ಅಂಕಣ

ಭಾರತ ಮರೆತೆ ಬಿಟ್ಟಿರುವ ಸಾಮ್ರಾಟ ಕನಿಷ್ಕನನ್ನು ಮುಸ್ಲಿಂ ಬಾಹುಳ್ಯದ ಅಫಘಾನಿಸ್ತಾನದ ಜನರು ಆರಾಧಿಸುತ್ತಾ ಆತ ನಮ್ಮ ಪೂರ್ವಜ ಎಂದು ಅಟಲ್ ಜಿ ಅವರಲ್ಲಿ ಹೇಳಿದ್ದೇಕೆ?

ಅನಾದಿ ಕಾಲದಲ್ಲಿ ಅಫಘಾನಿಸ್ತಾನವು ಅಖಂಡ ಭಾರತದ ಭಾಗವೇ ಆಗಿತ್ತು. ಭಾರತದ ಕುಶಾಣ ವಂಶದ ಶ್ರೇಷ್ಠ ಸಾಮ್ರಾಟ ಕನಿಷ್ಕನ ಕಾಲಮಾನ 127 ನೇ ಇಸವಿಯಿಂದ 140 ಇಸವಿವರೆಗೆ ಎಂದು ಅಂದಾಜಿಸಲಾಗುತ್ತದೆ. ಭಾರತ ಕಂಡ ಮಹಾನ್ ಸಾಮ್ರಾಟರಲ್ಲಿ ಕನಿಷ್ಕನೂ ಒಬ್ಬನೆಂದರೆ ಅತಿಶಯೋಕ್ತಿಯಲ್ಲ. ಈತನ ಪಟ್ಟಾಭಿಷೇಕದ ಸಮಯದಲ್ಲಿ ಕುಶಾಣ ಸಾಮ್ರಾಜ್ಯ ಅಫಘಾನಿಸ್ತಾನ, ಸಿಂಧ್ ಪ್ರಾಂತ್ಯ, ಬೈಕ್ಟ್ರಿಯಾ ಮತ್ತು ಪಾರ್ಥಿಯಾವರೆಗೂ ಹಬ್ಬಿಕೊಂಡಿತ್ತು. ಭಾರತದಲ್ಲಿ ಆತನ ಸಾಮ್ರಾಜ್ಯ ಮಗಧದವರೆಗೂ ವಿಸ್ತರಿಸಿತ್ತು. ಈತನ ಸಾಮ್ರಾಜ್ಯದ ರಾಜಧಾನಿ “ಪುರುಷಪುರ”, ಅಂದರೆ ಈಗಿನ ಪೇಶಾವರ.

ಇತಿಹಾಸಕಾರರ ಪ್ರಕಾರ ಮೌರ್ಯ ಸಾಮ್ರಾಜ್ಯದ ನಂತರ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದವನು ಕನಿಷ್ಕ. 1993 ರಲ್ಲಿ ಅಫಘಾನಿಸ್ತಾನದ ರಬಾತಕ್ ಎನ್ನುವ ಪುರಾತನ ಸ್ಥಳದಲ್ಲಿ ಪ್ರಾಚೀನ ಶಿಲಾಲೇಖವೊಂದು ದೊರೆಯುತ್ತದೆ. ಬಾಖ್ತರಿ ಮತ್ತು ಯುನಾನಿ ಭಾಷೆಯ ಲಿಪಿಯಲ್ಲಿ ಬರೆದ ಈ ಶಿಲಾಲೇಖವನ್ನು ಕನಿಷ್ಕ ಬರೆಸಿದ್ದೆನ್ನಲಾಗುತ್ತದೆ. ಇದರಲ್ಲಿ ಆತ ತಾನು ‘ನಾನಾ’ ಎಂಬ ದೇವಿಯ ವಂಶಜನೆಂದೂ, ತಾನು ತನ್ನ ಸಾಮ್ರಾಜ್ಯದ ಭಾಷೆಯನ್ನು ಯುನಾನಿಯಿಂದ ಆರ್ಯ(ಸಂಸ್ಕೃತ) ಭಾಷೆಗೆ ಪರಿವರ್ತಿಸಿದ್ದೇನೆಂದೂ ಬರೆಸಿದ್ದಾನೆ. ತನ್ನ ತಾತ-ಮುತ್ತಾತ-ತಂದೆಯ ಹೆಸರನ್ನೂ ಇದರಲ್ಲಿ ಉಲ್ಲೇಖಿಸಿದ್ದಾನೆ.

ಅತ್ಯಂತ ಧರ್ಮ ಸಹಿಷ್ಣುವಾದ ಕನಿಷ್ಕ ತನ್ನ ಸ್ವರ್ಣ ಮುದ್ರೆಗಳಲ್ಲಿ ಭಾರತೀಯ ಹಿಂದೂ ದೇವತೆಗಳ ಚಿತ್ರದ ಜೊತೆಗೆ ಯುನಾನಿ, ಇರಾನಿ ಮತ್ತು ಸುಮೇರಿಯಾದ ದೇವರುಗಳ ಚಿತ್ರವನ್ನೂ ಹಾಕಿಸಿದ್ದಾನೆ. ಬೌದ್ಧ ಧರ್ಮಕ್ಕೆ ವಿಶೇಷ ಕಾಳಜಿಯನ್ನು ತೋರಿದ ಕನಿಷ್ಕನೆಂದರೆ ಬೌದ್ಧರಿಗೂ ಪ್ರೀತಿ. ಅಫಘಾನಿಸ್ತಾನದಲ್ಲಿ ಸಾಮ್ರಾಟ ಕನಿಷ್ಕನನ್ನು ಮೂಲ ಅಫಘನ್ನರು ಇಂದಿಗೂ ಅತ್ಯಂತ ಗೌರವಾದರಗಳಿಂದ ಕಾಣುತ್ತಾರೆ. ಬಹಳ ವರ್ಷಗಳ ಹಿಂದೆ, ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಫಘಾನಿಸ್ತಾನಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಅಲ್ಲಿ ಸಾಮ್ರಾಟ ಕನಿಷ್ಕನ ಹೆಸರಿನ ಹೋಟೇಲ್ ಒಂದರಲ್ಲಿ ತಂಗುತ್ತಾರೆ.. ಮುಸ್ಲಿಂ ಬಾಹುಳ್ಯದ ದೇಶದಲ್ಲಿ ಹಿಂದೂ ಸಾಮ್ರಾಟನ ಹೆಸರಿನ ಹೋಟೇಲ್ ಒಂದನ್ನು ನೋಡಿ ಆಶ್ಚರ್ಯಚಕಿತರಾಗಿ ಅಲ್ಲಿಯ ವಿದೇಶ ಮಂತ್ರಿಯವರಲ್ಲಿ ಕನಿಷ್ಕ ನಿಮಗೇನಾಗಬೇಕು? ನಿಮಗೂ ಕನಿಷ್ಕನಿಗೂ ಎನು ಸಂಬಂಧ ಎಂದು ಕೇಳುತ್ತಾರೆ.

ಆಗ ಅವರು ಕೊಟ್ಟ ಉತ್ತರ ಕೇಳಿದರೆ ಪ್ರತಿ ಹಿಂದೂವೂ ಗರ್ವದಿಂದ ಎದೆಯುಬ್ಬಿಸುವನು. ಆ ಅಧಿಕಾರಿ ಹೇಳುತ್ತಾರೆ ”  ಸಾಮ್ರಾಟ ಕನಿಷ್ಕ ನಮ್ಮ ಪೂರ್ವಜ!” ಅವರ ಈ ಮಾತನ್ನು ಕೇಳಿ ಅಟಲ್ ಜಿ ಅವರ ಹೃದಯ ತುಂಬಿ ಬಂದಿತ್ತು.  ಅಫಘನ್ನರು ಮುಸಲ್ಮಾನರಾಗಿರಬಹುದು , ಅವರ ಪ್ರಾರ್ಥನೆಯ ವಿಧಿ ವಿಧಾನಗಳು ಬದಲಾಗಿರಬಹುದು ಆದರೆ ಅವರ ಮೂಲ ಸಂಸ್ಕೃತಿ ಬದಲಾಗಿಲ್ಲ ಎನ್ನುವ ಮಾತನ್ನು ಅಟಲ್ ಜಿ ಹೇಳುತ್ತಾರೆ. ಮತಾಂತರ ಮಾಡುವುದು ಇಡಿಯ ದೇಶವನ್ನೆ ಧರ್ಮಾಂತರಣ ಮಾಡುವುದು ಭಾರತದಲ್ಲಿ ಮಾತ್ರ ಇತರ ದೇಶಗಳಲ್ಲ ಎನ್ನುತ್ತಾರೆ ಅಟಲ್ ಜಿ. ಈಗ ಈ ಹೋಟೇಲನ್ನು ತಾಲಿಬಾನಿ ಉಗ್ರರು ನಾಶ ಮಾಡಿದ್ದಾರೆ. ಉಗ್ರರು ಹೋಟೆಲನ್ನು ನಾಶ ಮಾಡಿರಬಹುದು ಆದರೆ ಕನಿಷ್ಕನ ಬಗ್ಗೆ ಜನರ ಮನಸ್ಸಿನಲ್ಲಿರುವ ಪ್ರೀತಿ ಗೌರವಗಳನ್ನು ನಾಶ ಮಾಡಲು ಎಂದೂ ಸಾಧ್ಯವಿಲ್ಲ. ಅಖಂಡ ಭಾರತದ ಭಾಗವಾಗಿದ್ದ ಪ್ರಪಂಚದ ಹೆಚ್ಚಿನ ಮುಸ್ಲಿಮ್ ದೇಶಗಳು ತಮ್ಮ ಪೂರ್ವಜರು ಹಿಂದೂಗಳು ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮ್ಮ ಮೂಲ ಸಂಸ್ಕೃತಿಯನ್ನು ಜೋಪಾನವಾಗಿ ಇಟ್ಟಿದ್ದಾರೆ. ಇದಕ್ಕೆ ಜೀವಂತ ಉದಾಹರಣೆ ಇಂಡೋನೇಶಿಯಾ ಎನ್ನುವ ಮುಸ್ಲಿಂ ದೇಶ. ನಮ್ಮಲ್ಲಿ ಮುಸ್ಲಿಮರು ಬಿಡಿ ಕೆಲ ಧರ್ಮ ಭ್ರಷ್ಟ ಹಿಂದೂಗಳು “ನಮಗೆ ಹಿಂದೂ ಎನ್ನಲು ನಾಚಿಕೆ ಎನ್ನುತ್ತಾರೆ”. ಏನನ್ನಬೇಕು ಇಂಥವರಿಗೆ?

ತಾಲಿಬಾನಿ ಉಗ್ರರ ಉಪಟಳವಿಲ್ಲದಿದ್ದರೆ ಬಹುಶಃ ಇವತ್ತು ಅಫಘಾನಿಸ್ತಾನ ನಳನಳಿಸುತ್ತಿತ್ತು. ಮೂಲದಲ್ಲಿ ಸನಾತನಿಗಳೆ ಆದ ಅಫಘನ್ ಜನರು ಇಸ್ಲಾಂಗೆ ಮತಾಂತರವಾದ ಮೇಲೂ ತಮ್ಮ ಸಂಸ್ಕೃತಿ, ತಮ್ಮನ್ನಾಳಿದ ಹಿಂದೂ ರಾಜರನ್ನು ಮರೆತಿರಲಿಲ್ಲ. ಆದರೆ ಮೂಲದಲ್ಲಿಯೂ ಸನಾತನಿಗಳು ಈಗಲೂ ಸನಾತನಿಗಳೆ ಆಗಿರುವ ನಾವು ಮಾತ್ರ ನಮ್ಮ ಸಂಸ್ಕೃತಿಯನ್ನು ಮರೆತಿರುವುದು. ಭಾರತದ ಮಣ್ಣಿನಲ್ಲಿಯೂ ಸಾಮ್ರಾಟ ಕನಿಷ್ಕನ ಕುರುಹುಗಳಿವೆ. ದಕ್ಷಿಣ ರಾಜಸ್ಥಾನದ ಪ್ರಾಚೀನ ಭಿನಮಾಲ್ ನಗರದಲ್ಲಿ ಜಗಸ್ವಾಮಿ ಮಂದಿರ ಮತ್ತು ಅದರ ಪಕ್ಕದಲ್ಲಿ ಕರಡಾ ಎಂಬ ಹೆಸರಿನ ಸರೋವರವನ್ನು ಕನಿಷ್ಕನೆ ನಿರ್ಮಿಸಿದ್ದು. ಗಂಧಾರ ವಿದ್ಯಾಲಯದ ಯುನಾನಿ ಕಲೆಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದನೊ ಅಷ್ಟೆ ಪ್ರಾಮುಖ್ಯತೆ ಮಥುರಾದ ಹಿಂದೂ ಕಲಾ ವಿದ್ಯಾಲಯಕ್ಕೂ ನೀಡಿದ್ದನು ಕನಿಷ್ಕ.

ಬೌಧ್ಧ ಧರ್ಮದ ಬಗ್ಗೆ ವಿಪರೀತ ಆಸ್ಥೆ ಹೊಂದಿದ್ದ ಕನಿಷ್ಕ ತನ್ನ ಸಾಮ್ರಾಜ್ಯದ ಶಿಕ್ಷಣ ಮತ್ತು ಪ್ರಾರ್ಥನಾ ಶೈಲಿಯಲ್ಲಿ ಬೌಧ್ಧ ಧರ್ಮದ ಛಾಪುಗಳನ್ನು ಬಿಟ್ಟು ಹೋಗಿದ್ದಾನೆ. ಇತಿಹಾಸಕಾರರಿಂದ ಮಾಹಾನ್ ಎಂದು ಬಣ್ಣಿಸಲ್ಪಟ್ಟ ಅಶೋಕ, ನಿಜ ಜೀವನದಲ್ಲಿ “ಚಂಡ ಅಶೋಕ”ನಾಗಿದ್ದ. ಆದರೆ ಕನಿಷ್ಕ ನಿಜಾರ್ಥದಲ್ಲಿ ಧರ್ಮ ಸಹಿಷ್ಣು ರಾಜನಾಗಿದ್ದ. ಆದರೆ ಬ್ರಿಟಿಷರಿಗೆ “ನಿಷ್ಠ”ರಾಗಿದ್ದ ಕಮ್ಮಿನಿಷ್ಠರಿಂದಾಗಿ ಭಾರತದ ಇತಿಹಾಸ ತಿರುಚಲ್ಪಟ್ಟು ಇಂತಹ ಮಹಾ ನಾಯಕರು ಮೂಲೆ ಸೇರಿದರು. ಕನಿಷ್ಕನಂತಹ ಹಲವಾರು ಸಾಮ್ರಾಟರು ಈ ದೇಶದಲ್ಲಿ ಆಳಿ-ಬಾಳಿದ್ದಾರೆ. ಆದರೆ ಅವರಾರಿಗೂ ಇತಿಹಾಸದ ಪಾಠ ಪುಸ್ತಕಗಳಲ್ಲಿ ಬಿಡಿ, ಜನಮಾನಸದಲ್ಲೂ ಜಾಗ ದೊರಕಲಿಲ್ಲ. ಅರುವತ್ತು ವರ್ಷ ದೇಶದ್ರೋಹಿಗಳ ಕೈಯಲ್ಲಿ ಆಡಳಿತ ಕೊಟ್ಟ ಪರಿಣಾಮ ಇದು ಏನು ಮಾಡುವುದು?

-ಶಾರ್ವರಿ

Tags

Related Articles

Close