ್ರೀರಾಮ ಭಕ್ತರು ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ಹಿಂದೂ ಜನರಿಗೆ ನ್ಯಾಯ ಒದಗಿಸಿ ಕೊಟ್ಟದೆ. ಕಳೆದ ಜನವರಿ 22 ರಂದು ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾ ಪ್ರತಿಷ್ಠಾಪನೆಗೊಂಡು ಭಕ್ತ ಜನರನ್ನು ಅನುಗ್ರಹಿಸುತ್ತಿದ್ದಾನೆ ಎನ್ನುವುದು ಸಂತಸದ ವಿಷಯವೇ ಹೌದು.

ಇಂತಹ ಭವ್ಯ ಆಲಯ ನಿರ್ಮಾಣವಾದ ಬಳಿಕ ದೇಶವಾಸಿಗಳಿಗೆ ಇದು ಮೊದಲ ರಾಮ ನವಮಿ. ಈ ಹಿಂದಿನ ರಾಮ ನವಮಿಗಿಂತ ಕೊಂಚ ವಿಶೇಷವಾದ ರಾಮನವಮಿ ಈ ಬಾರಿಯದ್ದು ಎಂದರೂ ತಪ್ಪಾಗಲಾರದು. ಕಾರಣ, ನೂತನ ಮಂದಿರದೊಳಗೆ ಪ್ರತಿಷ್ಠಾಪನೆಗೊಂಡ ಬಾಲ ರಾಮನ ಹಣೆಗೆ ಇಂದು ಸೂರ್ಯ ಮುತ್ತಿಕ್ಕಿದ್ದಾನೆ. ಸೂರ್ಯಕುಲ ತಿಲಕ ರಘುರಾಮನ ಹಣೆಗೆ ಸೂರ್ಯದೇವನ ಕಿರಣಗಳು ಬಿದ್ದು, ಆತನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ ಎನ್ನುವುದು ಸತ್ಯ.

ಈ ಅದ್ಬುತ, ರಮಣೀಯ ದೃಷ್ಯವನ್ನು ಶ್ರೀರಾಮನ ಭಕ್ತರು ಆನಂದದಿಂದ ಕಣ್ತುಂಬಿಕೊಂಡು, ಭಾವ‌ಸಾಗರದಲ್ಲಿ ಮಿಂದೆದ್ದಿದ್ದಾರೆ ಎನ್ನುವುದು ಸಂತಸದ ವಿಷಯ.

ಇಂದು ಅಯೋಧ್ಯಾಧಿಪತಿ ಶ್ರೀರಾಮನಿಗೆ ಸೂರ್ಯ ರಶ್ಮಿಯ ಅಭಿಷೇಕವಾಗಿದೆ. ರಾಮ ನವಮಿಯ ಈ ಶುಭ ಸಂದರ್ಭದಲ್ಲಿ ಸೂರ್ಯ ವಂಶಜ ರಘುರಾಮನ ಹಣೆಗೆ ಸೂರ್ಯ ತಿಲಕ ಬಿದ್ದಿದೆ. ಸುಮಾರು 70 ಮಿ. ಮೀ. ಉದ್ದದಲ್ಲಿ ಈ ತಿಲಕ ಮೂಡಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿದೆ.

https://x.com/ANI/status/1780488839871844360
Tags

Related Articles

Close