ಪ್ರಚಲಿತ

‘ಅಮಿತ್ ಷಾ ನನ್ನ ಗೆಳೆಯ ಕಣ್ರೋ! ನಮ್ಮ ಮನೆಗೆ ಬರ್ತಿದ್ದಾರೆ’ ಅಂತಿದ್ದವನು ಅಮಿತ್ ಷಾ ಬರುವಾಗ ಮನೆಯಲ್ಲಿ ಇಲ್ಲ!!

“ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನಾನು ತುಂಬಾನೆ ಕ್ಲೋಸ್. ಅವರು ಆಗಾಗ್ಗೆ ನನ್ನ ಮನೆಗೆ ಬರ್ತಾ ಇರ್ತಾರೆ ಹಾಗೂ ನಾನೂ ಅವರ ಮನೆಗೆ ಹೋಗ್ತಾ ಇರ್ತೇನೆ. ಅವರು ನನ್ನ ಮನೆಗೆ ಬಂದರೆ ಊಟ ಮಾಡದೆ ಹೋಗೋದಿಲ್ಲ. ನಾನೂ ಅವರ ಮನೆಗೆ ಹೋದಾಗೆಲ್ಲಾ ಊಟ ಮಾಡಿಕೊಂಡೇ ಬರುತ್ತಿದ್ದೆ”…

ಇದು ಮತಾಂಧ ದುಷ್ಕರ್ಮಿಗಳಿಂದ ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಗೀಡಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ದೀಪಕ್ ರಾವ್
ತಮಾಷೆಗಾಗಿ ತನ್ನ ಗೆಳೆಯರೊಂದಿಗೆ ಹೇಳುತ್ತಾ ಹರಟೆ ಹೊಡೆಯುತ್ತಿದ್ದ ಮಾತುಗಳು. ಆದರೆ ಈಗ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದೇ ದೀಪಕ್ ರಾವ್ ಮನೆಗೆ ಬರ್ತಿದ್ದಾರೆ. ಆದರೆ ದೀಪಕ್ ರಾವ್ ಆ ಮನೆಯಲ್ಲಿ ಇಲ್ಲವಲ್ಲಾ…

ಹೌದು… ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೇ 19 ತಾರೀಕಿನಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಮತಾಂಧರಿಂದ ಹತ್ಯೆಯಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಅವರು ಭೇಟಿ ನೀಡಲಿದ್ದಾರೆ. ತಮಾಷೆಗಾಗಿ ಅಮಿತ್ ಶಾ ಮನೆಗೆ ಬರ್ತಾರೆ ಎಂದಿದ್ದ ಈ ಹುತಾತ್ಮನ ಮನೆಗೆ ಸ್ವತಃ ಅಮಿತ್ ಶಾ ಅವರೇ ಭೇಟಿ ನೀಡುವುದು ಭಾವನಾತ್ಮಕ ಸಂಬಂಧವಾಗಿದೆ.

ಶಾ ರೇಂಜಲ್ಲಿ ಕೆಲಸ ಮಾಡುತ್ತಿದ್ದನಂತೆ ದೀಪಕ್!

ದೀಪಕ್ ರಾವ್‍ಗೆ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣದ ಜವಬ್ಧಾರಿಯನ್ನು ಭಾರತೀಯ ಜನತಾ ಪಕ್ಷ ನೀಡಿತ್ತು. ಈ ಜವಬ್ಧಾರಿಯನ್ನು ಕಾರ್ಯಕರ್ತ ದೀಪಕ್ ರಾವ್ ಭಾರೀ ನಿಷ್ಟೆಯಿಂದಲೇ ಮಾಡುತ್ತಿದ್ದನಂತೆ. ಪಕ್ಷದ ಪ್ರಮುಖರು ನೀಡಿದ ಜವಬ್ಧಾರಿಯನ್ನು ಭಾರೀ ನಿಯತ್ತಿನಿಂದಲೇ ನಿಭಾಯಿಸುತ್ತಿದ್ದ ದೀಪಕ್ ರಾವ್‍ನನ್ನು ಕಂಡರೆ ಪಕ್ಷದ ನಾಯಕರಿಗೂ ಭಾರೀ ಇಷ್ಟ. ಒಮ್ಮೆ ಆತ ಪಕ್ಷದ ಕೆಲಸಗಳನ್ನು ಮಾಡುತ್ತಿರುವಾಗ ಆತನ ಗೆಳೆಯರು ಹೇಳಿದ್ದರಂತೆ. “ಏನು ಮಾರಯಾ.. ಕೊಟ್ಟಿರುವುದು ಇಷ್ಟು ಚಿಕ್ಕ ಜವಬ್ಧಾರಿ. ಆದರೆ ನೀನು ಅಮಿತ್ ಶಾ ರೇಂಜ್‍ಗೆ ಕೆಲಸ ಮಾಡುತ್ತೀಯಲ್ಲಾ” ಎಂದಾಗ ದೀಪಕ್ ರಾವ್ “ಹೌದು… ನಾನು ಮತ್ತು ಅಮಿತ್ ಶಾ ತುಂಬಾನೆ ಕ್ಲೋಸ್. ಅವರು ನನ್ನ ಮನೆಗೆ ಬಂದು ಊಟ ಮಾಡುತ್ತಾರೆ. ನನೂ ಅವರ ಮನೆಗೆ ಹೋಗಿ ಊಟ ಮಾಡಿ ಬರ್ತೇನೆ. ನಾವಿಬ್ಬರೂ ಯಾವಾಗಲೂ ಸಿಗ್ತಾ ಇರ್ತೇವೆ” ಎಂದು ತಮಾಷೆಗಾಗಿ ಹೇಳಿಕೊಳ್ಳುತ್ತಿದ್ದನಂತೆ.

ಜಾಲತಾಣದಲ್ಲಿ ಎಕ್ಸ್‍ಪರ್ಟ್ ಆಗಿದ್ದ ದೀಪಕ್..!

ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಜವಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ದೀಪಕ್ ರಾವ್ ಸ್ಥಳೀಯವಾಗಿ ನಡೆಯುವ ಎಲ್ಲಾ ದೂರುಗಳನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸುತ್ತಿದ್ದ. ಕನ್ನಡದಲ್ಲಿ ಬರೆಯುವ ಬರಹಗಳ ಬಗ್ಗೆ ತಮ್ಮ ಸ್ನೇಹಿತರಲ್ಲಿ ಕೇಳಿ ಬರೆಯುತ್ತಿದ್ದನಂತೆ. ಒತ್ತಕ್ಷರಗಳನ್ನೆಲ್ಲಾ ತನ್ನ ಸ್ನೇಹಿತರಲ್ಲಿ ಕೇಳಿ ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದನಂತೆ. ತನ್ನ ಬಿಡುವಿಲ್ಲದ ಕೆಲಸಗಳ ನಡುವೆಯೂ ಪಕ್ಷದ ಕೆಲಸಗಳನ್ನು ನಿಷ್ಟೆಯಿಂದ ಮಾಡುತ್ತಿದ್ದನಂತೆ.

ಗ್ರಾಮದ ಬಗ್ಗೆ ಕಾಳಜಿ ಹೊಂದಿದ್ದ ದೀಪಕ್ ರಾವ್…

ದೀಪಕ್ ರಾವ್ ತನ್ನ ಗ್ರಾಮದ ಬಗ್ಗೆ ಅತೀವವಾದ ಪ್ರೀತಿಯನ್ನು ಇಟ್ಟುಕೊಂಡಿದ್ದ ಹುಡುಗ. ಅವ್ಯವಸ್ಥೆಗೀಡಾದ ತನ್ನ ತನ್ನ ಗ್ರಾಮದ ರಸ್ತೆಯಫೋಟೋ
ತೆಗೆದು ಸಾಮಾಜಿಕ ಜಾರತಾಣಗಳಲ್ಲಿ ಹರಿಯಬಿಟ್ಟು ಆಕ್ರೋಶಭರಿತವಾಗಿ ಪ್ರಶ್ನಿಸುತ್ತಿದನು. ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದನು. ಆತ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ರಸ್ತೇಯು ಇಂದು ದುರಸ್ತಿಯಾಗಿದೆ. ಇದು ದೀಪಕನ ಕೊಡುಗೆ ಎಂದು ಆತನ ಗೆಳೆಯರು ಹೇಳಿಕೊಳ್ಳುತ್ತಿದ್ದಾರೆ.

ಆತನಿಗೆ ಬಿಜೆಪಿ ಚಾಣಾಕ್ಯ ಅಮಿತ್ ಶಾ ಅಂದರೆ ತುಂಬಾನೆ ಇಷ್ಟ. ಹೀಗಾಗೆ ಅವರ ಬಗ್ಗೆ ಮಾತನಾಡುತ್ತಲೇ ಇರುತ್ತಿದ್ದನಂತೆ. ಹೀಗಾಗಿಯೇ
ನಾನು ಮತ್ತು ಶಾ ಫ್ರೆಂಡ್ಸ್ ಎಂದೇ ಹೇಳಿಕೊಳ್ಳುತ್ತಿದ್ದ. ಆದರೆ ವಿಧಿಯಾಟ ಅದೆಲ್ಲವನ್ನೂ ಬದಲಿಸಿಬಿಟ್ಟಿತ್ತು. ಮತಾಂಧರ ತಲವಾರು ದೀಪಕನ ದೇಹವನ್ನು ಸೀಳಿತ್ತು. ಯಾವ ಶಾ ಅಂದರೆ ದೀಪಕ್ ಇಷ್ಟ ಪಡುತ್ತಿದ್ದನೋ ಅದೇ ಅಮಿತ್ ಶಾ ಈವಾಗ ಆತನ ಮನೆಗೆ ಬರುತ್ತಿದ್ದಾರೆ. ಆದರೆ ಆತ ಕನಸಲ್ಲೂ ಎನಿಸದ ಈ ಭೇಟಿಯನ್ನು ನೋಡಲು ಶಾ ಅವರ ಕ್ಲೋಸ್ ಫ್ರೆಂಡ್ ಇಲ್ಲವಾದನೇ ಎನ್ನುವುದೇ ಕಣ್ಣೀರು ತರುವಂತಹ ಸಂಗತಿ…ಮತ್ತೆ ಹುಟ್ಟಿ ಬಾ ಗೆಳೆಯ…

-ಸುನಿಲ್ ಪಣಪಿಲ

Tags

Related Articles

Close