ಪ್ರಚಲಿತ

ಪರಿಚಯವೇ ಇಲ್ಲದ ಬಿಜೆಪಿ ಕಾರ್ಯಕರ್ತನನ್ನು ಪಕ್ಕದಲ್ಲಿ ಕುಳ್ಳಿರಿಸಿ,ಉಧ್ಘರಿಸಿದ ಬಿಜೆಪಿಯ ಮುತ್ಸದ್ದಿ ನಾಯಕ! ನಿಜವಾದ ಕಾರ್ಯಕರ್ತರ ಹಾಗೂ ನಾಯಕರ ನಡುವಿನ ಸಂಬಂಧವಿದು…

ಭಾರತೀಯ ಜನತಾ ಪಕ್ಷ. ವಿಶೇಷವಾದ ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡು ಬೆಳೆದಿರುವ ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿದ ಬಹುತೇಕರು ಭಾರತೀಯ ಜನತಾ ಪಕ್ಷದ ನಾಯಕರು. ಹೀಗಾಗಿ ರಾಷ್ಟ್ರ ಪ್ರೇಮ ಅನ್ನೋದು ಜಾಸ್ತಿಯಾಗಿಯೇ ಇರುತ್ತೆ. ಈ ಪಕ್ಷದಲ್ಲಿ ಕಾರ್ಯಕರ್ತರಿಗೂ ವಿಶೇಷ ಸ್ಥಾನಮಾನವಿದೆ. ಕಾರ್ಯಕರ್ತರನ್ನು ದೇವರಂತೆ ಕಾಣುವ ಕಾರಣಕ್ಕಾಗಿಯೇ ಜಗತ್ತಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಓರ್ವ ಕಾರ್ಯಕರ್ತರನ್ನು ಪಕ್ಷದ ನಾಯಕರು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂಬುವುದನ್ನು ಇಲ್ಲಿ ಒಂದು ಸ್ಪಷ್ಟ ಉದಾಹರಣೆಯನ್ನು ಕೊಡುತ್ತೇವೆ. ಅವರು ರಾಜ್ಯ ರಾಜಕೀಯದ ಅಂಗಳದಲ್ಲಿ ಅತ್ಯಂತ ನಿಷ್ಕಳಂಕ ರಾಜಕಾರಣಿ ಹಾಗೂ ಮುತ್ಸದ್ದಿ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾದವರು. ಇವರು ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರೂ ಕೂಡಾ ಯಾವೊಬ್ಬ ವಿರೋಧ ಪಕ್ಷದ ನಾಯಕರೂ ಇವರನ್ನು ವಿರೋಧಿಸುವ ಧೈರ್ಯ ತೋರಿಸಲ್ಲ.

ಅವರು ಮತ್ಯಾರೂ ಅಲ್ಲ. ಮಾಜಿ ಸಚಿವರು ಹಾಗೂ ಶಾಸಕರಾಗಿರುವ ಸುರೇಶ್ ಕುಮಾರ್. ಈವಾಗ್ಯಾಕೆ ಇವರ ವಿಚಾರವೆಂದರೆ ಇವರು ಓರ್ವ ಕಾರ್ಯಕರ್ತನನ್ನು ಗುರುತಿಸಿದ ಪರಿ. ಪರಿಚಯವೇ ಇಲ್ಲದ ಓರ್ವ ಕಾರ್ಯಕರ್ತನನ್ನು ಗುರುತಿಸಿ ಆತನನ್ನು ಯಾವ ರೀತಿ ಬಣ್ಣಿಸಿದ್ದಾರೆ ನೋಡಿ. ಆ ಕಾರ್ಯಕರ್ತನನ್ನು ಕುರಿತು ಅವರೇ ಬರೆದಿರುವ ಲೇಖನ ಇದು.

ಶಾಸಕ ಸುರೇಶ್ ಕುಮಾರ್ ಬರೆದಿದ್ದು..,

ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಇಲ್ಲಿದೆ ಒಂದು ಸ್ಫೂರ್ತಿದಾಯಕ ಉದಾಹರಣೆ.

ಈ ಹುಡುಗನ ಹೆಸರು “ಅಭಿಷೇಕ್”. ಮೈಸೂರಿನಲ್ಲಿ ಬಿಎ ಓದುತ್ತಿದ್ದಾನೆ.‌ ಮೈಸೂರಿನ ಮೂರ್ನಾಲ್ಕು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದ. ಯಥಾಪ್ರಕಾರ ಸೆಲ್ಫಿ ತೆಗೆದುಕೊಂಡಿದ್ದ‌.

ನಮ್ಮ ಚುನಾವಣೆ ಸಂದರ್ಭದಲ್ಲಿ ರಾಜಾಜಿನಗರಕ್ಕೆ ಧಿಡೀರನೇ ಒಂದು ದಿನ ಬಂದಿಳಿದು ತನ್ನ ಪರಿಚಯ ನೆನಪಿಸಿದ.‌ನನ್ನ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆಂದು ತಿಳಿಸಿದ.‌ ಸುಮಾರು ಒಂದು ತಿಂಗಳು ನಮ್ಮ ಜೊತೆ ಬೆಳಗ್ಗಿನಿಂದ ರಾತ್ರಿಯವರೆಗೂ ಕಾರ್ಯದಲ್ಲಿ ಪೂ ರ್ಣವಾಗಿ ತೊಡಗಿಸಿಕೊಂಡ.‌

ಮನೆ-ಮನೆಗೆ ಭೇಟಿ ನೀಡುತ್ತಿದ್ದಾಗ ನಮ್ಮ ಈ ಅಭಿಷೇಕ ಎಲ್ಲರಿಗಿಂತ‌ ಮುಂಚಿತವಾಗಿ ಮನೆಗಳಿಗೆ ತಲುಪುತ್ತಿದ್ದ.‌ ನಮ್ಮ ಕರಪತ್ತ ನೀಡಿ ಮತ ಯಾಚಿಸುತ್ತಿದ್ದ.‌

ಮೂರನೆಯ, ನಾಲ್ಕನೆಯ ಕೆಲವೊಮ್ಮೆ ಐದನೆಯ ಮಹಡಿಯಲ್ಲಿದ್ದ ಮನೆಗಳನ್ನು ನನಗಿಂತ ಮುಂಚೆ ತಲುಪಿ ನಾನು ಬರುತ್ತಿರುವ ವಿಚಾರ ಅರುಹುತ್ತಿದ್ದ.

ರೋಡ್ ಶೋ ಪ್ರಚಾರ ಕಾರ್ಯದಲ್ಲಂತೂ ಅಭಿಷೇಕನ ಉತ್ಸಾಹ ಬೇರೆಲ್ಲಾ ಕಾರ್ಯಕರ್ತರಿಗೆ‌ ಒಂದು ಪ್ರೇರಣೆಯೇ ಸರಿ.‌ ಸ್ಕೂಟರ್ ಮೇಲೇರಿ ಬಿಜೆಪಿ ಬಾವುಟವನ್ನು ಬೀಸುತ್ತಿದ್ದ ಆತನ ವೈಖರಿ ಎಲ್ಲರ ಮನ ಗೆದ್ದಿತ್ತು.‌ ಘೋಷಣೆ ಹಾಕುವುದರಲ್ಲಂತೂ ಅಭಿಷೇಕ ಎತ್ತಿದ ಕೈ.‌ ಯಾವುದಾದರೂ ಸಂದರ್ಭದಲ್ಲಿ ನೀರಸ ವಾತಾವರಣ ಕಂಡ ತಕ್ಷಣ ಘೋಷಣೆ ಹಾಕಿ ಎಲ್ಲರಲ್ಲೂ ಲವಲವಿಕೆ ಬರುವಂತೆ ಮಾಡುತ್ತಿದ್ದ.

ಆಟೋ ಪ್ರಚಾರಕ್ಕೂ ಅಭಿಷೇಕ ಸಿದ್ದ. ತನ್ನದೇ ಆದ ಸೊಗಡಿನಿಂದ‌ ಕೂಡಿದ ಭಾಷೆಯಲ್ಲಿ ಆತನ ಪ್ರಚಾರ ಎಲ್ಲರ ಗಮನ ಸೆಳೆಯುತ್ತಿತ್ತು.‌

ಮತದಾರರ ಜೊತೆ ದೂರವಾಣಿಯ ಮೂಲಕ ಮಾತನಾಡಿ ನಮ್ಮ ಪಕ್ಷಕ್ಕೇ ಮತ ನೀಡಬೇಕೆಂದು ಅತ್ಯಂತ ಸೌಜನ್ಯದಿಂದ ಮನ ಒಲಿಸುತ್ತಿದ್ದ.

ಮೂಲತಃ ಮಂಡ್ಯ ಜಿಲ್ಲೆಯವನಾದ ಅಭಿಷೇಕನನ್ನು‌ ನಮ್ಮೆಲ್ಲಾ ಕಾರ್ಯಕರ್ತರೂ ” ಮಂಡ್ಯಾ” ಎಂದೇ ಗುರುತಿಸುತ್ತಿದ್ದದ್ದು.‌ ಒಂದೇ ಒಂದು ದಿನ ಅವ ಗೊಣಗಿದ್ದು ಯಾರೂ ನೋಡಲಿಲ್ಲ. ಊಟ-ತಿಂಡಿ ವಿಚಾರದಲ್ಲಿ ಅಪಸ್ವರ ಎತ್ತಿದ್ದು ಕಾಣಲಿಲ್ಲ.‌

ಮೊನ್ನೆ ಸಿಕ್ಕಾಗ ಅಭಿಷೇಕ ಹೇಳಿದ್ದು “ಸರ್. ನಾನು ಬಂದು ಪ್ರಚಾರ ಕಾರ್ಯದಲ್ಲಿ ಅದರಲ್ಲೂ ನಿಮ್ಮ ಜೊತೆ ಜೊತೆಗೇ ಓಡಾಡಲು ಪ್ರಾರಂಭಿಸಿದೆ. ನೀವು ನನ್ನ ಅಡ್ರೆಸ್ ಕೇಳಲಿಲ್ಲ.‌ಆಧಾರ್ ಕಾರ್ಡ್ ಕೇಳಲಿಲ್ಲ. ಒಂದು ಚೂರೂ ಸಂಶಯ ಪಡದೇ ಸೇರಿಸಿಕೊಂಡರಲ್ಲಾ ಸರ್.‌ ನನ್ನ ಬಗ್ಗೆ ಹಿಂದೆ-ಮುಂದೆ ಗೊತ್ತಿಲ್ಲದೆ ನಿಮ್ಮ ಕಾರಿನಲ್ಲಿ‌ ನಿಮ್ಮ ಪಕ್ಕದಲ್ಲೇ ಕುಳಿಸಿಕೊಂಡು ಓಡಾದ್ರುಲ್ಲಾ ಸರ್. ಅದೇ ನನಗೆ ಇನ್ನಷ್ಟು ಶಕ್ತಿ ತುಂಬಿದ್ದು”.

ಬೇರೆ ಪಕ್ಷದ ರೋಡ್ ಶೋ ನೋಡಿ ಅಭಿಷೇಕ್ ನನಗೆ ” ಎಷ್ಟು ಕ್ವಾಂಟಿಟಿ ಇದೆ ಅನ್ನೋದು ಮುಖ್ಯ ಅಲ್ಲ ಸರ್. ಕ್ವಾಲಿಟಿ ಮುಖ್ಯ” ಎಂದು ಹೇಳಿದ್ದು ಅತ್ಯುತ್ತಮ ಕಾಮೆಂಟ್.

ಅಭಿಷೇಕ ಒಂದೇ ಒಂದು ದಿನ ಹಣ ಕೇಳಲಿಲ್ಲ. ನನ್ಹತ್ರ ಬಿಡಿ. ಬೇರಾವ ಪ್ರಮುಖನ ಬಳಿಯೂ ಕೇಳಲಿಲ್ಲ. ನನ್ನ ಯುವ ಗೆಳೆಯ ಕಾರ್ಯಕರ್ತನೊಬ್ಬ ವಾಸಿಸುತ್ತಿದ್ದ PG ನಲ್ಲಿಯೇ ಉಳಿದುಕೊಂಡು ನಮ್ಮ ಜೊತೆಯೇ ಊಟ-ತಿಂಡಿ ಮಾಡುತ್ತಿದ್ದ.‌

ಏನೂ ಅಪೇಕ್ಷೆ ಇಲ್ಲದೇ ಕಾರ್ಯ ಮಾಡಲು ಸಿದ್ದವಿರುವ ಇಂತಹ ಯುವ ಕಾರ್ಯಕರ್ತರೇ ನಮ್ಮ ಪಕ್ಷಕ್ಕೇ ಶಕ್ತಿ, ಸ್ಫೂರ್ತಿ.‌

ಇದು ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್ ಅವರ ಮಾತುಗಳು.
ಅಭಿಮಾನದ ಪರಾಕಾಷ್ಠೆ ಮೆರೆದು ಮಂಡ್ಯದ ಯುವಕ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ಕೆಲಸ ಮಾಡುತ್ತಾನೆಂದರೆ ಆತನ ಪಕ್ಷ ನಿಷ್ಟೆಗೆ ಹಾಗೂ ಪಕ್ಷ ಪ್ರೇಮಕ್ಕೆ ಸುರೇಶ್ ಕುಮಾರ್ ಬಿಡಿ ಯಾರೇ ಇದ್ದರೂ ಶರಣಾಗಲೇ ಬೇಕು.

ನಿಸ್ವಾರ್ಥವಾಗಿ ಕೆಲಸ ಮಾಡುವ ಅದೆಷ್ಟೋ ಕಾರ್ಯಕರ್ತರು ನಮ್ಮ ನಡುವೆ ಇದ್ದಾರೆ. ಆದರೆ ಅವರನ್ನು ಗುರುತಿಸುವ ನಾಯಕನು ಶ್ರೇಷ್ಟನಾಗಿರುತ್ತಾನೆ. ಪರಿಚಯವೇ ಇಲ್ಲದ ಆ ಬಿಜೆಪಿ ಕಾರ್ಯಕರ್ತನನ್ನು ಗುರುತಿಸಿ ಆತನನ್ನು ರಾಜ್ಯಮಟ್ಟದಲ್ಲಿ ಫೇಮಸ್ ಮಾಡಿದ ಶಾಸಕ ಸುರೇಶ್ ಕುಮಾರ್ ಅವರಿಗೆ ಸಲಾಂ ಅನ್ನಲೇ ಬೇಕು.

source: https://m.facebook.com/story.phpstory_fbid=2147288385298495&id=100000520624203

  • ಸುನಿಲ್ ಪಣಪಿಲ
Tags

Related Articles

Close